Home
ಮೊಬೈಲ್

'ವಿವೋ U 1' ಎಂಟ್ರಿ ಲೆವೆಲ್ ಫೋನ್ ರಿಲೀಸ್‌ಗೆ ರೆಡಿ!.4,030mAh ಬ್ಯಾಟರಿ ಶಕ್ತಿ!

ವಿವೋ ಕಂಪನಿಯು ಈ ವರ್ಷದ ಆರಂಭದಲ್ಲಿ ಯು ಸರಣಿಯಲ್ಲಿ 'ವಿವೋ ಯು 1' ಹೆಸರಿನ ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿತ್ತು. ಆದರೆ ಈ ಸ್ಮಾರ್ಟ್‌ಪೋನ್‌ ಭಾರತದಲ್ಲಿ ರಿಲೀಸ್‌ ಆಗಿರಲಿಲ್ಲ. ಇದೀಗ ಕಂಪನಿಯು ದೇಶಿ ಮಾರುಕಟ್ಟೆಗೆ ಈ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದು, ಹಲವು ವಿಶೇಷ ಫೀಚರ್ಸ್‌ಗಳನ್ನು ಹೊತ್ತು ಎಂಟ್ರಿಕೊಡಲಿದೆ.

'ವಿವೋ U 1' ಎಂಟ್ರಿ ಲೆವೆಲ್ ಫೋನ್ ರಿಲೀಸ್‌ಗೆ ರೆಡಿ!.4,030mAh ಬ್ಯಾಟರಿ ಶಕ್ತಿ!

ಹೌದು, ವಿವೋ ಸಂಸ್ಥೆಯ 'ವಿವೋ ಯು 1' ಸ್ಮಾರ್ಟ್‌ಫೋನ್ ಇದೇ ಮೇ ತಿಂಗಳಲ್ಲಿ ಭಾರತೀಯ ಮಾರುಕಟ್ಟೆಗೆ ಲಾಂಚ್ ಆಗಲಿದ್ದು, ಎರಡು ವೇರಿಯಂಟ್‌ಗಳಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ಈ ಸ್ಮಾರ್ಟ್‌ಫೋನಿನಲ್ಲಿ ಸ್ನ್ಯಾಪ್‌ಡ್ರಾಗನ್ 439 ಪ್ರೊಸೆಸರ್ ವೇಗದ ಕಾರ್ಯನಿರ್ವಹಿಸಲಿದ್ದು, ಜೊತೆಗೆ ಆಂಡ್ರಾಯ್ಡ್‌ ಓರಿಯೊ ಓಎಸ್‌ ಬೆಂಬಲವಿರಲಿದೆ. ಉತ್ತಮ ಪಿಕ್ಸಲ್ ಸಾಮರ್ಥ್ಯದಲ್ಲಿ ಡ್ಯುಯಲ್ ಕ್ಯಾಮೆರಾಗಳಿರಲಿವೆ.

'ವಿವೋ U 1' ಎಂಟ್ರಿ ಲೆವೆಲ್ ಫೋನ್ ರಿಲೀಸ್‌ಗೆ ರೆಡಿ!.4,030mAh ಬ್ಯಾಟರಿ ಶಕ್ತಿ!

ಫೋನಿನ ಡಿಸ್‌ಪ್ಲೇಯು ವಿಶಾಲವಾಗಿದ್ದು, ಇದರೊಂದಿಗೆ ಫಿಂಗರ್‌ ಸೆನ್ಸಾರ್‌, ಅಂಚುರಹಿತ ಡಿಸ್‌ಪ್ಲೇ ಆಯ್ಕೆಗಳು ಇರಲಿವೆ ಎನ್ನಲಾಗುತ್ತಿದೆ. ಫೋನಿನ ದೀರ್ಘ ಬಾಳಿಕೆಗಾಗಿ 4,030mAh ಬ್ಯಾಟರಿ ಶಕ್ತಿಯನ್ನು ಒದಗಿಸಲಾಗಿದೆ. ಹಾಗಾದರೇ ವಿವೋ ಯು1 ಸ್ಮಾರ್ಟ್‌ಫೋನ್‌ ಇತರೆ ಯಾವೆಲ್ಲ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ

ಡಿಸ್‌ಪ್ಲೇ

ವಿವೋ ಯು 1 ಸ್ಮಾರ್ಟ್‌ಫೋನ್ 6.2 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿರಲಿದ್ದು, ಡಿಸ್‌ಪ್ಲೇಯ ಪಿಕ್ಸಲ್ ರೆಸಲ್ಯೂಶನ್‌ 1520 × 720 ಸಾಮರ್ಥ್ಯದಲ್ಲಿರಲಿದೆ. ಡಿಸ್‌ಪ್ಲೇಯ ಅನುಪಾತವು 19:9 ಆಗಿದ್ದು, ಸ್ಕ್ರೀನ್‌ನಿಂದ ಬಾಹ್ಯಬಾಡಿಯ ನಡುವಿನ ಅನುಪಾತ ಶೇ.88.6% ಆಗಿರಲಿದೆ. ತನ್ನ ವರ್ಗದಲ್ಲಿಯೇ ಉತ್ತಮ ಡಿಸ್‌ಪ್ಲೇ ಇದಾಗಿದೆ ಎನ್ನಬಹುದು.

ಪ್ರೊಸೆಸರ್

ಪ್ರೊಸೆಸರ್

ಆಕ್ಟಾಕೋರ್ ಸ್ನ್ಯಾಪ್‌ಡ್ರಾಗನ್ 439 ಪ್ರೊಸೆಸರ್ ಅನ್ನು ಹೊಂದಿರಲಿದ್ದು, ಫೋನ್ ಕಾರ್ಯವೈಖರಿಯು ವೇಗವಾಗಿರಲಿದೆ. ಇದರೊಂದಿಗೆ ಆಂಡ್ರಾಯ್ಡ್‌ ಓರಿಯೊ ಆಪರೇಟಿಂಗ್ ಸಿಸ್ಟಮ್ ಸಹ ಇದ್ದು, ಪ್ರೊಸೆಸರ್‌ಗೆ ಉತ್ತಮ, ಬೆಂಬಲ ನೀಡಲಿದೆ ಮತ್ತು ಫೋನ್‌ನಲ್ಲಿ ಆಪರೇಟಿಂಗ್‌ನಲ್ಲಿ ಹೊಸ ಫೀಚರ್ಸ್‌ಗಳು ಇರಲಿವೆ.

ಮೆಮೊರಿ

ಮೆಮೊರಿ

ವಿವೋ ಯು 1 ಸ್ಮಾರ್ಟ್‌ಫೋನ್ ದೇಶಿಯ ಮಾರುಕಟ್ಟೆಗೆ ಎರಡು ವೇರಿಯಂಟ್‌ಗಳಲ್ಲಿ ಎಂಟ್ರಿಕೊಡಲಿದೆ. 3GB RAM + 64GB ಆಂತರಿಕ ಸಂಗ್ರಹ ಸಾಮರ್ಥ್ಯದ ಮತ್ತು 4GB RAM + 64GB ಸಂಗ್ರಹ ಸ್ಥಳಾವಕಾಶದ ವೇರಿಯಂಟ್ ಆಯ್ಕೆಗಳಲ್ಲಿ ಲಭ್ಯವಾಗಲಿವೆ. ಚೀನಾದಲ್ಲಿ ಈ ಮಾದರಿಯ ಫೋನ್ ಮೂರು ವೇರಿಯಂಟ್‌ನಲ್ಲಿ ಆಯ್ಕೆಯನ್ನು ಹೊಂದಿದೆ.

ಕ್ಯಾಮೆರಾ

ಕ್ಯಾಮೆರಾ

ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಡ್ಯುಯಲ್ ರೇರ ಕ್ಯಾಮೆರಾ ಹೊಂದಿದ್ದು, ಪ್ರಾಥಮಿಕ ಕ್ಯಾಮೆರಾವು f/2.2 ಅಪರ್ಚರ್ ನೊಂದಿಗೆ 13 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿರಲಿದೆ ಹಾಗೂ ಸೆಕೆಂಡರಿ ಕ್ಯಾಮೆರಾವು f/2.4 ಅಪರ್ಚರ್ ನೊಂದಿಗೆ ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿ ಇರಲಿದೆ.

ಬ್ಯಾಟರಿ

ಬ್ಯಾಟರಿ

4,030mAh ಸಾಮರ್ಥ್ಯದ ಶಕ್ತಿಯುತ ಬ್ಯಾಟರಿ ಬ್ಯಾಟರಿಯನ್ನು ನೀಡಲಾಗಲಿದ್ದು, ಒಮ್ಮೆ ಚಾರ್ಜ್ ಮಾಡಿದರೇ ಒಂದು ದಿನ ಸಂಪೂರ್ಣ ಬಾಳಿಕೆ ಒದಗಿಸಲಿದೆ. ಫಾಸ್ಟ್‌ ಚಾರ್ಜ್‌ರ ಸೌಲಭ್ಯವನ್ನು ನೀಡಲಿರುವ ಬಗ್ಗೆ ಮಾಹಿತಿ ಇಲ್ಲ. ತನ್ನ ವರ್ಗದಲ್ಲಿಯೇ ಇದು ಬೆಸ್ಟ್ ಬ್ಯಾಟರಿ ಆಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ವಿವೋ ಯು 1 ಸ್ಮಾರ್ಟ್‌ಫೋನ್ ಕಂಪನಿಯ ಆರಂಭಿಕ ಸ್ಮಾರ್ಟ್‌ಫೋನ್ ಎಂದೆನಿಸಿಕೊಳ್ಳಲಿದ್ದು, ಈ ಫೋನ್ ಇದೇ ಮೇ ತಿಂಗಳಲ್ಲಿ ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಎರಡು ವೇರಿಯಂಟ್‌ಗಳಲ್ಲಿ ಲಭ್ಯವಾಗಲಿರುವ ಈ ಸ್ಮಾರ್ಟ್‌ಫೋನ್ ಆರಂಭಿಕ ಬೆಲೆಯು 6,490ರೂ.ಗಳು ಇರಬಹುದು ಎಂದು ಊಹಿಸಲಾಗಿದೆ.

Best Mobiles in India

English summary
Vivo U1 with SD439 SoC & 13MP Dual Cameras to Launch in India for Rs 6,490.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+