vivo: ವಿವೋ T3 5G ಸ್ಮಾರ್ಟ್‌ಫೋನ್ ಲಾಂಚ್!50 MP ಸೋನಿ ಸೆನ್ಸರ್, ಬೆಲೆ ಎಷ್ಟು?
ಭಾರತದಲ್ಲಿ ದೊಡ್ಡ ಮಟ್ಟದ ಕ್ರೇಜ್ ಉಂಟು ಮಾಡಿದ್ದ ವಿವೋದ ಫೋನ್ ವಿವೋ T3 5G (Vivo T3 5G smartphone) ಕೊನೆಗೂ ಲಾಂಚ್ ಆಗಿದೆ. ಈ ಸ್ಮಾರ್ಟ್‌ಫೋನ್ ಕಳೆದ ವರ್ಷದ ವಿವೋ T2 ನ ಉತ್ತರಾಧಿಕಾರಿಯಾಗಿದೆ.
ಹೌದು, ವಿವೋ ಇದೀಗ ವಿವೋ T3 5G ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಫೋನ್ 1800 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ, ಆಂಡ್ರಾಯ್ಡ್ 14 ಸೇರಿದಂತೆ ಅನೇಕ ಆಕರ್ಷಕ ಫೀಚರ್ಸ್ ಅನ್ನು ಪಡೆದುಕೊಂಡಿದೆ. ಹಾಗಿದ್ರೆ ಲಾಂಚ್ ಆಗುವ ಮುನ್ನವೇ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿದ್ದ ಈ ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಬೆಲೆ ವಿವರ ಇಲ್ಲಿದೆ ನೋಡಿ.

ವಿವೋ T3 5G ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಮಾಹಿತಿ: ಈ ಸ್ಮಾರ್ಟ್‌ಫೋನ್ 6.67 ಇಂಚಿನ ಫುಲ್ ಹೆಚ್‌ಡಿ+ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, 2400×1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಅಲ್ಲದೆ 120Hz ರಿಫ್ರೆಶ್ ರೇಟ್, 360Hz ಟಚ್ ಸ್ಯಾಂಪ್ಲಿಂಗ್ ರೇಟ್, ಹೆಚ್‌ಡಿಆರ್ 10+, 1800 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಪಡೆದಿದ್ದು, ಬಳಕೆದಾರರಿಗೆ ಪ್ರೀಮಿಯಂ ಅನುಭವ ನೀಡಲಿದೆ.
ವಿವೋ T3 5G ಸ್ಮಾರ್ಟ್‌ಫೋನ್ ಪ್ರೊಸೆಸರ್ ವಿವರ: ಈ ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 7200 4nm ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು. ಮಾಲಿ-G610 MC4 ಜಿಪಿಯು ಬಲ ಪಡೆದಿದೆ. ಹಾಗೆಯೇ 8GB LPDDR4x RAM, 128GB / 256GB (UFS 2.2) ಇಂಟರ್ ಸ್ಟೋರೇಜ್ ಆಯ್ಕೆ ಪಡೆದಿದ್ದು, ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 1TB ವರೆಗೆ ಸ್ಟೋರೇಜ್ ಹೆಚ್ಚಿಗೆ ಮಾಡಿಕೊಳ್ಳುವ ಅವಕಾಶ ನೀಡಿದೆ. ಉಳಿದಂತೆ ಈ ಫೋನ್ ಫನ್‌ಟಚ್‌ಓಎಸ್ 14 ಜೊತೆಗೆ ಆಂಡ್ರಾಯ್ಡ್ 14 ಅನ್ನು ರನ್ ಮಾಡಲಿದೆ.

ವಿವೋ T3 5G ಸ್ಮಾರ್ಟ್‌ಫೋನ್ ಕ್ಯಾಮೆರಾ ರಚನೆ: ಇನ್ನು ಈ ಫೋನ್ ಸೋನಿ IMX882 ಸೆನ್ಸರ್‌ನೊಂದಿಗೆ 50 ಮೆಗಾಪಿಕ್ಸೆಲ್ ರಿಯರ್ ಕ್ಯಾಮರಾ, 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಆಯ್ಕೆ ಪಡೆದಿದ್ದು, ಫ್ಲಿಕರ್ ಸೆನ್ಸರ್ ಅನ್ನೂ ಇದರಲ್ಲಿ ಕಾಣಬಹುದಾಗಿದೆ. ಈ ಕ್ಯಾಮೆರಾಗಳು 4K 30fps ಸಾಮರ್ಥ್ಯದ ವಿಡಿಯೋ ರೆಕಾರ್ಡಿಂಗ್ ಸೌಲಭ್ಯ ನೀಡಲಿದೆ. ಹಾಗೆಯೇ ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ನೀಡಲಾಗಿದೆ.
ವಿವೋ T3 5G ಸ್ಮಾರ್ಟ್‌ಫೋನ್ ಬ್ಯಾಟರಿ ಹಾಗೂ ಇತರೆ: ಈ ಫೋನ್ 44W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದೆ. ಉಳಿದಂತೆ 5G (n1/n3/n5/n8/n28B/n40/n77/n78 ಬ್ಯಾಂಡ್‌ಗಳು), ಡ್ಯುಯಲ್ 4G VoLTE, ವೈ-ಫೈ 6 802.11 ax (2.4GHz + 5GHz), ಬ್ಲೂಟೂತ್ ಆವೃತ್ತಿ 5.3, ಜಿಪಿಎಸ್/ ಗ್ಲೋನಾಸ್/ ಬೈಡು, ಯುಎಸ್‌ಬಿ ಟೈಪ್-ಸಿ ಕನೆಕ್ಟಿವಿಟಿ ಬೆಂಬಲ ಪಡೆದಿದ್ದು, ಇನ್-ಡಿಸ್ಪ್ಲೇ ಫಿಂಗರ್‌ಫ್ರಿಂಟ್ ಸೆನ್ಸರ್, ಸ್ಟಿರಿಯೊ ಸ್ಪೀಕರ್ ಹಾಗೂ ಧೂಳು ಮತ್ತು ಸ್ಪ್ಲಾಶ್ ನಿರೋಧಕ (IP54) ರೇಟಿಂಗ್ ಪಡೆದಿದ್ದು, ಈ ಮೂಲಕ ಇನ್ಮುಂದೆ ಭಾರತದಲ್ಲಿ ದೊಡ್ಡ ಮಟ್ಟದ ಸೌಂಡ್ ಮಾಡಲಿದೆ.

ವಿವೋ T3 5G ಸ್ಮಾರ್ಟ್‌ಫೋನ್ ಬೆಲೆ ಮತ್ತು ಲಭ್ಯತೆ: ಈ ಪೋನ್‌ನ 8GB + 128GB ವೇರಿಯಂಟ್‌ಗೆ 19,999 ರೂ.ಗಳನ್ನು ನಿಗದಿ ಮಾಡಲಾಗಿದ್ದು, 8GB + 256GB ವೇರಿಯಂಟ್‌ಗೆ 21,999 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಈ ಫೋನ್ ಅನ್ನು ಮಾರ್ಚ್ 27 ರಿಂದ ವಿವೋ ಇಂಡಿಯಾ ಇ-ಸ್ಟೋರ್ ಮತ್ತು ಫ್ಲಿಪ್‌ಕಾರ್ಟ್‌ನಿಂದ ಖರೀದಿ ಮಾಡಬಹುದಾಗಿದೆ. ಜೊತೆಗೆ ಈ ಫೋನ್ ಕಾಸ್ಮಿಕ್ ಬ್ಲೂ ಮತ್ತು ಸಿಸ್ಟಲ್ ಫ್ಲೇಕ್ ಬಣ್ಣಗಳಲ್ಲಿ ಲಭ್ಯ ಇರಲಿದೆ.

ಈ ಫೋನ್‌ಗೆ ಲಾಂಚ್ ಆಫರ್ ಅನ್ನೂ ಸಹ ನೀಡಲಾಗಿದೆ. HDFC ಬ್ಯಾಂಕ್ ಮತ್ತು SBI ಕಾರ್ಡ್ ಬಳಕೆ ಮಾಡಿಕೊಂಡು ಖರೀದಿ ಮಾಡಿದ್ರೆ 2000 ರೂ.ಗಳ ತ್ವರಿತ ರಿಯಾಯಿತಿ ಅಥವಾ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕ ಖರೀದಿ ಮಾಡಿದ್ರೆ 2000 ರೂ.ಗಳ ಡಿಸ್ಕೌಂಟ್ ಅನ್ನು ಪಡೆಯಬಹುದಾಗಿದೆ. ಅಲ್ಲದೆ 3 ತಿಂಗಳ ನೋ-ಕಾಸ್ಟ್ ಇಎಮ್‌ಐ ಸೌಲಭ್ಯ ಸಹ ಇದ್ದು, ಸರಳ ರೀತಿಯಲ್ಲಿ ಈ ಫೋನ್ ಅನ್ನು ಖರೀದಿ ಮಾಡಬಹುದಾಗಿದೆ.


Click it and Unblock the Notifications








