ಶುರುವಾಗಿದೆ 'ವಿವೋ ಗ್ರ್ಯಾಂಡ್‌ ದೀಪಾವಳಿ ಫೆಸ್ಟ್‌'!.ಸಿಗಲಿದೆ ಭರ್ಜರಿ ಡಿಸ್ಕೌಂಟ್‌!

|

ಪ್ರಸ್ತುತ ಹಲವು ಹೊಸ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಈ ದೀಪಾವಳಿಗೆ ಹಬ್ಬಕ್ಕೆ ಆಫರ್‌ನಲ್ಲಿ ಸ್ಮಾರ್ಟ್‌ಫೋನವೊಂದನ್ನು ಖರೀದಿಸಬೇಕು ಎಂದು ಯೋಚಿಸುತ್ತಿದ್ದಿರಾ?..ಹಾಗಿದ್ರೆ ವಿವೋದತ್ತ ನೋಡಿ. ದೀಪಾವಳಿ ಹಬ್ಬದ ಸಲುವಾಗಿ ವಿವೋ ಕಂಪನಿಯು ತನ್ನ ಜನಪ್ರಿಯ ಸ್ಮಾರ್ಟ್‌ಫೋನ್‌ಗಳಿಗೆ ಹಬ್ಬದ ಆಫರ್‌ ಘೋಷಿಸಿದೆ. ಬಜೆಟ್‌ ಸ್ಮಾರ್ಟ್‌ಫೋನಿಂದ ಹಿಡಿದು ಫ್ಲ್ಯಾಗ್‌ಶಿಫ್ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೂ ಭರ್ಜರಿ ಡಿಸ್ಕೌಂಟ್‌ ಸಿಗಲಿದೆ.

ವಿವೋ ಸ್ಮಾರ್ಟ್‌ಫೋನ್

ಹೌದು, ಜನಪ್ರಿಯ ವಿವೋ ಸ್ಮಾರ್ಟ್‌ಫೋನ್ ಈ ದೀಪಾವಳಿ ಹಬ್ಬದ ಪ್ರಯುಕ್ತ ಗ್ರ್ಯಾಂಡ್ ದೀಪಾವಳಿ ಫೆಸ್ಟ್‌ ಆಯೋಜಿಸಿದ್ದು, ತನ್ನ ಇತ್ತೀಚಿನ ಹೊಸ ಸ್ಮಾರ್ಟ್‌ಫೋನ್‌ಗಳಿಗೆ ರಿಯಾಯಿತಿ ನೀಡುತ್ತಿದೆ. ಒಟ್ಟು ಐದು ದಿನಗಳ ಕಾಲ ನಡೆಯುವ ಈ ಫೆಸ್ಟ್‌ ಸೇಲ್ ಇದೇ ಅಕ್ಟೋಬರ್ 11 ರಿಂದ (ಇಂದು) ಆರಂಭವಾಗಿದ್ದು, ಅಕ್ಟೋಬರ್ 15ರ ವರೆಗೂ ನಡೆಯಲಿದೆ. ಈ ಅವಧಿಯಲ್ಲಿ ಗ್ರಾಹಕರು ವಿವೋ ಇ-ಸ್ಟೋರ್ ತಾಣದಲ್ಲಿ ಖರೀದಿಸಬಹುದಾಗಿದೆ. ಹಾಗಾದರೇ ವಿವೋ ಗ್ರ್ಯಾಂಡ್‌ ದೀಪಾವಳಿ ಫೆಸ್ಟ್‌ ಮೇಳದಲ್ಲಿ ಬೆಸ್ಟ್‌ ಆಫರ್‌ನಲ್ಲಿರುವ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಕ್ಯಾಶ್‌ಬ್ಯಾಕ್‌ ಕೊಡುಗೆ

ಕ್ಯಾಶ್‌ಬ್ಯಾಕ್‌ ಕೊಡುಗೆ

ವಿವೋ ಗ್ರ್ಯಾಂಡ್‌ ದೀಪಾವಳಿ ಫೆಸ್ಟ್‌ನಲ್ಲಿ ಎಚ್‌ಡಿಎಫ್‌ಸಿ ಕ್ರೆಡಿಟ್‌ ಕಾರ್ಡ್‌ ಬಳಸಿ ಇಎಮ್‌ಐ ಟ್ರಾನ್ಸಾಕ್ಶನ್ ಮಾಡಿದರೇ ಶೇ.10 ಪರ್ಸೆಂಟ್‌ ಕ್ಯಾಶ್‌ಬ್ಯಾಕ್‌ ಲಭ್ಯವಾಗಲಿದೆ. ಹಾಗೂ ಇತರೆ ಬ್ಯಾಂಕ್‌ಗಳ ಕ್ರೆಡಿಟ್‌ ಕಾರ್ಡ್‌ ಮತ್ತು ಬಜಾಜ್ ಫಿನ್‌ಸರ್ವ್‌ ಮೂಲಕ ಖರೀದಿಸಿದರೇ ನೋ ಕಾಸ್ಟ್‌ ಇಎಮ್‌ಐ ಪ್ರಯೋಜನ ದೊರೆಯಲಿದೆ. ಇದಲ್ಲದೇ ಎಕ್ಸ್‌ಚೇಂಜ್ ಕೊಡುಗೆಯಾಗಿ 1,500ರೂ.ವರೆಗೂ ರಿಯಾಯಿತಿ ಸಹ ಸಿಗಲಿದೆ.

ಬಜೆಟ್‌ ಬೆಲೆಯಲ್ಲಿ 'ವಿವೋ Z1 ಪ್ರೊ'

ಬಜೆಟ್‌ ಬೆಲೆಯಲ್ಲಿ 'ವಿವೋ Z1 ಪ್ರೊ'

ವಿವೋ ಕಂಪನಿಯು ಇತ್ತೀಚಿಗೆ ಬಿಡುಗಡೆ ಮಾಡಿರುವ 'ವಿವೋ Z1 ಪ್ರೊ' ಸ್ಮಾರ್ಟ್‌ಫೋನಿಗೆ ಸುಮಾರು 3,000ರೂ. ಡಿಸ್ಕೌಂಟ್‌ ನೀಡಲಾಗಿದ್ದು, 4GB + 64GBಯ ಬೇಸ್‌ ವೇರಿಯಂಟ್‌ 12,990ರೂ.ಗಳಿಗೆ ಸಿಗಲಿದೆ. ಹಾಗೆಯೇ 6GB RAM + 64GB ವೇರಿಯಂಟ್‌ 14,990ರೂ.ಗಳಿಗೆ ಮತ್ತು 6GB RAM + 128GB ವೇರಿಯಂಟ್‌ ಸ್ಮಾರ್ಟ್‌ಫೋನ್ 16,990ರೂ.ಗಳಿಗೆ ಖರೀದಿಸಬಹುದಾಗಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್‌ ಕ್ರೆಡಿಟ್ ಕಾರ್ಡ್‌ ಮೇಲೆ 10% ಇನ್‌ಸ್ಟಂಟ್‌ ಡಿಸ್ಕೌಂಟ್‌ ಸಿಗಲಿದೆ. ನೋ ಕಾಸ್ಟ್‌ ಇಎಮ್‌ಐ ಸೌಲಭ್ಯದ ಆಯ್ಕೆ ಸಹ ಇರಲಿದ್ದು, ಜೊತೆಗೆ ಸೆಲ್ಫಿ ಸ್ಟಿಕ್‌ ಲಭ್ಯವಾಗಲಿದೆ. ಮೊಬೈಲ್‌ ಕೇಸ್‌ ಖರೀದಿಯ ಮೇಲೆ 300ರೂ.ರಿಯಾಯಿತಿ ಸಿಗಲಿದೆ. ಈ ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 712 ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದ್ದು, ಗೇಮಿಂಗ್‌ಗೆ ಅತ್ಯುತ್ತಮ ಫ್ಲಾಟ್‌ಪಾರ್ಮ್‌ ಎನಿಸಲಿದೆ. 4D ವೈಬ್ರೆಷನ್‌ ಸೇರಿದಂತೆ ಗೇಮ್‌ ಅಸಿಸ್ಟ ಮೋಡ್ ಮತ್ತು ಗೇಮ್ ಕ್ಯೂಬ್ ಆಯ್ಕೆ ಇದರಲ್ಲಿದೆ.

ಕ್ಯಾಶ್‌ಬ್ಯಾಕ್‌ ಧಮಾಕಾ-'ವಿವೋ Z1x'

ಕ್ಯಾಶ್‌ಬ್ಯಾಕ್‌ ಧಮಾಕಾ-'ವಿವೋ Z1x'

ಇತ್ತೀಚಿನ ವಿವೋ Z1x ಸ್ಮಾರ್ಟ್‌ಫೋನ್ 6.38 ಇಂಚಿನ ಫೂರ್ಣ ಹೆಚ್‌ಡಿ ಪ್ಲಸ್‌ AMOLED ಡಿಸ್‌ಪ್ಲೇಯನ್ನು ಒಳಗೊಂಡಿದ್ದು, 19:5:9 ಡಿಸ್‌ಪ್ಲೇ ಅನುಪಾತವನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಡಿಸ್‌ಪ್ಲೇಯಿಂದ ಬಾಹ್ಯಾ ಬಾಡಿಯ ವರೆಗಿನ ಅಂತರ ಶೇ.90% ಆಗಿದ್ದು, ಸಹ ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 712 ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ. ಇದು ಸಹ ಗೇಮಿಂಗ್‌ಗೆ ಬೆಸ್ಟ್‌ ಆಯ್ಕೆ ಎನ್ನಬಹುದಾಗಿದೆ.

ವಿವೋ 'ಗ್ರ್ಯಾಂಡ್‌ ದೀಪಾವಳಿ ಫೆಸ್ಟ್‌'ನಲ್ಲಿ ಸುಮಾರು 2,000ರೂ.ಗಳ ಕ್ಯಾಶ್‌ಬ್ಯಾಕ್ ಪಡೆದಿದ್ದು, 6GB + 64GB ವೇರಿಯಂಟ್‌ 16,990ರೂ.ಗಳಿಗೆ ಸಿಗಲಿದೆ ಮತ್ತು 6GB + 128GB ವೇರಿಯಂಟ್‌ 18,990ರೂ.ಗಳಿಗೆ ಲಭ್ಯವಾಗಲಿದೆ. ಸೂಪರ್‌ AMOLED ಡಿಸ್‌ಪ್ಲೇ, 48ಎಂಪಿ ಕ್ಯಾಮೆರಾ, ವಿವೋ ಫ್ಯಾಶ್‌ ಚಾರ್ಜರ್ ಸೌಲಭ್ಯದ ಜೊತೆಗೆ 4,500mAh ಬ್ಯಾಟರಿ ಬಾಳಿಕೆ ಸಾಮರ್ಥ್ಯ ಪ್ರಮುಖ ಹೈಲೈಟ್ಸ್‌ಗಳಾಗಿವೆ.

ಗ್ರ್ಯಾಂಡ್‌ ಕ್ಯಾಮೆರಾ ಫೋನ್ 'ವಿವೋ ವಿ15 ಪ್ರೊ'

ಗ್ರ್ಯಾಂಡ್‌ ಕ್ಯಾಮೆರಾ ಫೋನ್ 'ವಿವೋ ವಿ15 ಪ್ರೊ'

ವಿವೋ ವಿ15 ಪ್ರೊ ಸ್ಮಾರ್ಟ್‌ಫೋನ್ ಕಂಪನಿಯ ಅತ್ಯುತ್ತಮ ಫ್ಲಾಗ್‌ಶಿಫ್ ಸ್ಮಾರ್ಟ್‌ಫೋನ್ ಆಗಿ ಗುರುತಿಸಿಕೊಂಡಿದ್ದು, ಮಾರುಕಟ್ಟೆಯಲ್ಲಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. 2340×1080 ಪಿಕ್ಸಲ್ ರೆಸಲ್ಯೂಶನ್ ಜೊತೆಗೆ 6.53 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಸುತ್ತಲೂ 2.5 ಕರ್ವ್ ರಚನೆ ಜೊತೆಗೆ ಗೊರಿಲ್ಲಾ ಗ್ಲಾಸ್‌ ಸಹ ಹೊಂದಿದೆ. ಹಾಗೆಯೇ ಹಿಂಬದಿಯಲ್ಲಿ AI ಬೆಂಬಲಿತ 12+8+5 ಸೆನ್ಸಾರ್‌ ಸಾಮರ್ಥ್ಯದ ತ್ರಿವಳಿ ಕ್ಯಾಮೆರಾ ಸೆಟ್‌ಅಪ್‌ ಆಯ್ಕೆ ಪಡೆದುಕೊಂಡಿದೆ.

ಹಾಗೆಯೇ ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೊ ಪಿ70 ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಫೋನ್ 6GB RAM ಮತ್ತು 64GB ಸ್ಟೋರೇಜ್ ಸ್ಥಳಾವಕಾಶವನ್ನು ಹೊಂದಿದೆ. ವಿವೋ 'ಗ್ರ್ಯಾಂಡ್‌ ದೀಪಾವಳಿ ಫೆಸ್ಟ್‌'ನಲ್ಲಿ ಈ ಸ್ಮಾರ್ಟ್‌ಫೋನಿಗೂ ಸಹ ರಿಯಾಯಿತಿಗಳನ್ನು ನೀಡಿದ್ದು, 15,990ರೂ.ಗಳಿಗೆ ಗ್ರಾಹಕರು ಖರೀದಿಸಬಹುದಾಗಿದೆ.

ಬಜೆಟ್‌ ಫೋನ್‌ 'ವಿವೋ ಯು10'

ಬಜೆಟ್‌ ಫೋನ್‌ 'ವಿವೋ ಯು10'

ವಿವೋ ಯು10 ಸ್ಮಾರ್ಟ್‌ಫೋನ್ ಬಜೆಟ್‌ ಬೆಲೆಯ ಪ್ರೈಸ್‌ಟ್ಯಾಗ್‌ ಹೊಂದಿದ್ದರು, 5,000mAh ಬ್ಯಾಟರಿ, ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 665, AI ಬೆಂಬಲಿತ ತ್ರಿವಳಿ ಕ್ಯಾಮೆರಾ ಹಾಗೂ 18W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯಗಳಿಂದ ಗಮನ ಸೆಳೆದಿದೆ. ಬ್ಯಾಟರಿ ಬಾಳಿಕೆ ಅತ್ಯುತ್ತಮವಾಗಿದ್ದು, ಕೇವಲ 10 ನಿಮಿಷದ ಚಾರ್ಜ್ ಸುಮಾರು ಒಂದು ಗಂಟೆ ಪಬ್‌ಜಿ ಆಡಲು ಬ್ಯಾಟರಿ ಒದಗಿಸಲಿದೆ.

ವಿವೋ 'ಗ್ರ್ಯಾಂಡ್‌ ದೀಪಾವಳಿ ಫೆಸ್ಟ್‌'ನಲ್ಲಿ ಈ ಸ್ಮಾರ್ಟ್‌ಫೋನಿಗೂ ಬೆಸ್ಟ್‌ ಆಫರ್ ನೀಡಲಾಗಿದ್ದು, ಪ್ರಮುಖ ಬ್ಯಾಂಕ್‌ಗಳ ಕ್ರೆಡಿಟ್‌ ಕಾರ್ಡ್‌ ಮೇಲೆ ನೋ ಕಾಸ್ಟ್‌ ಇಎಮ್‌ಐ ಲಭ್ಯವಾಗಲಿದೆ. ಡೆಬಿಟ್‌ ಕಾರ್ಡ್‌ಗಳಿಗೆ ಆರು ಇಎಮ್‌ಐ ಆಯ್ಕೆ ಸಿಗಲಿದೆ. ಇನ್ನು ಈ ಫೋನ 3GB+32GB, 3GB+64GB ಮತ್ತು 6GB+64GB ಸ್ಟೋರೇಜ್‌ನ ಮೂರು ವೇರಿಯಂಟ್‌ ಆಯ್ಕೆಗಳನ್ನು ಹೊಂದಿದ್ದು, ಬ್ಕ್ಯಾಕ್‌ ಮತ್ತು ಬ್ಲೂ ಬಣ್ಣಗಳಲ್ಲಿ ಸಿಗಲಿದೆ. ಆರಂಭಿಕ ವೇರಿಯಂಟ್‌ ಆಫರ್‌ನಲ್ಲಿ 8,990ರೂ.ಗಳಿಗೆ ಸಿಗಲಿದೆ.

Most Read Articles
Best Mobiles in India

English summary
Vivo has announced the Grand Diwali Fest for Indian consumers on the company's official website. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X