Home
ಮೊಬೈಲ್

ಬರ್ತಿದೆ Vivo V40e ಫೋನ್; ಬಿಡುಗಡೆ ವಿವರಗಳು ಸೋರಿಕೆ! ಬೆಲೆ, ವಿಶೇಷತೆಗಳೇನು?

ವಿವೋ ಕಂಪನಿಯು ಹೊಸ ಫೋನ್ ಬಿಡುಗಡೆ ಮಾಡಲು ಸಜ್ಜಾಗಿದೆ. ಈಗಾಗಲೇ, ವಿವೋ V40 (Vivo V40) ಸರಣಿಯು ಭಾರತದಲ್ಲಿ ಖರೀದಿಗೆ ಲಭ್ಯವಿದೆ. ಇದರ ಅಡಿಯಲ್ಲಿ ವಿವೋ V40 ಮತ್ತು ವಿವೋ V40 ಪ್ರೊ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇದೀಗ, ವಿವೋ V40e 5G (Vivo V40e 5G) ಹೆಸರಿನಲ್ಲಿ ಮತ್ತೊಂದು ಫೋನ್ ಬಿಡುಗಡೆಯಾಗಲಿದೆ. ಇದನ್ನು ಈಗಾಗಲೇ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ವಿವೋ V40e ಫೋನಿನ ಅದೇ ಚಿತ್ರ, ಲಾಂಚ್ ಟೈಮ್‌ಲೈನ್ ಮತ್ತು ಪ್ರಮುಖ ವೈಶಿಷ್ಟ್ಯಗಳ ವಿವರಗಳನ್ನು ಬಹಿರಂಗಪಡಿಸಲಾಗಿದೆ. ಸೋರಿಕೆಯ ಪ್ರಕಾರ, ಹೊಸ ಫೋನ್‌ ವಿವೋ V40e 5G ಅನ್ನು ಈ ತಿಂಗಳ ಅಂತ್ಯದ ವೇಳೆಗೆ ಭಾರತದಲ್ಲಿ ಬಿಡುಗಡೆ ಮಾಡಲಾಗುವುದು. ಆದರೆ, ಕಂಪನಿಯು ಬಿಡುಗಡೆಯ ದಿನಾಂಕವನ್ನು ಇನ್ನೂ ಬಹಿರಂಗಪಡಿಸಿಲ್ಲ. ಶೀಘ್ರವೇ ಈ ಫೋನಿನ ಬಗ್ಗೆ ಕೆಲವು ಮಾಹಿತಿಯನ್ನು ಪ್ರಕಟಿಸಬಹುದು. ಈ ಫೋನಿನ ವಿನ್ಯಾಸ ಮತ್ತು ಫೀಚರ್ಸ್‌ ತಿಳಿಯಲು ಮುಂದೆ ಓದಿ.

ಬರ್ತಿದೆ Vivo V40e ಫೋನ್; ಬಿಡುಗಡೆ ವಿವರಗಳು ಸೋರಿಕೆ! ಬೆಲೆ, ವಿಶೇಷತೆಗಳೇನು?

ವಿವೋ V40e 5G ಫೋನಿನ ವಿನ್ಯಾಸ ಸೋರಿಕೆ

ಹೊಸ ಮೊಬೈಲ್ ವಿವೋ V40e 5G ಅನ್ನು ರಾಯಲ್ ಕಂಚಿನ ಬಣ್ಣದಲ್ಲಿ ಪರಿಚಯಿಸಲಾಗುವುದು. ಬಿಡುಗಡೆಯ ಸಮಯದಲ್ಲಿ ಹೆಚ್ಚು ಬಣ್ಣಗಳ ಆಯ್ಕೆಯು ಇರಲಿದೆ ಎಂದು ಹೇಳಲಾಗುತ್ತಿದೆ. ಈ ಫೋನಿನ ಹಿಂಭಾಗದ ಫಲಕದಲ್ಲಿ ಅಂಡಾಕಾರದ ಕ್ಯಾಮೆರಾ ಮಾಡ್ಯೂಲ್ ಮತ್ತು ಅದರ ಪಕ್ಕದಲ್ಲಿ ಎಲ್ಇಡಿ ಫ್ಲ್ಯಾಷ್ ಅನ್ನು ಹೊಂದಿದೆ. ಕ್ಯಾಮೆರಾ ಮಾಡ್ಯೂಲ್‌ನಲ್ಲಿ ಔರಾ ಲೈಟ್ ಎಲ್‌ಇಡಿಯನ್ನು ಸಹ ನೀಡಲಾಗಿದೆ. ಈ ಫೋನ್ 3D ಕರ್ವ್ ವಿನ್ಯಾಸದೊಂದಿಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ವಿವೋ V40e ತುಂಬಾ ಸುಂದರವಾಗಿ ಕಾಣುತ್ತದೆ.

ವಿವೋ V40e 5G ಫೋನಿನ ವೈಶಿಷ್ಟ್ಯಗಳು (ಸೋರಿಕೆ)

ಡಿಸ್ಪ್ಲೇ: ವಿವೋ V40e 5G ಫೋನ್‌ ಡಿಸ್ಪ್ಲೇ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಆದಾಗ್ಯೂ, ಸೋರಿಕೆಯ ಪ್ರಕಾರ ಮುಂಬರುವ ಹೊಸ ಫೋನನ್ನು 3D ಬಾಗಿದ ಅಮೋಲೆಡ್ ಡಿಸ್ಪ್ಲೇಯೊಂದಿಗೆ ಬಿಡುಗಡೆ ಮಾಡಲಾಗುವು ಎಂದು ಹೇಳಲಾಗುತ್ತಿದೆ. ಇದು 4500 ನಿಟ್ಸ್ ವರೆಗೆ ಗರಿಷ್ಠ ಬ್ರೈಟ್‌ನೆಸ್ ಸೌಲಭ್ಯವನ್ನು ಹೊಂದಿರುವ ಸಾಧ್ಯತೆಯಿದೆ.

ಪ್ರೊಸೆಸರ್ ಮತ್ತು ಸ್ಟೋರೇಜ್: ಕಂಪನಿಯು ಮುಂಬರುವ ವಿವೋ V40e 5G ಸ್ಮಾರ್ಟ್‌ಫೋನ್‌ನಲ್ಲಿನ ಕಾರ್ಯಕ್ಷಮತೆಗಾಗಿ, MediaTek Dimension 7300 ಚಿಪ್‌ಸೆಟ್ ಅನ್ನು ಒದಗಿಸಲಿದೆ. ಇದು ಬಳಕೆದಾರರಿಗೆ ಉತ್ತಮ ಅನುಭವವನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ. ಸ್ಟೋರೇಜ್‌ ಮತ್ತು RAM ಬಗ್ಗೆ ಹೇಳುವುದಾದರೆ, ಉತ್ತಮ ವೇಗವನ್ನು ಫೋನಿನಲ್ಲಿ ಒದಗಿಸಲಾಗುವುದು. ಅದರಂತೆ, 8GB RAM ಅನ್ನು ನೀಡಲಾಗುವುದು. ಇದರೊಂದಿಗೆ 256 GB ವರೆಗಿನ ಇಂಟರ್ನಲ್ ಸ್ಟೋರೇಜ್‌ ಕೂಡ ಒಳಗೊಂಡಿರಲಿದೆ.

ಈ ಸುದ್ದಿ ಓದಿದ್ದೀರಾ?: Tecno: 2 ದೈತ್ಯ ಫೋಲ್ಡಬಲ್ ಫೋನ್‌ ಲಾಂಚ್: ಅಬ್ಬಾ ಎಂಥಾ ಫೀಚರ್ಸ್‌, ಬೆಲೆ ಇಷ್ಟೊಂದಾ?

ಕ್ಯಾಮೆರಾ: ಕಂಪನಿಯು ವಿವೋ V40e 5G ಅನ್ನು ಅದ್ಭುತ ಕ್ಯಾಮೆರಾದೊಂದಿಗೆ ಪರಿಚಯಿಸಲಿದೆ. ಈ ಫೋನಿನಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಲಿದೆ. ಆದರೆ, ಈ ಫೋನಿನಲ್ಲಿ ಲೆನ್ಸ್‌ಗಳು ಹೇಗೆ ಲಭ್ಯವಿರುತ್ತವೆ ಎಂಬ ಮಾಹಿತಿಯು ಇನ್ನೂ ಬಹಿರಂಗವಾಗಿಲ್ಲ.

ಬ್ಯಾಟರಿ: ಕಂಪನಿಯು ಮುಂಬರುವ ಹೊಸ ಫೋನ್ ದೊಡ್ಡ 5500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರುವ ಸಾಧ್ಯತೆಯಿದೆ. ಇದನ್ನು ವೇಗವಾಗಿ ಚಾರ್ಜ್ ಮಾಡಲು, 80 ವ್ಯಾಟ್‌ ವೇಗದ ಫ್ಲಾಶ್ ಚಾರ್ಜಿಂಗ್ ಅನ್ನು ಒದಗಿಸಲಾಗುವುದು. ಆಪರೇಟಿಂಗ್ ಸಿಸ್ಟಮ್ ಬಗ್ಗೆ ಹೇಳುವುದಾದರೆ, ವಿವೋ V40e 5G ಸ್ಮಾರ್ಟ್‌ಫೋನ್ ಇತ್ತೀಚಿನ Android 14 ಆಧಾರಿತ Funtouch OS 14 ನೊಂದಿಗೆ ಕಾರ್ಯನಿರ್ವಹಿಸಲಿದೆ.

Best Mobiles in India

English summary
Vivo V40e to Launch in India Soon, launch timeline, specs leaked: What to Expect
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+