Home
ಮೊಬೈಲ್

12GB RAMನ ವಿವೋ iQOO ಸ್ಮಾರ್ಟ್‌ಫೋನ್‌ ರಿಲೀಸ್; ಗೇಮ್ಸ್‌ಗೆ ಇಲ್ಲ ಅಡೆತಡೆ!

ಹಲವು ಹೊಸತನದ ಫೀಚರ್ಸ್‌ಗಳನ್ನು ಪರಿಚಯಿಸಿರುವ ವಿವೋ ಕಂಪನಿಯು ಇತ್ತೀಚಿಗೆ iQOO ಗೇಮಿಂಗ್ ಸ್ಮಾರ್ಟ್‌ಫೋನ್‌ ಅನ್ನು ಪರಿಚಯಿಸಿ ಗ್ರಾಹಕರಲ್ಲಿ ಕುತೂಹಲ ಮೂಡಿಸಿತ್ತು. ಇದೀಗ ಈ ಗೇಮಿಂಗ್ ಸ್ಮಾರ್ಟ್‌ಪೋನಿನ 12GB RAM ಸಾಮರ್ಥ್ಯದ ವೇರಿಯಂಟ್‌ ಅನ್ನು ಘೋಷಿಸಿರುವುದರ ಮೂಲಕ ಮತ್ತೆ ಗೇಮ್ಸ್‌ ಪ್ರಿಯರಲ್ಲಿ ಕ್ರೇಜ್‌ ಹುಟ್ಟುಹಾಕಿದೆ. ಪವರ್‌ಫುಲ್‌ ಪ್ರೊಸೆಸರ್ ಇದ್ದು, ತಡೆ ಇಲ್ಲದೇ ಗೇಮ್ಸ್‌ ಆಡಬಹುದು.

12GB RAMನ ವಿವೋ iQOO ಸ್ಮಾರ್ಟ್‌ಫೋನ್‌ ರಿಲೀಸ್; ಗೇಮ್ಸ್‌ಗೆ ಇಲ್ಲ ಅಡೆತಡೆ!

ಹೌದು, ವಿವೋ ಕಂಪನಿಯು iQOO ಹೆಸರಿನ ಗೇಮಿಂಗ್ ಸ್ಮಾರ್ಟ್‌ಫೋನಿನ 12GB RAM ವೇರಿಯಂಟ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಈ ಸ್ಮಾರ್ಟ್‌ಫೋನ್ ತ್ರಿವಳಿ ಕ್ಯಾಮೆರಾವನ್ನು ಒಳಗೊಂಡಿದೆ. ಇದರೊಂದಿಗೆ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್‌ ನೀಡಲಾಗಿದ್ದು, ಸ್ಮಾರ್ಟ್‌ಫೋನಿನ ವೇಗವು ಅತ್ಯುತ್ತಮವಾಗಿರುವುದರ ಜೊತೆಗೆ ಅಡೆ ತಡೆ ಇಲ್ಲದೇ ಗೇಮ್ಸ್‌ಗಳನ್ನು ಆಡಬಹುದಾಗಿದೆ.

12GB RAMನ ವಿವೋ iQOO ಸ್ಮಾರ್ಟ್‌ಫೋನ್‌ ರಿಲೀಸ್; ಗೇಮ್ಸ್‌ಗೆ ಇಲ್ಲ ಅಡೆತಡೆ!

ಈ ಫೋನಿನೊಂದಿಗೆ 4,000mAh ಸಾಮರ್ಥ್ಯದ ಬ್ಯಾಟರಿಯನ್ನು ಒದಗಿಸಲಾಗಿದ್ದು, 44W ತಂತ್ರಜ್ಞಾನದ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ನೀಡಲಾಗಿದೆ. ವಾಟರ್‌ಡ್ರಾಪ್‌ ಡಿಸೈನ್ ಲುಕ್‌ ಇದ್ದು, ಫಿಂಗರ್‌ಪ್ರಿಂಟ್ ರಿಡರ್‌ ಸೆನ್ಸಾರ್‌ ಸಹ ಇರಲಿದೆ. ಹಾಗಾದರೇ ವಿವೋ iQOO ಗೇಮಿಂಗ್ ಸ್ಮಾರ್ಟ್‌ಫೋನ್‌ ಹೊಂದಿರುವ ಇತರೆ ವಿಶೇಷ ಫೀಚರ್ಸ್‌ಗಳೆನು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ

ಡಿಸ್‌ಪ್ಲೇ

ವಿವೋ iQOO ಗೇಮಿಂಗ್ ಸ್ಮಾರ್ಟ್‌ಫೋನ್‌ 6.41 ಇಂಚಿನ AMOLED ಸಂಪೂರ್ಣ ಎಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಡಿಸ್‌ಪ್ಲೇಯ ವಾಟರ್‌ಡ್ರಾಪ್‌ ರಚನೆಯು ಸ್ಮಾರ್ಟ್‌ಫೋನಿನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.

ಪ್ರೊಸೆಸರ್‌

ಪ್ರೊಸೆಸರ್‌

ವಿವೋ iQOO ಗೇಮಿಂಗ್ ಸ್ಮಾರ್ಟ್‌ಫೋನ್‌ ಕ್ವಾಲ್ಕಮ್ ಚಿಪ್‌ಸೆಟ್‌ ನೊಂದಿಗೆ, ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್‌ ಈ ಸ್ಮಾರ್ಟ್‌ಪೋನಿನಲ್ಲಿದ್ದು, ಫೋನಿನ ಕಾರ್ಯವೈಖರಿಯು ವೇಗವಾಗಿರಲಿದೆ. ಅಡೆತಡೆ ಇಲ್ಲದೇ ಹೈ ಎಂಡ್‌ ಗೇಮ್ಸ್‌ಗಳನ್ನು ಆಡಲು ನೆರವು ನೀಡಲಿದೆ.

ಮೆಮೊರಿ

ಮೆಮೊರಿ

ಕಂಪನಿಯು ಪ್ರಸ್ತುತ 12GB RAM ಮತ್ತು 128 GB ಆಂತರಿಕ ಸಂಗ್ರಹದ ವೇರಿಯಂಟ್‌ನಲ್ಲಿ ಬಿಡುಗಡೆ ಆಗಿದೆ. ಹಾಗೇ 6GB RAM+128GB, 8GB RAM+128GB ಮತ್ತು 8GB RAM+256GB ಮಾದರಿಯ ವೇರಿಯಂಟ್‌ ಆಯ್ಕೆಗಳನ್ನು ಸಹ ಹೊಂದಿದೆ.

ಬ್ಯಾಟರಿ

ಬ್ಯಾಟರಿ

4,000mAh ಸಾಮರ್ಥ್ಯದ ಬ್ಯಾಟರಿಯನ್ನು ಒದಗಿಸಲಾಗಿದ್ದು, ದೀರ್ಘಕಾಲ ಬಾಳಿಕೆ ಬರುವ ಶಕ್ತಿಯನ್ನು ಹೊಂದಿದೆ. ಇದರೊಂದಿಗೆ 44W ತಂತ್ರಜ್ಞಾನದ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ನೀಡಲಾಗಿದ್ದು, ಸ್ಮಾರ್ಟ್‌ಫೋನ್‌ ವೇಗವಾಗಿ ಚಾರ್ಜ್‌ ಪಡೆದುಕೊಳ್ಳಲಿದೆ.

ಬೆಲೆ

ಬೆಲೆ

ವಿವೋ iQOO ಗೇಮಿಂಗ್ ಸ್ಮಾರ್ಟ್‌ಫೋನ್‌ ಆರಂಭಿಕ ವೇರಿಯಂಟ್ 6GB RAM+128GB ಬೆಲೆಯು 30950ರೂ.ಗಳು ಆಗಿದೆ ಮತ್ತು 12GB RAM ಮತ್ತು 128 GB ಟಾಪ್‌ ಎಂಡ್‌ ಮಾದರಿಯ ವೇರಿಯಂಟ್ ಬೆಲೆಯು 44350ರೂ.ಗಳು ಆಗಿದೆ.

Best Mobiles in India

English summary
Vivo iQOO new variant with 12 GB RAM + 128 GB storage announced.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+