ಶಿಯೋಮಿಗೆ ನೇರ ಪೈಪೋಟಿ ಕೊಡಲು ಬರಲಿದೆ 'ವಿವೋ ಎಸ್‌1' ಸ್ಮಾರ್ಟ್‌ಫೋನ್.!

|

ಇತ್ತೀಚಿಗೆ 'ವಿವೋ ವಿ15 ಪ್ರೋ' ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿ ಮಾರುಕಟ್ಟೆಯಲ್ಲಿ ಮಿಂಚುತ್ತಿರುವ ಜೊತೆಗೆ ಐಪಿಎಲ್ ಪಂದ್ಯಾವಳಿಯಲ್ಲಿ ಭರ್ಜರಿ ಜಾಹಿರಾತು ನೀಡುತ್ತ ಗ್ರಾಹಕರನ್ನು ಸೆಳೆಯುತ್ತಿದೆ. ಆದರೆ ಇದೀಗ ವಿವೋ ಕಂಪನಿ ಸದ್ದಿಲ್ಲದೇ ಮತ್ತೊಂದು ಹೊಸ ಸ್ಮಾರ್ಟ್‌ಫೋನ್‌ ಒಂದನ್ನು ಬಿಡುಗಡೆ ಮಾಡಿದ್ದು, ಸ್ಮಾರ್ಟ್‌ಫೋನ್‌ ಪ್ರಿಯರಲ್ಲಿ ಭಾರೀ ಅಚ್ಚರಿ ಮೂಡಿಸಿದೆ.

ಶಿಯೋಮಿಗೆ ನೇರ ಪೈಪೋಟಿ ಕೊಡಲು ಬರಲಿದೆ 'ವಿವೋ ಎಸ್‌1' ಸ್ಮಾರ್ಟ್‌ಫೋನ್.!

ಹೌದು, ವಿವೋ ಎಸ್‌1 ಹೆಸರಿನ ಸ್ಮಾರ್ಟ್‌ಫೋನ್‌ ಅನ್ನು ಇದೇ ಬುಧವಾರ ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದು, ಅತಿ ಶೀಘ್ರದಲ್ಲೇ ದೇಶಿಯ ಮಾರುಕಟ್ಟೆಗೂ ಎಂಟ್ರಿ ಕೊಡಲಿದೆ ಎನ್ನಲಾಗುತ್ತಿದೆ. ಈ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾವನ್ನು ಹೊಂದಿದ್ದು, ಮುಂಬದಿಯಲ್ಲಿ ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಫುಲ್‌ಸ್ಕ್ರೀನ್ ಡಿಸ್‌ಪ್ಲೇಯ ರಚನೆ ಹೊಂದಿದೆ.

ಶಿಯೋಮಿಗೆ ನೇರ ಪೈಪೋಟಿ ಕೊಡಲು ಬರಲಿದೆ 'ವಿವೋ ಎಸ್‌1' ಸ್ಮಾರ್ಟ್‌ಫೋನ್.!

ನೂತನ ಫೀಚರ್ಸ್‌ಗಳನ್ನು ಒಳಗೊಂಡಿರುವ ವಿವೋ ಎಸ್‌1 ಸ್ಮಾರ್ಟ್‌ಫೋನ್‌ ಭಾರತೀಯ ಮಾರುಕಟ್ಟೆಯಲ್ಲಿ ಶಿಯೋಮಿ ಮತ್ತು ರಿಯಲ್‌ ಮಿ ಕಂಪನಿಯ ಇತ್ತೀಚಿನ ಸ್ಮಾರ್ಟ್‌ಫೋನ್‌ ನೇರ ಪೈಪೋಟಿ ನೀಡಲಿದೆ ಎಂದು ಹೇಳಲಾಗುತ್ತಿದೆ. ಹಾಗಾದರೇ ವಿವೋ ಎಸ್‌1 ಸ್ಮಾರ್ಟ್‌ಫೋನ್‌ ಏನೆಲ್ಲಾ ವಿಶೇಷ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ

ಡಿಸ್‌ಪ್ಲೇ

1080x2340 ಪಿಕ್ಸಲ್‌ ರೆಸಲ್ಯೂಶನ್ ಸಾಮರ್ಥ್ಯದ 6.53 ಇಂಚಿನ ಫುಲ್‌ ಹೆಚ್‌ಡಿ IPS ಡಿಸ್‌ಪ್ಲೇಯನ್ನು ಹೊಂದಿದ್ದು, ಈ ಸ್ಮಾರ್ಟ್‌ಫೋನಿನ ಅನುಪಾತವು 19.5:9 ಆಗಿದೆ. ಡಿಸ್‌ಪ್ಲೇ ಮತ್ತು ಬಾಹ್ಯ ರಚನೆಯ ನಡುವಿನ ರೇಶಿಯೋ ಶೇ.90.95 ರಷ್ಟಿದೆ. ವಿಶಾಲ ಡಿಸ್‌ಪ್ಲೇ ವಿಡಿಯೊ ವೀಕ್ಷಣೆಗೆ ಅತ್ಯುತಮ ಎನಿಸಲಿದೆ.

ಪ್ರೊಸೆಸರ್

ಪ್ರೊಸೆಸರ್

ವಿವೋ ಎಸ್‌1 ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಹಿಲಿಯೊ P70 SoC ಪ್ರೊಸೆಸರ್‌ ಅನ್ನು ಹೊಂದಿದ್ದು, ಇದರೊಂದಿಗೆ Mali-G72 GPU ಸಹ ಒದಗಿಸಲಾಗಿದೆ. 6 GB RAM ಮತ್ತು 128GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿದ್ದು, ಇದರೊಟ್ಟಿಗೆ ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯವಾಗಿ 256GB ವರೆಗೂ ವಿಸ್ತರಿಸಲು ಅವಕಾಶ ನೀಡಲಾಗಿದೆ.

ಕ್ಯಾಮೆರಾ

ಕ್ಯಾಮೆರಾ

ವಿವೋ ಎಸ್‌1 ಸ್ಮಾರ್ಟ್‌ಫೋನ್‌ 12 ಮೆಗಾಪಿಕ್ಸಲ್ f/1.78 ಲೆನ್ಸ್‍ ಹೊಂದಿದೆ, ಸೆಕೆಂಡರಿ ಕ್ಯಾಮೆರಾವು f/2.2 ವೈಲ್ಡ್ ಆಂಗಲ್ ಲೆನ್ಸ್‌ನೊಂದಿಗೆ 8 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿದೆ. ಮತ್ತು ಮೂರನೇ ಕ್ಯಾಮೆರಾವು 5 ಮೆಗಾಪಿಕ್ಸಲ್ ಶಕ್ತಿಯೊಂದಿಗೆ f/2.4 ಲೆನ್ಸ್‌ಒಳಗೊಂಗೊಂಡಿದೆ.

ಸೆಲ್ಫಿ ಕ್ಯಾಮೆರಾ

ಸೆಲ್ಫಿ ಕ್ಯಾಮೆರಾ

ವಿವೋ ವಿ15 ಪ್ರೋ ಸ್ಮಾರ್ಟ್‌ಪೋನ್‌ ಮಾದರಿಯಿಂದ ಸೆಲ್ಫಿಗೆ ಹೊಸ ಪಾಪ್‌ಅಪ್‌ ಸೆಲ್ಫಿ ಟ್ರೆಂಡ್ ಹುಟ್ಟುಹಾಕಿದೆ. ಹೊಸ ವಿವೋ ಎಸ್‌1 ಸ್ಮಾರ್ಟ್‌ಫೋನಿನಲ್ಲೂ 25 ಮೆಗಾಪಿಕ್ಸಲ್ ಸಾಮರ್ಥ್ಯದ ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಈ ಕ್ಯಾಮೆರಾ f/2.0 ಲೆನ್ಸ್‌ ಅನ್ನು ಹೊಂದಿದೆ.

ಬ್ಯಾಟರಿ

ಬ್ಯಾಟರಿ

3,940mAh ಸಾಮರ್ಥ್ಯದ ಪವರ್‌ಫುಲ್ ಬ್ಯಾಟರಿಯನ್ನು ಒದಗಿಸಲಾಗಿದ್ದು, ಬ್ಯಾಟರಿ ಪೂರ್ಣ ಚಾರ್ಜ್‌ಆದರೆ ಒಂದು ದಿನ ನಿರಾತಂಕವಾಗಿ ಬಾಳಿಕೆ ಬರಲಿದೆ. ವೇಗದ ಚಾರ್ಜರ್‌ ಸೌಲಭ್ಯ ಸಹ ಇದ್ದು, ಐಸ್‌ ಲೆಕ್‌ ಬ್ಲೂ ಮತ್ತು ಪೆಟ್‌ ಪೌಡರ್‌ ಕಲರ್‌ ಆಯ್ಕೆಗಳನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಚೀನಾ ಮಾರುಕಟ್ಟೆಯಲ್ಲಿ 'ವಿವೋ ಎಸ್‌1' ಸ್ಮಾರ್ಟ್‌ಪೋನಿನ ಬೆಲೆಯು CNY 2,298 ಆಗಿದೆ ( 24,500ರೂ.ಗಳು). ಭಾರತೀಯ ಮಾರುಕಟ್ಟೆಗೂ ಯಾವಾಗ ಎಂಟ್ರಿ ಪಡೆಯಲಿದೆ ಎಂಬುದರ ಬಗ್ಗೆ ಕಂಪನಿ ಅಧಿಕೃತ ಮಾಹಿತಿ ಹೊರಹಾಕಿಲ್ಲ.

Best Mobiles in India

English summary
Rumours suggest that the Vivo S1 will come to India and compete with phone brands like Xiaomi and Realme. Vivo is yet to officially announce the India launch timeline of the Vivo S1.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X