ಪವರ್‌ಫುಲ್‌ ಸ್ಮಾರ್ಟ್‌ಫೋನ್‌ ರಿಲೀಸ್‌ಗೆ ಮುಂದಾದ 'ವಿವೋ'.!!

|

ವಿವೋ ವಿ 15 ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾ ಸ್ಮಾರ್ಟ್‌ಫೋನ್‌ ಪರಿಚಯಿಸಿ ಮಾರುಕಟ್ಟೆಯಲ್ಲಿ ಸಖತ ಹವಾ ಮಾಡುತ್ತಿರುವ ವಿವೋ ಸ್ಮಾರ್ಟ್‌ಫೋನ್‌ ತಯಾರಿಕಾ ಸಂಸ್ಥೆಯು ಇದೀಗ ತನ್ನ ಎರಡನೇ ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾ ಸ್ಮಾರ್ಟ್‌ಫೋನ್‌ ಅನ್ನು ತಯಾರಿಸುತ್ತಿದೆ. 'ವಿವೋ ಎಕ್ಸ್‌27 ಪ್ರೋ' ಹೆಸರಿನ ಸ್ಮಾರ್ಟ್‌ಫೋನ್‌ ಅತೀ ಆಕರ್ಷಕ ಫೀಚರ್ಸ್‌ಗಳನ್ನು ಹೊಂದಿರಲಿದ್ದು, ಗ್ರಾಹಕರನ್ನು ನಿಬ್ಬೆರಗಾಗುವಂತೆ ಮಾಡಲಿದೆ.

ಪವರ್‌ಫುಲ್‌ ಸ್ಮಾರ್ಟ್‌ಫೋನ್‌ ರಿಲೀಸ್‌ಗೆ ಮುಂದಾದ 'ವಿವೋ'.!!

ಹೌದು, ವಿವೋ ಮತ್ತೆ ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾ ಫೀಚರ್ ಹೊಂದಿದ 'ವಿವೋ ಎಕ್ಸ್‌27 ಪ್ರೋ' ಹೆಸರಿನ ಸ್ಮಾರ್ಟ್‌ಫೋನ್‌ ಒಂದನ್ನು ಬಿಡುಗಡೆ ಮಾಡುವ ಸುದ್ದಿ ಗ್ಯಾರಂಟಿ ಆಗಿದ್ದು, ಈ ಕುರಿತ ಹಲವು ಮಾಹಿತಿ TENAA ದಿಂದ ಲೀಕ್‌ ಆಗಿವೆ. ಈ ಹೊಸ ಸ್ಮಾರ್ಟ್‌ಫೋನ್‌ 128GB ಮತ್ತು 256GB ಎರಡು ಆಂತರಿಕ ಸಂಗ್ರಹ ಸ್ಥಳಾವಕಾಶದ ಆಯ್ಕೆಗಳೊಂದಿಗೆ 8GB RAM ಶಕ್ತಿಯನ್ನು ಹೊಂದಿರಲಿದೆ ಎಂಬ ಮಾಹಿತಿ ಇದ್ದು, ಗ್ರಾಹಕರ ನಿರೀಕ್ಷೆಗಳು ಗರಿಗೆದರಿವೆ.

ಪವರ್‌ಫುಲ್‌ ಸ್ಮಾರ್ಟ್‌ಫೋನ್‌ ರಿಲೀಸ್‌ಗೆ ಮುಂದಾದ 'ವಿವೋ'.!!

ನೂತನ ವಿನ್ಯಾಸ ಶೈಲಿ ಮತ್ತು ವಿಶಾಲ ಡಿಸ್‌ಪ್ಲೇಯನ್ನು ಹೊಂದಿರುವ ವಿವೋ ಎಕ್ಸ್‌27 ಪ್ರೋ ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್‌ 9.0 ಪೈ ಆಪರೇಟಿಂಗ್ ಸಿಸ್ಟಮ್ ಹೊಂದಿರಲಿದ್ದು, ಜತೆಗೆ ಸ್ನ್ಯಾಪ್‌ಡ್ರಾಗನ್ 710 ಪ್ರೊಸೆಸರ್‌ ಇದ್ದು, ಸ್ಮಾರ್ಟ್‌ಫೋನ್‌ ಕಾರ್ಯವೈಖರಿಯನ್ನು ಹೆಚ್ಚಿಸಲು ನೆರವಾಗಲಿದೆ. ಹಾಗಾದರೇ ಇತರೆ ಏನೆಲ್ಲಾ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸೈನ್‌

ಡಿಸೈನ್‌

ಬಾಹ್ಯ ನೋಟದಲ್ಲಿ ಅತೀ ತೆಳುವಾದ ಮತ್ತು ಉದ್ದವಾದ ರಚನೆಯನ್ನು ಹೊಂದಿದ್ದು, ದೊಡ್ಡದಾದ ಡಿಸ್‌ಪ್ಲೇಯನ್ನು ಹೊಂದಿರಲಿದ್ದು, ಅಂಚು ರಹಿತವಾಗಿರಲಿದೆ ಎಂದು ಹೇಳಲಾಗುತ್ತಿದೆ. ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾ ಇರಲಿದ್ದು, ಆದರೆ ಕಾಣಿಸದ ರಚನೆಯಲ್ಲಿರಲಿದೆ. ಕ್ಯಾಮೆರಾ ತೆರೆದಾಗ ಕ್ಯಾಮೆರಾ ಮತ್ತು ಫ್ಲ್ಯಾಶ್‌ ಲೈಟ್‌ ಕಾಣಿಸುತ್ತವೆ. ಡಿಸ್‌ಪ್ಲೇಯಲ್ಲಿ ಫಿಂಗರ್‌ಪ್ರಿಂಟ್ ಸೆನ್ಸಾರ್‌ ನೀಡುವ ಸಾಧ್ಯತೆಗಳು ಇವೆ.

ಡಿಸ್‌ಪ್ಲೇ

ಡಿಸ್‌ಪ್ಲೇ

ವಿವೋ ಎಕ್ಸ್‌25 ಸ್ಮಾರ್ಟ್‌ಫೋನ್‌ 1080 x 2340 ಪಿಕ್ಸಲ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದ್ದು, 6.7 ಇಂಚಿನ ಫುಲ್‌ಹೆಚ್‌ಡಿ ಪ್ಲಸ್‌ AMOLEDಯ ಹಿರಿದಾದ ಡಿಸ್‌ಪ್ಲೇಯನ್ನು ಹೊಂದಿರಲಿದೆ ಎನ್ನಲಾಗುತ್ತಿದೆ. ವಿಶಾಲವಾದ ಡಿಸ್‌ಪ್ಲೇಯು ಗೇಮ್ಸ್‌ ಪ್ರಿಯರಿಗೆ ಮತ್ತು ವಿಡಿಯೋ ವೀಕ್ಷಿಸುವ ಗ್ರಾಹಕರಿಗೆ ಬಹುಬೇಗನೆ ಇಷ್ಟವಾಗುವುದು.

ಪ್ರೊಸೆಸರ್ ಮತ್ತು ಮೆಮೊರಿ

ಪ್ರೊಸೆಸರ್ ಮತ್ತು ಮೆಮೊರಿ

ವಿವೋ ಎಕ್ಸ್‌27 ಪ್ರೋ ಸ್ಮಾರ್ಟ್‌ಪೋನಿನಲ್ಲಿ ಸ್ನ್ಯಾಪ್‌ಡ್ರಾಗನ್ 710 ಪವರ್‌ಫುಲ್‌ ಪ್ರೊಸೆಸರ್ ಅನ್ನು ಹೊಂದಿರಲಿದ್ದು, ಆಂಡ್ರಾಯ್ಡ್‌ 9.0 ಪೈ ಅಪರೇಟಿಂಗ್ ಸಿಸ್ಟಮ್ ಕೆಲಸ ಮಾಡಲಿದೆ. ಸ್ಮಾರ್ಟ್‌ಫೋನ್‌ ವೇಗವಾಗಿ ಕಾರ್ಯನಿರ್ವಹಿಸಲು 8GB RAM ನ ಬೆಂಬಲ ಒದಗಿಸಲಿದ್ದು, ಹಾಗೇ 128GB ಮತ್ತು 256GB ಸಾಮರ್ಥ್ಯ ಆಂತರಿಕ ಸಂಗ್ರಹ ಆಯ್ಕೆಗಳನ್ನು ಹೊಂದಿರಲಿದೆ.

ಕ್ಯಾಮೆರಾ

ಕ್ಯಾಮೆರಾ

ಸಂಪೂರ್ಣ ಹೈ ಎಂಡ್‌ ಫೀಚರ್ಸ್‌ಗಳನ್ನು ಹೊಂದಿರುವ ವಿವೋ ಎಕ್ಸ್‌27 ಪ್ರೋ ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ ಮೂರು ಕ್ಯಾಮೆರಾಗಳನ್ನು ಒಳಗೊಂಡಿದ್ದು, ಅವುಗಳು ಮೊದಲ ಕ್ಯಾಮೆರಾ 48 ಮೆಗಾಪಿಕ್ಸಲ್, ಎರಡನೇ ಕ್ಯಾಮೆರಾವು 13 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿದ್ದರೇ ಕೊನೆಯ ಕ್ಯಾಮೆರಾ 2 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿರಲಿದೆ ಎಂದು ಹೇಳಲಾಗುತ್ತಿದೆ.

ಪಾಪ್‌ಅಪ್‌ ಸೆಲ್ಫಿ

ಪಾಪ್‌ಅಪ್‌ ಸೆಲ್ಫಿ

ಈಗಾಗಲೇ ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾವನ್ನು ಪರಿಚಯಿಸಿ ವಿವೋ ಹೊಸ ಟ್ರೆಂಡ್‌ಹುಟ್ಟು ಹಾಕಿದ್ದು, ಅದನ್ನು 'ವಿವೋ ಎಕ್ಸ್‌27 ಪ್ರೋ' ಸ್ಮಾರ್ಟ್‌ಫೋನಿನಲ್ಲೂ ಮುಂದುವರೆಸುವ ಸಾಧ್ಯತೆಗಳು ಇವೆ. ಈ ಸ್ಮಾರ್ಟ್‌ಫೋನ್‌ 32 ಮೆಗಾಪಿಕ್ಸಲ್‌ ಸಾಮರ್ಥ್ಯದ ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾ ಹೊಂದಿರಲಿದ್ದು, ಸೆಲ್ಫಿ ಪ್ರಿಯರನ್ನು ತನ್ನತ್ತ ಸೆಳೆಯಲಿದೆ.

ಬ್ಯಾಟರಿ ಲೈಫ್

ಬ್ಯಾಟರಿ ಲೈಫ್

ವಿವೋ ಎಕ್ಸ್‌27 ಪ್ರೋ ಅತ್ಯುತ್ತಮ ಫೀಚರ್ಸ್‌ಗಳನ್ನು ಹೊಂದಿದ್ದು, ಇವುಗಳ ಸುಗಮ ಕಾರ್ಯಕ್ಕೆ ಉತ್ತಮ ಬ್ಯಾಟರಿ ಬೆಂಬಲ ಅಗತ್ಯ ಅದಕ್ಕಾಗಿ ಕಂಪನಿಯು 4,000mAh ಸಾಮರ್ಥ್ಯದ ಶಕ್ತಿಯುತ ಬ್ಯಾಟರಿಯನ್ನು ಒದಗಿಸಲಿದ್ದು, ದೀರ್ಘಕಾಲ ಬಾಳಿಕೆ ಬರುವ ಸಾಮರ್ಥ್ಯವನ್ನು ಹೊಂದಿರಲಿದೆ.

ಲಭ್ಯತೆ ಮತ್ತು ಬೆಲೆ

ಲಭ್ಯತೆ ಮತ್ತು ಬೆಲೆ

ವಿವೋ ಎಕ್ಸ್‌27 ಪ್ರೋ ಸ್ಮಾರ್ಟ್‌ಫೋನ್‌ ಇದೇ ಎಪ್ರಿಲ್ 12ರಂದು ಚೀನಾ ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ ಕೊಡಲಿದೆ ಎಂದು ಹೇಳಲಾಗುತ್ತಿದ್ದು, ಚೀನಾದಲ್ಲಿ ಈ ಸ್ಮಾರ್ಟ್‌ಫೋನ್‌ ಬೆಲೆಯು 3,998 Yuan (41,100ರೂ.ಗಳು). ಭಾರತೀಯ ಮಾರುಕಟ್ಟೆಗೆ ಯಾವಾಗ ಪ್ರವೇಶ ಮಾಡಲಿದೆ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಬಹಿರಂಗವಾಗಿಲ್ಲ.

Best Mobiles in India

English summary
The alleged Vivo X27 Pro is packed with a 4,000mAh battery which is mentioned as 3,920mAh minimum capacity on TENAA.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X