Home
ಮೊಬೈಲ್

Vivo T3 Pro 5G ಬಿಡುಗಡೆ ದಿನಾಂಕ ಘೋಷಣೆ; ಕಮ್ಮಿ ಬೆಲೆ.. ರಾಶಿ ಫೀಚರ್ಸ್‌!

ವಿವೋ ತನ್ನ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ವಿವೋ (Vivo) ಕಂಪನಿಯು ಶೀಘ್ರದಲ್ಲೇ ಹೊಸ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಮುಂಬರುವ ನೂತನ ಫೋನ್ ವಿವೋ T3 ಪ್ರೊ 5G (Vivo T3 Pro 5G) ಎಂಬ ಹೆಸರಿನಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಇದು ಈಗಾಗಲೇ ಮೊಬೈಲ್‌ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ. ಈ ಮಧ್ಯೆಯೇ, ಕಂಪನಿಯು ವಿವೋ T3 ಪ್ರೊ 5G ಫೋನಿನ ಬಿಡುಗಡೆ ದಿನಾಂಕವನ್ನು ಬಹಿರಂಗ ಪಡಿಸಿದೆ.

ಹೌದು, ಚೀನಾದ ಟೆಕ್ ಕಂಪನಿ ವಿವೋ ತನ್ನ 'T' ಸರಣಿಯಲ್ಲಿ ಹೊಸ ಸ್ಮಾರ್ಟ್‌ಫೋನ್ ವಿವೋ T3 ಪ್ರೊ 5G ಅನ್ನು ಪರಿಚಯಿಸಲಿದೆ. ಇದನ್ನು ಆಗಸ್ಟ್ 27 ರಂದು ಮಧ್ಯಾಹ್ನ 12 ಗಂಟೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಕಂಪನಿಯು ತನ್ನ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಮತ್ತು ಅಧಿಕೃತ ವೆಬ್‌ಸೈಟ್‌ನಲ್ಲಿ ಫೋನ್ ಬಿಡುಗಡೆ ದಿನಾಂಕವನ್ನು ಖಚಿತಪಡಿಸಿದೆ. ಬನ್ನಿ, ಈ ಹೊಸ ಫೋನಿನ ನಿರೀಕ್ಷಿತ ಬೆಲೆ ಮತ್ತು ಫೀಚರ್ಸ್‌ಗಳನ್ನು ತಿಳಿಯೋಣ.

Vivo T3 Pro 5G ಬಿಡುಗಡೆ ದಿನಾಂಕ ಘೋಷಣೆ; ಕಮ್ಮಿ ಬೆಲೆ.. ರಾಶಿ ಫೀಚರ್ಸ್‌!

ಆರಂಭಿಕ ಬೆಲೆ 20,000 ರೂ.!

ಕಂಪನಿಯು ಹಂಚಿಕೊಂಡ ಮಾಹಿತಿಯ ಪ್ರಕಾರ, ಈ ಫೋನ್ 3D ಕರ್ವ್ಡ್ ಡಿಸ್ಪ್ಲೇಯನ್ನು ಹೊಂದಿರುತ್ತದೆ. ಸ್ಮಾರ್ಟ್‌ಫೋನ್ ಕಂಪನಿಯ ಐ ಪ್ರೊಟೆಕ್ಷನ್ ಫೀಚರ್, ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 7 ಜನ್ 3 ಚಿಪ್‌ಸೆಟ್ ಮತ್ತು 80W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5500mAh ಬ್ಯಾಟರಿಯನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದು 8GB RAM ಸ್ಟೋರೇಜ್‌ ಆಯ್ಕೆಯ ಒಳಗೊಂಡಿರಲಿದೆ. ಇದರ ಆರಂಭಿಕ ಬೆಲೆ 20,000 ರೂಪಾಯಿ ಎಂದು ಹೇಳಲಾಗುತ್ತಿದೆ.

50 ಮೆಗಾಪಿಕ್ಸೆಲ್ ಕ್ಯಾಮೆರಾ ಖಚಿತ!

ಟೀಸರ್‌ನಲ್ಲಿ ಕಂಡುಬರುವ ಸ್ಮಾರ್ಟ್‌ಫೋನ್ ಸ್ಮಾರ್ಟ್‌ಫೋನ್‌ನ ಹಿಂಭಾಗದ ಪ್ಯಾನೆಲ್ ಸಸ್ಯಾಹಾರಿ ಲೆದರ್ ಫಿನಿಶ್ ಆಗಿರುತ್ತದೆ ಎಂದು ತೋರಿಸುತ್ತದೆ. ಇಂದು (ಆಗಸ್ಟ್ 20) ಸ್ಮಾರ್ಟ್‌ಫೋನ್ ವಿನ್ಯಾಸ, ಆಗಸ್ಟ್ 21 ರಂದು ಪ್ರೊಸೆಸರ್ ವಿವರಗಳು, ಆಗಸ್ಟ್ 23 ರಂದು ಕ್ಯಾಮೆರಾ ವಿವರಗಳು ಮತ್ತು ಆಗಸ್ಟ್ 26 ರಂದು ಬ್ಯಾಟರಿ ವಿವರಗಳನ್ನು ಹಂಚಿಕೊಳ್ಳುವುದಾಗಿ ಕಂಪನಿ ತಿಳಿಸಿದೆ. ಮೂಲಗಳ ಪ್ರಕಾರ, ವಿವೋ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಸಪೋರ್ಟ್‌ ಜೊತೆಗೆ 50 ಮೆಗಾ ಪಿಕ್ಸೆಲ್ ಮುಖ್ಯ ಕ್ಯಾಮೆರಾ ಪಡೆದಿರಲಿದೆ.

ಈ ಸುದ್ದಿ ಓದಿದ್ದೀರಾ?: ಬರ್ತಿದೆ ಹೊಸ OnePlus ಫೋನ್: 50MP ಕ್ಯಾಮೆರಾ.. 5500mAh ಬ್ಯಾಟರಿ ಫಿಕ್ಸ್! ಬೆಲೆ ನೋಡಿ

ವಿವೋ T3 ಪ್ರೊ 5G ಫೋನಿನ ನಿರೀಕ್ಷಿತ ಫೀಚರ್ಸ್‌

ಡಿಸ್ಪ್ಲೇ: ವಿವೋ T3 ಪ್ರೊ 5G ಸ್ಮಾರ್ಟ್‌ಫೋನ್ 6.78 ಇಂಚಿನ ಪೂರ್ಣ HD + AMOLED ಬಾಗಿದ ಡಿಸ್ಲ್ಪೇಯನ್ನು ಹೊಂದಿರಲಿದೆ. ಇದು120Hz ರಿಫ್ರೆಶ್ ದರದೊಂದಿಗೆ 4500 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್ ಮತ್ತು 2400X1080 ಪಿಕ್ಸೆಲ್‌ ರೆಸಲ್ಯೂಶನ್ ಒಳಗೊಂಡಿರಲಿದೆ.

ಪ್ರೊಸೆಸರ್: ವಿವೋ T3 ಪ್ರೊ 5G ಫೋನ್ Qualcomm Snapdragon 7 Gen 3 ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದು ಆಂಡ್ರಾಯ್ಡ್ 14 ಆಧಾರಿತ ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ.

ಸ್ಟೋರೇಜ್: ಈ ವಿವೋ T3 ಪ್ರೊ 5G ಮೊಬೈಲ್ 8GB RAM ಜೊತೆಗೆ 128GB ಮತ್ತು 256GB ಸ್ಟೋರೇಜ್‌ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ.

ಕ್ಯಾಮೆರಾ: ಈ ಫೋನಿನ ಪ್ರಮುಖ ಆಕರ್ಷಣೆ ಎಂದರೆ ಕ್ಯಾಮೆರಾ ಸೆಟಪ್. ಇದು ಟ್ರಿಪಲ್ ಕ್ಯಾಮೆರಾ ರಚನೆಯನ್ನು ಹೊಂದಿರಲಿದೆ. ವಿವೋ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಸಪೋರ್ಟ್‌ ಜೊತೆಗೆ 50MP (ಸೋನಿ IMX 882) ಮುಖ್ಯ ಕ್ಯಾಮೆರಾ ಇರಲಿದೆ. 8MP ಮತ್ತು 2MPಯ Sony IMX882 ಕ್ಯಾಮೆರಾ ಲಭ್ಯವಿರುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 32MP ಫ್ರಂಟ್ ಕ್ಯಾಮೆರಾವನ್ನು ಇರುತ್ತದೆ.

ಬ್ಯಾಟರಿ: ವಿವೋ T3 ಪ್ರೊ 5G ಸ್ಮಾರ್ಟ್‌ಫೋನ್ 5500mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆಯಬಹುದು. ಇದು 80W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುವ ಸಾಧ್ಯತೆಯಿದೆ.

Best Mobiles in India

English summary
Vivo T3 Pro India Launch Confirmed on August 27: Know Expected Specs and more Details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+