ವೀವೊ ಪರಿಚಯಿಸಲಿದೆ ಮತ್ತೊಂದು 'ಪಾಪ್‌ಅಪ್‌ ಸೆಲ್ಫಿ' ಕ್ಯಾಮೆರಾ ಸ್ಮಾರ್ಟ್‌ಫೋನ್.!!

|

ಮೊಬೈಲ್ ಮಾರುಕಟ್ಟೆಗೆ ಅತೀ ನೂತನ ಫೀಚರ್ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುವುದರಲ್ಲಿ ಮುಂದಿರುವ 'ವೀವೊ' ಸ್ಮಾರ್ಟ್‌ಫೋನ್ ಕಂಪನಿಯು ಇತ್ತೀಚಿಗಷ್ಟೆ 'ವೀವೋ ವಿ15 ಪ್ರೋ' ಸ್ಮಾರ್ಟ್‌ಫೋನಿನಲ್ಲಿ 'ಪಾಪ್‌ಅಪ್‌ ಸೆಲ್ಫಿ' ಕ್ಯಾಮೆರಾವನ್ನು ಪರಿಚಯಿಸಿ ಗ್ರಾಹಕರನ್ನು ಬೆರಗುಗೊಳಿಸಿತ್ತು. ಇದೀಗ ಕಂಪನಿಯು ಮತ್ತೊಂದು ಹೊಸತನದ ಸ್ಮಾರ್ಟ್‌ಫೋನ್‌ ಅನ್ನು ಲಾಂಚ್‌ ಮಾಡಲು ಅಣಿಯಾಗಿದೆ.

ವೀವೊ ಪರಿಚಯಿಸಲಿದೆ ಮತ್ತೊಂದು 'ಪಾಪ್‌ಅಪ್‌ ಸೆಲ್ಫಿ' ಕ್ಯಾಮೆರಾ ಸ್ಮಾರ್ಟ್‌ಫೋನ್.!!

ಹೌದು, ವೀವೊ ಕಂಪನಿ ವೀವೊ X27 ಹೆಸರಿನ ಸ್ಮಾರ್ಟ್‌ಫೋನ್‌ ಒಂದನ್ನು ತಯಾರಿಸಿದ್ದು, ಬಿಡುಗಡೆ ದಿನಾಂಕವನ್ನು ಫಿಕ್ಸ್ ಮಾಡಿದೆ. ಈ ಸ್ಮಾರ್ಟ್‌ಪೋನ್ ಲಾಂಚ್‌ ಕಾರ್ಯಕ್ರಮ ಇದೇ ಮಾರ್ಚ್‌ 19 ರಂದು ಚೀನಾದಲ್ಲಿ ನಡೆಯಲಿದೆ. ಕಂಪನಿ ಈ ಸ್ಮಾರ್ಟ್‌ಫೋನ್‌ ಹೊಂದಿರುವ ಫೀಚರ್ಸ್‌ಗಳ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿಲ್ಲ. ಆದರೆ, ಫ್ಲ್ಯಾಗ್‌ಶಿಫ್‌ ರೇಂಜ್‌ನ ಫೀಚರ್ಸ್‌ಗಳನ್ನು ಹೊಂದಿರಲಿದೆ ಎನ್ನಲಾಗುತ್ತಿದೆ.

ವೀವೊ ಪರಿಚಯಿಸಲಿದೆ ಮತ್ತೊಂದು 'ಪಾಪ್‌ಅಪ್‌ ಸೆಲ್ಫಿ' ಕ್ಯಾಮೆರಾ ಸ್ಮಾರ್ಟ್‌ಫೋನ್.!!

ವೀವೊ ವಿ15 ಪ್ರೋ ಸ್ಮಾರ್ಟ್‌ಫೋನಿನಂತೆ ಇದು ಸಹ ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾ ಹೊಂದಿರಲಿದ್ದು, 16 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿರಲಿದೆ. ಫೋನಿನ ಹಿಂಬದಿಯಲ್ಲಿ 48 ಮೆಗಾಪಿಕ್ಸಲ್ + 13 ಮೆಗಾಪಿಕ್ಸಲ್ + 5 ಮೆಗಾಪಿಕ್ಸಲ್ ಸಾಮರ್ಥ್ಯದ ತ್ರಿವಳಿ ಕ್ಯಾಮೆರಾಗಳನ್ನು ಒಳಗೊಂಡಿರಲಿದೆ ಎಂದು ಹೇಳಲಾಗುತ್ತಿದೆ. ಈ ಸ್ಮಾರ್ಟ್‌ಫೋನಿನಲ್ಲಿ 6.39 ಇಂಚಿನ ಫುಲ್‌ ಹೆಚ್‌ಡಿ AMOLED ಡಿಸ್‌ಪ್ಲೇ ಇರಲಿದೆ ಎನ್ನಲಾಗುತ್ತಿದೆ.

ವೀವೊ ಪರಿಚಯಿಸಲಿದೆ ಮತ್ತೊಂದು 'ಪಾಪ್‌ಅಪ್‌ ಸೆಲ್ಫಿ' ಕ್ಯಾಮೆರಾ ಸ್ಮಾರ್ಟ್‌ಫೋನ್.!!

ವೀವೊ X27 ಸ್ಮಾರ್ಟ್‌ಫೋನ್ SD710 ಚಿಪ್‌ ಸೆಟ್‌ನೊಂದಿಗೆ ಸ್ನ್ಯಾಪ್‌ಡ್ರಾಗನ್ 670 SoC ಪ್ರೊಸೆಸರ್ ಹೊಂದಿರಲಿದೆ ಎಂದು ತಿಳಿದು ಬಂದಿದ್ದು, ಇದರೊಂದಿಗೆ ಆಂಡ್ರಾಯ್ಡ್‌ 9 ಪೈ ಅಪರೇಟಿಂಗ್ ಸಿಸ್ಟಮ್ ನಲ್ಲಿ ಕಾರ್ಯನಿರ್ವಹಿಸಲಿದೆ. 8 GB RAM ಬೆಂಬಲವನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ 128 GB ಮತ್ತು 256 GB ಸಾಮರ್ಥ್ಯದ ಎರಡು ಆಂತರಿಕ ಸಂಗ್ರಹದ ಆಯ್ಕೆಗಳನ್ನು ಬರಲಿದೆ.

ಈ ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ಫಿಂಗರ್‌ ಸೆನ್ಸಾರ್‌ ಅನ್ನು ಹೊಂದಿರಲಿದ್ದು, ಜೊತೆಗೆ 4,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿರಲಿದೆ. ಇದರೊಂದಿಗೆ 22.5W ಸಾಮರ್ಥ್ಯದ ರಾಪಿಡ್‌ ಚಾರ್ಜಿಂಗ್ ತಂತ್ರಜ್ಞಾನ ಸೌಲಭ್ಯವು ಇರಲಿದ್ದು, ಇದರಿಂದ ಸ್ಮಾರ್ಟ್‌ಫೋನ್ ಬಹುಬೇಗನೆ ಚಾರ್ಜ್ ಆಗುವುದು. ಇದರ ಬೆಲೆಯ ಬಗ್ಗೆ ಕಂಪನಿ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ.

Best Mobiles in India

English summary
Chinese manufacturer has confirmed through Weibo that the Vivo X27 will be announced on March 19 through a launch event in China.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X