Samsung Galaxy S25: ಸ್ಯಾಮ್‌ಸಂಗ್ ಅಬ್ಬರ ಶುರು! ಈ ವಾರ 3 ದೈತ್ಯ ಫೋನ್ ಲಾಂಚ್; ಬೆಲೆ, ವಿಶೇಷತೆಗಳೇನು?
ಮೊಬೈಲ್ ಪ್ರಿಯರಿಗೆ ಇಷ್ಟು ಸಾಕು! ಬಹುನಿರೀಕ್ಷಿತ ಸ್ಯಾಮ್‌ಸಂಗ್ ಗ್ಯಾಲಕ್ಸಿ S25 (Samsung Galaxy S25) ಸರಣಿಯು ಈ ವಾರ ದೇಶೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಹೌದು, ಜನವರಿ ತಿಂಗಳಲ್ಲಿ ದೈತ್ಯ ಕಂಪನಿಗಳ ಸಾಕಷ್ಟು ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಬಿಡುಗಡೆಯಾಗಿವೆ. ಒನ್‌ಪ್ಲಸ್ ಮತ್ತು ರಿಯಲ್‌ಮಿ ಸಂಸ್ಥೆಗಳು ಶಕ್ತಿಯುವ ಫೋನ್‌ಗಳನ್ನು ಪರಿಚಯಿಸಿವೆ. ಇದಲ್ಲದೆ ರೆಡ್ಮಿ, ಮೊಟೊರೊಲಾ ಮತ್ತು ಐಟೆಲ್ ಕಂಪನಿಗಳು ಕಡಿಮೆ ದರದಲ್ಲಿ ನೂತನ ಫೋನ್‌ಗಳನ್ನು ಲಾಂಚ್ ಮಾಡಿವೆ. ಈ ವಾರ (ಜನವರಿ 22) ಸ್ಯಾಮ್‌ಸಂಗ್ ಗ್ಯಾಲಕ್ಸಿ S250 ಸರಣಿ ಭಾರತದಲ್ಲಿ ನಡುವೆ ಬಿಡುಗಡೆಯಾಗಲಿದೆ.
ಹೌದು, ಸ್ಯಾಮ್‌ಸಂಗ್ ಜನವರಿ 22 ರಂದು 'ಗ್ಯಾಲಕ್ಸಿ ಅನ್ಪ್ಯಾಕ್ಡ್ 2025' (Samsung Galaxy Unpacked 2025) ಅನ್ನು ಆಯೋಜಿಸಿದೆ. ಈ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಈವೆಂಟ್‌ನಲ್ಲಿ ಗ್ಯಾಲಕ್ಸಿ S25 (Galaxy S25) ಸರಣಿಯು ಲೋಕಾರ್ಪಣೆಗೊಳ್ಳಲಿದೆ. ಈ ಸಮಾರಂಭ ಯುಎಸ್‌ಎ (USA), ಕ್ಯಾಲಿಫೋರ್ನಿಯಾದಲ್ಲಿ ನಡೆಯಲಿದೆ. ಇದು ಭಾರತೀಯ ಕಾಲಮಾನ ರಾತ್ರಿ 11.30ಕ್ಕೆ ನೇರ ಪ್ರಸಾರವಾಗಲಿದೆ. ಈ ಸರಣಿಯಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S25 (Samsung Galaxy S25), ಸ್ಯಾಮ್‌ಸಂಗ್ ಗ್ಯಾಲಕ್ಸಿ S25+ (Samsung Galaxy S25+) ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ (Samsung Galaxy S25 Ultra) ಫೋನ್‌ಗಳನ್ನು ಬಿಡುಗಡೆ ಮಾಡಲಾಗುವುದು.

ಈ ವಾರ ಬಿಡುಗಡೆಯಾಗುತ್ತಿರುವ ಫೋನ್‌ಗಳಿವು!
ಸ್ಯಾಮ್‌ಸಂಗ್ ಗ್ಯಾಲಕ್ಸಿ S25
ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಸರಣಿಯು ಜ.22 ರಂದು ಬಿಡುಗಡೆಯಾಗಲಿದೆ. ಈ ಸರಣಿಯ ಮೂಲ ಮಾದರಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಫೋನ್ 79,999 ರೂ. ಆರಂಭಿಕ ಬೆಲೆಯನ್ನು ಹೊಂದಿರುತ್ತದೆ. ಈ ಮೊಬೈಲ್ Exynos 2500 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಇದು 8GB ಮತ್ತು 12GB RAM ಹೊಂದಿರಲಿದೆ. ಜೊತೆಗೆ ಫೋನಿನಲ್ಲಿ 128GB, 256GB ಮತ್ತು 512GB ಸ್ಟೋರೇಜ್ ಲಭ್ಯವಿರುತ್ತದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಸ್ಮಾರ್ಟ್‌ಫೋನ್ 6.2 ಇಂಚಿನ ಪಂಚ್ ಹೋಲ್ ಶೈಲಿಯ ಅಮೋಲೆಡ್ ಡಿಸ್ಪ್ಲೇ ಹೊಂದಿರುತ್ತದೆ. ಇದು 120Hz ರಿಫ್ರೆಶ್ ದರದೊಂದಿಗೆ ಬರುತ್ತದೆ. ಈ ಮೊಬೈಲ್ 12 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿರಲಿದೆ. ಜೊತೆಗೆ 50 ಮೆಗಾಪಿಕ್ಸೆಲ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಇರುತ್ತದೆ. ಈ ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿರುವ ನಿರೀಕ್ಷೆಯಿದೆ.
ಈ ಸುದ್ದಿ ಓದಿದ್ದೀರಾ?: Apple Store: ಇನ್ಮುಂದೆ ನೇರವಾಗಿ ಶಾಪಿಂಗ್ ಮಾಡಬಹುದು! ಭಾರತದಲ್ಲಿ ಆಪಲ್ ಸ್ಟೋರ್ ಆಪ್ ಶುರು!
ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಪ್ಲಸ್
ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಪ್ಲಸ್ (Samsung Galaxy S25 Plus) ಫೋನ್ Exynos 2500 ಪ್ರೊಸೆಸರ್ ಹೊಂದಿರುತ್ತದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಮೂಲ ರೂಪಾಂತರವು 8GB RAM ಹೊಂದಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ S25+ ಮೂಲ ರೂಪಾಂತರ ಕೇವಲ 12GB RAM ಹೊಂದಿರಲಿದೆ. ಇದು 256GB ಸ್ಟೋರೇಜ್ ಆಯ್ಕೆ ಒಳಗೊಂಡಿರುತ್ತದೆ.
ಗ್ಯಾಲಕ್ಸಿ S25+ ಫೋನಿನ ಡಿಸ್ಪ್ಲೇಯು, ಗ್ಯಾಲಕ್ಸಿ S25 ಫೋನ್‌ಗಿಂತ ಅಂದರೆ 6.7 ಇಂಚಿನ ದೊಡ್ಡ ಡಿಸ್ಪ್ಲೇ ಹೊಂದಿರುತ್ತದೆ. ಇದು LTPO ಅಮೋಲೆಡ್ 2x ಡಿಸ್ಪ್ಲೇ ಆಗಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 10 ಮೆಗಾಪಿಕ್ಸೆಲ್ 3x ದ್ವಿತೀಯ ಕ್ಯಾಮೆರಾ ಮತ್ತು 12 ಮೆಗಾಪಿಕ್ಸೆಲ್ ತೃತೀತ ಕ್ಯಾಮೆರಾ ಲಭ್ಯವಿರುತ್ತದೆ. ಜೊತೆಗೆ 12 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಹೊಂದಿದೆ. ಇದನ್ನು 1,29,999 ರೂ.ಗೆ ಬಿಡುಗಡೆ ಮಾಡಲಾಗುವುದು.
ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ
ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ (Samsung Galaxy S25 Ultra) ಫೋಟೋಗ್ರಫಿ ಪ್ರಿಯರಿಗೆ ಉತ್ತಮ ಆಯ್ಕೆಯಾಗಿದೆ. ಈ ಫೋನ್ 200 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿರುತ್ತದೆ. ಇದು ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿರುತ್ತದೆ. ಜೊತೆಗೆ 50 ಮೆಗಾಪಿಕ್ಸೆಲ್ ಪೆರಿಸ್ಕೋಪ್ ಲೆನ್ಸ್, 50 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಆಂಗಲ್ ಲೆನ್ಸ್ ಮತ್ತು 10 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಇರುತ್ತದೆ. ಈ ಫೋನ್ 12 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸಹ ಒಳಗೊಂಡಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ ಮೊಬೈಲ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಹೊಂದಿರುತ್ತದೆ. ಈ ಫೋನಿನ ಮೂಲ ರೂಪಾಂತರವು 12GB RAM ಹೊಂದಿದೆ. ಟಾಪ್ ಎಂಡ್ ವೇರಿಯಂಟ್ 16GB RAM ಒಳಗೊಂಡಿರುತ್ತದೆ. ಇದು 1TB ಸ್ಟೋರೇಜ್‌ನೊಂದಿಗೆ ಬರುತ್ತದೆ. ಈ ಫೋನ್ 6.86 ಇಂಚಿನ ಡೈನಾಮಿಕ್ ಅಮೋಲೆಡ್ ಡಿಸ್ಪ್ಲೇ ಹೊಂದಿರಲಿದೆ. ಈ ಫೋನ್ ಸಿಲಿಕಾನ್ ಕಾರ್ಬನ್ ಬ್ಯಾಟರಿ ಮತ್ತು 45W ವೇಗದ ಚಾರ್ಜಿಂಗ್ ಸೌಲಭ್ಯ ಹೊಂದಿದೆ. ಈ ಮೊಬೈಲ್ 1,29,999 ರೂ.ಗೆ ಬಿಡುಗಡೆಯಾಗುವ ಸಾಧ್ಯತೆಯಿದೆ.


Click it and Unblock the Notifications








