ಗೆಲಾಕ್ಸಿ ಎಸ್‌5 ಯಲ್ಲಿ ಕಣ್ಣಿನ ಸ್ಕ್ಯಾನರ್‌ ಇರಲಿದೆಯಂತೆ!

By Ashwath
|

ಆಪಲ್‌ ತನ್ನ ಐಫೋನ್‌ 5 ಎಸ್‌ನ್ನು ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಈಗಾಗಲೇ ಬಿಡುಗಡೆ ಮಾಡಿದೆ.ಈಗ ಸ್ಯಾಮ್‌ಸಂಗ್‌ ಸರದಿ. ವಿಶ್ವದ ಮಾರುಕಟ್ಟೆಯಲ್ಲಿ ಆಪಲ್‌‌ ಬದ್ಧ ವೈರಿ ಸ್ಯಾಮ್‌ಸಂಗ್‌ ಸಹ ಹೊಸ ತಂತ್ರಜ್ಞಾನದಲ್ಲಿ ತನ್ನ ಗೆಲಾಕ್ಸಿ ಎಸ್‌ 5ನ್ನು ಬಿಡುಗಡೆ ಮಾಡಲು ಮುಂದಾಗುತ್ತಿದೆ.

ಸ್ಯಾಮ್‌ಸಂಗ್‌ನ ಭಾರೀ ನಿರೀಕ್ಷೆಯ ಗೆಲಾಕ್ಸಿ ಎಸ್‌ 5ಯಲ್ಲಿ ಕಣ್ಣನ್ನು ಸ್ಕ್ಯಾನ್‌ ಮಾ‍ಡುವ ಸೆನ್ಸರ್‌‌ ಇರಲಿದೆ ಎನ್ನುವ ಸುದ್ದಿಗಳು ಟೆಕ್‌ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಅಷ್ಟೇ ಅಲ್ಲದೇ ಫೋನ್‌ 1440x2560 ಪಿಕ್ಸೆಲ್‌ ರೆಸೂಲೂಶನ್‌(2ಕೆ) 587 ಪಿಪಿಐ(ಪಿಕ್ಸೆಲ್‌ ಪರ್‌ ಇಂ‌ಚ್‌) ಇರುವ ಸ್ಕ್ರೀನ್‌ ಒಳಗೊಂಡಿರುತ್ತದೆ ಎಂದು ಹೇಳಲಾಗುತ್ತಿದೆ.ಸ್ಯಾಮ್‌ಸಂಗ್‌ ಇದುವರೆಗೂ ಗೆಲಾಕ್ಸಿ ಎಸ್‌ 5ಯ ವಿಶೇಷತೆಯನ್ನು ಎಲ್ಲಿಯೂ ಹೇಳಿಲ್ಲ. ಒಂದು ವೇಳೆ ಈ ಎರಡು ವಿಶೇಷತೆಗಳು ನಿಜವಾದಲ್ಲಿ ಕಣ್ಣಿನ ಸ್ಕ್ಯಾನರ್‌ ಮತ್ತು 2ಕೆ ವಿಶೇಷತೆಯನ್ನು ಹೊಂದಿರುವ ಮೊದಲ ಸ್ಮಾರ್ಟ್‌ಫೋನ್‌ ಎಂಬ ಹೆಗ್ಗಳಿಕೆಯನ್ನು ಸ್ಯಾಮ್‌ಸಂಗ್‌ ಪಡೆದುಕೊಳ್ಳಲಿದೆ.

ಸ್ಮಾರ್ಟ್‌ಫೋನ್‌ ಕಂಪೆನಿಗಳು ಬಳಕೆದಾರರ ಫೋನ್‌ ಮಾಹಿತಿಯ ಸುರಕ್ಷತೆಗೆ ಸಂಬಂಧಿಸಿದಂತೆ ಫೋನ್‌ ಅನ್‌ಲಾಕ್‌ ಮಾಡುವುದಕ್ಕೆ ಹೊಸ ಹೊಸ ತಂತ್ರಜ್ಞಾನವನ್ನು ಸೇರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುತ್ತವೆ.ಈ ತಂತ್ರಜ್ಞಾನದಲ್ಲಿ ಸದ್ಯ ಈಗ ಸುದ್ದಿಯಾಗುತ್ತಿರುವುದು ಆಪಲ್‌ ಐಫೋನ್‌ 5ಎಸ್‌ನಲ್ಲಿರುವ ಫಿಂಗರ್‌ ಪ್ರಿಂಟ್‌‌ ಸ್ಕ್ಯಾನರ್‌ ತಂತ್ರಜ್ಞಾನ.

ಆಪಲ್‌‌ನ ಫಿಂಗರ್‌ ಪ್ರಿಂಟ್‌ ತಂತ್ರಜ್ಞಾನ ಹೊಸದೇನಲ್ಲ. ಈ ಹಿಂದೆ 2011ರಲ್ಲಿ ಮೋಟರೋಲಾ ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌ ತಂತ್ರಜ್ಞಾನದ ಫೋನ್‌ ಬಿಡುಗಡೆ ಮಾಡಿತ್ತು.ಹೊಸ ಐಫೋನ್‌ನಲ್ಲಿ ಮುಂದುಗಡೆ ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌ ಇದ್ದರೆ ಮೊಟರೋಲಾದಲ್ಲಿ ಹಿಂದುಗಡೆ ಇತ್ತು.ಆಪಲ್‌ ಕಂಪೆನಿಯ ಐಫೋನ್‌ 5ಎಸ್‌ ಬಿಡುಗಡೆಯಾದ ಸಂದರ್ಭದಲ್ಲಿ ಫಿಂಗರ್‌ಪ್ರಿಂಟ್‌‌ ತಂತ್ರಜ್ಞಾನವನ್ನು ಎಲ್ಲಾ ಟೆಕ್‌ ಮಾಧ್ಯಮಗಳು ಹೊಗಳಿದ್ದವು. ಆದರೆ ಐಫೋನ್‌ ಮಾರುಕಟ್ಟೆಗೆ ಬಿಡುಗಡೆಯಾದ ಕೆಲವೇ ವಾರಗಳಲ್ಲಿ ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌ನ್ನು ಹ್ಯಾಕರ್‌ಗಳು ಹ್ಯಾಕ್‌ ಮಾಡಿ ಆಪಲ್‌ಗೆ ಬಿಸಿ ಮುಟ್ಟಿಸಿದ್ದರು.

ಆಪಲ್‌ ಅನುಸರಿದ ಕಾರಣ ಮುಂದಿನ ವರ್ಷ ಬಹುತೇಕ ಸ್ಮಾರ್ಟ್‌‌ಫೋನ್‌ ಕಂಪೆನಿಗಳು ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌ ಹೊಂದಿರುವ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಎಚ್‌ಟಿಸಿ ಈಗಾಗಲೇ ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌ ಇರುವ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಆದರೆ ಈಗಾಗಲೇ ಆಪಲ್‌ ತಂತ್ರಜ್ಞಾನವನ್ನು ಸ್ಯಾಮ್‌ಸಂಗ್‌ ನಕಲು ಮಾಡುತ್ತಿದೆ ಎನ್ನುವ ಆರೋಪ ಸ್ಯಾಮ್‌ಸಂಗ್‌ ಮೇಲಿರುವ ಹಿನ್ನೆಲೆಯಲ್ಲಿ ಸ್ಯಾಮ್‌ಸಂಗ್‌, ಆಪಲ್‌ ಮತ್ತೇ ಸೃಷ್ಟಿಸಿದ ಫಿಂಗರ್‌ ಪ್ರಿಂಟ್‌ ತಂತ್ರಜ್ಞಾನವನ್ನು ಬಳಸದೇ ತಮ್ಮದೇ ಆದ ಹೊಸ ಕಣ್ಣಿನ ಸ್ಕ್ಯಾನರ್‌ ಇರುವ ತಂತ್ರಜ್ಞಾನವನ್ನು ಬಳಸಲು ಮುಂದಾಗುತ್ತಿದೆ ಎನ್ನಲಾಗಿದೆ.

ಕೆಲವು ಮಾಧ್ಯಮಗಳಲ್ಲಿ ಪ್ರಕಟಗೊಡಂತೆ ಗೆಲಾಕ್ಸಿ ಎಸ್‌ 5 ಅಲ್ಯೂಮಿನಿಯಂ ದೇಹವನ್ನು ಹೊಂದಿದ್ದು, 5 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌,64 ಬಿಟ್‌ ಅಕ್ಟಾ ಕೋರ್‌ ಪ್ರೊಸೆಸರ್‌,3GB ರ್‍ಯಾಮ್‌,ಆಂಡ್ರಾಯ್ಡ್‌ 4.4ಕಿಟ್‌ಕ್ಯಾಟ್‌ ಓಎಸ್‌,16 ಎಂಪಿ ಕ್ಯಾಮೆರಾ,ಎಸ್‌ ವಿಶನ್‌ ಅಪ್ಟಿಕಲ್‌ ಇಮೇಜ್‌ ಸ್ಟೆಬಿಲೈಜೇಶನ್‌,32/64/128 GB ಆಂತರಿಕ ಮೆಮೊರಿ,4000mAh ಬ್ಯಾಟರಿಯೊಂದಿಗೆ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.ಈ ಸ್ಮಾರ್ಟ್‌ಫೋನ್‌ನ್ನು 2014ರ ಜನವರಿಯಲ್ಲಿ ಸ್ಯಾಮ್‌ಸಂಗ್‌ ಬಿಡುಗಡೆ ಮಾಡುವ ಸಾಧ್ಯತೆಯಿದೆ.

ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ಗಳ ಆಕರ್ಷ‌ಕ ಚಿತ್ರಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ಗೆಲಾಕ್ಸಿ ಎಸ್‌5 ಯಲ್ಲಿ ಕಣ್ಣಿನ ಸ್ಕ್ಯಾನರ್‌ ಇರಲಿದೆಯಂತೆ!

ಗೆಲಾಕ್ಸಿ ಎಸ್‌5 ಯಲ್ಲಿ ಕಣ್ಣಿನ ಸ್ಕ್ಯಾನರ್‌ ಇರಲಿದೆಯಂತೆ!

ಅಲ್ಯೂಮಿನಿಯಂ ದೇಹ

ಗೆಲಾಕ್ಸಿ ಎಸ್‌5 ಯಲ್ಲಿ ಕಣ್ಣಿನ ಸ್ಕ್ಯಾನರ್‌ ಇರಲಿದೆಯಂತೆ!

ಗೆಲಾಕ್ಸಿ ಎಸ್‌5 ಯಲ್ಲಿ ಕಣ್ಣಿನ ಸ್ಕ್ಯಾನರ್‌ ಇರಲಿದೆಯಂತೆ!

2ಕೆ ಎಚ್‌ಡಿ ಸ್ಕ್ರೀನ್‌(2560*1440)

ಗೆಲಾಕ್ಸಿ ಎಸ್‌5 ಯಲ್ಲಿ ಕಣ್ಣಿನ ಸ್ಕ್ಯಾನರ್‌ ಇರಲಿದೆಯಂತೆ!

ಗೆಲಾಕ್ಸಿ ಎಸ್‌5 ಯಲ್ಲಿ ಕಣ್ಣಿನ ಸ್ಕ್ಯಾನರ್‌ ಇರಲಿದೆಯಂತೆ!

4000mAh ಬ್ಯಾಟರಿ

ಗೆಲಾಕ್ಸಿ ಎಸ್‌5 ಯಲ್ಲಿ ಕಣ್ಣಿನ ಸ್ಕ್ಯಾನರ್‌ ಇರಲಿದೆಯಂತೆ!

ಗೆಲಾಕ್ಸಿ ಎಸ್‌5 ಯಲ್ಲಿ ಕಣ್ಣಿನ ಸ್ಕ್ಯಾನರ್‌ ಇರಲಿದೆಯಂತೆ!

ವಕ್ರವಾಗಿರುವ ಸ್ಮಾರ್ಟ್‌‌ಫೋನ್‌

ಗೆಲಾಕ್ಸಿ ಎಸ್‌5 ಯಲ್ಲಿ ಕಣ್ಣಿನ ಸ್ಕ್ಯಾನರ್‌ ಇರಲಿದೆಯಂತೆ!

ಗೆಲಾಕ್ಸಿ ಎಸ್‌5 ಯಲ್ಲಿ ಕಣ್ಣಿನ ಸ್ಕ್ಯಾನರ್‌ ಇರಲಿದೆಯಂತೆ!

5 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌

ಗೆಲಾಕ್ಸಿ ಎಸ್‌5 ಯಲ್ಲಿ ಕಣ್ಣಿನ ಸ್ಕ್ಯಾನರ್‌ ಇರಲಿದೆಯಂತೆ!

ಗೆಲಾಕ್ಸಿ ಎಸ್‌5 ಯಲ್ಲಿ ಕಣ್ಣಿನ ಸ್ಕ್ಯಾನರ್‌ ಇರಲಿದೆಯಂತೆ!

16 ಎಂಪಿ ಹಿಂದುಗಡೆ ಕ್ಯಾಮೆರಾ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X