Home
ಮೊಬೈಲ್

Vivo: ವಿವೋದಿಂದ ಭಾರತದಲ್ಲಿ ಶೀಘ್ರವೇ ಲಾಂಚ್‌ ಆಗಲಿದೆ ಮತ್ತೊಂದು ಹೊಸ ಫೋನ್‌!

ವಿವೋ ಸ್ಮಾರ್ಟ್‌ಫೋನ್‌ಗಳು (Vivo smartphone) ಭಾರತದಲ್ಲಿ ದೊಡ್ಡ ಸಂಚಲನವನ್ನೇ ಉಂಟು ಮಾಡುತ್ತವೆ. ಇದೇ ಕಾರಣಕ್ಕೆ ವಿವೋ ಭಾರತದ ಮಾರುಕಟ್ಟೆಯನ್ನು ಪ್ರಮುಖವಾಗಿ ಪರಿಗಣಿಸಿದೆ. ಇದರ ಬೆನ್ನಲ್ಲೇ ಈಗ ಹೊಸ ವಿವೋ ಸ್ಮಾರ್ಟ್‌ಫೋನ್‌ ಲಾಂಚ್‌ ಆಗಲಿದೆ ಎನ್ನಲಾಗಿದೆ.

ಹೌದು, ಈಗಾಗಲೇ ಸಾಕಷ್ಟು ವಿವೋ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದ್ದು, ಇದರ ಜೊತೆಗೆ ಈಗ ಈ ಹೊಸ ಫೋನ್ ಸಹ ಸೇರಿಕೊಳ್ಳಲಿದೆ. ಈ ಫೋನ್‌ ಅನ್ನು ವಿವೋ Y18e (Vivo Y18e smartphone) ಎಂದು ಗುರುತಿಸಿಲಾಗಿದೆ. ಇದು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಡೇಟಾಬೇಸ್‌ನಲ್ಲಿ ಗುರುತಿಸಲ್ಪಟ್ಟಿದೆ. ಹಾಗಿದ್ರೆ, ಬನ್ನಿ ಈ ಫೋನ್‌ನ ವಿಶೇಷತೆ ಏನು?, ಯಾವಾಗ ಲಾಂಚ್ ಆಗಬಹುದು ಅನ್ನೋ ಮಾಹಿತಿಯನ್ನು ತಿಳಿಯೋಣ.

ವಿವೋದಿಂದ ಭಾರತದಲ್ಲಿ ಶೀಘ್ರವೇ ಲಾಂಚ್‌ ಆಗಲಿದೆ ಮತ್ತೊಂದು ಹೊಸ ಫೋನ್‌!

ವಿವೋ Y18e ಸ್ಮಾರ್ಟ್‌ಫೋನ್‌: ವಿವೋ ಇನ್ನೇನು ಕೆಲವೇ ದಿನಗಳಲ್ಲಿ ಲಾಂಚ್‌ ಮಾಡಲಿರುವ ವಿವೋ Y18e ಸ್ಮಾರ್ಟ್‌ಫೋನ್ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ನಿಂದ ಪ್ರಮಾಣೀಕರಣವನ್ನು ಪಡೆದುಕೊಂಡಿದೆ. ಈ ಕಾರಣಕ್ಕೆ ಇದು ಶೀಘ್ರದಲ್ಲೇ ಲಾಂಚ್‌ ಆಗಲಿದೆ ಎಂದು ಹೇಳಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ V2350 ಮಾದರಿ ಸಂಖ್ಯೆಯನ್ನು ಹೊಂದಿದೆ. ಇದರಲ್ಲಿ ಕಂಡುಬಂದಂತೆ ಈ ಫೋನ್ ಕನೆಕ್ಟಿವಿಟಿಗಾಗಿ ಬ್ಲೂಟೂತ್ ಆವೃತ್ತಿ 5.0 ಅನ್ನು ಬೆಂಬಲಿಸುತ್ತದೆ.

ಗಮನಿಸಬೇಕಾದ ವಿಚಾರ ಏನೆಂದರೆ ವಿವೋ Y18e ಸ್ಮಾರ್ಟ್‌ಫೋನ್‌ನ ಫೀಚರ್ಸ್‌ ವಿವರಗಳು ಇನ್ನೂ ವಿರಳವಾಗಿವೆ. ಈ ಫೋನ್‌ನ ಹೆಚ್ಚಿನ ಫೀಚರ್ಸ್‌ ಮಾಹಿತಿ ಬಿಡುಗಡೆಯ ದಿನಾಂಕ ಸಮೀಪಿಸುತ್ತಿದ್ದಂತೆ ತಿಳಿದುಬರಲಿದೆ. ಅದರಲ್ಲೂ ಈ ಫೋನ್‌ ವಿವೋ V18 ಸ್ಮಾರ್ಟ್‌ಫೋನ್‌ನೊಂದಿಗೆ (Vivo V18 smartphone) ಲಾಂಚ್‌ ಆಗುವ ನಿರೀಕ್ಷೆ ಇದ್ದು, ಈ ಫೋನ್‌ ಸಹ ಬ್ಲೂಟೂತ್ SIG ನಲ್ಲಿ ಕಾಣಿಸಿಕೊಂಡಿದೆ.

ವಿವೋದಿಂದ ಭಾರತದಲ್ಲಿ ಶೀಘ್ರವೇ ಲಾಂಚ್‌ ಆಗಲಿದೆ ಮತ್ತೊಂದು ಹೊಸ ಫೋನ್‌!

ಇನ್ನು ಅಕ್ಟೋಬರ್ 2023 ರಲ್ಲಿ, ವಿವೋ Y17s ಅನ್ನು ಸಿಂಗಾಪುರ ಮತ್ತು ಭಾರತದ ಮಾರುಕಟ್ಟೆಗಳಲ್ಲಿ ಬಜೆಟ್‌ ದರದಲ್ಲಿ ಪರಿಚಯಿಸಿದ್ದನ್ನು ಈ ವೇಳೆ ನೆನೆಪಿಸಿಕೊಳ್ಳಬಹುದು. ಈ ಸ್ಮಾರ್ಟ್‌ಫೋನ್‌ 6.56 ಇಂಚಿನ ಐಪಿಎಸ್‌ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, ಇದು 720 x 1612 ಪಿಕ್ಎಲ್‌ ಸ್ಕ್ರೀನ್‌ ರೆಸಲ್ಯೂಶನ್‌ನೊಂದಿಗೆ ಹೆಚ್‌ಡಿ + ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಅಲ್ಲದೆ 60Hz ರಿಫ್ರೆಶ್ ರೇಟ್‌, 840 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಪಡೆಯುವ ಮೂಲಕ ಉತ್ತಮ ವೀಕ್ಷಣೆ ಅನುಭವ ನೀಡಲಿದೆ.

ಜೊತೆಗೆ ಈ ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಬೊಕೆ ಲೆನ್ಸ್ನ ಡ್ಯುಯಲ್‌ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದಿದ್ದು, ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಈ ಮೂಲಕ ಈ ಫೋನ್‌ನಲ್ಲಿ ಉತ್ತಮ ಫೋಟೋಗ್ರಫಿ ಅನುಭವ ಪಡೆಯಬಹುದಾಗಿದೆ.

ಉಳಿದಂತೆ ಈ ಸ್ಮಾರ್ಟ್‌ಫೋನ್‌ ಮೀಡಿಯಾಟೆಕ್‌ ಹಿಲಿಯೋ G85 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, 6 GBಯ LPDDR4x RAM ಮತ್ತು 128 GB eMMC 5.1 ಇಂಟರ್‌ ಸ್ಟೋರೇಜ್‌ ಆಯ್ಕೆಯಲ್ಲಿ ಲಭ್ಯ ಇದೆ. ಹಾಗೆಯೇ ಈ ಫೋನ್ ಫನ್‌ಟಚ್‌ ಓಎಸ್‌ 13 ನೊಂದಿಗೆ ಆಂಡ್ರಾಯ್ಡ್‌ 13 ಓಎಸ್‌ನಲ್ಲಿ ರನ್‌ ಆಗಲಿದೆ ಎಂದು ತಿಳಿದುಬಂದಿದೆ.

ವಿವೋದಿಂದ ಭಾರತದಲ್ಲಿ ಶೀಘ್ರವೇ ಲಾಂಚ್‌ ಆಗಲಿದೆ ಮತ್ತೊಂದು ಹೊಸ ಫೋನ್‌!

ಈ ಫೋನ್‌ನ ಬ್ಯಾಟರಿ ವಿಚಾರಕ್ಕೆ ಬಂದರೆ ಇದು 15W ವೇಗದ ಚಾರ್ಜಿಂಗ್ ಸಾಮರ್ಥ್ಯಗಳೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದೆ. ಈ ಫೋನ್‌ನ ಫೀಚರ್ಸ್‌ ಆಧಾರದ ಮೇಲೆ ಹೊಸ ಫೋನ್‌ ಏನಾದರೂ ಬಂದರೆ ಬಜೆಟ್‌ ಬೆಲೆಯಲ್ಲಿ ಲಭ್ಯವಾಗಲಿದೆ ಎನ್ನಬಹುದಾಗಿದೆ. ಅದರಂತೆ ಮುಂಬರುವ ಫೋನ್‌ನ ಬಗ್ಗೆ ಹೆಚ್ಚಿನ ಮಾಹಿತಿ ಬೇಕು ಎಂದರೆ ನೀವು ಗಿಜ್‌ಬಾಟ್‌ನೊಂದಿಗೆ ಸಂಪರ್ಕದಲ್ಲಿ ಇರಿ.

Best Mobiles in India

English summary
Vivo Y18e smartphone will be launched in India soon. It is recognized in the Bureau of Indian Standards database.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+