ಬರ್ತಿವೆ 2 ಹೊಸ Vivo ಫೋನ್; 6500mAh ಬ್ಯಾಟರಿ ಖಚಿತ! ವಿಶೇಷತೆಗಳೇನು?
ವಿವೋ (Vivo) ಕಂಪನಿಯು ಸದ್ದಿಲ್ಲದೇ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ಶೀಘ್ರದಲ್ಲೇ ತನ್ನ Vivo Y300 ಸರಣಿಯನ್ನು ಪ್ರಾರಂಭಿಸಲಿದೆ. ಈ ಸರಣಿಯಲ್ಲಿ ವಿವೋ Y300 5G (Vivo Y300 5G) ಮತ್ತು ವಿವೋ Y300 ಪ್ರೊ 5G (Vivo Y300 Pro 5G) ಹೆಸರಿನ ಎರಡು ನೂತನ ಫೋನ್‌ಗಳು ಲಾಂಚ್ ಆಗುವ ಸಾಧ್ಯತೆಯಿದೆ. ವಿವೋ Y300 ಪ್ರೊ ಮೊಬೈಲ್ ಬಿಡುಗಡೆಗು ಮೊದಲೇ, 3C ಪ್ರಮಾಣೀಕರಣ ವೆಬ್‌ಸೈಟ್‌ನಲ್ಲಿ ಗುರುತಿಸಲ್ಪಟ್ಟಿದೆ.
ಹೌದು, ವಿವೋ ಕಂಪನಿಯು 6500mAh ಬ್ಯಾಟರಿಯೊಂದಿಗೆ ಹೊಸ ಫೋನ್ ಅನ್ನು ರಿಲೀಸ್ ಮಾಡುವುದು ಖಚಿತವಾಗಿದೆ. 3C ಪ್ರಮಾಣೀಕರಣ ವೆಬ್‌ಸೈಟ್‌ನಲ್ಲಿ ಈ ಫೋನಿನ ಫಾಸ್ಟ್ ಚಾರ್ಜಿಂಗ್ ವಿವರ ಬಹಿರಂಗವಾಗಿದೆ. ಇದಲ್ಲದೆ, ಇತರೆ ಸೋರಿಕೆಗಳು 6500mAh ಬ್ಯಾಟರಿಯನ್ನು ಪಡೆಯುವ ಬಗ್ಗೆ ಮಾಹಿತಿಯನ್ನು ನೀಡಿವೆ. ಇತ್ತೀಚೆಗೆ, ವಿವೋ Y300 ಪ್ರೊ ಫೋನಿನ ಪ್ಯಾಕೇಜಿಂಗ್ ಬಾಕ್ಸ್‌ನ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿವೆ.

ಈ ವಿವೋ ಫೋನ್ ಮಾಡೆಲ್ ನಂಬರ್ V2410A ನೊಂದಿಗೆ 3c ಸೈಟ್‌ನಲ್ಲಿ ಪಟ್ಟಿ ಮಾಡಲಾಗಿದೆ. ಇದನ್ನು ವಿವೋ Y300 ಪ್ರೊ 5G ಎಂದು ಗುರುತಿಸಲಾಗಿದೆ. ಈ ಫೋನ್ 80W ಚಾರ್ಜರ್‌ನೊಂದಿಗೆ ಬರಬಹುದು ಎಂದು ಪಟ್ಟಿ ಸೂಚಿಸುತ್ತದೆ. ಅಲ್ಲದೆ, ಈ ಪ್ಲಾಟ್‌ಫಾರ್ಮ್‌ನಲ್ಲಿ ಬೇರೆ ಯಾವುದೇ ವಿಶೇಷತೆಗಳಿಲ್ಲ. 3C ಪಟ್ಟಿಯೊಂದಿಗೆ, ಕಂಪನಿಯು ಕೆಲವೇ ದಿನಗಳಲ್ಲಿ ವಿವೋ Y300 ಸರಣಿಯ ಬಗ್ಗೆ ಅಧಿಕೃತ ಮಾಹಿತಿಯನ್ನು ಘೋಷಿಸಲಿದೆ ಎಂದು ಹೇಳಲಾಗುತ್ತಿದೆ.
6500mAh ಬ್ಯಾಟರಿಯೊಂದಿಗೆ ಬರುವುದು ಖಚಿತ!
ವಿವೋ Y300 ಪ್ರೊ 5G ಬೃಹತ್ 6,500mAh ಬ್ಯಾಟರಿಯಿಂದ ಚಾಲಿತವಾಗಬಹುದು ಎಂದು ಟಿಪ್‌ಸ್ಟರ್ ಹೇಳಿದೆ. ಇದು ದೃಢವಾದರೆ, ಈ ಫೋನ್ ಅತ್ಯಂತ ಶಕ್ತಿಶಾಲಿ ಬ್ಯಾಟರಿ ಹೊಂದಿರುವ ಫೋನ್ ಆಗಬಹುದು. ಈ ಫೋನ್ 80W ಚಾರ್ಜಿಂಗ್ ಅನ್ನು ಬೆಂಬಲಿಸುವುದು ಖಚಿತವಾಗಿದೆ. ಈ ಬ್ಯಾಟರಿಯೊಂದಿಗೆ ನೀವು ಸುಮಾರು 2 ದಿನಗಳ ಬ್ಯಾಕಪ್ ಪಡೆಯಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೆ, ಈ ಮಾಹಿತಿಯು ಎಷ್ಟು ನಿಖರವಾಗಿದೆ ಎಂಬುದನ್ನು ಕಾದುನೋಡಬೇಕಿದೆ.
Vivo Y200 Pro 5G ಫೋನಿನ ವೈಶಿಷ್ಟ್ಯಗಳು
ವಿವೋ ಕಂಪನಿಯು ಈ ಹಿಂದೆ ವಿವೋ Y200 ಪ್ರೊ 5G ( Vivo Y200 Pro 5G) ಫೋನನ್ನು ಬಿಡುಗಡೆ ಮಾಡಿತ್ತು. ಈ ಪೋನ್ ಮೊಬೈಲ್ ಪ್ರಿಯರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಮುಂಬರುವ ವಿವೋ Y300 ಪ್ರೊ 5G ಫೋನ್ ವಿವೋ Y200 ಪ್ರೊ 5Gಯ ಉತ್ತರಾಧಿಕಾರಿಯಾಗಲಿದೆ. ಈ ಫೋನಿನ ವೈಶಿಷ್ಟ್ಯಗಳು ಈ ಕೆಳಗಿನಂತಿವೆ.
ವಿವೋ Y200 ಪ್ರೊ 5G ಫೋನ್ 6.78 ಇಂಚಿನ 3D ಕರ್ವ್ಡ್ AMOLED ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ರೇಟ್, 1300 nits ಬ್ರೈಟ್‌ನೆಸ್ ಬೆಂಬಲ ಮತ್ತು 2400×1080 ಪಿಕ್ಸೆಲ್‌ಗಳ ರೆಸಲ್ಯೂಶನ್ ಅನ್ನು ಪಡೆಯುತ್ತದೆ. ಈ ವಿವೋ Y200 ಪ್ರೊ 5G ಸ್ಮಾರ್ಟ್‌ಫೋನ್ Qualcomm Snapdragon 695 5G ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಇದು, 8GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್‌ನೊಂದಿಗೆ 8GB ವಿಸ್ತೃತ RAM ತಂತ್ರಜ್ಞಾನದೊಂದಿಗೆ ಬರುತ್ತದೆ.
ಡ್ಯುಯಲ್ ಕ್ಯಾಮೆರಾ, 5,000mAh ಬ್ಯಾಟರಿ
ವಿವೋ Y200 ಪ್ರೊ 5G ಫೋನಿನ ಕ್ಯಾಮೆರಾ ಬಗ್ಗೆ ಹೇಳುವುದಾದರೆ, ಇದು ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು OIS ಜೊತೆಗೆ 64MP ಲೆನ್ಸ್ ಮತ್ತು 2MP ಬೊಕೆ ಲೆನ್ಸ್ ಅನ್ನು ಹೊಂದಿದೆ. ಅಲ್ಲದೆ, ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 16MP ಕ್ಯಾಮೆರಾ ಇದೆ. ಈ ಫೋನ್ ದೊಡ್ಡ 5,000mAh ಬ್ಯಾಟರಿಯನ್ನು ಹೊಂದಿದೆ. ಇದು ಚಾರ್ಜಿಂಗ್‌ಗಾಗಿ 44W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.


Click it and Unblock the Notifications








