ದೇಶಿಯ ಮಾರುಕಟ್ಟೆ ಪ್ರವೇಶಿಸಲಿದೆ 'ವಿವೋ ವಿ15 ಪ್ರೊ' 8GB RAM ವೇರಿಯಂಟ್!
ದೇಶದಲ್ಲಿ ಮಿಂಚುತ್ತಿರುವ ಚೀನಾ ಮೂಲದ ಸ್ಮಾರ್ಟ್‌ಫೋನ್ ಕಂಪನಿಗಳಲ್ಲಿ ಒಂದಾಗಿರುವ 'ವಿವೋ' ಇತ್ತೀಚಿಗೆ ವಿ15 ಪ್ರೋ ಸ್ಮಾರ್ಟ್‌ಫೋನ್ ಮೂಲಕ ಭಾರಿ ಸದ್ದು ಮಾಡಿದೆ. ದೇಶಿಯ ಮೊಬೈಲ್ ಮಾರುಕಟ್ಟೆಯಲ್ಲಿ ಈಗಾಗಲೇ 'ವಿ15 ಪ್ರೊ' ಸ್ಮಾರ್ಟ್‌ಫೋನಿನ 6GB RAM ವೇರಿಯಂಟ್ ಅನ್ನು ಪರಿಚಯಿಸಿರುವ ಕಂಪನಿಯು ಈಗ 8GB RAM ಸಾಮರ್ಥ್ಯದ ವೇರಿಯಂಟ್ ಸ್ಮಾರ್ಟ್‌ಫೋನ್ ಅನ್ನು ರಿಲೀಸ್ ಮಾಡಲು ಸಜ್ಜಾಗಿದೆ.

ಹೌದು, ವಿವೋ ಕಂಪನಿಯು ತನ್ನ ಹೈ ಎಂಡ್ ಮಾದರಿಯ ವಿ15 ಪ್ರೊ ಸ್ಮಾರ್ಟ್‌ಪೋನಿನ 8GB RAM ವೇರಿಯಂಟ್‌ನಲ್ಲಿ ಲಾಂಚ್ ಮಾಡಲಿದ್ದು, ಈಗಾಗಲೇ ವಿ15 ಪ್ರೊ ಪಾಪ್‌ಅಪ್ ಸೆಲ್ಫಿ ಕ್ಯಾಮೆರಾದಿಂದ ಸಖತ್ ಹೈಲೈಟ್ ಆಗಿದೆ. ಇನ್ನೂ ಹೊಸ ವೇರಿಯಂಟ್ ಈ ಫೋನಿಗೆ ಮತ್ತಷ್ಟು ಬಲ ತಂದುಕೊಡಲಿದ್ದು, ಮಲ್ಟಿಟಾಸ್ಕ್ ಕೆಲಸಗಳನ್ನು ವೇಗವಾಗಿ ನಿರ್ವಹಿಸಲು ಪೂರ್ಣ ಬೆಂಬಲ ನೀಡಲಿದೆ. ಹಾಗಾದರೇ ವಿವೋ ವಿ15 ಪ್ರೊ ಸ್ಮಾರ್ಟ್‌ಫೋನ್ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ಮತ್ತು ರಚನೆ
ವಿವೋ ವಿ 15 ಪ್ರೋ ಸ್ಮಾರ್ಟ್‌ಫೋನ್ 2340×1080 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ ಸೂಪರ್ AMOLEDನ 6.4 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಕ್ವಾಲಿಟಿಯ ಡಿಸ್‌ಪ್ಲೇಯನ್ನು ಹೊಂದಿದ್ದು, ಇದರೊಂದಿಗೆ ಡಿಸ್‌ಪ್ಲೇಯಲ್ಲಿಯೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಸೌಲಭ್ಯವನ್ನು ಹೊಂದಿದೆ. ವಿ 15 ಪ್ರೋ ಸ್ಮಾರ್ಟ್‌ಫೋನ್‌ನಿನ ಬಾಹ್ಯರಚನೆ ಸುಂದರವಾಗಿದ್ದು, ಗ್ಲಾಸಿ ಲುಕ್ ನಲ್ಲಿ ಕಂಗೊಳಿಸುತ್ತದೆ.

48 ಮೆಗಾಪಿಕ್ಸಲ್ ಕ್ಯಾಮೆರಾ
ವಿವೋ ಕಂಪನಿಯು ಮೊದಲ ಬಾರಿಗೆ 48 ಮೆಗಾಪಿಕ್ಸಲ್ ಸಾಮರ್ಥ್ಯ ಇರುವ ಕ್ಯಾಮೆರಾವನ್ನು ಪರಿಚಯಿಸಿದ್ದು, ಹಿಂಭಾಗದಲ್ಲಿ ಒಟ್ಟು ಮೂರು ಕ್ಯಾಮೆರಾಗಳಿವೆ. ಮುಖ್ಯ ಕ್ಯಾಮೆರಾ f/1.8 ಅಪರ್ಚರ್ ನೊಂದಿಗೆ ಕ್ವಾಡ್ ಪಿಕ್ಸಲ್ ಸೆನ್ಸಾರ್‌ನ 48ಮೆಗಾಪಿಕ್ಸಲ್, ಸೆಂಕೆಂಡರಿ ಕ್ಯಾಮೆರಾ 8ಮೆಗಾಪಿಕ್ಸಲ್ ಮತ್ತು ಮೂರನೆ ಕ್ಯಾಮೆರಾ 5 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿದೆ.

32 ಮೆಗಾಪಿಕ್ಸಲ್ ಸೆಲ್ಫೀ ಕ್ಯಾಮೆರಾ
ಸ್ಮಾರ್ಟ್‌ಫೋನ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ 32 ಮೆಗಾಪಿಕ್ಸಲ್ ಸಾಮರ್ಥ್ಯದ ಸೆಲ್ಫೀ ಕ್ಯಾಮೆರಾವನ್ನು ವಿವೋ ಪರಿಚಯಿಸಿದ್ದು, f/2.0 ಅಪರ್ಚರ್ ಹೊಂದಿದೆ. ಈ POP UP ಸೆಲ್ಫೀ ಕ್ಯಾಮೆರಾ ಆಂತರಿಕ ರಚನೆಯನ್ನು ಹೊಂದಿದ್ದು, ಸ್ಮಾರ್ಟ್‌ಫೋನಿನ ಹೊರಗೆ ಸೆಲ್ಫಿ ಕ್ಯಾಮೆರಾ ಕಾಣಿಸುವುದಿಲ್ಲ. ಆದರೆ ಸೆಲ್ಫೀ ಸೆರೆಹಿಡಿಯುವಾಗ ಮಾತ್ರ ಕ್ಯಾಮೆರಾ ತೆರೆದುಕೊಳ್ಳುತ್ತದೆ.

ಪ್ರೊಸೆಸರ್
ಕ್ವಾಲ್ಕಂ ಸ್ನಾಪ್‌ಡ್ರಾಗನ್ 675 ಉತ್ತಮ ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದ್ದು, ಇದರೊಂದಿಗೆ 8GB RAM ಸಾಮರ್ಥ್ಯ ಮತ್ತು 128 GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಸಹ ಹೊಂದಿದೆ. ಹೆಚ್ಚು RAM ಬೇಡುವ ಕೆಲಸಗಳು ಮತ್ತು ಹೈ ಎಂಡ್ ಗೇಮ್ಸ್‌ಗಳನ್ನು ಸುಲಭವಾಗಿ ಯಾವುದೇ ಅಡೆ ತಡೆ ಇಲ್ಲದೇ ಆಡಲು ಸಹಕರಿಸುತ್ತದೆ.

ಬ್ಯಾಟರಿ
ವಿವೋ ವಿ15 ಪ್ರೋ ಸ್ಮಾರ್ಟ್‌ಫೋನ್ 3700mAh ಸಾಮರ್ಥ್ಯದ ಪವರ್‌ಫುಲ್ ಬ್ಯಾಟರಿಯನ್ನು ಹೊಂದಿದ್ದು, ಒಂದು ಭಾರಿ ಫೋನಿನ ಬ್ಯಾಟರಿಯನ್ನು ಫುಲ್ ಚಾರ್ಜ್ ಮಾಡಿದರೇ ನಿರಂತರ ಹತ್ತು ಗಂಟೆ ಬಾಳಿಕೆ ಬರುವ ಶಕ್ತಿಯನ್ನು ಹೊಂದಿದೆ. ಇದರೊಂದಿಗೆ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಲಾಗಿದ್ದು, ವೇಗವಾಗಿ ಫೋನ್ ಚಾರ್ಜ್ ಪಡೆದುಕೊಳ್ಳುತ್ತದೆ.

ಬೆಲೆ ಮತ್ತು ಲಭ್ಯತೆ
ವಿವೋ ವಿ15 ಪ್ರೊ 8GB RAM ಸಾಮರ್ಥ್ಯದ ವೇರಿಯಂಟ್ ಈಗಾಗಲೇ ಮಲೇಷಿಯಾದಲ್ಲಿ ರಿಲೀಸ್ ಆಗಿದೆ. ಈ ಹೈ ವೇರಿಯಂಟ್ ಅನ್ನು ಭಾರತೀಯ ಮಾರುಕಟ್ಟೆಗೂ ಪರಿಚಯಿಸಲು ಕಂಪನಿ ಮುಂದಾಗಿದ್ದು, ಶೀಘ್ರದಲ್ಲೇ ಲಾಂಚ್ ಆಗಲಿದೆ. ಈ ಸ್ಮಾರ್ಟ್‌ಫೋನ್ ಬೆಲೆಯು ಸುಮಾರು 30,000ರೂ.ಗಳ ಒಳಗಡೆ ಇರಲಿದೆ ಎಂದು ಅಂದಾಜಿಸಲಾಗಿದೆ.


Click it and Unblock the Notifications








