Home
ಮೊಬೈಲ್

ಸದ್ದಿಲ್ಲದೆ Vivo Y37 Pro ಫೋನ್ ಬಿಡುಗಡೆ: 6,000mAh ಬ್ಯಾಟರಿ.. 50MP ಕ್ಯಾಮೆರಾ.. ಕಡಿಮೆ ಬೆಲೆ!

Vivo Y37 Pro launched: ವಿವೋ ಕಂಪನಿಯು ಸದ್ದಿಲ್ಲದೇ ಹೊಸ ಫೋನನ್ನು ಬಿಡುಗಡೆ ಮಾಡಿದೆ. ಅದುವೇ, ವಿವೋ Y37 ಪ್ರೊ (Vivo Y37 Pro) ಸ್ಮಾರ್ಟ್‌ಫೋನ್. ಈಗಾಗಲೇ ಕಂಪನಿಯು ವಿವೋ Y300 ಪ್ರೊ (Vivo Y300 Pro) ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಇದೀಗ, ಕಂಪನಿಯು ಮತ್ತೊಂದು ಬಜೆಟ್ ಮೊಬೈಲ್ ವಿವೋ Y37 ಪ್ರೊ ಅನ್ನು ಚೀನಾ ಮಾರುಕಟ್ಟೆಗೆ ಪರಿಚಯಿಸಿದೆ. ಬನ್ನಿ, ಈ ಹೊಸ ಫೋನಿನ ಬೆಲೆ ಮತ್ತು ವೈಶಿಷ್ಟ್ಯಗಳನ್ನು ಈ ಲೇಖನದಲ್ಲಿ ತಿಳಿಯೋಣ.

ವಿವೋ Y37 ಪ್ರೊ ಮೊಬೈಲ್ 6.68 ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿದೆ. ಇದು Qualcomm Snapdragon 4 Gen 2 ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಇದರಲ್ಲಿ 50 ಮೆಗಾಪಿಕ್ಸೆಲ್ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಇದೆ. ಈ ಫೋನ್ 44W ವೇಗದ ಚಾರ್ಜಿಂಗ್‌ನೊಂದಿಗೆ 6000mAh ದೊಡ್ಡ ಬ್ಯಾಟರಿ, 8GB RAM, IP64 ರೇಟಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ಸದ್ದಿಲ್ಲದೆ Vivo Y37 Pro ಫೋನ್ ಬಿಡುಗಡೆ: 6,000mAh ಬ್ಯಾಟರಿ.. 50MP ಕ್ಯಾಮೆರಾ

ವಿವೋ Y37 ಪ್ರೊ ಫೋನಿನ ಬೆಲೆ ಎಷ್ಟು?

ಕಂಪನಿಯು ವಿವೋ Y37 ಪ್ರೊ ಮೊಬೈಲ್ ಅನ್ನು ಸಿಂಗಲ್ ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಮಾಡಿದೆ. ಈ ಫೋನ್ 8GB RAM + 256GB ಸ್ಟೋರೇಜ್‌ನಲ್ಲಿ ಖರೀದಿಗೆ ಲಭ್ಯವಿದೆ. ಇದರ ಬೆಲೆ 21,000 ರೂ. (CNY 1,799) ಆಗಿದೆ. ಈ ಮೊಬೈಲ್ ಅನ್ನು ಚೀನಾದಲ್ಲಿ ಮೂರು ಬಣ್ಣಗಳಲ್ಲಿ ಬಿಡುಗಡೆ ಮಾಡಲಾಗಿದೆ. ನೀವು ಪಿಂಕ್, ಹಸಿರು ಮತ್ತು ಕಪ್ಪು ಬಣ್ಣದಲ್ಲಿ ಖರೀದಿಗೆ ಲಭ್ಯವಿರಲಿದೆ.

ವಿವೋ Y37 ಪ್ರೊ ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ: ವಿವೋ Y37 ಪ್ರೊ ಮೊಬೈಲ್ 6.68 ಇಂಚಿನ HD + LCD ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರ ಮತ್ತು 1,000 ನಿಟ್ಸ್ ಬ್ರೈಟ್‌ನೆಸ್ ಹೊಂದಿದೆ. ಇದು ಗ್ರಾಹಕರಿಗೆ ಕೈಗೆಟುಕುವ ಬಜೆಟ್‌ನಲ್ಲಿ ಲಭ್ಯವಿರುವ ಫೋನ್ ಆಗಿದೆ.

ಪ್ರೊಸೆಸರ್: ಈ ಹೊಸ ವಿವೋ ಫೋನ್ Qualcomm Snapdragon 4 Gen 2 ಪ್ರೊಸೆಸರ್ ಅನ್ನು ಹೊಂದಿದೆ. ಈ ಚಿಪ್‌ಸೆಟ್ ಗಡಿಯಾರದ ವೇಗ 2.2 GHz ಆಗಿದೆ. ಇದರಿಂದಾಗಿ ನೀವು ಗೇಮಿಂಗ್ ಮತ್ತು ಇತರ ಕೆಲಸಗಳಲ್ಲಿ ಸುಗಮ ಅನುಭವವನ್ನು ಪಡೆಯಬಹುದು. ಈ ಮೊಬೈಲ್ 8GB RAM + 256GB ವರೆಗೆ ಇಂಟರ್ನಲ್ ಸ್ಟೋರೇಜ್‌ ಅನ್ನು ಹೊಂದಿದೆ.

ಈ ಸುದ್ದಿ ಓದಿದ್ದೀರಾ?: ಬಂದೇ ಬಿಡ್ತು ಹೊಸ Vivo V40 SE 4G ಫೋನ್: 50MP ಕ್ಯಾಮೆರಾ, 80W ಫಾಸ್ಟ್ ಚಾರ್ಜಿಂಗ್.. ಬೆಸ್ಟ್‌ ಬೆಲೆ!

ಕ್ಯಾಮೆರಾ ಸೆಟಪ್: ವಿವೋ Y37 ಪ್ರೊ ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು LED ಫ್ಲ್ಯಾಷ್‌ನೊಂದಿಗೆ ಬರುತ್ತದೆ. ಇದು ಹಿಂದಿನ ಪ್ಯಾನೆಲ್‌ನಲ್ಲಿ 50 ಮೆಗಾಪಿಕ್ಸೆಲ್ ಪ್ರೈಮರಿ ಲೆನ್ಸ್ ಮತ್ತು ಪೋರ್ಟ್ರೇಟ್ ಮೋಡ್‌ಗಾಗಿ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. ಇದರೊಂದಿಗೆ, ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 5 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.

ಬ್ಯಾಟರಿ: ವಿವೋ Y37 ಪ್ರೊ ಮೊಬೈಲ್ ಪ್ರಮುಖ ವಿಶೇಷತೆ ಎಂದರೆ ಇದರ ಬ್ಯಾಟರಿ. ಈ ಫೋನ್ 6,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಇದು ಒಂದೇ ಚಾರ್ಜ್‌ನಲ್ಲಿ ಎರಡು ದಿನಗಳವರೆಗೆ ಬ್ಯಾಕಪ್ ಅನ್ನು ನೀಡುತ್ತದೆ. ಇದು ತ್ವರಿತ ಚಾರ್ಜಿಂಗ್‌ಗಾಗಿ 44W ವೇಗದ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿದೆ.

ಇತರೆ ವೈಶಿಷ್ಟ್ಯಗಳು: ಈ ಫೋನ್ ಭದ್ರತೆಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಆಡಿಯೊಗಾಗಿ ಸ್ಟಿರಿಯೊ ಸ್ಪೀಕರ್‌ಗಳನ್ನು ಹೊಂದಿದೆ. ನೀರು ಮತ್ತು ಧೂಳಿನಿಂದ ರಕ್ಷಿಸಲು ಮೊಬೈಲ್‌ಗೆ IP64 ರೇಟಿಂಗ್ ನೀಡಲಾಗಿದೆ.

Best Mobiles in India

English summary
vivo Y37 Pro with Snapdragon 4 Gen 2 SoC launched: Know Price, specs and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+