ಅಚ್ಚರಿಯ ಫೀಚರ್ ಹೊತ್ತು ಬರಲಿದೆ ವಿವೋ 'ಅಪೆಕ್ಸ್' ಸ್ಮಾರ್ಟ್‌ಫೋನ್!

|

ಚೀನಾದ ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆಯಾದ ವಿವೋ ಪ್ರತಿ ಬಾರಿ ತನ್ನ ನೂತನ ಸ್ಮಾರ್ಟ್‌ಫೋನ್‌ಗಳಲ್ಲಿ ಏನಾದರೊಂದು ಹೊಸ ಫೀಚರ್‌ಗಳನ್ನು ಪರಿಚಯಿಸುತ್ತಲೇ ಹೆಸರುವಾಸಿಯಾಗಿದೆ. ಇದೀಗ ವಿವೋ ತನ್ನ ಗ್ರಾಹಕರಿಗೆ ಅತೀ ವಿನೂತನ ಫೀಚರ್ ಅನ್ನು ಒಳಗೊಂಡಿರುವ ಸ್ಮಾರ್ಟ್‌ಫೋನ್‌ ಒಂದನ್ನು ಮಾರುಕಟ್ಟೆಗೆ ಲಾಂಚ್ ಮಾಡಲು ಉತ್ಸುಕದಲ್ಲಿದೆ.

ಅಚ್ಚರಿಯ ಫೀಚರ್ ಹೊತ್ತು ಬರಲಿದೆ ವಿವೋ 'ಅಪೆಕ್ಸ್' ಸ್ಮಾರ್ಟ್‌ಫೋನ್!


ವಿವೋ ಕಂಪೆನಿ ಇದೇ ಜನವರಿ ಅಂತ್ಯದೊಳಗೆ ವಿವೋ 'ಅಪೆಕ್ಸ್' ಹೆಸರಿನ ನೂತನ ಸ್ಮಾರ್ಟ್‌ಫೋನ್‌ ಒಂದನ್ನು ಮಾರುಕಟ್ಟೆಗೆ ಪರಿಚಯಿಸುವುದು ಗ್ಯಾರಂಟಿ ಆಗಿದ್ದು, ಡಿಸ್‌ಪ್ಲೇ ಫಿಂಗರ್ ಸೆನ್ಸಾರ್ ಹೊಂದಿರುವ ಈ ಹೊಸ ಸ್ಮಾರ್ಟ್‌ಫೋನ್ ಪಾಪ್ ಅಪ್ ಕ್ಯಾಮೆರಾ ಮತ್ತು ಯುಡಿ ಸ್ಕ್ಯಾನರ್‌ನಂತಹ ಅತೀ ವಿನೂತನ ಫೀಚರ್‌ಗಳನ್ನು ಹೊಂದಿರುತ್ತದೆ ಎಂದು ತಿಳಿದುಬಂದಿದೆ.

ಅಚ್ಚರಿಯ ಫೀಚರ್ ಹೊತ್ತು ಬರಲಿದೆ ವಿವೋ 'ಅಪೆಕ್ಸ್' ಸ್ಮಾರ್ಟ್‌ಫೋನ್!


ಡಿಸ್‌ಪ್ಲೇ ಫಿಂಗರ್ ಸೆನ್ಸಾರ್ ಹೊಂದಿರುವ ಈ ಸ್ಮಾರ್ಟ್‌ಫೋನ್ ನೋಡಲು ಆಕರ್ಷಕವಾಗಿ ಪ್ರೀಮಿಯಮ್ ಡಿಸೈನ್ ಹೊಂದಿರಲಿದೆ ಎಂದು ಕಂಪೆನಿಯ ಮೂಲಗಳೆ ತಿಳಿಸಿವೆ. ಹಾಗಾದರೆ, ಸ್ಮಾರ್ಟ್‌ಫೋನ್ ಪ್ರೇಮಿಗಳಲ್ಲಿ ಕುತೂಹಲ ಮೂಡಿಸಿರುವ ವಿವೋ 'ಅಪೆಕ್ಸ್' ಸ್ಮಾರ್ಟ್‌ಫೋನ್ ಮತ್ತೇನೆಲ್ಲಾ ವಿಶೇಷ ಫೀಚರ್ಸ್‌ಗಳನ್ನು ಹೊಂದಿರಬಹುದು ಎಂದು ಮುಂದೆ ಓದಿ ತಿಳಿಯಿರಿ.

ಫಿಂಗರ್ ಸೆನ್ಸಾರ್ ಡಿಸ್‌ಪ್ಲೇ

ಫಿಂಗರ್ ಸೆನ್ಸಾರ್ ಡಿಸ್‌ಪ್ಲೇ

ವಿವೋ ಬಿಡುಗಡೆ ಮಾಡಲು ತಯಾರಿರುವ ಹೊಸ ಅಪೆಕ್ಸ್ ಸ್ಮಾರ್ಟ್‌ಫೋನ್‌ ಫಿಂಗರ್‌ ಸೆನ್ಸಾರ್ ಡಿಸ್‌ಪ್ಲೇ ಹೊಂದಿರಲಿದೆ ಎನ್ನಲಾಗಿದೆ. ಇದು ಆರನೇ ತಲೆಮಾರಿನ ಫಿಂಗರ್ ಸೆನ್ಸಾರ್ ಆಗಿದ್ದು, ಡಿಸ್‌ಪ್ಲೇಯ ಅತೀ ಹೆಚ್ಚು ಭಾಗದಲ್ಲಿ ಸೆನ್ಸಾರ್ ಕೆಲಸಮಾಡುತ್ತದೆ ಎಂದು ಹೇಳಲಾಗುತ್ತಿದೆ. ವಿವೋ ಈ ಹಿಂದೆ ಹಾಫ್ ಸ್ಕ್ರೀನ್ ಸೆನ್ಸಾರ್ ಅನ್ನು ತನ್ನ ಸ್ಮಾರ್ಟ್‌ಫೋನ್‌ಗಳಲ್ಲಿ ಪರಿಚಯಿಸಿತ್ತು.

ವಿನ್ಯಾಸ ಹೇಗಿದೆ?

ವಿನ್ಯಾಸ ಹೇಗಿದೆ?

ಈ ನೂತನ ಅಪೆಕ್ಸ್ ಸ್ಮಾರ್ಟ್‌ಫೋನ್‌ ಬೆಜಲ್ ಲೆಸ್ ಸ್ಕ್ರೀನ್ ಹೊಂದಿದ್ದು, ಸ್ಮಾರ್ಟ್‌ಫೋನ್ ಹೊರ ನೋಟದಲ್ಲಿ ಅತ್ಯಂತ ಆಕರ್ಷಕವಾಗಿ ಕಾಣುವುದು ಖಚಿತವಾಗಿದೆ. ಇದರೊಂದಿಗೆ ಸ್ಮಾರ್ಟ್‌ಫೋನಿನ ನಾಲ್ಕು ಮೂಲೆಗಳಲ್ಲಿ ಕರ್ವ್ ಎಡ್ಜ್ ಡಿಸೈನ್ ನೀಡಿರುವುದರಿಂದ ಫೋನ್‌ ಪ್ರಿಯರಗೆ ಹೆಚ್ಚು ಇಷ್ಟವಾಗುವಂತಹ ಪ್ರೀಮಿಯಮ್ ಡಿಸೈನ್ ಲುಕ್ ಸಹ ಸಿಗಲಿದೆ.

ಪ್ರೊಸೆಸರ್ ಯಾವುದು?

ಪ್ರೊಸೆಸರ್ ಯಾವುದು?

ಅಪೆಕ್ಸ್ ಸ್ಮಾರ್ಟ್‌ಫೋನ್ 8GB RAM ಚೀಪ್ ಸೆಟ್ ಜೊತೆಗೆ ಕ್ವಾಲ್ಕಂ ಸ್ನಾಪ್‌ಡ್ರಾಗನ್ 855 ಪ್ರೊಸೆಸರ್ ಅನ್ನು ಹೊಂದಿದೆ. ಇದರೊಂದಿಗೆ 10GB RAM ಅನ್ನು ಹೊಂದಿರಲಿದೆ ಎಂಬ ಊಹಾಪೋಹಗಳಿವೆ. 128GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ನೀಡಲಾಗುವುದು ಎನ್ನಲಾಗುತ್ತಿದೆ. ಬಾಹ್ಯ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಎಸ್‌ಡಿ ಕಾರ್ಡ್‌ ಆಯ್ಕೆ ಇರಲಿದೆ.

ಬ್ಯಾಟರಿ ಸಾಮರ್ಥ್ಯವೇನು?

ಬ್ಯಾಟರಿ ಸಾಮರ್ಥ್ಯವೇನು?

ವಿವೋ ಸಂಸ್ಥೆಯು ಮೊದಲಿನಿಂದಲೂ ತನ್ನ ಸ್ಮಾರ್ಟ್‌ಫೋನ್‌ಗಳಲ್ಲಿ ಉತ್ತಮ ಬಾಳಿಕೆ ಬರುವ ಬ್ಯಾಟರಿಗಳನ್ನು ನೀಡುತ್ತಾ ಬಂದಿದ್ದು, ಇದೀಗ ಈ ಹೊಸ ಫೋನ್ ಬ್ಯಾಟರಿ ಸಾಮರ್ಥ್ಯ ಎಷ್ಟಿರಬಹುದು ಎಂಬ ನಿರೀಕ್ಷೆಗಳು ಅಧಿಕವಾಗಿವೆ. ಆದರೆ ಈ ನೂತನ ಫೋನಿನಲ್ಲಿ 3900mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಬಹುದು ಎಂದು ಅಂದಾಜಿಸಲಾಗುತ್ತಿದೆ.

ಇತರೆ ವಿಶೇಷತೆಗಳು ಯಾವವು?

ಇತರೆ ವಿಶೇಷತೆಗಳು ಯಾವವು?

1080 x 1920 ಪಿಕ್ಸೆಲ್ ಸಾಮರ್ಥ್ಯ ಹೊಂದಿರುವ 5.9 ಇಂಚಿನ ಡಿಸ್‌ಪ್ಲೇ ಇರಲಿದೆ ಎಂದು ಹೇಳಲಾಗುತ್ತಿದೆ. ಪೋನ್ ಹಿಂಭಾಗದಲ್ಲಿ ಎರಡು ಹೆಚ್ಚಿಗೆ ಮೆಗಾಪಿಕ್ಸಲ್ ಹೊಂದಿರುವ ಹೈ ರೆಸಲ್ಯೂಶನ್ ಕ್ಯಾಮೆರಾಗಳಿರುತ್ತವೆ ಎನ್ನಲಾಗುತ್ತಿದೆ. ಇದರೊಂದಿಗೆ 3.5mm ಆಡಿಯೋ ಜಾಕ್ ನೀಡಲಾಗುವುದು ಎಂದು ಊಹಿಸಲಾಗುತ್ತಿದೆ.

Best Mobiles in India

English summary
Vivo APEX 2019 is expected to come with sixth-generation in-display fingerprint sensor. Vivo says that its sixth-generation in-display fingerprint sensor covers a bigger area and is also improved and more accurate than the previous generation sensor.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X