'iQOO' ಇದು ವೀವೊದ ಮೊದಲ ಗೇಮಿಂಗ್ ಸ್ಮಾರ್ಟ್‌ಫೋನ್..!!

|

ಇತ್ತೀಚಿಗೆ 'iQOO' ಎಂಬ ಭಿನ್ನ ಹೆಸರಿನ ಸ್ಮಾರ್ಟ್‌ಫೋನ್ ಟೀಸರ್ ಬಿಡುಗಡೆ ಮಾಡಿ ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ಕೂತುಹಲ ಮೂಡಿಸಿದ್ದ ವೀವೊ ಕಂಪನಿ ಆ ಕೂತುಹಲಕ್ಕೆ ಈಗ ತೆರೆ ಎಳೆದಿದೆ. ಹೌದು, ವೀವೊ IQOO ಇದೊಂದು ಹೈ ಎಂಡ್‌ ಗೇಮಿಂಗ್ ಸ್ಮಾರ್ಟ್‌ಪೋನ್ ಆಗಿದ್ದು, ಈ ಮೂಲಕ ಗೇಮಿಂಗ್ ಸ್ಮಾರ್ಟ್‌ಫೋನ್‌ ತಯಾರಿಕೆಯತ್ತ ಒಲವು ತೋರಿಸಿ ಗೇಮ್ಸ್ ಪ್ರಿಯರ ಮನ ಗೆಲ್ಲಲು ವೀವೊ ಮುಂದಾಗಿದೆ.

'iQOO' ಇದು ವೀವೊದ ಮೊದಲ ಗೇಮಿಂಗ್ ಸ್ಮಾರ್ಟ್‌ಫೋನ್..!!

ಈಗಾಗಲೇ ಸ್ಮಾರ್ಟ್‌ಫೋನ್‌ಗಳಲ್ಲಿ ಸಾಕಷ್ಟು ನೂತನ ಫೀಚರ್ಸ್‌ಗಳನ್ನು ಪರಿಚಯಿಸಿರುವ ವೀವೊ, ಇದೀಗ ಮೊದಲ ಭಾರಿ ಗೇಮಿಂಗ್ ಸ್ಮಾರ್ಟ್‌ಫೋನ್‌ ಅನ್ನು ಪರಿಚಯಿಸಿ ಅಚ್ಚರಿ ಮೂಡಿಸಿದೆ. ಈ ಗೇಮಿಂಗ್ ಸ್ಮಾರ್ಟ್‌ಫೋನ್ 12GB RAM ಸಾಮರ್ಥ್ಯವನ್ನು ಒಳಗೊಂಡಿದ್ದು, 256GB ಸಂಗ್ರಹ ಸಾಮರ್ಥ್ಯವನ್ನು ಒಳಗೊಂಡಿದೆ. ವೇಗದ ಕಾರ್ಯದಕ್ಷತೆಗಾಗಿ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್ ಶಕ್ತಿ ಒದಗಿಸಲಾಗಿದೆ.

'iQOO' ಇದು ವೀವೊದ ಮೊದಲ ಗೇಮಿಂಗ್ ಸ್ಮಾರ್ಟ್‌ಫೋನ್..!!

ಗೇಮಿಂಗ್ ಸ್ಮಾರ್ಟ್‌ಫೋನ್ ಆಗಿರುವುದರಿಂದ ದೀರ್ಘಬಾಳಿಕೆಯ ಬ್ಯಾಟರಿ ಅಗತ್ಯ ಅದಕ್ಕಾಗಿ 4,000 mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದೆ. ಇನ್ನೂ ಗೇಮ್‌ ಆಡುವಾಗ ಫೋನ್ ಹೆಚ್ಚು ಬಿಸಿ ಆಗುವುದನ್ನು ತಡೆಯಲು 'ಸೂಪರ್‌ ಲಿಕ್ವಿಡ್ ಕೂಲಿಂಗ್' ತಂತ್ರಜ್ಞಾನ್ ಅಳವಡಿಸಲಾಗಿದೆ. ಇದರೊಂದಿಗೆ ಈ ಗೇಮಿಂಗ್ ಸ್ಮಾರ್ಟ್‌ಫೋನ್ ಇತರೆ ಏನೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ನೋಡೋಣ ಬನ್ನಿರಿ.

ಮೊದಲ 12GB RAM ಸ್ಮಾರ್ಟ್‌ಪೋನ್!

ಮೊದಲ 12GB RAM ಸ್ಮಾರ್ಟ್‌ಪೋನ್!

ವೀವೊ ಕಂಪನಿಯ iQOO ಸ್ಮಾರ್ಟ್‌ಫೋನ್ 12GB RAM ಅನ್ನು ಒಳಗೊಂಡಿದ್ದು, ಈ ಮೂಲಕ ವೀವೊ ಮೊದಲ ಭಾರಿಗೆ ತನ್ನ ಸ್ಮಾರ್ಟ್‌ಫೋನ್‌ ನಲ್ಲಿ 12GB RAM ಅನ್ನು ಪರಿಚಯಿಸುತ್ತಿದೆ. ಈ ಸ್ಮಾರ್ಟ್‌ಫೋನ್‌ ಅತೀ ವೇಗದಲ್ಲಿ ಕಾರ್ಯನಿರ್ವಹಿಸಲಿದೆ ಹಾಗೂ ಮಲ್ಟಿಟಾಸ್ಕ್‌ಬಳಕೆಯಲ್ಲಿ ಯಾವುದೇ ಅಡಚಣೆಗಳು ಸಹ ಕಾಣಿಸುವುದಿಲ್ಲ.

ಗೇಮ್ಸ್‌ ಪ್ರಿಯರಿಗೆ ಹಬ್ಬ!

ಗೇಮ್ಸ್‌ ಪ್ರಿಯರಿಗೆ ಹಬ್ಬ!

iQOO ವೀವೊದ ಮೊದಲ ಗೇಮಿಂಗ್ ಫೋನ್‌ ಆಗಿದ್ದು, ಇದು ಗೇಮಿಂಗ್‌ ಪ್ರಿಯರಿಗೆ ಭಾರೀ ಖುಷಿ ನೀಡಿದೆ. ಏಕೆಂದರೇ ಬಹುತೇಕ ಜನಪ್ರಿಯ ಗೇಮ್ಸ್‌ಗಳು ಹೈ ಡೇಟಾ ಬೇಡುತ್ತವೆ. ಅಲ್ಲದೇ ಆನ್‌ಲೈನ್‌ ಗೇಮ್ಸ್‌ಗಳಿಗೂ ಹೆಚ್ಚಿನ RAM ಸಾಮರ್ಥ್ಯ ಅಗತ್ಯವಿರುತ್ತದೆ. ಈ ಎಲ್ಲಾ ನ್ಯೂನ್ಯತೆಗಳನ್ನು ವೀವೊ ಗೇಮಿಂಗ್ ಫೋನ್‌ ದೂರಮಾಡಲಿದ್ದು, ಯಾವುದೇ ಗೇಮ್‌ ಅನ್ನು ಸಹ ನಿರಾಳವಾಗಿ ಆಡಬಹುದು.

ವಿಶ್ವ ಮೊಬೈಲ್ ಮಾರ್ಕೆಟ್‌ನಲ್ಲಿ ಪೈಪೊಟಿ!

ವಿಶ್ವ ಮೊಬೈಲ್ ಮಾರ್ಕೆಟ್‌ನಲ್ಲಿ ಪೈಪೊಟಿ!

ವೀವೊ ಕಂಪನಿಯು ತನ್ನ ಮೊದಲ ಗೇಮಿಂಗ್ ಫೋನ್‌ ರಿಲೀಸ್‌ ಮಾಡುವ ಮೂಲಕ ವಿಶ್ವಮಟ್ಟದಲ್ಲಿ ಹೈ ಸ್ಪೀಡ್‌ ಗೇಮಿಂಗ್‌ ಸ್ಮಾರ್ಟ್‌ಫೋನ್‌ಗಳೊಂದಿಗೆ ಸ್ಪರ್ಧೆಗೆ ಅಣಿಯಾಗುತ್ತಿದ್ದು, ಗೇಮಿಂಗ್‌ ಸ್ಮಾರ್ಟ್‌ಫೋನ್‌ಗಳೆಂದೆ ಬಿಂಬಿತವಾಗಿರುವ ಆಸೂಸ್‌ ROG ಫೋನ್, ನೂಬಿಯಾ ರೆಡ್‌ ಮ್ಯಾಜಿಕ್ ಮತ್ತು ಶಿಯೋಮಿ ಬ್ಲ್ಯಾಕ್‌ ಶಾರ್ಕ್ ಸ್ಮಾರ್ಟ್‌ಫೋನ್‌ಗಳೊಂದಿಗೆ ನೇರ ಪೈಪೊಟಿ ಮಾಡಲಿದೆ ಎನ್ನಲಾಗುತ್ತಿದೆ.

ಡಿಸ್‌ಪ್ಲೇ

ಡಿಸ್‌ಪ್ಲೇ

ವೀವೊ ಗೇಮಿಂಗ್ ಫೋನ್ 6.41 ಇಂಚಿನ ವಿಶಾಲ ಫುಲ್‌ ಹೆಚ್‌ಡಿ ಡಿಸ್‌ಪ್ಲೇಯೊಂದಿಗೆ OLED ಪ್ಯಾನಲ್ ಅನ್ನು ಹೊಂದಿದೆ. ಇದರೊಂದಿಗೆ ಕಡಿಮೆ ಅಂಚಿನಿಂದ ಕೂಡಿರುವ ಡಿಸ್‌ಪ್ಲೇಯು ವಾಟರ್‌ಡ್ರಾಪ್ ನಾಚ್ ಹಾಗೂ UD ಫಿಂಗರ್‌ಪ್ರಿಂಟ್ ಸೆನ್ಸಾರ್ ಸಹ ಹೊಂದಿದೆ.

ಕ್ಯಾಮೆರಾ

ಕ್ಯಾಮೆರಾ

ಹಿಂಬದಿಯಲ್ಲಿ ಕ್ರಮವಾಗಿ 13MP+12MP+2MP ಸಾಮರ್ಥ್ಯದ ಮೂರು ಕ್ಯಾಮೆರಾಗಳನ್ನು ಹೊಂದಿರುವ ವೀವೊ iQOO ಗೇಮಿಂಗ್ ಫೋನ್‌, ಕ್ಯಾಮೆರಾದಲ್ಲಿ ಸೋನಿಯ IMX263 ಸೆನ್ಸಾರ್‌ ಅನ್ನು ಅಳವಡಿಸಿಕೊಂಡಿದೆ.

ಬಿಗ್‌ ಬ್ಯಾಟರಿ ಪವರ್‌!

ಬಿಗ್‌ ಬ್ಯಾಟರಿ ಪವರ್‌!

'ವೀವೊದ iQOO' ಸ್ಮಾರ್ಟ್‌ಫೋನ್ 4,000mAh ಸಾಮರ್ಥ್ಯದ ಪವರ್‌ಫುಲ್ ಬ್ಯಾಟರಿಯನ್ನು ನೀಡಲಿದ್ದು, ಸುಮಾರು ಎರಡು ದಿನಗಳವರೆಗೂ ನಿಶ್ಚಿಂತೆಯಾಗಿ ಬಳಸಬಹುದಾಗಿದೆ. ಈ ಫ್ಲ್ಯಾಗ್‌ಶಿಪ್ ಗೇಮಿಂಗ್ ಸ್ಮಾರ್ಟ್‌ಫೋನ್ 44W ಶಕ್ತಿಯೊಂದಿಗೆ ಫಾಸ್ಟ್‌ ಚಾರ್ಜರ್‌ನ್ನು ಸಹ ಒಳಗೊಂಡಿರಲಿದ್ದು, 15 ನಿಮಿಷದಲ್ಲಿ ಶೇ. 85% ಬ್ಯಾಟರಿ ಭರ್ತಿ ಆಗಲಿದ್ದು, ಪೂರ್ಣ ಫೋನ್ ಬ್ಯಾಟರಿ ಭರ್ತಿ ಆಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.

ಇತರೆ ಹೈಲೆಟ್ಸ್‌ ಏನು?

ಇತರೆ ಹೈಲೆಟ್ಸ್‌ ಏನು?

'iQOO' ಗೇಮಿಂಗ್‌ ಸ್ಮಾರ್ಟ್‌ಫೋನ್‌ ಆಗಿದ್ದು, ಅದ್ಭುತ ಗೇಮಿಂಗ್ ಅನುಭವ ನೀಡುವ ಹೊಸತನದ 4D ಫೀಚರ್‌ ಅನ್ನು ಪರಿಚಯಿಸಲಿದ್ದು, ಇದರೊಂದಿಗೆ NFC, ಸೂಪರ್‌ HDR ಸಾಮರ್ಥ್ಯದ ಕ್ಯಾಮೆರಾ ಹಾಗೂ Type-C ಮಾದರಿಯ ಯುಎಸ್‌ಬಿಯನ್ನು ಈ 'iQOO' ಫೊಲ್ಡೆಬಲ್‌ ಸ್ಮಾರ್ಟ್‌ಫೋನ್ ಒಳಗೊಂಡಿರಲಿದೆ ಎಂದು ಹೇಳಲಾಗುತ್ತಿದೆ. 12GB RAM ನೊಂದಿಗೆ 256GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ನೀಡಲಾಗಿದೆ.

ಬೆಲೆ?

ಬೆಲೆ?

ವೀವೊದ ಈ ಗೇಮಿಂಗ್ ಫೋನ್ ಇದೇ ಮಾರ್ಚ್ 6 ರಂದು ಚೀನಾ ಮಾರುಕಟ್ಟೆಯಲ್ಲಿ ರಿಲೀಸ್ ಆಗಲಿದ್ದು, ಫುಲ್‌ ಹೈ ಎಂಡ್‌ 12RAM/256GB ವೇರಿಯಂಟ್‌ ಮಾದರಿಯ ಬೆಲೆಯು CNY4,298 ಇರಲಿದೆ.(ಸುಮಾರು 45,500ರೂ.ಗಳು). ಈ ಫೋನ್ ಭಾರತಕ್ಕೆ ಯಾವಾಗ ಎಂಟ್ರಿ ಕೊಡಲಿದೆ ಎನ್ನುವ ಮಾಹಿತಿಯನ್ನು ಕಂಪನಿ ಇನ್ನು ಬಹಿರಂಗ ಪಡಿಸಿಲ್ಲ.

Best Mobiles in India

English summary
vivo iQOO is here. It is a gaming phone with monster specs, making it the most powerful vivo up to date..to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X