ಬಿಡುಗಡೆಗೂ ಮುನ್ನ Vivo Y28s 5G ಬೆಲೆ ಲೀಕ್: ಇಷ್ಟು ಕಡಿಮೆ ಬೆಲೆಗೆ ರಾಶಿ ರಾಶಿ ಫೀಚರ್ಸ್!
ಮೊಬೈಲ್ ಪ್ರಿಯರಿಗೆ ಒಂದೇ ಬಾರಿಗೆ ಡಬಲ್ ಸಿಹಿ ಸುದ್ದಿ. ಮೊದಲ ಸಿಹಿ ಸುದ್ದಿ ಎಂದರೆ, ವಿವೋ (Vivo) ಶೀಘ್ರದಲ್ಲೇ ಭಾರತದಲ್ಲಿ ಹೊಸ 5G ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಿದೆ. ಎರಡನೇ ಖುಷಿ ಸುದ್ದಿ ಏನೆಂದರೆ, ಈ ಮುಂಬರುವ ಫೋನ್ ಅನ್ನು 15,000 ರೂ. ಗಿಂತಲೂ ಕಡಿಮೆ ಬೆಲೆಗೆ ಖರೀದಿಸಬಹುದು. ಹೌದು, Vivoನ Y ಸರಣಿಯ ಹೊಚ್ಚ ಹೊಸ ಫೋನ್ ಶೀಘ್ರದಲ್ಲೇ ಬರಲಿದೆ. ಈ ವರ್ಷದ ಆರಂಭದಲ್ಲಿ ವಿವೋ ಭಾರತದಲ್ಲಿ Vivo Y28 ಎಂಬ ಸ್ಮಾರ್ಟ್‌ಫೋನ್ ಅನ್ನ ಲಾಂಚ್ ಮಾಡಿತ್ತು. Vivo Y28s (Vivo Y28s 5G) ಅದರ ಅಪ್ಡೇಟೆಡ್ ರೂಪಾಂತರವಾಗಿ ಆದಷ್ಟು ಬೇಗ ಬಿಡುಗಡೆಯಾಗಲಿದೆ.
ಹೌದು, Vivo Y28s 5G ಕಳೆದ ತಿಂಗಳು ಜಾಗತಿಕವಾಗಿ ಬಿಡುಗಡೆಯಾಯಿತು. ಆದ್ದರಿಂದ ಈ ಸ್ಮಾರ್ಟ್‌ಫೋನ್‌ನ ಎಲ್ಲಾ ಪ್ರಮುಖ ವಿಶೇಷತೆಗಳನ್ನ ಕಂಪನಿಯ ಜಾಗತಿಕ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗಿದೆ. ಆದರೆ, ಭಾರತದಲ್ಲಿ ಇದರ ಬೆಲೆ ಎಷ್ಟು? ಎಂಬ ಕುತೂಹಲ ಮೂಡಿದೆ. ಇದೀಗ, ಪ್ರಮುಖ ಟಿಪ್‌ಸ್ಟರ್ ಸುಧಾಂಶು (tipster Sudhanshu) ನೀಡಿದ ಮಾಹಿತಿಯ ಆಧಾರದ ಮೇಲೆ 91ಮೊಬೈಲ್ಸ್ (91mobiles) ಭಾರತದಲ್ಲಿ Vivo Y28s 5G ಬೆಲೆಯನ್ನು ಬಹಿರಂಗ ಪಡಿಸಿದೆ.

ಮುಖ್ಯಾಂಶಗಳು
- Vivo Y28s 5G ಅನ್ನು ಕಳೆದ ತಿಂಗಳು ಜಾಗತಿಕವಾಗಿ ಬಿಡುಗಡೆ ಮಾಡಲಾಯಿತು.
- ಭಾರತದಲ್ಲಿ Vivo Y28s ಬಿಡುಗಡೆಯ ಕುರಿತು ಇನ್ನೂ ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ. ಆದರೆ, ಇದರ ಬೆಲೆ ಸೋರಿಕೆಯಾಗಿದೆ.
- ಈ ಹೊಸ ವಿವೋ ಫೋನ್ 6.5-ಇಂಚಿನ HD+ ಡಿಸ್ಪ್ಲೇ, 50MP ಕ್ಯಾಮೆರಾ, 5,000mAh ಬ್ಯಾಟರಿ ಹೊಂದಿರಲಿದೆ.
91ಮೊಬೈಲ್ಸ್‌ನ ವರದಿಯ ಪ್ರಕಾರ, Vivo Y28s 5G ಮೂರು ಸ್ಟೋರೇಜ್ ವೇರಿಯಂಟ್‌ಗಳಲ್ಲಿ ಲಭ್ಯವಿರುತ್ತದೆ. ಅವುಗಳೆಂದರೆ 4GB + 128GB, 6GB + 128GB ಮತ್ತು 8GB + 128GB. ಮೂಲ ರೂಪಾಂತರದ ಬೆಲೆಯು 13,999 ರೂ. ಇರಲಿದೆ. ಎರಡನೇ ಮಾದರಿಯ ಬೆಲೆ 15,499 ರೂ. ಮತ್ತು ಟಾಪ್‌ಎಂಡ್ ವೇರಿಯಂಟ್ (ಉನ್ನತ ಮಾದರಿ) ಬೆಲೆ 16,999 ರೂ. ಇರಲಿದೆ ಎಂದು ಈ ವರದಿ ಸೋರಿಕೆ ಮಾಡಿದೆ.
ಇದು ಬಾಕ್ಸ್ ಬೆಲೆಯೇ ಅಥವಾ ಆಫರ್‌ಗಳನ್ನು ಒಳಗೊಂಡಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ, Vivo Y28s 5G 15,000 ರೂ.ಗಿಂತಲೂ ಕಡಿಮೆ ಬೆಲೆಯ ಮಧ್ಯಮ ಶ್ರೇಣಿಯ ಫೋನ್ ಎಂದು ನಾವು ಸ್ಪಷ್ಟಪಡಿಸಬಹುದು. ಭಾರತದಲ್ಲಿ ಈ ಫೋನ್ ಬಿಡುಗಡೆ ದಿನಾಂಕವನ್ನು ಕಂಪನಿಯು ಇನ್ನೂ ಪ್ರಕಟಿಸಿಲ್ಲ. ಆದರೆ, ಶೀಘ್ರದಲ್ಲೇ ಲಾಂಚ್ ಆಗುವ ನಿರೀಕ್ಷೆ ಇದೆ. ಇದು ನಿಜವಾದ ಬೆಲೆಯೇ? ಎಂಬುದು ಸ್ಪಷ್ಟವಾಗಲಿದೆ.
Vivo Y28 ಮತ್ತು Vivo Y28s 5G ನಡುವಿನ ವ್ಯತ್ಯಾಸ
ಭಾರತದಲ್ಲಿ ಈಗಾಗಲೇ ಬಿಡುಗಡೆಯಾದ Vivo Y28 ಮಾದರಿ ಮತ್ತು ಮುಂಬರುವ Vivo Y28s 5G ಮಾದರಿಯ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಚಿಪ್‌ಸೆಟ್. ಇತರ ಫೀಚರ್ಸ್‌ಗಳು ಬಹುತೇಕ ಒಂದೇ ಆಗಿರುತ್ತವೆ. ಬೆಲೆ ಸುಮಾರು ಒಂದೇ ಆಗಿರಲಿದೆ. ಸ್ಮಾರ್ಟ್‌ಫೋನ್ ಹೊಳಪಿನ ಬ್ಯಾಕ್ ಪ್ಯಾನೆಲ್‌ನೊಂದಿಗೆ ನಾಚ್ ಡಿಸ್ಪ್ಲೇಯನ್ನು ಹೊಂದಿದೆ.

Vivo Y28s 5Gನ ಪ್ರಮುಖ ವಿಶೇಷತೆಗಳು
ವಿವೋ Y28s 5G ಫೋನ್ 6.5-ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿರಲಿದೆ. 90Hz ರಿಫ್ರೆಶ್ ದರ ಮತ್ತು 840 nits ಗರಿಷ್ಠ ಬ್ರೈಟ್‌ನೆಸ್ ಪಡೆದಿದೆ. ARM Mali-G57 MC2 GPU ಜೊತೆಗೆ MediaTek Dimensity 6300 ಪ್ರೊಸೆಸರ್‌ನಿಂದ ಈ ಸ್ಮಾರ್ಟ್‌ಫೋನ್ ಕೆಲಸ ನಿರ್ವಹಿಸಲಿದೆ.
50MP ಪ್ರೈಮರಿ ಕ್ಯಾಮೆರಾ, 8MP ಸೆಲ್ಫಿ ಶೂಟರ್
ಈ ಫೋನ್ 8GB RAM ಮತ್ತು 128GB ಸ್ಟೋರೇಜ್‌ನೊಂದಿಗೆ ಬರುತ್ತದೆ. ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಸ್ಟೋರೇಜ್ ವಿಸ್ತರಿಸಿಕೊಳ್ಳುವ ಸೌಲಭ್ಯವಿದೆ. ಇದು ಡ್ಯುಯಲ್ ಹಿಂಬದಿಯ ಕ್ಯಾಮೆರಾ ಘಟಕವನ್ನು ಹೊಂದಿರುತ್ತದೆ. ಇದು 50MP ಪ್ರೈಮರಿ ಕ್ಯಾಮೆರಾವನ್ನು f/1.8 ದ್ಯುತಿರಂಧ್ರದೊಂದಿಗೆ ಮತ್ತು 2MP ಸೆಕೆಂಡರಿ ಕ್ಯಾಮೆರಾ LED ಫ್ಲಾಷ್ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 8MP ಫ್ರಂಟ್ ಕ್ಯಾಮೆರಾ ಇರುತ್ತದೆ.
ಈ ಫೋನ್‌ನ ಬ್ಯಾಟರಿ ಬ್ಯಾಕಪ್ ಬೊಂಬಾಟ್
ಈ ಮೊಬೈಲ್ ಆಂಡ್ರಾಯ್ಡ್ 14 ಆಧಾರಿತ Funtouch OS 14 ಕಸ್ಟಮ್ ಸ್ಕಿನ್‌ನಲ್ಲಿ ರನ್ ಆಗುತ್ತದೆ. ಇದು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕ, ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP64 ರೇಟಿಂಗ್ ಅನ್ನು ಹೊಂದಿರುತ್ತದೆ. Vivo Y28s 5G ಸ್ಮಾರ್ಟ್‌ಫೋನ್ 15W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಹೊಂದಿರಲಿದೆ.
ಒಟ್ಟಾರೆ, ಪ್ರತಿದಿನ ಮಾರುಕಟ್ಟೆಯಲ್ಲಿ ಹೊಸ ಹೊಸ ಮೊಬೈಲ್‌ಗಳು ಬಿಡುಗಡೆ ಆಗುತ್ತಲೇ ಇರುತ್ತವೆ. ಟೆಕ್ನಾಲಜಿ ಬೆಳೆದಂತೆಲ್ಲ ಕಂಪನಿಗಳು ವಿನೂತನ ಮಾದರಿಯ ಫೋನ್‌ಗಳನ್ನು ತಯಾರಿಸುತ್ತಿವೆ. ಇವುಗಳಲ್ಲಿ ಎಐ ತಂತ್ರಜ್ಞಾನ ಕೂಡ ಲಭ್ಯವಿರುತ್ತದೆ. ಅಲ್ಲದೇ, ವಿಶಿಷ್ಟವಾದ ಫಿಚರ್ಸ್‌ಗಳು ಇರುತ್ತವೆ. ವಿವೋ ಸ್ಮಾರ್ಟ್ ಫೋನ್‌ಗಳಿಗೆ ಭಾರತದಲ್ಲಿ ವಿಶೇಷವಾದ ಬೇಡಿಕೆ ಇದ್ದು, Vivo Y28s 5G ಫೋನ್ ಅನ್ನು ಆದಷ್ಟು ಬೇಗ ಭಾರತದಲ್ಲಿ ಬಿಡುಗಡೆಗೊಳಿಸಲಿದೆ.


Click it and Unblock the Notifications








