ಮಿಡ್‌ರೇಂಜ್ ದರದಲ್ಲಿ ಲಭ್ಯ ಇರುವ ವಿವೋ ಮೊಬೈಲ್‌ಗಳ ಲಿಸ್ಟ್ ಇಲ್ಲಿದೆ ನೋಡಿ!
ವಿವೋ ಸಂಸ್ಥೆಯು ಮೊಬೈಲ್ ಮಾರುಕಟ್ಟೆಯಲ್ಲಿ ಈಗಾಗಲೇ ಹಲವು ಭಿನ್ನ ಶ್ರೇಣಿಯಲ್ಲಿ ಸ್ಮಾರ್ಟ್‌ಫೋನ್‌ಗಳ ಮೂಲಕ ಗುರುತಿಸಿಕೊಂಡಿದೆ. ವಿವೋ ಸಂಸ್ಥೆಯು ಬಜೆಟ್ ದರದ, ಮೀಡ್‌ರೇಂಜ್ ಬೆಲೆಯ ಹಾಗೂ ಹೈ ಎಂಡ್ ಬೆಲೆಯ ಫೋನ್‌ಗಳ ಆಯ್ಕೆಯನ್ನು ನೀಡಿದೆ. ಅದಾಗ್ಯೂ, ವಿವೋ ಮೊಬೈಲ್ ಕಂಪನಿಯ ಇತ್ತೀಚಿನ ಕೆಲವು ಮೊಬೈಲ್‌ಗಳು ವಿಶೇಷ ಆಕರ್ಷಣೆ ಪಡೆಯುವಲ್ಲಿ ಉಶಸ್ವಿ ಆಗಿವೆ. ಅಂತಹ ಫೋನ್‌ಗಳು ಯಾವುವು ಗೊತ್ತಾ?
ಹೌದು, ವಿವೋ ಮೊಬೈಲ್ ಸಂಸ್ಥೆಯ ಇತ್ತೀಚಿನ ವಿವೋ T, ವಿವೋ V ಹಾಗೂ ವಿವೋ Y ಸರಣಿಯ ಮೊಬೈಲ್ ಗಳು ಮಾರುಕಟ್ಟೆಯಲ್ಲಿ ಅಧಿಕ ಗಮನ ಸೆಳೆದಿವೆ. ಈ ಫೋನ್‌ಗಳು ಗ್ರಾಹಕ ಬಜೆಟ್ ಬೆಲೆಯನ್ನು ಪಡೆದಿದ್ದು, ಇದರ ಜೊತೆಗೆ ಡಿಸ್‌ಪ್ಲೇ, ಬಿಗ್ ಬ್ಯಾಟರಿ, ಪ್ರೊಸೆಸರ್ ಮತ್ತು ಇತರೆ ಆಕರ್ಷಕ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ಹಾಗಾದರೆ ಪ್ರಸ್ತುತ 25,000 ರೂ. ಬೆಲೆಯ ಒಳಗೆ ಗಮನ ಸೆಳೆದ ಕೆಲವು ವಿವೋ ಸ್ಮಾರ್ಟ್ ಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಿವೋ X100 ಪ್ರೊ ಸ್ಮಾರ್ಟ್‌ಫೋನ್
ಈ ಫೋನ್ 6.78 ಇಂಚಿನ 8T LTPO ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, 120 Hz ವರೆಗಿನ ರಿಫ್ರೆಶ್ ರೇಟ್ ಮತ್ತು 3,000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಪಡೆದಿದೆ. ಅಲ್ಲದೇ ಮೀಡಿಯಾ ಟೆಕ್ ಡೈಮೆನ್ಸಿಟಿ 9300 ಪ್ರೊಸೆಸರ್‌ನಿಂದ (MediaTek Dimensity 9300 ) ಕಾರ್ಯ ನಿರ್ವಹಿಸಲಿದೆ.
ಹಾಗೆಯೇ 50 ಮೆಗಾ ಪಿಕ್ಸೆಲ್ ಮುಖ್ಯ ಕ್ಯಾಮೆರಾ ಇದೆ. ಇದರ ಜೊತೆಗೆ ಈ ಸ್ಮಾರ್ಟ್‌ಫೋನ್ 5,400 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದೆ. ಹಾಗೆಯೇ ವಿವೋ X100 ಫೋನ್ 120 W ವೇಗದ ಚಾರ್ಜಿಂಗ್‌ಗೆ ಬೆಂಬಲವನ್ನು ಪಡೆದಿದೆ.
ವಿವೋ T1x ಸ್ಮಾರ್ಟ್‌ಫೋನ್
ವಿವೋ T1x ಮೊಬೈಲ್ 1,080 x 2,408 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.58 ಇಂಚಿನ ಫುಲ್ ಹೆಚ್‌ಡಿ+ ಡಿಸ್‌ಪ್ಲೇ ಅನ್ನು ಪಡೆದುಕೊಂಡಿದೆ. ಹಾಗೆಯೇ ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 900 SoC ಪ್ರೊಸೆಸರ್ ನಲ್ಲಿ ಕಾರ್ಯ ಮಾಡಲಿದ್ದು, 6GB RAM ಮತ್ತು 128GB ಆಂತರೀಕ ಸ್ಟೋರೇಜ್ ಕೂಡಾ ಪಡೆದಿದೆ.
ಇದರ ಜೊತೆಗೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಪಡೆದಿದ್ದು, ಇದರ ಪ್ರಾಥಮಿಕ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್ ಪಡೆದಿದೆ. ಅಲ್ಲದೇ ಈ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದೆ.
ವಿವೋ V29e 5G ಸ್ಮಾರ್ಟ್‌ಫೋನ್
ವಿವೋ V29e 5G ಮೊಬೈಲ್ 6.73 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಅನ್ನು ಪಡೆದಿದ್ದು, ಇದರ ಡಿಸ್‌ಪ್ಲೇಯು 2400 x 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಒಳಗೊಂಡಿದೆ. ಅಲ್ಲದೇ ಕ್ವಾಲ್ಕಾಮ್ ಸ್ನ್ಯಾಪ್ ಡ್ರ್ಯಾಗನ್ 695 SoC ಪ್ರೊಸೆಸರ್ ಪವರ್‌ನಲ್ಲಿ ಕಾರ್ಯ ನಿರ್ವಹಿಸಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 13 ಆಧಾರಿತ ಫನ್‌ಟಚ್ ಓಎಸ್ ಸಪೋರ್ಟ್ ಪಡೆದಿದೆ.
ಅಲ್ಲದೇ ವಿವೋದ ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಆಯ್ಕೆ ಒಳಗೊಂಡಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 64 ಮೆಗಾ ಪಿಕ್ಸೆಲ್ OIS ಸೌಲಭ್ಯ ಪಡೆದಿದೆ. ಇದು 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಅನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ ಈ ಫೋನ್ 44W ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡಲಿದೆ.


Click it and Unblock the Notifications








