Home
ಮೊಬೈಲ್

ಸ್ಮಾರ್ಟ್‌ಫೋನ್‌ನ ಕೆಳಭಾಗದಲ್ಲಿ ಈ ಸಣ್ಣ ರಂಧ್ರ ಯಾಕಿದೆ?; ಇದರ ಪ್ರಯೋಜನ ಏನು?

ಸ್ಮಾರ್ಟ್‌ಫೋನ್‌ ಅಂದಾಕ್ಷಣ ಅದರಲ್ಲಿ ಏನೆಲ್ಲಾ ಫೀಚರ್ಸ್‌ ಇವೆ, ಬ್ಯಾಟರಿ ಬ್ಯಾಕಪ್‌ ಎಷ್ಟಿದೆ, ಸ್ಮಾರ್ಟ್‌ಫೋನ್‌ ಶೈಲಿ ಹೇಗಿದೆ ಎನ್ನುವ ವಿಷಯಕ್ಕೆ ನಮ್ಮ ಮನಸ್ಸನ್ನು ಕೇಂದ್ರೀಕರಿಸುತ್ತೇದೆ. ಆದರೆ, ಎಂದಾದರೂ ಸ್ಮಾರ್ಟ್‌ಫೋನ್‌ನಲ್ಲಿ ಕಾಣಿಸುವ ಈ ಸಣ್ಣ ರಂಧ್ರದ ಬಗ್ಗೆ ತಿಳಿಯಲು ಮುಂದಾಗಿದ್ದೀರಾ?. ಇದರಿಂದ ಪ್ರಯೋಜನ ಏನು ಎಂಬುದರ ಬಗ್ಗೆ ನಿಮಗೆ ಗೊತ್ತಾ?.

ಹೌದು, ಸ್ಮಾರ್ಟ್‌ಫೋನ್‌ನಲ್ಲಿ ಸಾಮಾನ್ಯವಾಗಿ ಹೆಡ್‌ ಫೋನ್‌ ಉದ್ದೇಶಕ್ಕೆ ಹಾಗೂ ಸ್ಪೀಕರ್‌ ಉದ್ದೇಶಕ್ಕೆ ದೊಡ್ಡ ಹೋಲ್‌ ಅನ್ನು ನೋಡಿರಬಹುದು. ಆದರೆ, ಹೆಡ್‌ಫೋನ್‌ ಜಾಕ್‌ ಅನ್ನು ಹಾಕುವ ಪಕ್ಕದಲ್ಲೇ ಕಾಣಿಸಿಕೊಳ್ಳುವ ಈ ಸಣ್ಣಗಾತ್ರದ ಹೋಲ್‌ ಬಗ್ಗೆ ಎಷ್ಟು ಜನರಿಗೆ ಗೊತ್ತು?. ಹಾಗಿದ್ರೆ, ಈ ಹೋಲ್‌ ಅನ್ನು ಯಾಕೆ ನೀಡಲಾಗಿದೆ. ಇದರಿಂದ ಬಳಕೆದಾರರಿಗೆ ಆಗುವ ಪ್ರಯೋಜನ ಏನು ಎಂಬ ಸ್ವಾರಸ್ಯಕರ ಮಾಹಿತಿಗಾಗಿ ಈ ಲೇಖನ ಓದಿ.

ಸ್ಮಾರ್ಟ್‌ಫೋನ್‌ನ ಕೆಳಭಾಗದಲ್ಲಿ ಈ ಸಣ್ಣ ರಂಧ್ರ ಯಾಕಿದೆ?; ಇದರ ಪ್ರಯೋಜನ ಏನು?

ಸೆಲ್ ಫೋನ್‌ನ ಕೆಳಗೆ ಗೋಚರಿಸುವ ರಂಧ್ರ ಯಾವುದು?: ನೀವು ಸ್ಮಾರ್ಟ್‌ಫೋನ್ ಹೊಂದಿದ್ದರೆ, ಅದರ ವಿನ್ಯಾಸದಲ್ಲಿ ಸೆಲ್ಫಿ ಕ್ಯಾಮೆರಾ, ರಿಯರ್‌ ಕ್ಯಾಮೆರಾ, ಆಡಿಯೊ ಜ್ಯಾಕ್, ವಾಲ್ಯೂಮ್ ಬಟನ್ ಮತ್ತು ಸ್ಪೀಕರ್‌ನಂತಹ ಅನೇಕ ಫೀಚರ್ಸ್‌ಗಳನ್ನು ನೀವು ಗಮನಿಸಿರಬಹುದು. ಅದರಂತೆ ಈ ರಂಧ್ರವು ವಿನ್ಯಾಸದ ಒಂದು ಭಾಗವಾಗಿದೆ ಎಂದು ಕೆಲವರು ತಿಳಿದುಕೊಂಡಿದ್ದಾರೆ. ಆದರೆ, ಇದು ಸತ್ಯವಲ್ಲ ಬದಲಾಗಿ ಇದರಿಂದ ಹಲವು ಅನುಕೂಲ ಇದೆ.

ಈ ಸಣ್ಣ ರಂಧ್ರದಿಂದ ಆಗುವ ಪ್ರಯೋಜನ ಏನು?: ಇದು ಶಬ್ದ ರದ್ದತಿ ಮೈಕ್ರೊಫೋನ್ ಆಗಿದ್ದು, ಕರೆ ಮಾಡುವಾಗ ಸಕ್ರಿಯವಾಗುತ್ತದೆ. ಈ ಮೈಕ್ರೊಫೋನ್‌ನ ಕೆಲಸವೆಂದರೆ ನಿಮ್ಮ ಕರೆ ಮಾಡುವ ಅನುಭವವನ್ನು ಉತ್ತಮವಾಗಿಸುವುದು. ಈ ಮೈಕ್ರೊಫೋನ್ ಇಲ್ಲದಿದ್ದರೆ, ನಿಮ್ಮ ಕರೆಯಲ್ಲಿ ಮಾತನಾಡುತ್ತಿರುವ ವ್ಯಕ್ತಿಯು ನಿಮ್ಮ ಧ್ವನಿಯನ್ನು ಕೇಳಲು ತುಂಬಾ ಕಷ್ಟಪಡಬೇಕಾಗುತ್ತದೆ. ಹೀಗಾಗಿಯೇ ಸ್ಮಾರ್ಟ್‌ಫೋನ್‌ಗಳಲ್ಲಿ ಇದು ತುಂಬಾ ಅಗತ್ಯವಾದ ಫೀಚರ್ಸ್‌ ಆಗಿದೆ.

ಸ್ಮಾರ್ಟ್‌ಫೋನ್‌ನ ಕೆಳಭಾಗದಲ್ಲಿ ಈ ಸಣ್ಣ ರಂಧ್ರ ಯಾಕಿದೆ?; ಇದರ ಪ್ರಯೋಜನ ಏನು?

ಗುಂಡು ಸೂಜಿ ಅಥವಾ ಪಿನ್ ಅನ್ನು ಸಿಲುಕಿಸದಿರಿ : ಈ ವಿಭಾಗ ನಿಮ್ಮ ಡಿವೈಸ್‌ನ ಅತ್ಯಂತ ಸೂಕ್ಷ್ಮವಾದ ಸ್ಥಳವವಾಗಿದ್ದು, ಇದರ ಬಗ್ಗೆ ತುಂಬಾ ಜಾಗರೂಕರಾಗಿರಬೇಕು. ಹಾಗೆಯೇ ಕ್ಲೀನ್‌ ಮಾಡುವ ಉದ್ದೇಶದಿಂದ ಅಥವಾ ಅದು ಏನು ಎಂದು ನೋಡುವ ಉದ್ದೇಶದಿಂದ ಗುಂಡು ಸೂಜಿ ಅಥವಾ ಪಿನ್ ಅನ್ನು ಬಳಕೆ ಮಾಡದಿರಿ. ಇದರಿಂದ ಇನ್‌ಬಿಲ್ಟ್‌ ಮೈಕ್ರೊಫೋನ್ ಹಾನಿಗೆ ಒಳಗಾಗಬಹುದು.

ಇನ್ನು ಫೋನ್‌ನ ವಿನ್ಯಾಸವನ್ನು ಅವಲಂಬಿಸಿ ಈ ರಂಧ್ರವು ತನ್ನ ಸ್ಥಾನ ಪಡೆಯಲಿದ್ದು, ಇದರೊಂದಿಗೆ ಸ್ವಚ್ಛವಾಗಿಟ್ಟುಕೊಳ್ಳುವುದು ಮತ್ತು ಅದನ್ನು ಯಾವುದೇ ಪದಾರ್ಥಗಳಲ್ಲಿ ಅಂದರೆ ಯಾವುದಾದರೂ ಪೌಡರ್‌, ನೀರು ಅಥವಾ ಇನ್ನಿತರೆ ದ್ರವ ರೂಪದ ವಸ್ತುಗಳಲ್ಲಿ ಮುಳುಗಿಸಬಾರದು. ಈ ರೀತಿ ಮಾಡಿದರೆ ಹೆಚ್ಚಿನ ಹಾನಿಯಾಗುವುದಲ್ಲದೆ ಹಲವು ಸಮಸ್ಯೆಗಳು ಮೊಬೈಲ್‌ನಲ್ಲಿ ಕಾಣಿಸಿಕೊಳ್ಳುತ್ತವೆ.

ಅದಾಗ್ಯೂ ಆ ರಂಧ್ರದಲ್ಲಿ ಏನಾದರೂ ಸಿಲುಕಿದೆ ಎಂದು ಕಂಡುಬಂದರೆ ಮೊದಲು ನೀವೇ ಸ್ವತಃ ತೆಗೆದುಹಾಕಲು ಮುಂದಾಗಬೇಡಿ. ಬದಲಾಗಿ ಸೆಲ್‌ಫೋನ್‌ ರಿಪೇರಿ ಮಾಡುವ ಅಂಗಡಿಗೆ ತೆಗೆದುಕೊಂಡು ಹೋಗಿ ಅದನ್ನು ತೆಗೆಯಲು ಹೇಳಿ. ಇನ್ನುಳಿದಂತೆ ನೀವು ಬಳಕೆ ಮಾಡುತ್ತಿರುವ ಸ್ಮಾರ್ಟ್‌ಫೋನ್‌ ಯಾವ ಮಾಡೆಲ್‌ ಹಾಗೂ ಫೋನ್‌ನ IMEI ನಂಬರ್ ಏನು ಎಂಬುದನ್ನು ತಿಳಿಯಲು ಈ ಕ್ರಮ ಅನುಸರಿಸಿ.

ಈಗಂತೂ ಸ್ಮಾರ್ಟ್‌ಫೋನ್‌ ಖರೀದಿ ಮಾಡುವಾಗ ಅದರ ಜೊತೆಗೆ ಇತರೆ ಪರಿಕರಗಳಾದ ಹೆಡ್‌ಫೋನ್, ಚಾರ್ಜರ್‌ ಅನ್ನು ನೀಡುವುದಿಲ್ಲ. ಈ ಕಾರಣಕ್ಕೆ ನಿಮ್ಮ ಫೋನ್‌ ನ ಮಾಡೆಲ್‌ಗೆ ತಕ್ಕ ಚಾರ್ಜರ್‌ ಖರೀದಿ ಮಾಡಲು ಹಾಗೂ ಇನ್ನಿತರೆ ಉಪಯೋಗಕ್ಕಾಗಿ ಫೋನ್‌ನ ವಿವರವನ್ನು ಪಡೆಯಬೇಕಾಗುತ್ತದೆ. ಇದಕ್ಕಾಗಿ ನೀವು ಮೊದಲು ಸೆಟ್ಟಿಂಗ್‌ ವಿಭಾಗಕ್ಕೆ ತಲುಪಬೇಕು. ಇದಾದ ನಂತರ ಅದರಲ್ಲಿ ಜನರಲ್‌ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದನ್ನು ಟ್ಯಾಪ್ ಮಾಡಿ.

ಸ್ಮಾರ್ಟ್‌ಫೋನ್‌ನ ಕೆಳಭಾಗದಲ್ಲಿ ಈ ಸಣ್ಣ ರಂಧ್ರ ಯಾಕಿದೆ?; ಇದರ ಪ್ರಯೋಜನ ಏನು?

ನಂತರದಲ್ಲಿ ಇನ್ಫರ್ಮೇಶನ್ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್‌ ಮಾಡಿದರೆ ಮಾಡೆಲ್‌ ಎಂಬ ವಿಭಾಗ ತೆರೆದುಕೊಳ್ಳಲಿದ್ದು, ಅದರಲ್ಲಿ ನಿಮ್ಮ ಫೋನ್‌ನ ಸಂಪೂರ್ಣ ವಿವರ ಕಾಣಿಸಿಕೊಳ್ಳುತ್ತದೆ. ಅಂದರೆ ನಿಮ್ಮ ಫೋನ್‌ನ IMEI ನಂಬರ್, ಸೀರಿಯಲ್‌ ನಂಬರ್‌ ಸೇರಿದಂತೆ ವಿವಿಧ ಮಾಹಿತಿಗಳು ಲಭ್ಯವಾಗುತ್ತವೆ. ಹಾಗೆಯೇ ಕೆಲವು ಫೋನ್‌ಗಳಲ್ಲಿ ಅಬೌಟ್‌ ಫೋನ್‌ ಎಂಬ ಆಯ್ಕೆ ಕಾಣಿಸಿಕೊಳ್ಳಲಿದ್ದು, ಈ ಮೂಲಕ ಸುಲಭವಾಗಿ ಫೋನ್‌ನ ವಿವರವನ್ನು ಕಲೆಹಾಕಬಹುದು.

Best Mobiles in India

English summary
This small hole in the smartphone will make your call experience better and will have many benefits.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+