Home
ಮೊಬೈಲ್

vivo: ವಿವೋ X ಫೋಲ್ಡ್‌ 3 ಪ್ರೊ ಸ್ಮಾರ್ಟ್‌ಫೋನ್‌ ಫೀಚರ್ಸ್‌ ಲೀಕ್‌! ಭರ್ಜರಿ ಫೀಚರ್ಸ್‌ ಆಯ್ಕೆ

ವಿವೋ ಸ್ಮಾರ್ಟ್‌ಫೋನ್‌ಗಳು (Vivo smartphone) ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಪಡೆದಿವೆ. ಈ ನಡುವೆ ವಿವೋ ಹೊಸ ಹೊಸ ಫೋನ್‌ಗಳನ್ನು ಅನಾವರಣ ಮಾಡಿಕೊಂಡು ಬರುತ್ತಲೇ ಇದ್ದು, ಇದೀಗ ಮುಂಬರುವ ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ನ ಫೀಚರ್ಸ್‌ ಲೀಕ್‌ ಆಗಿವೆ.

ಹೌದು, ವಿವೋ ಕೆಲವೇ ತಿಂಗಳಲ್ಲಿ ವಿವೋ X ಫೋಲ್ಡ್‌ 3 ಪ್ರೊ ಸ್ಮಾರ್ಟ್‌ಫೋನ್‌ (Vivo X Fold 3 Pro Smartphone) ಅನ್ನು ಲಾಂಚ್‌ ಮಾಡಲಿದೆ ಎಂದು ತಿಳಿದುಬಂದಿದೆ. ಈ ಸ್ಮಾರ್ಟ್‌ಫೋನ್ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದಿದೆ ಎನ್ನಲಾಗಿದ್ದು, ಸ್ನಾಪ್‌ಡ್ರಾಗನ್ 8 ಜನ್ 3 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ ನಿರೀಕ್ಷಿತ ಫೀಚರ್ಸ್‌ ಹಾಗೂ ವಿಶೇಷತೆ ಏನು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ವಿವೋ X ಫೋಲ್ಡ್‌ 3 ಪ್ರೊ ಸ್ಮಾರ್ಟ್‌ಫೋನ್‌ ಫೀಚರ್ಸ್‌ ಲೀಕ್‌! ಭರ್ಜರಿ ಫೀಚರ್ಸ್‌..

ವಿವೋ X ಫೋಲ್ಡ್‌ 3 ಪ್ರೊ ಸ್ಮಾರ್ಟ್‌ಫೋನ್‌: ವಿವೋ X ಫೋಲ್ಡ್ 3 ಸ್ಮಾರ್ಟ್‌ಫೋನ್ ಫೋಲ್ಡಬಲ್‌ ಉದ್ಯಮದಲ್ಲಿ ಹಗುರವಾದ ಫೋಲ್ಡ್ ಮಾಡಬಹುದಾದ ಫೋನ್ ಆಗಿರುತ್ತದೆ. ಇದು ಸ್ಟ್ಯಾಂಡರ್ಡ್ ಆವೃತ್ತಿಯಲ್ಲಿ ಕಾಣಿಸಿಕೊಳ್ಳಬಹುದು. ಯಾಕೆಂದರೆ ಈ ಫೋನ್ ಚಿಕ್ಕ ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ, 80W ವೈರ್‌ಲೆಸ್ ಅನ್ನು ಬೆಂಬಲಿಸುತ್ತದೆ ಮತ್ತು ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯವೂ ಸಹ ಇರಲಿದೆ ಎಂದು ಲೀಕ್‌ ಮಾಹಿತಿಯಲ್ಲಿ ಉಲ್ಲೇಖ ಮಡಲಾಗಿಲದೆ. ಹಾಗಿದ್ರೆ, ಬನ್ನಿ ವದಂತಿಗಳ ಪ್ರಕಾರ ಈ ಫೋನ್ ಏನೆಲ್ಲಾ ನಿರೀಕ್ಷಿತ ಫೀಚರ್ಸ್ ಪಡೆದಿದೆ ನೋಡೋಣ.

ವಿವೋ X ಫೋಲ್ಡ್‌ 3 ಪ್ರೊ ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ಮಾಹಿತಿ: ಈ ಸ್ಮಾರ್ಟ್‌ಫೋನ್ 8.03 ಇಂಚಿನ (2480 x 2200 ಪಿಕ್ಸೆಲ್‌ಗಳು) 2K+ ಅಮೋಲೆಡ್‌ LTPO ಡಿಸ್‌ಪ್ಲೇ ಹೊಂದಿರಲಿದೆ ಎನ್ನಲಾಗಿದೆ. ಜೊತೆಗೆ 1-120Hz ರಿಫ್ರೇಶ್‌ ರೇಟ್‌ ಆಯ್ಕೆ ಹೊಂದಿರಲಿದ್ದು, ಹೆಚ್‌ಡಿಆರ್‌ 10+, ಡಾಲ್ಬಿ ವಿಷನ್ ಬೆಂಬಲ ಪಡೆಯಲಿದೆ ಎಂದು ತಿಳಿದಬಂದಿದೆ. ಇದರ ಜೊತೆಗೆ ಕವರ್‌ ಡಿಸ್‌ಪ್ಲೇ 6.53 ಇಂಚಿನ (2748 x 1172 ಪಿಕ್ಸೆಲ್‌ಗಳು) FHD+ ಅಮೋಲೆಡ್‌ ಡಿಸ್‌ಪ್ಲೇ ಹೊಂದಿರಲಿದೆ ಎನ್ನಲಾಗಿದ್ದು, ಇದೂ ಸಹ 120Hz ರಿಫ್ರೆಶ್ ರೇಟ್ ಆಯ್ಕೆ ಪಡೆದಿರಲಿದೆ ಎಂದು ವರದಿಗಳಲ್ಲಿ ಉಲ್ಲೇಖ ಮಾಡಲಾಗಿದೆ.

ವಿವೋ X ಫೋಲ್ಡ್‌ 3 ಪ್ರೊ ಸ್ಮಾರ್ಟ್‌ಫೋನ್‌ ಫೀಚರ್ಸ್‌ ಲೀಕ್‌! ಭರ್ಜರಿ ಫೀಚರ್ಸ್‌..

ವಿವೋ X ಫೋಲ್ಡ್‌ 3 ಪ್ರೊ ಸ್ಮಾರ್ಟ್‌ಫೋನ್‌ ಪ್ರೊಸೆಸರ್ ಮಾಹಿತಿ: ಈ ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 8 ಜನ್ 3 4nm ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದ್ದು, ಅಡ್ರಿನೋ 750 ಜಿಪಿಯು ಬಲ ಪಡೆದಿರಲಿದೆ ಎಂದು ತಿಳಿದುಬಂದಿದೆ. ಹಾಗೆಯೇ 16GB LPDDR5X RAM ಜೊತೆಗೆ 1TB UFS 4.0 ಇಂಟರ್ ಸ್ಟೋರೇಜ್‌ ಅನ್ನು ಈ ಫೋನ್‌ ಹೊಂದಿರಲಿದ್ದು, ಆಂಡ್ರಾಯ್ಡ್‌ 14 ಅನ್ನು ಆಧರಿಸಿದ OriginOS 4 ನಲ್ಲಿ ರನ್‌ ಆಗಲಿದೆ ಎಂದು ಹೇಳಲಾಗಿದೆ.

ವಿವೋ X ಫೋಲ್ಡ್‌ 3 ಪ್ರೊ ಸ್ಮಾರ್ಟ್‌ಫೋನ್‌ ಕ್ಯಾಮೆರಾ ರಚನೆ: ಈ ಫೋನ್ OV50H ಸೆನ್ಸರ್‌ನೊಂದಿಗೆ 50 ಮೆಗಾಪಿಕ್ಸೆಲ್ ಕ್ಯಾಮೆರಾ, 50 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ, 64 ಮೆಗಾಪಿಕ್ಸೆಲ್ 3x ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ ಆಯ್ಕೆ ಪಡೆದಿರಲಿದೆ ಎನ್ನಲಾಗಿದ್ದು, 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆಯಲಿದೆ ಎಂದು ಲೀಕ್‌ ಆದ ಮಾಹಿತಿ ಪ್ರಕಾರ ತಿಳಿದುಬಂದಿದೆ.

ವಿವೋ X ಫೋಲ್ಡ್‌ 3 ಪ್ರೊ ಸ್ಮಾರ್ಟ್‌ಫೋನ್‌ ಫೀಚರ್ಸ್‌ ಲೀಕ್‌! ಭರ್ಜರಿ ಫೀಚರ್ಸ್‌..

ವಿವೋ X ಫೋಲ್ಡ್‌ 3 ಪ್ರೊ ಸ್ಮಾರ್ಟ್‌ಫೋನ್‌ ಬ್ಯಾಟರಿ ಹಾಗೂ ಇತರೆ: ಈ ಫೋನ್ 5800mAh ಸಾಮರ್ಥ್ಯದ ಬ್ಯಾಟರಿ ಜೊತೆಗೆ 120W ವೇಗದ ಚಾರ್ಜಿಂಗ್ ಬೆಂಬಲ ಹಾಗೂ 50W ವೈರ್‌ಲೆಸ್ ಚಾರ್ಜಿಂಗ್ ಬೆಂಬಲ ಪಡೆದಿದೆ ಎನ್ನಲಾಗಿದೆ. ಉಳಿದಂತೆ ಈ ಸ್ಮಾರ್ಟ್‌ಫೋನ್ ಇನ್-ಡಿಸ್ಪ್ಲೇ ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸೆನ್ಸಾರ್, ಇನ್‌ಫ್ರಾರೆಡ್ ಸೆನ್ಸಾರ್
ಯುಎಸ್‌ಬಿ ಟೈಪ್-ಸಿ ಆಡಿಯೊ, ಸ್ಟಿರಿಯೊ ಸ್ಪೀಕರ್‌ಗಳು, 5G SA/NSA, ಡ್ಯುಯಲ್ 4G VoLTE, ವೈ-ಫೈ 7 802.11 be (2.4GHz ಮತ್ತು 5GHz), ಬ್ಲೂಟೂತ್ ಆವೃತ್ತಿ 5.4, ಜಿಪಿಎಸ್‌ (L1 + L5 ಡ್ಯುಯಲ್ ಬ್ಯಾಂಡ್), ಎನ್‌ಎಫ್‌ಸಿ, ಯುಎಸ್‌ಬಿ ಟೈಪ್-ಸಿ ಕನೆಕ್ಟಿವಿಟಿ ಬೆಂಬಲ ಪಡೆದಿದೆ.

Best Mobiles in India

English summary
Vivo will launch the Vivo X Fold 3 Pro Smartphone in a few months. This smartphone is said to have an AMOLED display and it is said to be powered by Snapdragon 8 Gen 3 processor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+