Home
ಮೊಬೈಲ್

ಬರಲಿದೆ 'ವೀವೊದ iQOO' ಫೊಲ್ಡೆಬಲ್ ಸ್ಮಾರ್ಟ್‌ಫೋನ್! ಹೇಗಿದೆ ತಿಳಿದ್ರೆ ನೀವು ಬೆರಗಾಗೊದು ಪಕ್ಕಾ!

ಮೊಬೈಲ್ ಲೋಕದಲ್ಲಿ ಹಲವು ಹೊಸತನದ ಫೀಚರ್ಸ್‌ಗಳನ್ನು ಪರಿಚಯಿಸಿರುವ ವೀವೊ ಕಂಪನಿಯು ಕೆಲವೇ ದಿನಗಳ ಹಿಂದೆ 'ವೀವೋ ವಿ15 ಪ್ರೋ' ಸ್ಮಾರ್ಟ್‌ಫೋನ್ ಮೂಲಕ ಪಾಪ್‌ ಅಪ್‌ ಸೆಲ್ಫಿ ಕ್ಯಾಮೆರಾ ಪರಿಚಯಿಸಿತ್ತು. ಅದಲ್ಲದೇ 'iQOO' ಹೆಸರಿನ ಸ್ಮಾರ್ಟ್‌ಫೋನ್‌ ಒಂದನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿ ಗ್ರಾಹಕರಲ್ಲಿ ಭಾರೀ ಆಶ್ವರ್ಯ ಉಂಟು ಮಾಡಿತ್ತು. ಇದೀಗ ಕಂಪನಿ ಮತ್ತೆ ಹೊಸ ಅಚ್ಚರಿ ಸುದ್ದಿಯನ್ನು ನೀಡಿದೆ.

ಬರಲಿದೆ 'ವೀವೊದ iQOO' ಫೊಲ್ಡೆಬಲ್  ಸ್ಮಾರ್ಟ್‌ಫೋನ್! ನೀವು ಬೆರಗಾಗೊದು ಪಕ್ಕಾ!

ಹೌದು, ವೀವೂ 'iQOO' ಹೆಸರಿನ ವಿಶೇಷ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಲು ದಿನಾಂಕ ಫಿಕ್ಸ್ ಮಾಡಿದ್ದು, ಇದೇ ಮಾರ್ಚ್ 1 ರಂದು ಚೀನಾದಲ್ಲಿ ಅದ್ಧುರಿಯಾಗಿ ಲಾಂಚ್ ಆಗಲಿದ್ದು, ಇದು ವೀವೊದ ಮೊದಲ ಫೊಲ್ಡೆಬಲ್ ಸ್ಮಾರ್ಟ್‌ಫೋನ್ ಆಗಲಿದೆ. ಗ್ರಾಹಕರ ಕೂತುಹಲ ಹೆಚ್ಚಿಸಿರುವ ಈ ಹೈ ಸ್ಪೀಡ್‌ ಫೊಲ್ಡೆಬಲ್ ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಗೂ ಶೀಘ್ರದಲ್ಲಿಯೇ ಪ್ರವೇಶಿಸಲಿದೆ ಎಂದು ಹೇಳಲಾಗುತ್ತಿದೆ.

ಬರಲಿದೆ 'ವೀವೊದ iQOO' ಫೊಲ್ಡೆಬಲ್  ಸ್ಮಾರ್ಟ್‌ಫೋನ್! ನೀವು ಬೆರಗಾಗೊದು ಪಕ್ಕಾ!

ವೀವೋ ಕಂಪನಿಯ ಈ ಹೊಸ ಫ್ಲ್ಯಾಗ್‌ಶಿಪ್ ಫೊಲ್ಡೆಬಲ್ ಸ್ಮಾರ್ಟ್‌ಫೋನ್ 'ಸ್ನ್ಯಾಪ್‌ಡ್ರಾಗನ್ 855' ಸಾಮರ್ಥ್ಯದೊಂದಿಗೆ '7nm ಚಿಪ್‌ಸೆಟ್ಟ್' ಹೊಂದಿರಲಿದ್ದು, ಇದರೊಂದಿಗೆ 12GB RAM ಸಾಮರ್ಥ್ಯ ಹಾಗೂ 4,000mAh ಸಾಮರ್ಥ್ಯ ಹೊಂದಿರುವ ಪವರ್‌ಫುಲ್ ಬ್ಯಾಟರಿಯನ್ನು ನೀಡಲಾಗುವುದು ಎನ್ನಲಾಗಿದೆ. ಹಾಗಾದರೇ ವೀವೊದ 'iQOO' ಫೊಲ್ಡೆಬಲ್ ಸ್ಮಾರ್ಟ್‌ಫೋನ್ ಏನೆಲ್ಲಾ ವಿಶೇಷ ಫೀಚರ್ಸ್‌ಗಳನ್ನು ಹೊಂದಿರಲಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಮೊದಲ 12GB RAM ಸ್ಮಾರ್ಟ್‌ಪೋನ್!

ಮೊದಲ 12GB RAM ಸ್ಮಾರ್ಟ್‌ಪೋನ್!

ವೀವೊ ಕಂಪನಿಯು ಹೊಸದಾಗಿ ರಿಲೀಸ್‌ ಮಾಡುತ್ತಿರುವ iQOO ಸ್ಮಾರ್ಟ್‌ಫೋನ್ 12GB ಸಾಮರ್ಥ್ಯದ RAM ಅನ್ನು ಒಳಗೊಂಡಿರಲಿದ್ದು, ಈ ಮೂಲಕ ಸ್ಮಾರ್ಟ್‌ಫೋನ್‌ ಲೋಕದಲ್ಲಿಯೇ 12GB RAM ಅನ್ನು ಮೊದಲು ಪರಿಚಯಿಸಿದ ಕೀರ್ತಿ ಪಡೆದುಕೊಳ್ಳಲಿದೆ. ಈ ಸ್ಮಾರ್ಟ್‌ಫೋನ್‌ ಅತೀ ವೇಗದಲ್ಲಿ ಕಾರ್ಯನಿರ್ವಹಿಸಲಿದೆ ಹಾಗೂ ಮಲ್ಟಿಟಾಸ್ಕ್‌ಬಳಕೆಯಲ್ಲಿ ಯಾವುದೇ ಅಡಚಣೆಗಳು ಸಹ ಕಾಣಿಸುವುದಿಲ್ಲ.

'iQOO' ಫೊಲ್ಡೆಬಲ್ ಸ್ಮಾರ್ಟ್‌ಪೋನ್

'iQOO' ಫೊಲ್ಡೆಬಲ್ ಸ್ಮಾರ್ಟ್‌ಪೋನ್

ವೀವೊ ಕಂಪನಿಯು 'iQOO' ಎಂಬ ವಿನೂತನ ಹೆಸರಿನಲ್ಲಿ ತನ್ನ ಸಬ್‌ ಬ್ರ್ಯಾಂಡ್‌ ಅನ್ನು ಪರಿಚಯಿಸುತ್ತಿದೆ. ಇದೀಗ iQOO ಹೆಸರಿನಲ್ಲಿ ರಿಲೀಸ್‌ ಆಗುತ್ತಿರುವ ವೀವೊದ ಹೊಸ ಸ್ಮಾರ್ಟ್‌ಫೋನ್ 'ಫೊಲ್ಡೆಬಲ್' ಮಾದರಿಯನ್ನು ಹೊಂದಿದ್ದು, ವೀವೊ ಕಂಪನಿಯ ಮೊಟ್ಟ ಮೊದಲ 'ಫೊಲ್ಡೆಬಲ್‌' ಸ್ಮಾರ್ಟ್‌ಫೋನ್ ಎನಿಸಿಕೊಳ್ಳಲಿದೆ. ಇದರೊಂದಿಗೆ ಹೈ ಸ್ಪೀಡ್‌ ಕಾರ್ಯದಕ್ಷತೆಯನ್ನು ಹೊಂದಿರಲಿದೆ.

ಗೇಮ್ಸ್‌ ಪ್ರಿಯರಿಗೆ ಹಬ್ಬ!

ಗೇಮ್ಸ್‌ ಪ್ರಿಯರಿಗೆ ಹಬ್ಬ!

ವೀವೊದ ಈ ಹೊಸ iQOO ಸ್ಮಾರ್ಟ್‌ಫೋನ್ 12GB ಸಾಮರ್ಥ್ಯದ RAM ಅನ್ನು ಹೊಂದಿರಲಿದ್ದು, ಇದು ಗೇಮಿಂಗ್‌ ಪ್ರಿಯರಿಗೆ ಭಾರೀ ಖುಷಿ ನೀಡಿದೆ. ಏಕೆಂದರೇ ಬಹುತೇಕ ಜನಪ್ರಿಯ ಗೇಮ್ಸ್‌ಗಳು ಹೈ ಡೇಟಾ ಬೇಡುತ್ತವೆ. ಅಲ್ಲದೇ ಆನ್‌ಲೈನ್‌ ಗೇಮ್ಸ್‌ಗಳಿಗೂ ಹೆಚ್ಚಿನ RAM ಸಾಮರ್ಥ್ಯ ಅಗತ್ಯವಿರುತ್ತದೆ. ಈ ಎಲ್ಲಾ ನ್ಯೂನ್ಯತೆಗಳನ್ನು ವೀವೊ ಸ್ಮಾರ್ಟ್‌ಫೋನ್‌ ದೂರಮಾಡಲಿದ್ದು, ಯಾವುದೇ ಗೇಮ್‌ ಅನ್ನು ಸಹ ನಿರಾಳವಾಗಿ ಆಡಬಹುದು.

ವಿಶ್ವ ಮೊಬೈಲ್ ಮಾರ್ಕೆಟ್‌ನಲ್ಲಿ ಪೈಪೊಟಿ!

ವಿಶ್ವ ಮೊಬೈಲ್ ಮಾರ್ಕೆಟ್‌ನಲ್ಲಿ ಪೈಪೊಟಿ!

ವೀವೊ ಕಂಪನಿಯು ಸ್ಮಾರ್ಟ್‌ಫೋನ್‌ ರಿಲೀಸ್‌ ಮಾಡುವ ಮೂಲಕ ವಿಶ್ವಮಟ್ಟದಲ್ಲಿ ತನ್ನ ವರ್ಗದಲ್ಲಿ ಕೆಲವು ಹೈ ಸ್ಪೀಡ್‌ ಗೇಮಿಂಗ್‌ ಸ್ಮಾರ್ಟ್‌ಫೋನ್‌ಗಳೊಂದಿಗೆ ಸ್ಪರ್ಧೆಗೆ ಅಣಿಯಾಗುತ್ತಿದ್ದು, ಗೇಮಿಂಗ್‌ ಸ್ಮಾರ್ಟ್‌ಫೋನ್‌ಗಳೆಂದೆ ಬಿಂಬಿತವಾಗಿರುವ ಆಸೂಸ್‌ ROG ಫೋನ್, ನೂಬಿಯಾ ರೆಡ್‌ ಮ್ಯಾಜಿಕ್ ಮತ್ತು ಶಿಯೋಮಿ ಬ್ಲ್ಯಾಕ್‌ ಶಾರ್ಕ್ ಸ್ಮಾರ್ಟ್‌ಫೋನ್‌ಗಳೊಂದಿಗೆ ನೇರ ಪೈಪೊಟಿ ಮಾಡಲಿದೆ ಎನ್ನಲಾಗುತ್ತಿದೆ.

ಬಿಗ್‌ ಬ್ಯಾಟರಿ ಪವರ್‌!

ಬಿಗ್‌ ಬ್ಯಾಟರಿ ಪವರ್‌!

ಬರಲಿರುವ 'ವೀವೊದ iQOO' ಸ್ಮಾರ್ಟ್‌ಫೋನ್ 4,000mAh ಸಾಮರ್ಥ್ಯದ ಪವರ್‌ಫುಲ್ ಬ್ಯಾಟರಿಯನ್ನು ನೀಡಲಿದ್ದು, ಸುಮಾರು ಎರಡು ದಿನಗಳವರೆಗೂ ನಿಶ್ಚಿಂತೆಯಾಗಿ ಬಳಸಬಹುದಾಗಿದೆ. ಈ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ 44W ಶಕ್ತಿಯೊಂದಿಗೆ ಫಾಸ್ಟ್‌ ಚಾರ್ಜರ್‌ನ್ನು ಸಹ ಒಳಗೊಂಡಿರಲಿದ್ದು, ಸ್ಮಾರ್ಟ್‌ಫೋನ್ ಬ್ಯಾಟರಿ ಭರ್ತಿ ಆಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.

ಇತರೆ ಹೈಲೆಟ್ಸ್‌ ಏನು?

ಇತರೆ ಹೈಲೆಟ್ಸ್‌ ಏನು?

'iQOO' ಗೇಮಿಂಗ್‌ ಸ್ಮಾರ್ಟ್‌ಫೋನ್‌ ಆಗಿದ್ದು, ಅದ್ಭುತ ಗೇಮಿಂಗ್ ಅನುಭವ ನೀಡುವ ಹೊಸತನದ 4D ಫೀಚರ್‌ ಅನ್ನು ಪರಿಚಯಿಸಲಿದ್ದು, ಇದರೊಂದಿಗೆ NFC, ಸೂಪರ್‌ HDR ಸಾಮರ್ಥ್ಯದ ಕ್ಯಾಮೆರಾ ಹಾಗೂ Type-C ಮಾದರಿಯ ಯುಎಸ್‌ಬಿಯನ್ನು ಈ 'iQOO' ಫೊಲ್ಡೆಬಲ್‌ ಸ್ಮಾರ್ಟ್‌ಫೋನ್ ಒಳಗೊಂಡಿರಲಿದೆ ಎಂದು ಹೇಳಲಾಗುತ್ತಿದೆ. 12GB RAM ನೊಂದಿಗೆ 256GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ನೀಡಲಾಗಿದೆ.

Best Mobiles in India

English summary
Vivo iQOO has already been testing the phone for some time now and has been putting up teasers as well, alongside a number of key specifications which were revealed and are tipped to arrive on the device.to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+