Subscribe to Gizbot

ಅಂಬಾನಿ ಮಾಸ್ಟರ್ ಪ್ಲಾನ್: ಸೈಲೆಂಟಾಗಿ ಜಿಯೋ ಫೋನ್ ಬಳಕೆದಾರರಿಗೆ ಕೊಟ್ಟದೇನು..?

Written By:

ಜಿಯೋ ಮಾರುಕಟ್ಟೆಗೆ ಸಂಕ್ರಾಂತಿಯ ನಂತರದಲ್ಲಿ ಹಲವಾರು ಹೊಸ ಪ್ಲಾನ್‌ಗಳನ್ನು ಘೋಷಣೆ ಮಾಡಿದೆ. ಇದೇ ಮಾದರಿಯಲ್ಲಿ ತನ್ನ ಜಿಯೋ ಫೋನ್ ಬಳಕೆದಾರರಿಗೂ ಹೊಸ ಮಾದರಿಯ ಆಫರ್ ವೊಂದನ್ನು ಘೋಷಣೆ ಮಾಡಿದ್ದು, ಈ ಮೂಲಕ ಜಿಯೋ ಫೋನ್ ಬಳಕೆದಾರರ ಸಂಖ್ಯೆಯನ್ನು ಏರಿಕೆ ಮಾಡಿಕೊಂಡು ತನ್ನ ಕುಟುಂಬವನ್ನು ದೊಡ್ಡದು ಮಾಡಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದೆ ಎನ್ನಲಾಗಿದೆ.

ಅಂಬಾನಿ ಮಾಸ್ಟರ್ ಪ್ಲಾನ್: ಸೈಲೆಂಟಾಗಿ ಜಿಯೋ ಫೋನ್ ಬಳಕೆದಾರರಿಗೆ ಕೊಟ್ಟದೇನು..?

ಈಗಾಗಲೇ ದೇಶಿಯ ಮಾರುಕಟ್ಟೆಯಲ್ಲಿ ಜಿಯೋ ಮತ್ತು ಜಿಯೋ ಫೋನ್ ಅಬ್ಬರವೂ ಜೋರಾಗಿದ್ದು, ಈ ಹಿನ್ನಲೆಯಲ್ಲಿ ಮತ್ತೇ ಮಾರುಕಟ್ಟೆಯಲ್ಲಿ ಜಿಯೋ ಫೋನ್ ಮಾರಾಟ ಪ್ರಮಾಣವನ್ನು ಏರಿಕೆ ಮಾಡಬೇಕೆಂಬ ಕಾರಣದಿಂದ ಜಿಯೋ ತನ್ನ ಪ್ಲಾನ್ ನಲ್ಲಿ ಬದಲಾವಣೆಯನ್ನು ಮಾಡಿಕೊಟ್ಟಿದ್ದು, ಬಳಕೆದಾರರಿಗೆ ಹೊಸ ಮಾದರಿಯಲ್ಲಿ ಆಫರ್ ನೀಡಿ. ತನ್ನ ಮೇಲಿನ ನಂಬಿಕೆಯನ್ನು ಏರಿಕೆ ಮಾಡಿಕೊಳ್ಳಲು ಮುಂದಾಗಿದೆ.

ಓದಿರಿ: ಜಿಯೋ ಬಳಕೆದಾರರಿಗೆ ಮಾತ್ರ: ರೂ.398ಕ್ಕೆ ರೀಚಾರ್ಜ್ ಮಾಡಿಸಿ ರೂ.700 ಕ್ಯಾಷ್ ಬ್ಯಾಕ್ ಪಡೆಯುವುದು ಹೇಗೆ..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬದಲಾಯಿತು ಜಿಯೋ ಫೋನ್ ಪ್ಲಾನ್:

ಬದಲಾಯಿತು ಜಿಯೋ ಫೋನ್ ಪ್ಲಾನ್:

ಈ ಹಿಂದೆ ಜಿಯೋ ಫೋನ್ ಲಾಂಚ್ ಮಾಡಿದ ಸಂದರ್ಭದಲ್ಲಿ ಜಿಯೋ ತನ್ನ ಬಳಕೆದಾರರಿಗೆ ರೂ.153 ಪ್ಲಾನ್ ಘೋಷಣೆ ಮಾಡಿತ್ತು. ಇದರಲ್ಲಿ ಗ್ರಾಹಕರು ಪ್ರತಿ ನಿತ್ಯ 500MB 4G ಡೇಟಾವನ್ನು ಬಳಕೆ ಮಾಡಿಕೊಳ್ಳಬಹುದಾಗಿತ್ತು, ಇದಲ್ಲದೇ ಉಚಿತವಾಗಿ ಕರೆಮಾಡುವ ಅವಕಾಶವನ್ನು ಪಡೆದುಕೊಂಡಿದ್ದರು. ಅಲ್ಲದೇ ಉಚಿತ SMS ಅನ್ನು ಸಹ ಕಳುಹಿಸುವುದಲ್ಲದೇ, ವೇಗದ ಡೇಟಾ ಪ್ಯಾಕ್ ಮುಗಿದ ಮೇಲೆಯೂ ಕಡಿಮೆ ವೇಗದ ಡೇಟಾವನ್ನು ಬಳಕೆ ಮಾಡಿಕೊಳ್ಳುವ ಅವಕಾಶವು ಇತ್ತು. ಆದರೆ ಈಗ ಇದು ಬದಲಾಗಿದೆ.

ಹೊಸ ಪ್ಲಾನ್:

ಹೊಸ ಪ್ಲಾನ್:

ಜಿಯೋ ಸೈಲೆಂಟ್ಆಗಿ ತನ್ನ ಜಿಯೋ ಫೋನ್ ಬಳಕೆದಾರರಿಗೆ ಹೊಸ ಮಾದರಿಯ ಆಫರ್ ಅನ್ನು ನೀಡಲು ಮುಂದಾಗಿದೆ. ಈ ಪ್ಲಾನ್ ನಲ್ಲಿ ಇನ್ನು ಮುಂದೆ ಜಿಯೋ ಬಳಕೆದಾರರು ಪ್ರತಿ ನಿತ್ಯ 1GB ಡೇಟಾವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಇದು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಅದನ್ನು ಬಿಟ್ಟರೆ ಉಳಿದೆಲ್ಲವೂ ಹಿಂದಿನಂತೆಯೇ ಇರಲಿದೆ.

ಜಿಯೋ ಫೋನ್:

ಜಿಯೋ ಫೋನ್:

ಈಗಾಗಲೇ ಎರಡು ಹಂತದಲ್ಲಿ ಜಿಯೋ ಫೋನ್ ಮಾರಾಟ ಮಾಡಿರುವ ಜಿಯೋ ಮುಂದಿನ ದಿನದಲ್ಲಿ ಭಾರತದಲ್ಲಿಯೇ ಜಿಯೋ ಫೋನ್ ನಿರ್ಮಾಣ ಮಾಡಲಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಈ ಆಫರ್ ಹೆಚ್ಚು ಮಂದಿ ಜಿಯೋ ಫೋನ್ ಖರೀದಿಸುವಂತೆ ಮಾಡಲಿದೆ ಎನ್ನಲಾಗಿದೆ.

Jio Free Caller Tune ! ಜಿಯೋ ಉಚಿತ ಕಾಲರ್‌ಟೂನ್ ಬಳಕೆ ಹೇಗೆ..?
ಭಾರತದಲ್ಲಿಯೇ ಉತ್ಪಾದನೆ:

ಭಾರತದಲ್ಲಿಯೇ ಉತ್ಪಾದನೆ:

ಈಗಾಗಲೇ ಭಾರತದಲ್ಲಿಯೇ ಜಿಯೋ ಫೋನ್ ಉತ್ಪಾದನೆಯನ್ನು ಜಿಯೋ ಆರಂಭಿಸಿದೆ ಎನ್ನಲಾಗಿದೆ. ಶೀಫ್ರವೇ ಈ ಕಾರ್ಯಕ್ಕೆ ಚಾಲನೆ ದೊರೆಯಲಿದ್ದು, ಈ ಹಿನ್ನಲೆಯಲ್ಲಿ ಜಿಯೋ ಫೋನ್ ಬೆಲೆಯೋ ಇನಷ್ಟು ಇಳಿಕೆಯಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Reliance JioPhone’ Rs 153 Tariff Plan Revised to Offer 1GB Data Per Day for 28 Days. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot