ವಿಶ್ವದ ಮೊದಲ 2ಕೆ ಸ್ಮಾರ್ಟ್‌ಫೋನ್‌ ಬಿಡುಗಡೆ

Posted By:

ವಿಶ್ವದ ದೊಡ್ಡ ದೊಡ್ಡ ಮೊಬೈಲ್‌ ತಯಾರಿಕಾ ಕಂಪೆನಿಗಳಿಗೆ ಹಾರ್ಡ್‌ವೇರ್‌ ಮತ್ತು ಬೆಲೆಯಲ್ಲಿ ಪೈಪೋಟಿ ನೀಡುತ್ತಿರುವ ಚೀನಾದ ಕಂಪನಿಯೊಂದುಈಗ ವಿಶ್ವದ ಮೊದಲ 2ಕೆ ರೆಸೂಲೂಶನ್‌ ಹೊಂದಿರುವ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ.ಚೀನಾದ ವಿವೊ(Vivo) ಕಂಪೆನಿಯ ಹೊಸ ಸ್ಮಾರ್ಟ್‌ಫೋನ್‌ 490 ಪಿಪಿಐ, 2560x1440 ಪಿಕ್ಸೆಲ್‌ ರೆಸೂಲೂಶನ್‌ ಹೊಂದಿರುವ ಎಕ್ಸ್‌‌ಪ್ಲೇ 3ಎಸ್‌ ಸ್ಮಾರ್ಟ್‌ಫೋನ್‌ ಅಭಿವೃದ್ಧಿಪಡಿಸಿದೆ.

ಸ್ಯಾಮ್‌ಸಂಗ್‌ನ ಭಾರೀ ನಿರೀಕ್ಷೆಯಲ್ಲಿರುವ ಗೆಲಾಕ್ಸಿ ಎಸ್‌ 5 ಮತ್ತು ಎಲ್‌ಜಿ ಕಂಪೆನಿಯ ಮುಂದಿನ ಸ್ಮಾರ್ಟ್‌ಫೋನ್‌ಗಳು 2ಕೆ ರೆಸೂಲೂಶನ್‌ನಲ್ಲಿ ಬಿಡುಗಡೆಯಾಲಿದೆ ಎನ್ನುವ ವದಂತಿ ಇರುವ ಹಿನ್ನೆಲೆಯಲ್ಲೇ ಚೀನಾದ ವಿವೊ ಕಂಪೆನಿ ವಿಶ್ವದ ಮೊದಲ 2ಕೆ ರೆಸೂಲೂಶನ್‌ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಸ್ಮಾರ್ಟ್‌ಫೋನಿಗೆ 3,498 ಯೂಆನ್(ಅಂದಾಜು 36 ಸಾವಿರ ರೂಪಾಯಿ) ನಿಗದಿ ಮಾಡಿದೆ. ಚೀನಾ ಕ್ಯಾಲೆಂಡರ್‌‌ ಪ್ರಕಾರ ಜನವರಿ 31ರಂದು ಹೊಸ ವರ್ಷ‌ವನ್ನು ಆಚರಿಸುತ್ತಾರೆ. ಅದೇ ದಿನ ಈ ಸ್ಮಾರ್ಟ್‌ಫೋನ್‌ ಚೀನಾದ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.

ಸ್ಮಾರ್ಟ್‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ:ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಗಾತ್ರ,ತೂಕ,ಓಎಸ್‌:

ವಿಶ್ವದ ಮೊದಲ 2ಕೆ ಸ್ಮಾರ್ಟ್‌ಫೋನ್‌ ಬಿಡುಗಡೆ


158.2x82.59x8.68 ಮಿ.ಮೀ ಗಾತ್ರ, 172 ಗ್ರಾಂ ತೂಕವನ್ನು ಹೊಂದಿದೆ. ಆಂಡ್ರಾಯ್ಡ್‌ 4.3 ಜೆಲ್ಲಿಬೀನ್‌ ಓಸ್‌‌ ಒಳಗೊಂಡಿದೆ.

 ಡಿಸ್ಪ್ಲೇ:

ವಿಶ್ವದ ಮೊದಲ 2ಕೆ ಸ್ಮಾರ್ಟ್‌ಫೋನ್‌ ಬಿಡುಗಡೆ


ಈ ಸ್ಮಾರ್ಟ್‌ಫೋನ್‌ ಆರು ಇಂಚಿನ ಐಪಿಎಸ್‌ ಎಲ್‌ಸಿಡಿ ಸ್ಕ್ರೀನ್(2560x1440 ಪಿಕ್ಸೆಲ್‌,490 ಪಿಪಿಐ) ಹೊಂದಿದೆ.ಸದ್ಯದ ಮಾರುಕಟ್ಟೆಯಲ್ಲಿ ಎಚ್‌ಟಿಸಿ ಒನ್‌ ಹೆಚ್ಚಿನ ಪಿಕ್ಸೆಲ್‌ ಹೊಂದಿರುವ ಸ್ಮಾರ್ಟ್‌ಫೋನ್‌ ಆಗಿದ್ದು,1920 x 1080ಪಿಕ್ಸೆಲ್‌ ರೆಸೂಲೂಶನ್‌,469 ಪಿಪಿಯ ಇರುವ 4.7 ಇಂಚಿನ ಫುಲ್‌ ಎಚ್‌ಡಿ ಐಪಿಎಸ್‌ ಕೆಪಾಸಿಟಿವ್‌ ಸ್ಕ್ರೀನ್‌ ಹೊಂದಿದೆ.

 ಪ್ರೊಸೆಸರ್‌ ಮತ್ತು ರ್‍ಯಾಮ್‌:

ವಿಶ್ವದ ಮೊದಲ 2ಕೆ ಸ್ಮಾರ್ಟ್‌ಫೋನ್‌ ಬಿಡುಗಡೆ


2.3GHz ಕ್ವಾಡ್‌ ಕೋರ್‌ ಕ್ವಾಲಕಂ ಸ್ನಾಪ್‌ಡ್ರಾಗನ್‌ ಪ್ರೊಸೆಸರ್‌,Adreno 330 ಗ್ರಾಫಿಕ್‌ ಪ್ರೊಸೆಸರ್‌,3ಜಿಬಿ ರ್‍ಯಾಮ್‌ನ್ನು ಸ್ಮಾರ್ಟ್‌ಫೋನ್‌ ಹೊಂದಿದೆ.

 ಕ್ಯಾಮೆರಾ:

ವಿಶ್ವದ ಮೊದಲ 2ಕೆ ಸ್ಮಾರ್ಟ್‌ಫೋನ್‌ ಬಿಡುಗಡೆ


13 ಎಂಪಿ ಹಿಂದುಗಡೆ ಕ್ಯಾಮೆರಾ,5ಎಂಪಿ ಮುಂದುಗಡೆ ಕ್ಯಾಮೆರಾವನ್ನು ಸ್ಮಾರ್ಟ್‌ಫೋನ್‌ ಹೊಂದಿದೆ.ಬಿಎಸ್‌ಐ(Back-illuminated sensor)ಸಿಮೊಸ್‌ ಇಮೆಜ್‌ ಸೆನ್ಸರ್‌ನ್ನು ಕ್ಯಾಮೆರಾ ಒಳಗೊಂಡಿದೆ.

 ಬ್ಯಾಟರಿ,ಕನೆಕ್ಟಿವಿಟಿ ,ಆಂತರಿಕ ಮೆಮೊರಿ:

ವಿಶ್ವದ ಮೊದಲ 2ಕೆ ಸ್ಮಾರ್ಟ್‌ಫೋನ್‌ ಬಿಡುಗಡೆ


3200 mAh ಬ್ಯಾಟರಿ, 32 ಜಿಬಿ ಆಂತರಿಕ ಮೆಮೊರಿ,ಎಲ್‌ಟಿಇ,ಬ್ಲೂಟೂತ್‌,ಜಿಪಿಎಸ್‌,ಎ-ಜಿಪಿಎಸ್ ಕನೆಕ್ಟಿವಿಟಿ ವಿಶೇಷತೆಯನ್ನು ಸ್ಮಾರ್ಟ್‌ಫೋನ್‌ ಒಳಗೊಂಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot