ವಿಶ್ವದ ಮೊದಲ 32MP ಸೆಲ್ಫಿ ಕ್ಯಾಮೆರಾ ಸ್ಮಾರ್ಟ್‌ಫೋನ್ ರಿಲೀಸ್!!
ಭಾರತೀಯ ಮಾರುಕಟ್ಟೆಯಲ್ಲಿ ಅನೇಕ ಚೀನಾ ಮೂಲದ ಸ್ಮಾರ್ಟ್‌ಫೋನ್ ಕಂಪನಿಗಳಿದ್ದು, ಅವುಗಳಲ್ಲಿ ತನ್ನ ಹೊಸತನದ ಫೀಚರ್ಸ್‌ಗಳಿಂದ ವಿಶೇಷವಾಗಿ ಗುರುತಿಸಿಕೊಂಡಿರುವ ವೀವೊ ಸ್ಮಾರ್ಟ್‌ಫೋನ್ ಕಂಪನಿ. ಇತ್ತೀಚಿಗೆ ಗ್ರಾಹಕರಲ್ಲಿ ಭಾರೀ ನಿರೀಕ್ಷೆಗಳನ್ನು ಹುಟ್ಟುಹಾಕಿದ್ದ ''ವಿ15 ಪ್ರೋ'' ಸ್ಮಾರ್ಟ್‌ಫೋನ್ ಇದೀಗ ಭಾರತದಲ್ಲಿ ರಿಲೀಸ್ ಆಗಿದ್ದು, ಇನ್ನೇನೂ ಕೆಲವೇ ದಿನಗಳಲ್ಲಿ ಗ್ರಾಹಕರ ಕೈಸೇರಲಿದೆ.

ಹೌದು, ವೀವೊ ವಿ15 ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಗೆ ಲಾಂಚ್ ಆಗಿದ್ದು, ಇಂದಿನಿಂದ (ಇದೇ ಫೆಬ್ರುವರಿ 20) ಪ್ರೀ ಬುಕ್ಕಿಂಗ್ ಆರಂಭಗೊಂಡಿದೆ. 6GB ಸಾಮರ್ಥ್ಯದ RAM ಮತ್ತು 128GB ಸಂಗ್ರಹ ಸಾಮರ್ಥ್ಯದ ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಮತ್ತು ಪಾಪ್ ಅಪ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಭಾರತದಲ್ಲಿ ಈ ಸ್ಮಾರ್ಟ್‌ಫೋನ್ ಬೆಲೆಯು 28,990ರೂ.ಗಳು ಆಫ್‌ಲೈನ್ ಮಾರುಕಟ್ಟೆಯಲ್ಲಿ ಮಾರ್ಚ್ 6ರ ನಂತರ ದೊರೆಯಲಿದೆ.

ಭಾರತಕ್ಕೆ ಎಂಟ್ರಿ ಪಡೆದಿರುವ 'ವೀವೊ ವಿ15 ಸ್ಮಾರ್ಟ್‌ಫೋನ್' 32 ಮೆಗಾಪಿಕ್ಸಲ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದ್ದು, ಇದರೊಂದಿಗೆ ಬ್ಯಾಕ್‌ಸೈಡ್‌ನಲ್ಲಿ 48 ಕ್ವಾಲಿಟಿ ಹುಣಮಟ್ಟದ ಅತ್ಯುತ್ತಮ ಸ್ಮಾರ್ಟ್‌ಫೋನ್ ಇದಾಗಿದ್ದು, ಬ್ಲೂ ಮತ್ತು ರೂಬಿ ರೆಡ್ ಎರಡು ಕಲರ್‌ಗಳ ಆಯ್ಕೆಗಳಲ್ಲಿ ಗ್ರಾಹಕರಿಗೆ ದೊರೆಯಲಿದ್ದು, ಹಾಗಾದರೇ ಈ ಸ್ಮಾರ್ಟ್‌ಫೋನ್ ಏನೆಲ್ಲಾ ಸ್ಪೆಷಲಿಟಿಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

48 ಮೆಗಾಪಿಕ್ಸಲ್ ಕ್ಯಾಮೆರಾ.!
ವೀವೊ ತನ್ನ ಹೊಸ ವಿ 15 ಪ್ರೋ ಸ್ಮಾರ್ಟ್‌ಫೋನ್ ಮೂಲಕ ಮೊದಲ ಬಾರಿಗೆ 48 ಮೆಗಾಪಿಕ್ಸಲ್ ಸಾಮರ್ಥ್ಯ ಇರುವ ಕ್ಯಾಮೆರಾವನ್ನು ಪರಿಚಯಿಸಿದೆ.. ಹಿಂಭಾಗದಲ್ಲಿ ಒಟ್ಟು ಮೂರು ಕ್ಯಾಮೆರಾಗಳಿದ್ದು, ಮುಖ್ಯ ಕ್ಯಾಮೆರಾ 48ಮೆಗಾಪಿಕ್ಸಲ್, ಸೆಂಕೆಂಡರಿ ಕ್ಯಾಮೆರಾ 8 ಮೆಗಾಪಿಕ್ಸಲ್ ಮತ್ತು ತ್ರಿತಿಯ ಕ್ಯಾಮೆರಾ 5 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿದೆ.

POP UP 32 ಮೆಗಾಪಿಕ್ಸಲ್ ಸೆಲ್ಫೀ ಕ್ಯಾಮೆರಾ.!
ಸ್ಮಾರ್ಟ್‌ಫೋನ್‌ನಲ್ಲಿ ಮೊದಲ ಬಾರಿಗೆ 32ಮೆಗಾಪಿಕ್ಸಲ್ ಸಾಮರ್ಥ್ಯದ ಸೆಲ್ಫೀ ಕ್ಯಾಮೆರಾ ವೀವೊ ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ POP UP ಸೆಲ್ಫೀ ಕ್ಯಾಮೆರಾ ಇರಲಿದ್ದು, ಸೆಲ್ಫೀ ಕ್ಯಾಮೆರಾ ಬಾಹ್ಯವಾಗಿ ಕ್ಯಾಮೆರಾ ಕಾಣಿಸುವುದಿಲ್ಲ. ಆದರೆ ಸೆಲ್ಫೀ ಸೆರೆ ಹಿಡಿಯುವಾಗ ಮಾತ್ರ ಕ್ಯಾಮೆರಾ ತೆರೆದುಕೊಳ್ಳುತ್ತದೆ.

ಡಿಸ್‌ಪ್ಲೇ ಮತ್ತು ರಚನೆ
ವೀವೊ ವಿ 15 ಪ್ರೋಸ್ಮಾರ್ಟ್‌ಫೋನ್ ಸೂಪರ್ AMOLEDನ 6.4 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಕ್ವಾಲಿಟಿಯ ಡಿಸ್‌ಪ್ಲೇಯನ್ನು ಹೊಂದಿರಲಿದ್ದು, ಇದರೊಂದಿಗೆ ಡಿಸ್‌ಪ್ಲೇಯಲ್ಲಿಯೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಸೌಲಭ್ಯವನ್ನು ಹೊಂದಿದೆ. ವಿವೋ ವಿ 15 ಪ್ರೋ ಸ್ಮಾರ್ಟ್‌ಫೋನ್‌ನಿನ ಬಾಹ್ಯ ರಚನೆ ಅತೀ ಸುಂದರವಾಗಿದ್ದು, ಸಂಪೂರ್ಣ ಗ್ಲಾಸಿ ಲುಕ್ ನಲ್ಲಿ ಕಂಗೊಳಿಸುತ್ತದೆ.

ಪ್ರೊಸೆಸರ್
ಕ್ವಾಲ್ಕಂ ಸ್ನಾಪ್‌ಡ್ರಾಗನ್ 675 ಉತ್ತಮ ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿರಲಿದ್ದು, ಇದರೊಂದಿಗೆ 6GB RAM ಸಾಮರ್ಥ್ಯ ಮತ್ತು 128 GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಸಹ ಹೊಂದಿದೆ. ಹೆಚ್ಚು RAM ಬೇಡುವ ಕೆಲಸಗಳು ಮತ್ತು ಹೈ ಎಂಡ್ ಗೇಮ್ಸ್‌ಗಳನ್ನು ಸುಲಭವಾಗಿ ಯಾವುದೇ ಅಡೆ ತಡೆ ಇಲ್ಲದೇ ಆಡಲು ಸಹಕರಿಸುತ್ತದೆ. ಅತ್ಯುತ್ತಮ ಕಾರ್ಯದಕ್ಷತೆ ಇದೆ.

ಬೆಲೆ ಮತ್ತು ಲಭ್ಯತೆ.
ಬಹುನಿರೀಕ್ಷಿತ ವೀವೊ ವಿ 15 ಪ್ರೋ ಸ್ಮಾರ್ಟ್‌ಫೋನ್ ಇಂದು ಫೆಬ್ರುವರಿ 20 ಆನ್‌ಲೈನ್ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದ್ದು, ಪ್ರೀ ಬುಕ್ಕಿಂಗ್ ಸಹ ಆರಂಭಿಸಿದೆ. ಇದೇ ಮಾರ್ಚ 6 ರ ನಂತರ ಆಫ್‌ಲೈನ್ ಮಾರಾಟ ಆರಂಭವಾಗುತ್ತದೆ. ಇದರ ಬೆಲೆ 28,990 ರೂ.ಗಳು ಆಗಿವೆ.


Click it and Unblock the Notifications








