Vivo T3 Ultra ಅಬ್ಬರಿಸಲು ಸಿದ್ಧ: 50MP ಸೆಲ್ಫಿ ಕ್ಯಾಮೆರಾ, 5500mAh ಬ್ಯಾಟರಿ.. ಬೆಲೆ ನೋಡಿ
Vivo T3 Ultra 5G: ವಿವೋ ಪ್ರಿಯರಿಗೆ ನಾಳೆ ಸಂಭ್ರಮದ ದಿನ. ಭಾರತದಲ್ಲಿ ವಿವೋನ ಹೊಸ 5G ಫೋನ್ ಬಿಡುಗಡೆಯಾಗಲಿದೆ. ಹೌದು, ವಿವೋ (Vivo) ಕಂಪನಿಯು ತನ್ನ ನೂತನ ಮೊಬೈಲ್ ವಿವೋ T3 ಅಲ್ಟ್ರಾ 5G (Vivo T3 Ultra 5G) ಅನ್ನು ನಾಳೆ (ಸೆಪ್ಟೆಂಬರ್ 12) ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಬಿಡುಗಡೆಗೂ ಮೊದಲೇ, ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿರುವ ಮೈಕ್ರೋಸೈಟ್ ಮುಂಬರುವ ಈ ಸ್ಮಾರ್ಟ್‌ಫೋನಿನ ಹಲವು ಪ್ರಮುಖ ವಿವರಗಳನ್ನು ಖಚಿತಪಡಿಸಿದೆ. ಇದೀಗ, ಈ ಫೋನಿನ ಕ್ಯಾಮೆರಾ ಮತ್ತು ಡಿಸ್ಪ್ಲೇ ವಿವರ ದೃಢೀಕರಿಸಲಾಗಿದೆ.
ಹೌದು, ವಿವೋ T3 ಅಲ್ಟ್ರಾ 5G ಫೋನಿನ ಕ್ಯಾಮೆರಾ, ಡಿಸ್ಪ್ಲೇ ವಿವರಗಳನ್ನು ಬಹಿರಂಗಪಡಿಸಲಾಗಿದೆ. ಬಿಡುಗಡೆಗೆ ಸಜ್ಜಾಗಿರುವ ವಿವೋ T3 ಅಲ್ಟ್ರಾ 5G ಮೊಬೈಲ್ 50 ಮೆಗಾಪಿಕ್ಸೆಲ್ ಸೋನಿ IMX921 ಮುಖ್ಯ ಕ್ಯಾಮೆರಾವನ್ನು ಹೊಂದಿರಲಿದೆ. ಇದು OIS ಮತ್ತು 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್ ಅನ್ನು ಬೆಂಬಲಿಸುತ್ತದೆ.

ಇದೇ ಕ್ಯಾಮೆರಾ ವಿವೋ V40 ಪ್ರೊ (Vivo V40 Pro) ನಲ್ಲಿ ಪ್ರಾಥಮಿಕ ಸ್ನ್ಯಾಪರ್ ಆಗಿ ಲಭ್ಯವಿದೆ. ಇದಲ್ಲದೇ ವಿವೋ T3 ಅಲ್ಟ್ರಾ ಫೋನ್ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 50 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿರಲಿದೆ. ಎರಡೂ 50 ಮೆಗಾಪಿಕ್ಸೆಲ್ ಕ್ಯಾಮೆರಾಗಳು 60fps 4K ವಿಡಿಯೋ ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತವೆ. ಈ ಫೋನಿನ ಇನ್ನಿತರ ವೈಶಿಷ್ಟ್ಯಗಳನ್ನು ತಿಳಿಯೋಣ ಬನ್ನಿ.
ವಿವೋ T3 ಅಲ್ಟ್ರಾ 5G ಫೋನಿನ ಫೀಚರ್ಸ್
ಡಿಸ್ಲ್ಪೇ: ವಿವೋ T3 ಅಲ್ಟ್ರಾ 5G ಮೊಬೈಲ್ 6.78 ಇಂಚಿನ 3D ಬಾಗಿದ 1.5K AMOLED ಡಿಸ್ಪ್ಲೇಯನ್ನು ಹೊಂದಿರುತ್ತದೆ. ಇದು 4500 ನಿಟ್ಸ್‌ಗಳ ಗರಿಷ್ಠ ಬ್ರೈಟ್‌ನೆಸ್, 2800 x 1260 ಪಿಕ್ಸೆಲ್ ರೆಸಲ್ಯೂಶನ್, 120Hz ರಿಫ್ರೆಶ್ ರೇಟ್, P3 ಸಿನಿಮಾ ಗ್ರೇಡ್ ಕಲರ್ ಗ್ಯಾಮಟ್ ಮತ್ತು HDR 10+ ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ.
ಪ್ರೊಸೆಸರ್: ವಿವೋ T3 ಅಲ್ಟ್ರಾ 5G ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9200 ಪ್ಲಸ್ SoC ಚಿಪ್‌ಸೆಟ್ ಅನ್ನು ಹೊಂದಿರಲಿದೆ. ಈ ಫೋನ್ 8GB + 256GB ಮತ್ತು 12GB + 256GB ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಫೋನ್ 12GB ವರೆಗಿನ ವರ್ಚುವಲ್ RAM ಅನ್ನು ಸಹ ಹೊಂದಿರಲಿದೆ.
ಈ ಸುದ್ದಿ ಓದಿದ್ದೀರಾ?: ಖುಷಿ ಸುದ್ದಿ: Lava Blaze Curve 5G ಬೆಲೆ ಕುಸಿತ: 2,500 ಡಿಸ್ಕೌಂಟ್.. ಜೊತೆಗೆ ಆಫರ್ ಕೂಡ ಸಿಗುತ್ತೆ

ಬ್ಯಾಟರಿ: ವಿವೋ T3 ಅಲ್ಟ್ರಾ 5G ಮೊಬೈಲ್ 5500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಈ ದೊಡ್ಡ ಬ್ಯಾಟರಿಯನ್ನು ಚಾರ್ಜ್ ಮಾಡಲು 80W ವೇಗದ ಚಾರ್ಜಿಂಗ್ ಸಪೋರ್ಟ್ ಇರಲಿದೆ. ಇದು ದೀರ್ಘ ಬ್ಯಾಕಪ್ ಮತ್ತು ತ್ವರಿತ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿದೆ.
ಇತರೆ ವೈಶಿಷ್ಟ್ಯಗಳು: ಮುಂಬರುವ ವಿವೋ T3 ಅಲ್ಟ್ರಾ 5G ಫೋನ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಪಡೆದಿದೆ. ಈ ಫೋನ್ ಡ್ಯುಯಲ್ ಸ್ಪೀಕರ್, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವನ್ನು ಸಹ ಹೊಂದಿರಲಿದೆ.
ವಿವೋ T3 ಅಲ್ಟ್ರಾ 5G ಫೋನಿನ ನಿರೀಕ್ಷಿತ ಬೆಲೆ
ವರದಿಯ ಪ್ರಕಾರ, ವಿವೋ T3 ಅಲ್ಟ್ರಾ 5G ಫೋನ್ ಮೂರು ಸ್ಟೋರೇಜ್ ರೂಪಾಂತರಗಳಲ್ಲಿ ಲಭ್ಯವಿರುತ್ತದೆ. 8GB + 128GB ಬೆಲೆ 30,999 ರೂ.ಗೆ ಬಿಡುಗಡೆಯಾಗಲಿದೆ. 8GB + 256GB ಬೆಲೆ 32,999 ರೂ. ಹಾಗೂ 12GB + 256GB ಬೆಲೆ 34,999 ರೂ.ಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಫೋನ್ ಫ್ರಾಸ್ಟ್ ಗ್ರೀನ್, ಲೂನಾ ಗ್ರೇ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದೆ.


Click it and Unblock the Notifications








