Vivo: ನಿಮ್ಮಲ್ಲಿ ಈ ವಿವೋ ಫೋನ್ ಇದೆಯಾ? ಈಗಲೇ ಈ ಪ್ರಯೋಜನ ಪಡೆದುಕೊಳ್ಳಿ..
ವಿವೋ ಸ್ಮಾರ್ಟ್‌ಫೋನ್‌ಗಳಿಗೆ (Vivo smartphone) ಭಾರತವೂ ಸೇರಿದಂತೆ ಜಾಗತಿಕವಾಗಿ ದೊಡ್ಡ ಮಟ್ಟದ ಜನಪ್ರಿಯತೆ ಇದೆ. ಅದರಲ್ಲೂ ಇತ್ತೀಚೆಗೆ ವಿಶೇಷ ಫೀಚರ್ಸ್ ಆಯ್ಕೆ ಮೂಲಕ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡುತ್ತಿದ್ದು, ಈ ಫೋನ್‌ಗಳು ಇತರೆ ಫೋನ್‌ಗಳಿಗೆ ತೀವ್ರ ಪೈಪೋಟಿ ನೀಡಲಿವೆ.
ಹೌದು, ವಿವೋ ಸ್ಮಾರ್ಟ್‌ಫೋನ್‌ಗಳು ವಿಶೇಷ ಫೀಚರ್ಸ್ ಮೂಲಕ ಬಳಕೆದಾರರಿಗೆ ಭಿನ್ನ ಅನುಭವ ನೀಡುವ ಕೆಲಸ ಮಾಡುತ್ತಿದ್ದು, ಈ ನಡುವೆ ಆಂಡ್ರಾಯ್ಡ್ ಅಪ್‌ಡೇಟ್ ಮೂಲಕ ಈ ಫೋನ್ ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿದೆ. ಇದರಿಂದ ಸಾಕಷ್ಟು ವಿಶೇಷ ಫೀಚರ್ಸ್ ಪ್ರಯೋಜನವನ್ನು ಬಳಕೆದಾರರು ಪಡೆಯಬಹುದಾಗಿದೆ. ಹಾಗಿದ್ರೆ, ಯಾವ ಫೋನ್ ಈ ಸೌಲಭ್ಯ ಸಿಗಲಿದೆ. ಈ ಹೊಸ ಓಎಸ್ ಮೂಲಕ ಏನೆಲ್ಲಾ ಪ್ರಯೋಜನ ಲಭ್ಯ ಎಂಬ ಮಾಹಿತಿಯನ್ನು ಇಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ವಿವೋ V23 5G ಸ್ಮಾರ್ಟ್‌ಫೋನ್: ಈ ಫೋನ್ ಬಳಕೆದಾರರಿಗೆ ಆಂಡ್ರಾಯ್ಡ್ 14 ಆಧಾರಿತ ಫನ್‌ಟಚ್ ಓಎಸ್ 14 ನವೀಕರಣವನ್ನು (Android 14 Funtouch OS 14 update) ಸ್ವೀಕರಿಸಲು ಅನುಮತಿ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ ಸರಣಿಯನ್ನು ಜನವರಿ 2022 ರಲ್ಲಿ ಬಿಡುಗಡೆ ಮಾಡಲಾಗಿದ್ದು, ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 920 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.
14 ಆಧಾರಿತ ಫನ್‌ಟಚ್ ಓಎಸ್ 14 ನವೀಕರಣ: ಇನ್ನು ವಿವೋ V23 5G ಗಾಗಿ (Vivo V23 5G) ಆಂಡ್ರಾಯ್ಡ್ 14 ಆಧಾರಿತ ಫನ್‌ಟಚ್ ಓಎಸ್ 14 ಅಪ್‌ಡೇಟ್ ಅನ್ನು ಹೊರತರಲು ಆರಂಭಿಸಿದ್ದು, ನೀವಿಗ ಇದನ್ನು ಡೌನ್‌ಲೋಡ್ ಮಾಡಬಹುದಾಗಿದೆ. ಇದು 5.5GB ಇದ್ದು, ವಿವೋ V23 5G ಅನ್ನು PD2167DF_EX_A_14.2.10.3.W30 ಆವೃತ್ತಿಗೆ ನವೀಕರಿಸಲಿದೆ. ಇಷ್ಟೇ ಅಲ್ಲದೆ ಮಾರ್ಚ್ 1, 2024 ರ ಭದ್ರತಾ ಪ್ಯಾಚ್‌ನ ಇನ್‌ಸ್ಟಾಲ್ ಸಹ ಆಗಲಿದೆ.
ಹೊಸ ಫೀಚರ್ಸ್ ಏನಿರಲಿವೆ?: ನವೀಕರಣದ ನಂತರ ಲಾಕ್ ಸ್ಕ್ರೀನ್ ಕ್ಲಾಕ್ ಗ್ರಾಹಕೀಯಗೊಳಿಸಬಹುದಾದ ಆಯ್ಕೆ, ಆಲ್ಬಮ್‌ಗಳ ಆಪ್‌ನಲ್ಲಿ ಹೊಸ ವಿಡಿಯೋ ಎಡಿಟಿಂಗ್ ಟೂಲ್ಸ್ ಮತ್ತು ಫಿಲ್ಟರ್, ಸಣ್ಣ ವಿಂಡೋಸ್‌ನೊಂದಿಗೆ ಬಹುಕಾರ್ಯಕ್ಕಾಗಿ ಸುಧಾರಿತ ಕಾರ್ಯವನ್ನು ಒಳಗೊಂಡಂತೆ ವಿವಿಧ ಸೌಲಭ್ಯಗಳು ಲಭ್ಯ ಇವೆ. ಅಂದರೆ, ಬಳಕೆದಾರರು ಆಲ್‌ವೇಸ್ ಆನ್ ಡಿಸ್‌ಪ್ಲೇ ಕಂಟ್ರೋಲ್ ಸೆಂಟರ್, ಸೆಕ್ಯೂರಿಟಿ ಮತ್ತು ಪ್ರೈವೆಸಿ ಫೀಚರ್ಸ್, ವಿಜೆಟ್, ಹೋಮ್ ಸ್ಕ್ರೀನ್, ಸ್ಟೇಟಸ್ ಬಾರ್ ಹಾಗೂ ನೋಟಿಫಿಕೇಶನ್ ವಿಭಾಗದಲ್ಲಿ ಹೊಸ ಅನುಭವ ಪಡೆಯಬಹುದಾಗಿದೆ.

ಇದರ ಜೊತೆಗೆ ಮಲ್ಟಿ ಇಮೇಜ್ ಅಥವಾ ಟೆಕ್ಸ್ಟ್ ಮತ್ತು ಇಮೇಜ್ ಲಿಂಕ್‌ಗಳು ಮತ್ತು ಸಿಸ್ಟಮ್ ಮೆಮೊರಿ ಬಳಕೆಗಾಗಿ ಪೂರ್ವ ವೀಕ್ಷಣೆ ಅನುಭವಕ್ಕೆ ಆಪ್ಟಿಮೈಸೇಶನ್‌ಗಳನ್ನು ಮಾಡಲಾಗಿದೆ. ಈ ಅಪ್‌ಡೇಟ್ ಅನಿರ್ದಿಷ್ಟ ದೋಷ ಪರಿಹಾರಗಳನ್ನು ಮಾಡಲಿದ್ದು, ಹಿಂದಿನ ಅಪ್‌ಡೇಟ್‌ನಂತೆಯೇ ಈ ರೋಲ್‌ಔಟ್ ಹಂತಹಂತವಾಗಿ ನಡೆಯಲಿದೆ ಎನ್ನಲಾಗಿದೆ. ಇದರಿಂದಾಗಿ ಬಳಕೆದಾರರು ಕೆಲವೇ ದಿನಗಳಲ್ಲಿ ತಮ್ಮ V23 5G ಡಿವೈಸ್‌ಗಳಲ್ಲಿ ಈ ಸಂಬಂಧ ನೋಟಿಫಿಕೇಶನ್ ಸ್ವೀಕರಿಸಬಹುದಾಗಿದೆ. ಹಾಗಿದ್ರೆ, ಬನ್ನಿ ಈ ಫೋನ್‌ನ ಫೀಚರ್ಸ್ ಬಗ್ಗೆಯೂ ಕೆಲವು ಮಾಹಿತಿ ತಿಳಿದುಕೊಳ್ಳೋಣ.
ವಿವೋ V23 5G ಸ್ಮಾರ್ಟ್‌ಫೋನ್ ಫೀಚರ್ಸ್: ಈ ಫೋನ್ 6.44 ಇಂಚಿನ FHD+ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 90Hz ರಿಫ್ರೆಶ್ ರೇಟ್ ಮತ್ತು ಡ್ಯುಯಲ್ ಸೆಲ್ಫಿ ಕ್ಯಾಮೆರಾ ರಚನೆ ಪಡೆದಿದೆ. ಹಾಗೆಯೇ ಮೀಡಿಯಾ ಟೆಕ್ ಡೈಮೆನ್ಸಿಟಿ 920 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 12GB RAM ಮತ್ತು 256GB ಇಂಟರ್ ಸ್ಟೋರೇಜ್ ಆಯ್ಕೆ ಪಡೆದುಕೊಂಡಿದೆ. ಅದರಂತೆ ಈಗ ಫನ್‌ಟಚ್ ಓಎಸ್ 14 ಜೊತೆಗೆ ಆಂಡ್ರಾಯ್ಡ್ 14 ಅನ್ನು ರನ್ ಮಾಡಲಿದೆ.

ಈ ಫೋನ್ ಫೋಟೋಗ್ರಫಿ ವಿಚಾರಕ್ಕೆ ಬಂದರೆ 64 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ ಸೆಲ್ಫಿ ಹಾಗೂ ವಿಡಿಯೋ ಕರೆಯೊಂದಿಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಲೆನ್ಸ್ ಮತ್ತು 8 ಮೆಗಾಪಿಕ್ಸೆಲ್ ವೈಡ್ ಆಂಗಲ್ ಲೆನ್ಸ್ ಆಯ್ಕೆ ಪಡೆದುಕೊಂಡಿದೆ. ಇದರ ಜೊತೆಗೆ 44W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 4,200mAh ಸಾಮರ್ಥ್ಯದ ಬ್ಯಾಟರಿ ಆಯ್ಕೆಯನ್ನು ಈ ಫೋನ್‌ನಲ್ಲಿ ಕಾಣಬಹುದು.
ವಿವೋ V23 5G ಸ್ಮಾರ್ಟ್‌ಫೋನ್ ಬೆಲೆ: ಈ ವಿವೋ V23 5G ಸ್ಮಾರ್ಟ್‌ಫೋನ್‌ನ 8GB + 128GB ವೇರಿಯಂಟ್‌ಗೆ 29,990 ರೂ.ಗಳ ಬೆಲೆ ಇದೆ ಹಾಗೆಯೇ 12GB + 256GB ಸ್ಟೋರೇಜ್ ವೇರಿಯಂಟ್‌ಗೆ 34,990 ರೂ.ಗಳ ಬೆಲೆ ನಿಗದಿ ಪಡಿಸಲಾಗಿದೆ. ಇದನ್ನು ಫ್ಲಿಪ್‌ಕಾರ್ಟ್ ಸೇರಿದಂತೆ ಅನೇಕ ಇ-ಕಾಮರ್ಸ್ ಸೈಟ್ ಹಾಗೂ ಆಫ್‌ಲೈನ್ ಸ್ಟೋರ್‌ಗಳ ಮೂಲಕ ಖರೀದಿ ಮಾಡಬಹುದು.


Click it and Unblock the Notifications








