TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಪ್ರಸ್ತುತ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಭಾರೀ ಪೈಪೋಟಿ ಇದ್ದು, ಮೊಬೈಲ್ ಕಂಪನಿಗಳು ಹೊಸ ಹೊಸ ಫೀಚರ್ಸ್ ಗ್ರಾಹಕರಿಗೆ ಪರಿಚಯಿಸುತ್ತಲೆ ಸಾಗಿವೆ. ಇದೀಗ ಕಂಪನಿಗಳು ಹೈ ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳತ್ತ ಆಸಕ್ತಿ ತೋರಿಸುತ್ತಿದ್ದು, ಈಗಾಗಲೇ ಹಾನರ್, ಸೋನಿ, ನೋಕಿಯಾ ಮತ್ತು ಶಿಯೋಮಿ ಕಂಪನಿಗಳು ತಮ್ಮ ಹೈ ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳನ್ನು ಘೋಷಿಸಿವೆ. ಈ ಸಾಲಿಗೆ 'ವೀವೊ' ಹೊಸ ಸೇರ್ಪಡೆ.
ಹೌದು, ವೀವೊ ಕಂಪನಿಯು ವಿ15 ಪ್ರೋ ಹೆಸರಿನ ಹೊಸ ಸ್ಮಾರ್ಟ್‌ಫೋನ್ ಒಂದನ್ನು ಗ್ರಾಹಕರಿಗೆ ಪರಿಚಯಿಸಲು ತಯಾರಾಗಿದ್ದು, ಇದೇ ಫೆಬ್ರುವರಿಯಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ ಎನ್ನಲಾಗುತ್ತಿದೆ. ಸದ್ಯದ ಟ್ರೆಂಡ್‌ನಂತೆ ವೀವೊ ವಿ 15 ಸ್ಮಾರ್ಟ್‌ಫೋನ್ 48 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾವನ್ನು ಹೊಂದಿರಲಿದ್ದು, ಮಾರುಕಟ್ಟೆಯಲ್ಲಿ, ಹಾನರ್ ವ್ಯೂ 20 ಮತ್ತು ಶಿಯೋಮಿಯ ರೆಡ್ಮಿ ನೋಟ್ 7 ಫ್ರೋ ಸ್ಮಾರ್ಟ್‌ಫೋನ್‌ಗಳಿಗೆ ಎದುರಾಳಿಯಾಗಲಿದೆ ಎಂದು ಹೇಳಲಾಗುತ್ತಿದೆ.
ಹಲವು ವಿಶೇಷತೆಗಳನ್ನು ಒಳಗೊಂಡು ಮಾರುಕಟ್ಟೆ ಪ್ರವೇಶಿಸುತ್ತಿರುವ ವೀವೊ ವಿ15 ಸ್ಮಾರ್ಟ್‌ಫೋನ್ ಅತ್ಯುತ್ತಮ ಕ್ಯಾಮೆರಾ ಫೀಚರ್ ನೊಂದಿಗೆ ಡಿಸ್‌ಪ್ಲೇಯಲ್ಲಿ ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿರಲಿದೆ. ಇದರೊಂದಿಗೆ ವೀವೊ ವಿ 15 ಸ್ಮಾರ್ಟ್‌ಫೋನ್ ಏನೆಲ್ಲಾ ವಿಶೇಷ ಫೀಚರ್ಸ್‌ಗಳನ್ನು ಹೊಂದಿರಲಿದೆ ಎನ್ನುವುದನ್ನು ತಿಳಿಯಲು ಮುಂದೆ ಓದಿರಿ.
48ಮೆಗಾಪಿಕ್ಸಲ್ ಕ್ಯಾಮೆರಾ.!
ವೀವೊ ತನ್ನ ಹೊಸ ವಿ 15 ಪ್ರೋ ಸ್ಮಾರ್ಟ್‌ಫೋನ್ ಮೂಲಕ ಮೊದಲ ಬಾರಿಗೆ 48 ಮೆಗಾಪಿಕ್ಸಲ್ ಸಾಮರ್ಥ್ಯ ಇರುವ ಕ್ಯಾಮೆರಾವನ್ನು ಪರಿಚಯಿಸುತ್ತಿದೆ. ಹಿಂಭಾಗದಲ್ಲಿ ಒಟ್ಟು ಮೂರು ಕ್ಯಾಮೆರಾಗಳಿದ್ದು, ಮುಖ್ಯ ಕ್ಯಾಮೆರಾ 48ಮೆಗಾಪಿಕ್ಸಲ್, ಸೆಂಕೆಂಡರಿ ಕ್ಯಾಮೆರಾ 8ಮೆಗಾಪಿಕ್ಸಲ್ ಮತ್ತು ತ್ರಿತಿಯ ಕ್ಯಾಮೆರಾ 5 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿರಲಿದೆ ಎಂದು ಹೇಳಲಾಗುತ್ತಿದೆ.
POP UP 32 ಮೆಗಾಪಿಕ್ಸಲ್ ಸೆಲ್ಫೀ ಕ್ಯಾಮೆರಾ.!
ಸ್ಮಾರ್ಟ್‌ಫೋನ್‌ನಲ್ಲಿ ಮೊದಲ ಬಾರಿಗೆ 32ಮೆಗಾಪಿಕ್ಸಲ್ ಸಾಮರ್ಥ್ಯದ ಸೆಲ್ಫೀ ಕ್ಯಾಮೆರಾ ವೀವೊ ಪರಿಚಯಿಸುತ್ತಿದೆ. POP UP ಸೆಲ್ಫೀ ಕ್ಯಾಮೆರಾ ಇರಲಿದ್ದು, ಸೆಲ್ಫೀ ಕ್ಯಾಮೆರಾ ಬಾಹ್ಯವಾಗಿ ಕ್ಯಾಮೆರಾ ಕಾಣಿಸುವುದಿಲ್ಲ. ಆದರೆ ಸೆಲ್ಫೀ ಸೆರೆಹಿಡಿಯುವಾಗ ಮಾತ್ರ ಕ್ಯಾಮೆರಾ ತೆರೆದುಕೊಳ್ಳುತ್ತದೆ.
ಡಿಸ್‌ಪ್ಲೇ ಮತ್ತು ರಚನೆ
ವೀವೊ ವಿ 15 ಪ್ರೋಸ್ಮಾರ್ಟ್‌ಫೋನ್ ಸೂಪರ್ AMOLEDನ 6.4 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಕ್ವಾಲಿಟಿಯ ಡಿಸ್‌ಪ್ಲೇಯನ್ನು ಹೊಂದಿರಲಿದ್ದು, ಇದರೊಂದಿಗೆ ಡಿಸ್‌ಪ್ಲೇಯಲ್ಲಿಯೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಸೌಲಭ್ಯವನ್ನು ಹೊಂದಿರಲಿದೆ ಎನ್ನಲಾಗುತ್ತಿದೆ. ವಿ 15 ಪ್ರೋ ಸ್ಮಾರ್ಟ್‌ಫೋನ್‌ನಿನ ಬಾಹ್ಯರಚನೆ ಸುಂದರವಾಗಿದ್ದು, ಗ್ಲಾಸಿ ಲುಕ್ ನಲ್ಲಿ ಕಂಗೊಳಿಸುತ್ತದೆ.
ಪ್ರೊಸೆಸರ್
ಕ್ವಾಲ್ಕಂ ಸ್ನಾಪ್‌ಡ್ರಾಗನ್ 675 ಉತ್ತಮ ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿರಲಿದ್ದು, ಇದರೊಂದಿಗೆ 6GB RAM ಸಾಮರ್ಥ್ಯ ಮತ್ತು 128 GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಸಹ ಹೊಂದಿರಲಿದೆ ಎಂದು ಹೇಳಲಾಗುತ್ತಿದೆ. ಹೆಚ್ಚು RAM ಬೇಡುವ ಕೆಲಸಗಳು ಮತ್ತು ಹೈ ಎಂಡ್ ಗೇಮ್ಸ್‌ಗಳನ್ನು ಸುಲಭವಾಗಿ ಯಾವುದೇ ಅಡೆ ತಡೆ ಇಲ್ಲದೇ ಆಡಲು ಸಹಕರಿಸುತ್ತದೆ.
ಬೆಲೆ ಮತ್ತು ಲಭ್ಯತೆ.?
ವೀವೊ ವಿ 15 ಪ್ರೋ ಸ್ಮಾರ್ಟ್‌ಫೋನ್ ಇದೇ ಫೆಬ್ರುವರಿಯಲ್ಲಿ 20 ಮಾರುಕಟ್ಟೆಗೆ ಬರುವ ಸಾಧ್ಯತೆಗಳು ಹೆಚ್ಚಾಗಿದ್ದು, ಫೆಬ್ರುವರಿ 15 ರ ನಂತರ ಮುಂಗಡ ಬುಕ್ಕಿಂಗ್ ಪ್ರಕ್ರಿಯೇ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಇದರ ಬೆಲೆ ಸುಮಾರು 25,000ರೂ.ಗಳು ಎಂದು ಅಂದಾಜಿಸಲಾಗಿದೆ.