Home
ಮೊಬೈಲ್

ಈ ವಾರ ಬಿಡುಗಡೆಯಾಗುವ ಟಾಪ್ ಫೋನ್‌ಗಳಿವು; ಐಫೋನ್‌, ವಿವೋ, ರಿಯಲ್‌ಮಿ.. ಯಾವುದು ಫಸ್ಟ್? ಬೆಲೆ, ವಿಶೇಷತೆಗಳೇನು?

ಸ್ಮಾರ್ಟ್‌ಫೋನ್ ಪ್ರಿಯರಿಗೆ ಮುಂದಿನ ವಾರ ತುಂಬಾ ವಿಶೇಷವಾಗಿದೆ. ಈ ವರ್ಷದ ಮೊದಲ ಐಫೋನ್‌ನಿಂದ ಹಿಡಿದು ಹಲವಾರು ಅದ್ಭುತ ಆಂಡ್ರಾಯ್ಡ್ ಮೊಬೈಲ್‌ಗಳು (Upcoming Smartphones) ಮುಂದಿನ ವಾರ ಭಾರತದಲ್ಲಿ ಬಿಡುಗಡೆಯಾಗಲಿವೆ. ಹೌದು, ಟೆಕ್ ಜಗತ್ತು ಈ ಫೋನ್‌ಗಳ ಬಿಡುಗಡೆಗೆ ಕಾಯುತ್ತಿದೆ. ನೀವು ಹೊಸ ಮೊಬೈಲ್ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ, ಇದು ನಿಮಗೆ ಉತ್ತಮ ಸಮಯವಾಗಿದೆ. ಈ ಸ್ಮಾರ್ಟ್‌ಫೋನ್‌ಗಳು 20 ಸಾವಿರ ರೂ.ನಿಂದ 50 ಸಾವಿರ ರೂ.ಗಳ ಬಜೆಟ್‌ನಲ್ಲಿ ಬಿಡುಗಡೆಯಾಗಲಿವೆ. ಬನ್ನಿ. ಮುಂದಿನ ವಾರ ಭಾರತಕ್ಕೆ ಬರುವ ಫೋನ್‌ಗಳು ಯಾವುವು? ಬೆಲೆ ಎಷ್ಟು? ಮತ್ತು ವಿಶೇಷಣಗಳನ್ನು ತಿಳಿಯೋಣ.

ವಿವೋ V50 5G (vivo V50 5G) ಸ್ಮಾರ್ಟ್‌ಫೋನ್ ಫೆಬ್ರವರಿ 17 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಮೊಬೈಲ್ ಮೂರು ಸ್ಟೋರೇಜ್ ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ ಎಂದು ಹೇಳಲಾಗಿದೆ. 8GB RAM ಹೊಂದಿರುವ 128GB ಸ್ಟೋರೇಜ್‌ ಆಯ್ಕೆಯ ಬೆಲೆ 34,999 ರೂ. ಮತ್ತು 256GB ಸ್ಟೋರೇಜ್‌ ವೇರಿಯಂಟ್‌ ಬೆಲೆ 36,999 ರೂ. ಆಗಿರಲಿದೆ. ಆದರೆ, 12GB RAM + 256GB ಸ್ಟೋರೇಜ್ ರೂಪಾಂತರವನ್ನು 40,999 ರೂ.ಗೆ ಬಿಡುಗಡೆ ಮಾಡುವ ಸಾಧ್ಯತೆಯಿದೆ.

Upcoming Smartphones: ಈ ವಾರಬಿಡುಗಡೆಯಾಗುವ ಟಾಪ್ ಫೋನ್‌ಗಳಿವು; ಇಲ್ಲಿದೆ ಪಟ್ಟಿ

ವಿವೋ V50 5G ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 7s ಜೆನ್ 3 ಪ್ರೊಸೆಸರ್‌ನೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಇದು ಆಂಡ್ರಾಯ್ಡ್ 15 ಆಧಾರಿತ ಫನ್‌ಟಚ್ ಓಎಸ್‌ 15 ಜೊತೆಗೆ ಕೆಲಸ ನಿರ್ವಹಿಸುತ್ತದೆ. ಈ ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿರುತ್ತದೆ. ಈ ಫೋನಿನಲ್ಲಿ OIS ಜೊತೆಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ದ್ವಿತೀಯ (ಅಲ್ಟ್ರಾ ವೈಡ್ ಆಂಗಲ್ ಲೆನ್ಸ್) ಲಭ್ಯವಿರುತ್ತದೆ. ಹಾಗೆಯೇ 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿರಲಿದೆ. ಈ ಮೊಬೈಲ್ 6000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯೊಂದಿಗೆ ಬಿಡುಗಡೆಯಾಗಲಿದೆ.

Upcoming Smartphones: ಈ ವಾರಬಿಡುಗಡೆಯಾಗುವ ಟಾಪ್ ಫೋನ್‌ಗಳಿವು; ಇಲ್ಲಿದೆ ಪಟ್ಟಿ

ರಿಯಲ್‌ಮಿ P3x 5G: ಫೆಬ್ರವರಿ 18 ರಂದು ಬಿಡುಗಡೆ

ರಿಯಲ್‌ಮಿ P3x 5G (realme P3x 5G) ಕೈಗೆಟುಕುವ 5G ಫೋನ್ ಆಗಿದೆ. ಇದು ಫೆಬ್ರವರಿ 18 ರಂದು ಬಿಡುಗಡೆಯಾಗಲಿದೆ. ಈ ಮೊಬೈಲ್‌ 20 ಸಾವಿರ ರೂ.ಗಳ ಆರಂಭಿಕ ಬೆಲೆಯನ್ನು ಹೊಂದಿರುತ್ತದೆ. ಇದು 8GB RAM + 128GB ಸ್ಟೋರೇಜ್ ಆಯ್ಕೆ ಒಳಗೊಂಡಿರುತ್ತದೆ. ಈ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 6400 ಪ್ರೊಸೆಸರ್‌ನೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎಂದು ಕಂಪನಿ ತಿಳಿಸಿದೆ.

ಈ ಸುದ್ದಿ ಓದಿದ್ದೀರಾ?: ವಾವ್! 10,000 ರಿಯಾಯಿತಿ.. 5500mAh ಬ್ಯಾಟರಿ.. 512GB ಸ್ಟೋರೇಜ್.. ಈ Realme ಫೋನಿಗೆ ಬಿಗ್ ಆಫರ್

ರಿಯಲ್‌ಮಿ P3x 5G ಸ್ಮಾರ್ಟ್‌ಫೋನ್ ಐಸ್‌ಫೀಲ್ಡ್ ವಿನ್ಯಾಸ ಹೊಂದಿದೆ. ಇದು ಲೂನಾರ್ ಸಿಲ್ವರ್ ಬಣ್ಣದಲ್ಲಿ ಮತ್ತು ಸಸ್ಯಾಹಾರಿ ಚರ್ಮದೊಂದಿಗೆ ಮಿಡ್‌ನೈಟ್ ಬ್ಲೂ ಮತ್ತು ಸ್ಟೆಲ್ಲಾರ್ ಪಿಂಕ್ ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ. ಈ ರಿಯಲ್‌ಮಿ 5G ಫೋನ್‌ 6,000mAh ಸಾಮರ್ಥ್ಯದ ಬಿಗ್ ಬ್ಯಾಟರಿ ಹೊಂದಿರಲಿದೆ. ಹಾಗೆಯೇ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಒಳಗೊಂಡಿರುತ್ತದೆ. ಈ ಸ್ಮಾರ್ಟ್‌ಫೋನ್ ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ IP69 ರೇಟಿಂಗ್‌ ಪಡೆದಿದೆ.

Upcoming Smartphones: ಈ ವಾರಬಿಡುಗಡೆಯಾಗುವ ಟಾಪ್ ಫೋನ್‌ಗಳಿವು; ಇಲ್ಲಿದೆ ಪಟ್ಟಿ

ರಿಯಲ್‌ಮಿ P3 ಪ್ರೊ 5G: ಫೆಬ್ರವರಿ 18 ರಂದು ಬಿಡುಗಡೆ

ರಿಯಲ್‌ಮಿ P3 ಪ್ರೊ 5G (Realme P3 Pro 5G) ಮೊಬೈಲ್ ಫೆಬ್ರವರಿ 18 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಫೋನಿನ ಮೂಲ ರೂಪಾಂತರವು 8GB RAM + 128GB ಸ್ಟೋರೇಜ್ ಆಯ್ಕೆಯೊಂದಿಗೆ ಬರಲಿದೆ. ಹಾಗೆಯೇ ಟಾಪ್ ವೇರಿಯಂಟ್ 12GB RAM + 256GB ಸ್ಟೋರೇಜ್ ರೂಪಾಂತರದೊಂದಿಗೆ ಬಿಡುಗಡೆಯಾಗಲಿದೆ. ಈ ಸ್ಮಾರ್ಟ್‌ಫೋನ್ ಮಧ್ಯಮ ಬಜೆಟ್ ವಿಭಾಗದಲ್ಲಿ ಪರಿಚಯಿಸಲಾಗುವುದು. ಇದರ ಬೆಲೆ 25 ಸಾವಿರದಿಂದ 30 ಸಾವಿರ ರೂ. (ರೂ. 27,999) ಇರುತ್ತದೆ. ಈ ರಿಯಲ್‌ಮಿ 5G ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 7s ಜೆನ್ 3 ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗುವ ಸಾಧ್ಯತೆಯಿದೆ.

ರಿಯಲ್‌ಮಿ P3 ಪ್ರೊ 5G ವಿನ್ಯಾಸ ತುಂಬಾ ವಿಶೇಷವಾಗಿದೆ. ಈ ಮೊಬೈಲ್ ಕತ್ತಲೆಯಲ್ಲಿಯೂ ಹೊಳೆಯುತ್ತದೆ. ಈ ಸ್ಮಾರ್ಟ್‌ಫೋನ್‌ 5,500mAh ಸಾಮರ್ಥ್ಯದ ಬ್ಯಾಟರಿ ಹೊಂದಿರಲಿದೆ. ಇದನ್ನು ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುವುದು. ಈ ಫೋನಿನಲ್ಲಿ 6.78 ಇಂಚಿನ ಅಮೋಲೆಡ್ ಡಿಸ್ಪ್ಲೇ ಇರುತ್ತದೆ. ಈ ಮೊಬೈಲ್ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿರುತ್ತದೆ.

Upcoming Smartphones: ಈ ವಾರಬಿಡುಗಡೆಯಾಗುವ ಟಾಪ್ ಫೋನ್‌ಗಳಿವು; ಇಲ್ಲಿದೆ ಪಟ್ಟಿ

ಐಫೋನ್ SE 4: ಫೆಬ್ರವರಿ 19 ರಂದು ಬಿಡುಗಡೆ

ಐಫೋನ್ SE 4 (iPhone SE 4) ಫೆಬ್ರವರಿ 19 ರಂದು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲೂ ಈ ಐಫೋನನ್ನು ಲಾಂಚ್ ಮಾಡುವ ಸಾಧ್ಯತೆಯಿದೆ. ಐಫೋನ್ SE 4 ಫೊನಿನ ಲುಕ್ ಮತ್ತು ಡಿಸೈನ್ ನೋಡಿದರೆ ಐಫೋನ್ 16 ಫೋನಿಗಿಂತ ವಿಭಿನ್ನವಾಗಿದೆ. ಆದರೆ, ಕಾರ್ಯಕ್ಷಮತೆಯ ವಿಷಯದಲ್ಲಿ, ಎರಡೂ ಐಫೋನ್‌ಗಳು ಒಂದೇ ಆಗಿವೆ. ಐಫೋನ್ SE 4 ಸ್ಮಾರ್ಟ್‌ಫೋನ್‌ ಬಯೋನಿಕ್ A18 ಪ್ರೊಸೆಸರ್ ಹೊಂದಿರಲಿದೆ. ಇದು 8GB RAM ನೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ಮುಂಬರುವ ಐಫೋನ್ SE 4 ಫೋನಿನಲ್ಲಿ ಆಪಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಇರುತ್ತದೆ. ಈ ಅಗ್ಗದ ಐಫೋನ್ 6.1 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಇದು ಸೂಪರ್ ರೆಟಿನಾ XDR OLED ಡಿಸ್ಪ್ಲೇ ಆಗಿದೆ. ಈ ಐಫೋನ್ 48 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 12 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿರುತ್ತದೆ. ಈ ಐಫೋನಿನ 8GB RAM + 128GB ಸ್ಟೋರೇಜ್ ರೂಪಾಂತರವನ್ನು 49,999 ರೂ.ಗೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ಒಟ್ಟಾರೆ, ನೀವು 8GB RAM ಹೊಂದಿರುವ 5G ಫೋನ್ ಖರೀದಿಸಲು ಬಯಸಿದರೆ, ಈ ವಾರ (ಫೆಬ್ರವರಿ 17 ಮತ್ತು ಫೆಬ್ರವರಿ 22) ಭಾರತೀಯ ಮಾರುಕಟ್ಟೆಯಲ್ಲಿ ಹಲವು ಉತ್ತಮ ಸ್ಮಾರ್ಟ್‌ಫೋನ್‌ಗಳು ಎಂಟ್ರಿ ಕೊಡಲಿದೆ. ಇವುಗಳು 20 ಸಾವಿರದಿಂದ 50 ಸಾವಿರ ರೂ.ಗಳ ಬಜೆಟ್‌ನಲ್ಲಿ ಖರೀದಿಗೆ ಲಭ್ಯವಿರುತ್ತವೆ. ಈ ಮುಂಬರುವ ಫೋನ್‌ಗಳ ಅಧಿಕೃತ ಬೆಲೆ ಮತ್ತು ವೈಶಿಷ್ಟ್ಯಗಳು ಶೀಘ್ರದಲ್ಲೇ ಬಹಿರಂಗವಾಗಲಿವೆ.

Best Mobiles in India

English summary
Upcoming Smartphones Launching in india Next Week: vivo V50, iPhone SE 4, realme P3x 5G And More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+