Home
ಮೊಬೈಲ್

Vivo X200T ಫೀಚರ್ಸ್, ಲಾಂಚ್ ಡೇಟ್ ಲೀಕ್!..ಭಾರತದಲ್ಲಿ ಹೊಸ ಪ್ರೀಮಿಯಂ ಆಯ್ಕೆ?

ವಿವೋ ಕಂಪನಿಯ ಮುಂಬರುವ ಪ್ರೀಮಿಯಂ ಸ್ಮಾರ್ಟ್‌ಫೋನ್ Vivo X200T ಭಾರತದಲ್ಲಿ ಶೀಘ್ರದಲ್ಲೇ ಲಾಂಚ್ ಆಗುವ ಸಾಧ್ಯತೆ ಇದೆ. ಈಗಾಗಲೇ ಟೆಕ್ ವಲಯದಲ್ಲಿ ಈ ಫೋನ್‌ ಕುರಿತಾಗಿ ಸಾಕಷ್ಟು ಚರ್ಚೆ ಮತ್ತು ಕುತೂಹಲ ನಿರ್ಮಾಣವಾಗಿದೆ. ಈ ನಡುವೆಯೇ ಜನಪ್ರಿಯ ಟಿಪ್‌ಸ್ಟಾರ್ ಅಭಿಷೇಕ್ ಯಾದವ್ ಅವರು ಈ Vivo X200T‌ನ ಪ್ರಮುಖ ಫೀಚರ್‌ಗಳನ್ನು ಬಹಿರಂಗಪಡಿಸಿದ್ದಾರೆ. ಅವರ ಮಾಹಿತಿಯಂತೆ, ಈ ಹೊಸ ಫೋನ್‌ ಶಕ್ತಿಶಾಲಿ Dimensity 9400+ ಚಿಪ್‌ಸೆಟ್‌ನೊಂದಿಗೆ ಬರುತ್ತದೆ. ಜೊತೆಗೆ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಹಾಗೂ ದೊಡ್ಡ 6,200mAh ಬ್ಯಾಟರಿ ಇದರ ಪ್ರಮುಖ ಆಕರ್ಷಣೆಯಾಗಲಿದೆ. ಹಾಗಾದರೆ, ಮುಂಬರುವ Vivo X200T ಫೋನ್‌ ಹೇಗಿರಲಿದೆ? ಭಾರತದಲ್ಲಿ ಯಾವಾಗ ಅಧಿಕೃತವಾಗಿ ಬಿಡುಗಡೆಯಾಗಬಹುದು? ಎನ್ನುವ ಸಂಪೂರ್ಣ ವಿವರಗಳನ್ನು ಮುಂದೆ ನೋಡೋಣ ಬನ್ನಿ.

Vivo X200T : ಸೋರಿಕೆಯ ವೈಶಿಷ್ಟ್ಯಗಳು
ಟಿಪ್‌ಸ್ಟರ್ ಅಭಿಷೇಕ್ ಯಾದವ್ (@yabhishekhd) X ನಲ್ಲಿ ಪ್ರಕಟಿಸಿರುವಂತೆ, Vivo X200T ಫೋನಿನಲ್ಲಿ 1.5K ರೆಸಲ್ಯೂಷನ್‌ ಬೆಂಬಲಿಸುವ 6.67 ಇಂಚಿನ AMOLED ಡಿಸ್ಪ್ಲೇ ನೀಡಲಾಗುವ ಸಾಧ್ಯತೆ ಇದೆ. ಕಾರ್ಯಕ್ಷಮತೆಯ ದೃಷ್ಟಿಯಿಂದ, ಈ ಫೋನ್‌ ಮೀಡಿಯಾಟೆಕ್‌ನ ಹೊಸ Dimensity 9400+ ಚಿಪ್‌ಸೆಟ್‌ ಹೊಂದಿರಲಿದೆ ಎನ್ನಲಾಗಿದ್ದು, ಇದು ಹೈ-ಎಂಡ್ ಕಾರ್ಯಕ್ಷಮತೆಗೆ ಸೂಕ್ತವಾಗಿದೆ.

Vivo X200T ಫೀಚರ್ಸ್, ಲಾಂಚ್ ಡೇಟ್ ಲೀಕ್!..ಭಾರತದಲ್ಲಿ ಹೊಸ ಪ್ರೀಮಿಯಂ ಆಯ್ಕೆ?

ಸಾಫ್ಟ್‌ವೇರ್ ವಿಷಯಕ್ಕೆ ಬಂದರೆ, Vivo X200T ನೇರವಾಗಿ Android 16 ಆಧಾರಿತ OS‌ನೊಂದಿಗೆ ಲಾಂಚ್ ಆಗಬಹುದು. ವಿವೋ ಕಂಪನಿ ಈ ಫೋನ್‌ಗೆ ಐದು ಪ್ರಮುಖ ಆಂಡ್ರಾಯ್ಡ್ ಅಪ್‌ಡೇಟ್‌ಗಳು ಮತ್ತು ಏಳು ವರ್ಷಗಳ ಸೆಕ್ಯೂರಿಟಿ ಪ್ಯಾಚ್‌ಗಳನ್ನು ನೀಡುವ ಸಾಧ್ಯತೆ ಇದೆ ಎಂಬುದು ಲೀಕ್‌ಗಳಿಂದ ತಿಳಿದುಬರುತ್ತಿದೆ. ಇದರಿಂದ ದೀರ್ಘಾವಧಿಗೆ ಫೋನ್‌ ಬಳಸಲು ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಬಹುದು.

ಕ್ಯಾಮೆರಾ ವಿಭಾಗದಲ್ಲೂ Vivo X200T ಗಮನ ಸೆಳೆಯುವ ನಿರೀಕ್ಷೆಯಿದೆ. ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಇರಲಿದ್ದು, 50 ಮೆಗಾಪಿಕ್ಸೆಲ್‌ ಸೋನಿ ಪ್ರೈಮರಿ ಸೆನ್ಸರ್‌ (OIS ಬೆಂಬಲದೊಂದಿಗೆ), 50 ಮೆಗಾಪಿಕ್ಸೆಲ್‌ ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಮತ್ತು 50 ಮೆಗಾಪಿಕ್ಸೆಲ್‌ ವೈಡ್ ಆಂಗಲ್ ಕ್ಯಾಮೆರಾ ಇರಬಹುದು. ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ನೀಡಲಾಗುವ ಸಾಧ್ಯತೆ ಇದೆ.

ಬ್ಯಾಟರಿ ವಿಷಯದಲ್ಲಿ ಈ ಫೋನ್‌ ದೊಡ್ಡ ಅಪ್‌ಗ್ರೇಡ್‌ ಹೊಂದಿರಬಹುದು. ಲೀಕ್ ಪ್ರಕಾರ, Vivo X200T ನಲ್ಲಿ ಸುಮಾರು 6,200mAh ಬ್ಯಾಟರಿ ನೀಡಲಾಗುತ್ತದೆ. ಇದಕ್ಕೆ 90W ಫಾಸ್ಟ್ ವೈರ್ಡ್ ಚಾರ್ಜಿಂಗ್ ಹಾಗೂ 40W ವೈರ್‌ಲೆಸ್ ಚಾರ್ಜಿಂಗ್ ಬೆಂಬಲ ಸಿಗುವ ಸಾಧ್ಯತೆ ಇದೆ.

Vivo X200T ಫೀಚರ್ಸ್, ಲಾಂಚ್ ಡೇಟ್ ಲೀಕ್!..ಭಾರತದಲ್ಲಿ ಹೊಸ ಪ್ರೀಮಿಯಂ ಆಯ್ಕೆ?

ಕನೆಕ್ಟಿವಿಟಿ ಮತ್ತು ಭದ್ರತೆಯ ವಿಷಯದಲ್ಲೂ ಈ ಫೋನ್‌ ಪ್ರೀಮಿಯಂ ಮಟ್ಟದ ವೈಶಿಷ್ಟ್ಯಗಳನ್ನು ಒಳಗೊಂಡಿರಬಹುದು. Wi-Fi 7, Bluetooth 5.4, USB Type-C ಪೋರ್ಟ್‌, eSIM ಬೆಂಬಲ ಹಾಗೂ 3D ಅಲ್ಟ್ರಾಸೋನಿಕ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಇರಲಿದೆ ಎಂದು ಹೇಳಲಾಗುತ್ತಿದೆ.

Vivo X200T ಕಪ್ಪು ಮತ್ತು ಪರ್ಪಲ್ ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆಯಾಗಬಹುದು. Stellar Black ಮತ್ತು Seaside Lilac ಎಂಬ ಬಣ್ಣಗಳಲ್ಲಿ ಇದು ಲಭ್ಯವಾಗುವ ಸಾಧ್ಯತೆ ಇದೆ. ಥರ್ಮಲ್ ಮ್ಯಾನೇಜ್‌ಮೆಂಟ್‌ಗಾಗಿ 4.5K ನ್ಯಾನೋಫ್ಲೂಯಿಡ್ ವೇಪರ್ ಚೇಂಬರ್ ನೀಡಲಾಗುತ್ತದೆ ಹಾಗೂ ಜೊತೆಗೆ ನೀರು ಮತ್ತು ಧೂಳಿನಿಂದ ಉತ್ತಮ ರಕ್ಷಣೆ IP68/IP69 ರೇಟಿಂಗ್‌ ಇರಲಿದೆ ಎನ್ನಲಾಗಿದೆ.

Vivo X200T : ಯಾವಾಗ ಬಿಡುಗಡೆಯಾಗಲಿದೆ?
Vivo X200T ಬಿಡುಗಡೆ ದಿನಾಂಕ ಮತ್ತು ಬೆಲೆಯ ಬಗ್ಗೆ ಕೆಲವು ತಿಂಗಳುಗಳಿಂದ ವದಂತಿಗಳು ಹರಡುತ್ತಿವೆ, ಇತ್ತೀಚಿನ ವರದಿಯೊಂದು ಜನವರಿ 26 ಮತ್ತು ಜನವರಿ 31 ರ ನಡುವೆ ಬಿಡುಗಡೆಯಾಗಲಿದೆ ಎಂದು ಹೇಳಿಕೊಂಡಿದೆ. ಇದರ ಬೆಲೆ ರೂ. 50,000 ಮತ್ತು ರೂ. 55,000 ರ ನಡುವೆ ಇದೆ ಎಂದು ಹೇಳಲಾಗಿದೆ. ಇದನ್ನು ಸ್ಟೆಲ್ಲಾರ್ ಬ್ಲ್ಯಾಕ್ ಮತ್ತು ಸೀಸೈಡ್ ಲಿಲಾಕ್ ಛಾಯೆಗಳಲ್ಲಿ ನೀಡುವ ಸಾಧ್ಯತೆಯಿದೆ.ಒಟ್ಟಿನಲ್ಲಿ, ಪ್ರೀಮಿಯಂ ವಿನ್ಯಾಸ, ಶಕ್ತಿಶಾಲಿ ಕಾರ್ಯಕ್ಷಮತೆ ಮತ್ತು ದೀರ್ಘಕಾಲಿಕ ಬ್ಯಾಟರಿಯೊಂದಿಗೆ Vivo X200T ಭಾರತೀಯ ಮಾರುಕಟ್ಟೆಯಲ್ಲಿ ಗಮನ ಸೆಳೆಯುವ ಸಾಧ್ಯತೆ ಇದೆ.

Best Mobiles in India

English summary
Vivo X200T is expected to launch soon in India as a premium smartphone. Leaks suggest it will feature the Dimensity 9400+ chipset, a triple rear camera setup, and a large 6,200mAh battery.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+