ಭಾರತೀಯ ಮಾರುಕಟ್ಟೆಗೆ ಶೀಘ್ರವೇ Vivo V60e ಆಗಮನ?..ನಿರೀಕ್ಷಿತ ಬೆಲೆ ನೋಡಿ!
ಜನಪ್ರಿಯ ಮೊಬೈಲ್ ಬ್ರ್ಯಾಂಡ್ Vivo ತನ್ನ V-ಸರಣಿಯ ಮೂಲಕ ಭಾರತದ ಮಧ್ಯಮ ಶ್ರೇಣಿಯ ಫೋನ್‌ಗಳ ವಿಭಾಗದಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಇದೀಗ, ಕಂಪನಿಯು ಇದೇ ವಿಭಾಗದಲ್ಲಿ ತನ್ನ ಹೊಸ ಮಾದರಿ Vivo V60e ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಸಿದ್ಧವಾಗಿದೆ ಎನ್ನಲಾಗಿದೆ. ಜನಪ್ರಿಯ ಟಿಪ್‌ಸ್ಟರ್ ಸಂಜು ಚೌಧರಿ ಅವರ ಪ್ರಕಾರ, ಈ ಫೋನ್ ಸೆಪ್ಟೆಂಬರ್ ಅಂತ್ಯದ ವೇಳೆಗೆ ಬಿಡುಗಡೆಯಾಗುವ ಸಾಧ್ಯತೆ ಇದ್ದು, ಇದು ಏಪ್ರಿಲ್‌ನಲ್ಲಿ ಬಿಡುಗಡೆಯಾದ ಯಶಸ್ವಿ ಮಾದರಿ Vivo V50e ಗೆ ಉತ್ತರಾಧಿಕಾರಿಯಾಗಿ ಆಗಮಿಸುತ್ತಿದೆ.!
ಈಗಾಗಲೇ ಹಲವಾರು ವದಂತಿಯ ಸುದ್ದಿಗಳು ಈ ಹೊಸ ಫೋನ್ ಕೆಲವು ಗಮನಾರ್ಹ ವೈಶಿಷ್ಟ್ಯಗಳೊಂದಿಗೆ ಬರಲಿದೆ ಎಂದು ಹೇಳಿದ್ದವು. ಈ ಹೊಸ Vivo V60e ಫೋನ್ 120Hz ರಿಫ್ರೆಶ್ ರೇಟ್ ಹೊಂದಿರುವ 6.78-ಇಂಚಿನ AMOLED ಡಿಸ್‌ಪ್ಲೇಯನ್ನು ಒಳಗೊಂಡಿರಲಿದೆ. 50MP ಸಾಮರ್ಥ್ಯದ ಕ್ಯಾಮೆರಾ ಇರಲಿದೆ. ಹಾಗೆಯೇ, ಇದು ಮೀಡಿಯಾಟೆಕ್ 7-ಸರಣಿ ಪ್ರೊಸೆಸರ್ ಅನ್ನು ಬಳಸಬಹುದು, ನಿರ್ದಿಷ್ಟವಾಗಿ ಡೈಮೆನ್ಸಿಟಿ 7400 ಚಿಪ್‌ಸೆಟ್ ಅನ್ನು ಬಳಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅಂದರೆ, ಈ ಹಿಂದಿನ ಮಾದರಿ ಫೋನ್‌ಗೆ ಹೋಲಿಸಿದರೆ ದೊಡ್ಡ ಬದಲಾವಣೆ ಇಲ್ಲದಿರಬಹುದು.
ಈ ಹಿಂದಿನ ಮಾದರಿಯಾದ Vivo V50e ಜೊತೆ ಹೋಲಿಸಿದರೆ, ಹೊಸ V60e ಕೆಲವು ಪ್ರಮುಖ ಬದಲಾವಣೆಗಳನ್ನು ಹೊಂದಿದೆ. V50e 6.77-ಇಂಚಿನ AMOLED ಡಿಸ್‌ಪ್ಲೇ ಮತ್ತು ಡೈಮೆನ್ಸಿಟಿ 7300 ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಿತ್ತು. ಹೊಸ ಮಾದರಿಯಲ್ಲಿ ಡಿಸ್‌ಪ್ಲೇ ಗಾತ್ರ ಸ್ವಲ್ಪ ಹೆಚ್ಚಾಗಿದ್ದು, ಪ್ರೊಸೆಸರ್ ಅನ್ನು ಡೈಮೆನ್ಸಿಟಿ 7400 ಗೆ ಅಪ್‌ಗ್ರೇಡ್ ಮಾಡಲಾಗಿದೆ. ಈ ಎರಡೂ ಚಿಪ್‌ಸೆಟ್‌ಗಳ ನಡುವೆ ಕಾರ್ಯಕ್ಷಮತೆಯಲ್ಲಿ ದೊಡ್ಡ ವ್ಯತ್ಯಾಸ ಇಲ್ಲದಿರುವುದರಿಂದ, V60e ಸಂಪೂರ್ಣ ಹೊಸ ಮಾದರಿಯಾಗುವ ಬದಲು, ಹಿಂದಿನ ಮಾದರಿಯ ಸುಧಾರಿತ ಆವೃತ್ತಿಯಂತೆ ಕಂಡುಬರುತ್ತದೆ.

ಇನ್ನು ಟಿಪ್‌ಸ್ಟರ್ ಸಂಜು ಚೌಧರಿ ಅವರ ಪ್ರಕಾರ, ಹೊಸ Vivo V60e ಮೂರು ವಿಭಿನ್ನ ಆವೃತ್ತಿಗಳಲ್ಲಿ ಲಭ್ಯವಾಗಲಿದೆ. ಸೋರಿಕೆಯಾದ ಬೆಲೆಗಳ ಪ್ರಕಾರ, 8GB RAM ಮತ್ತು 128GB ಸಂಗ್ರಹಣೆಯ ಆವೃತ್ತಿಗೆ ₹28,999, 8GB RAM ಮತ್ತು 256GB ಸಂಗ್ರಹಣೆಯ ಆವೃತ್ತಿಗೆ ₹30,999, ಹಾಗೂ 12GB RAM ಮತ್ತು 256GB ಸಂಗ್ರಹಣೆಯ ಆವೃತ್ತಿಗೆ ₹31,999 ಇರಬಹುದು. ಇದು ನಿಜವಾಗದರೆ, ಈ ಬೆಲೆ ಶ್ರೇಣಿಯು, ಮಧ್ಯಮ ಶ್ರೇಣಿಯ ಫೋನ್ ಮಾರುಕಟ್ಟೆಯಲ್ಲಿ ಇತರೆ ಬ್ರ್ಯಾಂಡ್‌ಗಳೊಂದಿಗೆ ನೇರ ಸ್ಪರ್ಧೆ ನೀಡಲು ವಿವೋಗೆ ಸಹಾಯ ಆಗಬಹುದು ಎನ್ನಲಾಗಿದೆ.
ಒಟ್ಟಾರೆಯಾಗಿ, Vivo V60e ತನ್ನ ಬೆಲೆ, ಆಕರ್ಷಕ ವಿನ್ಯಾಸ ಮತ್ತು ಸಮತೋಲಿತ ವೈಶಿಷ್ಟ್ಯಗಳೊಂದಿಗೆ 30 ಸಾವಿರ ವಿಭಾಗದಲ್ಲಿ ಮತ್ತೊಂದು ಉತ್ತಮ ಆಯ್ಕೆಯಾಗುವ ಸಾಧ್ಯತೆ ಇದೆ. ಈ ಫೋನ್, Vivo ಬ್ರ್ಯಾಂಡ್‌ನ ಮೇಲಿರುವ ವಿಶ್ವಾಸ ಮತ್ತು V-ಸರಣಿಯ ಅನುಭವವನ್ನು ಮುಂದುವರೆಸುವ ನಿರೀಕ್ಷೆ ಇದೆ. ಸಂಪೂರ್ಣ ಹೊಸತನವನ್ನು ಹುಡುಕುತ್ತಿರುವವರಿಗೆ ಇದು ಹೆಚ್ಚು ಆಕರ್ಷಕವಾಗದೇ ಇರಬಹುದು, ಆದರೆ ಸುಧಾರಿತ ಪ್ರೊಸೆಸರ್ ಮತ್ತು ಡಿಸ್‌ಪ್ಲೇಯನ್ನು ಬಯಸುವವರಿಗೆ ಇದು ಒಂದು ಉತ್ತಮ ಆಯ್ಕೆ ಆಗಬಹುದು. ಈ ಕುರಿಂತೆ ನಿಮ್ಮ ಅಭಿಪ್ರಾಯ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.
Vivo V60 5G: ಹೈ-ಎಂಡ್ ಪ್ರೊಸೆಸರ್, ಸೂಪರ್ ಕ್ಯಾಮೆರಾ!
ದೇಶದಲ್ಲಿ ಕಳೆದ ಆಗಸ್ಟ್ 12 ರಂದು Vivo V60 ಫೋನ್ ಅನ್ನು ಆಕರ್ಷಕ ವಿನ್ಯಾಸ ಮತ್ತು ಶಕ್ತಿಶಾಲಿ ವೈಶಿಷ್ಟ್ಯಗಳೊಂದಿಗೆ ಪರಿಚಯಿಸಲಾಗಿತ್ತು. ಈ ಫೋನ್ 120Hz ರೇಟ್ ಸಾಮರ್ಥ್ಯದ 6.77-ಇಂಚಿನ Quad-curved AMOLED ಡಿಸ್‌ಪ್ಲೇ, Snapdragon 7 Gen 4 ಪ್ರೊಸೆಸರ್ ಸೇರಿದಂತೆ ಹೈ-ಎಂಡ್ ವೈಶಿಷ್ಟ್ಯಗಳನ್ನು ಹೊಂದಿದೆ. ಕೈಗೆಟುಕುವ ಬೆಲೆಯಲ್ಲಿ ಬಂದಿರುವ ಈ ಹೊಸ Vivo V60 ಸ್ಮಾರ್ಟ್‌ಫೋನ್ ಹೇಗಿದೆ?, ಬೆಲೆಗಳು ಎಷ್ಟು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.


Click it and Unblock the Notifications








