ಜಸ್ಟ್ 10,499 ಗುರು..! Vivoನ ಹೊಸ ಫೋನ್ ಗ್ರ್ಯಾಂಡ್ ಎಂಟ್ರಿ: ಮಾರುಕಟ್ಟೆ ಶೇಕ್!
ಬ್ರ್ಯಾಂಡ್ Vivo ಈಸ್ ಬ್ಯಾಕ್ ವಿತ್ ಎ ಬ್ಯಾಂಗ್..! ಜಸ್ಟ್ 10,499 ಗುರು.. ವಿವೋ (Vivo) ಕಂಪನಿ ತನ್ನ T ಸರಣಿಯ ಇತ್ತೀಚಿನ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. Vivo T3 Lite 5G ವಿವೋ ಕಂಪನಿಯ ಹೊಸ ಕೈಗೆಟುಕುವ ಫೋನ್ ಆಗಿದೆ. ಹೊಸ ವಿವೋ T3 ಲೈಟ್ 5G ಮೊಬೈಲ್ 50MP ಪ್ರಾಥಮಿಕ ಕ್ಯಾಮೆರಾ, 5000mAh ಸಾಮರ್ಥ್ಯದ ಬ್ಯಾಟರಿ ಮತ್ತು 128GB ಸ್ಟೋರೇಜ್ ಸೇರಿದಂತೆ ಹಲವು ಫೀಚರ್ಸ್‌ಗಳನ್ನು ಹೊಂದಿದೆ. ಈ ನೂತನ ಫೋನ್‌ನ ವಿಶೇಷತೆ ಏನು ಗೊತ್ತಾ? ಇದರ ಬೆಲೆ ಮತ್ತು ಫೀಚರ್ಸ್ ತಿಳಿದ್ರೆ, ನೀವು ಕೂಡ ಈ ಫೋನ್ ಖರೀದಿಸುವ ಮನಸ್ಸು ಮಾಡುತ್ತೀರಿ.
ಹೌದು, ವಿವೋ ಸ್ಮಾರ್ಟ್‌ಫೋನ್‌ಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ಸಖತ್ ಡಿಮ್ಯಾಂಡ್ ಇದೆ. ತನ್ನ ಸ್ಟೈಲಿಶ್ ಡಿಸೈನ್ ವಿಶಿಷ್ಟ ಶೈಲಿಯ ಫೀಚರ್ಸ್‌ಗಳಿಂದ ಮೊಬೈಲ್ ಪ್ರಿಯರನ್ನು ಸೆಳೆಯುವಲ್ಲಿ ವಿವೋ ಯಶಸ್ವಿಯಾಗಿದೆ. ಗ್ರಾಹಕರು ವಿವೋ ಫೋನ್‌ಗಳು ಮಾರುಕಟ್ಟೆಗೆ ಬರುವುದನ್ನೇ ಕಾದು ಕೊಂಡುಕೊಳ್ಳುತ್ತಾರೆ. ಅದರಂತೆ, ಇದೀಗ ವಿವೋನ ನೂತನ Vivo T3 Lite 5G ಫೋನ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಈ ಮೊಬೈಲ್‌ನ ಸ್ಟೈಲಿಶ್ ಲುಕ್, ಬೊಂಬಾಟ್ ಕ್ಯಾಮೆರಾ, ಅತ್ಯಾಕರ್ಷಕ ಫೀಚರ್ಸ್‌ಗಳು ಮೊಬೈಲ್ ಪ್ರಿಯರ ಕಣ್ಣು ಕುಕ್ಕುತ್ತಿದೆ.

ಪ್ರಮುಖ ಅಂಶಗಳು
- Vivo ಭಾರತದಲ್ಲಿ ಅತ್ಯಂತ ಅಗ್ಗದ Vivo T3 Lite 5G ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ.
- Vivo T3 Lite 5G ಫೋನ್ 50MP ಕ್ಯಾಮೆರಾ ಮತ್ತು 5000mAh ಬ್ಯಾಟರಿಯನ್ನು ಹೊಂದಿದೆ.
- ಈ ಮೊಬೈಲ್ ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಬರುತ್ತದೆ - 4GB + 128GB ಮತ್ತು 6GB + 128GB
- ಹೊಸ ವಿವೋ ಫೋನ್ ಎರಡು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ - ವೈಬ್ರೆಂಟ್ ಗ್ರೀನ್ ಮತ್ತು ಮೆಜೆಸ್ಟಿಕ್ ಕಪ್ಪು
ವಿವೋ T3 ಲೈಟ್ 5G ಬೆಲೆ ಎಷ್ಟು?
ವಿವೋ T3 ಲೈಟ್ 5Gಯ 4GB RAM ಮತ್ತು 128 GB ಸ್ಟೋರೇಜ್ ರೂಪಾಂತರದ ಬೆಲೆ 10,499 ರೂ. ಇದೆ. ಆದರೆ, 6GB RAM ಮತ್ತು 128 GB ಸ್ಟೋರೇಜ್ ರೂಪಾಂತರವನ್ನು 1,499 ರೂ.ಗೆ ಲಾಂಚ್ ಮಾಡಲಾಗಿದೆ. ಹೊಸ Vivo ಫೋನ್ ವೈಬ್ರೆಂಟ್ ಗ್ರೀನ್ ಮತ್ತು ಮೆಜೆಸ್ಟಿಕ್ ಕಪ್ಪು ಬಣ್ಣಗಳಲ್ಲಿ ಖರೀದಿಗೆ ಲಭ್ಯವಾಗಲಿದೆ. ಗ್ರಾಹಕರು ಪ್ಲಿಪ್‌ಕಾರ್ಟ್, ವಿವೋ ಇಂಡಿಯಾದ ಇ-ಸ್ಟೋರ್ ಮತ್ತು ಎಲ್ಲಾ ಪಾಲುದಾರ ಚಿಲ್ಲರೆ ಅಂಗಡಿಗಳಲ್ಲಿ ಜುಲೈ 4 ರಿಂದ ಈ ಮೊಬೈಲ್ ಖರೀದಿಸಬಹುದು.
ಇನ್ನೂ, ವಿವೋ T3 ಲೈಟ್ 5G ಮೊಬೈಲ್ ಲಾಂಚ್ ಪ್ರಯುಕ್ತ ನೀವು ಡಿಸ್ಕೌಂಟ್ ಪಡೆಯಬಹುದು. ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಪ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಗ್ರಾಹಕರು 500 ರೂ. ತ್ವರಿತ ರಿಯಾಯಿತಿಯಲ್ಲಿ ಈ ಸ್ಮಾರ್ಟ್‌ಫೋನ್ ಅನ್ನು ಖರೀದಿಸಬಹುದು. ಈ ಫೋನ್ ಬಜೆಟ್ ಬೆಲೆಯಲ್ಲಿ ಬಿಡುಗಡೆಯಾಗಿರುವುದರಿಂದ ಮಾರುಕಟ್ಟೆಯಲ್ಲಿ ದೊಡ್ಡ ಸದ್ದು ಮಾಡುವುದರಲ್ಲಿ ಡೌಟೇ ಇಲ್ಲ. ಈಗಾಗಲೇ, ಮೊಬೈಲ್ ಪ್ರಿಯರು ಈ ಫೋನ್ ಖರೀದಿಸಲು ಮುಗಿಬಿದ್ದಿದ್ದಾರೆ.

Vivo T3 Lite 5Gನ ಸಂಪೂರ್ಣ ಫೀಚರ್ಸ್
- ಡಿಸ್‌ಪ್ಲೇ: 6.56 inches
- ರೆಸಲ್ಯೂಶನ್: 1612 × 720 px (HD+)
- ಬ್ರೈಟ್‌ನೆಸ್: ಗರಿಷ್ಠ 840 nits
- ರಿಫ್ರೆಶ್ ರೇಟ್: 90Hz ರಿಫ್ರೆಶ್ ದರ
- ಪ್ರೊಸೆಸರ್: ಆರ್ಮ್ ಮಾಲಿ-G57 MC2 GPU ಜೊತೆಗೆ MediaTek Dimensity 6300 6nm ಪ್ರೊಸೆಸರ್ (2x ಕಾರ್ಟೆಕ್ಸ್-A76 @ 2.4GHz 6x ಕಾರ್ಟೆಕ್ಸ್-A55 @ 2GHz)
- ಆಪರೇಟಿಂಗ್ ಸಿಸ್ಟಂ: Funtouch OS 14 ಜೊತೆಗೆ Android 14
- ಸ್ಟೋರೇಜ್: 4GB RAM + 128GB ಹಾಗೂ 6GB RAM + 128GB ಸ್ಟೋರೇಜ್
- ಇಂಟರ್ನಲ್ ಮೆಮೊರಿ: 128 GB, ಮೈಕ್ರೊ SD ಜೊತೆಗೆ 1TB ವರೆಗೆ ವಿಸ್ತರಿಸಬಹುದಾದ ಮೆಮೊರಿ
- ಸಿಮ್: ಹೈಬ್ರಿಡ್ ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೊ ಎಸ್‌ಡಿ)
- ಕ್ಯಾಮೆರಾ: ಟ್ರಿಪಲ್ ಕ್ಯಾಮೆರಾ- 50 MP ಹಿಂಬದಿಯ ಕ್ಯಾಮರಾ, LED ಫ್ಲಾಶ್, 2MP ಡೆಪ್ತ್ ಸೆನ್ಸಾರ್
- ಫ್ರಂಟ್ ಕ್ಯಾಮೆರಾ: 8MP ಸೆಲ್ಫಿ ಶೂಟರ್
- ಅಳತೆ: 63.63 × 75.58 × 8.53mm (ಹಸಿರು) / 8.39 cm (ಕಪ್ಪು)
- ತೂಕ: 185 ಗ್ರಾಂ
- ಬಣ್ಣಗಳು: Vibrant Green and Majestic Black
- ಬ್ಯಾಟರಿ: 5000mAh
- ಚಾರ್ಜಿಂಗ್: 15W ಸ್ಪೀಡ್ ಚಾರ್ಜಿಂಗ್
- ಕನೆಕ್ಟಿವಿಟಿ ಆಯ್ಕೆಗಳು: 5G (n1/n3/n5/n8/n28B/n40/n77/n78 ಬ್ಯಾಂಡ್‌ಗಳು), ಡ್ಯುಯಲ್ 4G VoLTE, Wi-Fi 802.11 ac (2.4GHz + 5GHz), ಬ್ಲೂಟೂತ್ 5.4, GPS, USB ಟೈಪ್-ಸಿ, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್
- ಆಡಿಯೊ ಜಾಕ್: 3.5 ಎಂಎಂ ಆಡಿಯೊ ಜಾಕ್
- ಪ್ರೊಟೆಕ್ಷನ್: ಧೂಳು ಮತ್ತು ಸ್ಪ್ಲಾಶ್ ನಿರೋಧಕ (IP64)
ಬಜೆಟ್ ಬೆಲೆಯಲ್ಲಿ ಎಂಟ್ರಿ
ಪ್ರತಿದಿನ ಮಾರುಕಟ್ಟೆಯಲ್ಲಿ ಹೊಸ ಮೊಬೈಲ್‌ಗಳು ಬಿಡುಗಡೆ ಆಗುತ್ತಲೇ ಇರುತ್ತವೆ. ತಂತ್ರಜ್ಞಾನ ಬೆಳೆದಂತೆಲ್ಲ ಕಂಪನಿಗಳು ಹೊಸ ಮಾದರಿಯ ಫೋನ್‌ಗಳನ್ನು ಪರಿಚಯಿಸುತ್ತಿವೆ. ಆದರೆ, ಮೊಬೈಲ್ ಎಂದಾಕ್ಷಣ ಥಟ್ಟನೆ ಅದರ ಬ್ರಾಂಡ್ ನೆನಪಾಗುತ್ತೆ. ಪ್ರಸ್ತುತ ಹಲವು ಸ್ಮಾರ್ಟ್‌ಫೋನ್ ಬ್ರಾಂಡ್‌ಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ. ಈ ಪೈಕಿ ವಿವೋ ಕೂಡ ಒಂದಾಗಿದೆ. ಇದೀಗ, ಮೊಬೈಲ್ ಪ್ರಿಯರು ಕುತೂಹಲದಿಂದ ಕಾಯುತ್ತಿದ್ದ ವಿವೋ T3 ಲೈಟ್ 5G ಅನ್ನು ಲಾಂಚ್ ಮಾಡಿದೆ. ಇದು ಬಜೆಟ್ ಬೆಲೆಯಲ್ಲಿ ಎಂಟ್ರಿ ಕೊಟ್ಟಿದೆ.


Click it and Unblock the Notifications








