Subscribe to Gizbot

ಫಿಲಿಪ್ಸ್ LED ಬಲ್ಬ್ ಹಾಕಿಕೊಂಡರೆ ಸಾಕು: ವೈ-ಫೈ ಬೇಡ-ಮೊಬೈಲ್ ಡೇಟಾ ಬೇಡ.!

Written By:

ಇಂದಿನ ಮಾಡ್ರನ್ ಯುಗದಲ್ಲಿ ವೈ-ಫೈ ಎಂಬುದು ಅತ್ಯಂತ ಅವಶ್ಯಕ ವಸ್ತುಗಳಲ್ಲಿ ಒಂದಾಗಿದೆ. ಸದ್ಯ ಸ್ಮಾರ್ಟ್‌ಫೋನ್‌ ಹಾಗೂ ಲ್ಯಾಪ್‌ಟಾಪ್ ಬಳಕೆದಾರರಿಗೆ ವೈ-ಫೈ ಬಳಕೆಗೆ ಸುಲಭವಾಗಿ ದೊರೆಯುತ್ತಿದೆ. ಹಲವು ಕಡೆಗಳಲ್ಲಿ ಉಚಿತ ವೈ-ಫೈ ಸೌಲಭ್ಯಗಳು ಲಭ್ಯವಿದ್ದು, ಮಾಲ್‌, ರೈಲ್ವೆ ಸ್ಟೇಷನ್ ಸೇರಿದಂತೆ ಹಲವು ಕಡೆಗಳಲ್ಲಿ ವೈ-ಫೈ ಕನೆಕ್ಟಿವಿಟಿ ಪಡೆಯಬಹುದಾಗಿದೆ.

ಫಿಲಿಪ್ಸ್ LED ಬಲ್ಬ್ ಹಾಕಿಕೊಂಡರೆ ಸಾಕು: ವೈ-ಫೈ ಬೇಡ-ಮೊಬೈಲ್ ಡೇಟಾ ಬೇಡ.!

ಸದ್ಯ ಮಾರುಕಟ್ಟೆಗೆ ವೈ-ಫೈಗಿಂತಲೂ ವೇಗವಾಗಿ ಕಾರ್ಯನಿರ್ವಹಿಸುವ ಲಿ-ಫೈ ಪರಿಚಯವಾಗಿದ್ದು, ಫಿಲಿಪ್ಸ್ ಸಂಸ್ಥೆಯೂ ಮೊದಲ ಬಾರಿಗೆ ಲಿ-ಫೈ ಬ್ರಾಡ್ ಬ್ಯಾಂಡ್ ಸೇವೆಯನ್ನು ಆರಂಭಿಸಲಿದೆ ಎನ್ನಲಾಗಿದೆ. ಈ ಕುರಿತು ಟೆಲಿಕಾಂ ಟಾಕ್ ವರದಿ ಮಾಡಿದ್ದು, ಜಾಗತಿಕವಾಗಿ ಎಲೆಕ್ಟ್ರಾನಿಕ್ ವಸ್ತುಗಳ ಉತ್ಪಾದನೆಯಲ್ಲಿ ಗುರುತಿಸಿಕೊಂಡಿರುವ ಫಿಲಿಪ್ಸ್ ಕಂಪನಿಯೂ ಲಿ-ಫೈ ಬ್ರಾಡ್ ಬ್ಯಾಂಡ್ ಸೇವೆಯನ್ನು ಮೊದಲ ಬಾರಿಗೆ ಪರಿಚಯ ಮಾಡಲಿದೆ.

ಓದಿರಿ: ಇತಿಹಾಸವನ್ನು ಬದಲಾಯಿಸಲಿದೆ ಒಪ್ಪೋ F7: ಸೆಲ್ಫಿ ಕ್ಯಾಮೆರಾಕ್ಕಾಗಿಯೇ ನಿರ್ಮಾಣವಾದ ಸ್ಮಾರ್ಟ್‌ಫೋನ್ ಇದು.!

ಇದಕ್ಕಾಗಿ ಕಾರ್ಯಪ್ರವೃತವಾಗಿರುವ ಫಿಲಿಪ್ಸ್, ವೈ-ಫೈಗಿಂತಲೂ 10ಪಟ್ಟು ವೇಗವಾಗಿ ಕಾರ್ಯನಿರ್ವಹಿಸುವಂತೆ ವಿನ್ಯಾಸ ಮಾಡಿದೆ. ಸದ್ಯ ಇನ್ನು ಪರೀಕ್ಷೆಯ ಹಂತದಲ್ಲಿರುವ ಲಿ-ಫೈ ತಂತ್ರಜ್ಞಾನವನ್ನು ಫಿಲಿಫ್ಸ್ ಶೀಘ್ರವೇ ಜಾಗತಿಕವಾಗಿ ಬಳಕೆಗೆ ಮುಕ್ತವಾಗಿಸಲಿದ್ದು, ಇದು ಸುಮಾರು 30 MBPS ವೇಗದಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿದೆ ಎನ್ನಲಾಗಿದೆ.

ಫಿಲಿಪ್ಸ್ LED ಬಲ್ಬ್ ಹಾಕಿಕೊಂಡರೆ ಸಾಕು: ವೈ-ಫೈ ಬೇಡ-ಮೊಬೈಲ್ ಡೇಟಾ ಬೇಡ.!
How to Check Your Voter ID Card Status (KANNADA)

ಇದು ಹೊಸ ಮಾದರಿಯ ತಂತ್ರಜ್ಞಾನವಾಗಿದ್ದು, ಭವಿಷ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗಲಿದೆ. ಲಿ-ಫೈ ತಂತ್ರಜ್ಞಾನವು ವೈ-ಫೈ ಮಾದರಿಯಲ್ಲಿಯೇ ಕಾರ್ಯನಿರ್ವಹಿಸಲಿದ್ದು, ವೈರ್‌ಲೈಸ್ ಬ್ರಾಡ್ ಬ್ಯಾಂಡ್ ತಂತ್ರಜ್ಞಾನವಾಗಿದೆ. ಇದು ವೈ-ಫೈ- ಗಿಂತಲೂ ವೇಗವಾಗಿ ಕಾರ್ಯನಿರ್ವಹಿಸಲಿದ್ದು, ಬೆಳಕನ್ನು ಆಧಾರಿಸಿ ವೇಗವಾಗಿ ಕಾರ್ಯನಿರ್ವಹಿಸಲಿದೆ.

ರೆಡಿಯೋ ವೇವ್ಸ್ ಮೂಲಕ ಡೇಟಾವನ್ನು ವರ್ಗಾವಣೆಯನ್ನು ಮಾಡಲಿದೆ. ಮೊದಲಿಗೆ ಪರೀಕ್ಷಾರ್ಥವಾಗಿ ಲಿ-ಫೈ ತಂತ್ರಜ್ಞಾನವನ್ನು ಅಳವಡಿಸಿರುವ ಸ್ಮಾರ್ಟ್ ಆಫೀಸ್ ಅನ್ನು ಫಿಪಿಪ್ಸ್ ಪ್ಯಾರಿಸ್‌ನಲ್ಲಿ ಆರಂಭಿಸಿದೆ ಎನ್ನಲಾಗಿದೆ.

ಓದಿರಿ: ವರ್ಷಕ್ಕೆ 1000 GB ಜಿಯೋ ಡೇಟಾ ಆಫರ್: ಪಡೆದುಕೊಳ್ಳುವುದು ಹೇಗೆ..?

English summary
Philips Lighting to Become the First Company to Provide LiFi Broadband Services Through LED Lights. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot