ಭಾರತದಲ್ಲೀಗ ಲಭ್ಯ 'ವಿವೋ ವೈ91'..ರೆಡ್‌ಮಿ ಮತ್ತು ರಿಯಲ್‌ಮಿಗೆ ಬಿಗ್ ಫೈಟ್!
ಚೀನಾದ ಪ್ರಮುಖ ಮೊಬೈಲ್ ತಯಾರಿಕಾ ಕಂಪನಿ ವಿವೋ ತನ್ನ ಬಹುನಿರೀಕ್ಷಿತ 'ವೈ91' ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಇದೀಗ ಲಾಂಚ್ ಮಾಡಿದೆ. AI ಬೆಂಬಲದ ಡ್ಯುಯಲ್ ರಿಯರ್ ಕ್ಯಾಮೆರಾ, 6.2 ಇಂಚಿನ ಫೂಲ್ ವ್ಯೂ ಡಿಸ್‌ಪ್ಲೇ ಸೇರಿದಂತೆ ಹಲವು ವಿಶೇಷ ಫೀಚರ್ಸ್‌ಗಳನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ಭಾರತೀಯರನ್ನು ಸೆಳೆಯಲು ಮಾರುಕಟ್ಟೆಗೆ ಕಾಲಿಟ್ಟಿದೆ.

ಭಾರತೀಯ ಮಧ್ಯಮ ವರ್ಗದ ಸ್ಮಾರ್ಟ್‌ಫೋನ್ ಗ್ರಾಹಕರನ್ನು ಸೆಳೆಯುವ ಬಹುತೇಕ ಲಕ್ಷಣಗಳನ್ನು ಹೊಂದಿರುವ ವಿವೋ 'ವೈ91' ಸ್ಮಾರ್ಟ್‌ಫೋನ್ ದೇಶದ ಮಾರುಕಟ್ಟೆಯಲ್ಲಿ ಕಮಾಲ್ ಮಾಡುವ ಸೂಚನೆಯನ್ನು ನೀಡಿದೆ. ಇದು ಕೂಡ ಒಂದು ಬಜೆಟ್ ಸ್ಮಾರ್ಟ್‌ಫೋನ್ ಆಗಿರುವುದರಿಂದ ರಿಯಲ್ ಮಿ, ರೆಡ್‌ಮಿ ಸ್ಮಾರ್ಟ್‌ಫೋನುಗಳಿಗೆ ಪೈಪೋಟಿ ನೀಡುವ ಸಾಧ್ಯತೆಗಳು ಹೆಚ್ಚಿದೆ.

ಹಾಗಾದರೆ, 6.2 ಇಂಚಿನ ಫೂಲ್ ವ್ಯೂ ಡಿಸ್‌ಪ್ಲೇ ಮತ್ತು ಕೃತಕ ಬುದ್ದಿಮತ್ತೆ ಕ್ಯಾಮೆರಾಗಳಂತಹ ಫೀಚರ್ಸ್‌ಗಳಿಂದಲೇ ಭಾರತೀಯ ಮೊಬೈಲ್ ಪ್ರಿಯರನ್ನು ಸೆಳೆಯುತ್ತಿರುವ ವಿವೋ ವೈ91 ಸ್ಮಾರ್ಟ್‌ಪೋನ್ ಹೇಗಿದೆ?, ಈ ಸ್ಮಾರ್ಟ್‌ಫೋನಿನ ಫೀಚರ್ಸ್ ಯಾವುವು?, ಈ ಸ್ಮಾರ್ಟ್‌ಫೋನ್ ಖರೀದಿಸಲು ಏನೆಲ್ಲಾ ಕಾರಣಗಳಿವೆ ಎಂಬುದನ್ನು ಇಂದಿನ ಲೇಖನದಲ್ಲಿ ಓದಿ ತಿಳಿಯಿರಿ.

ಕ್ಯಾಮರಾ ಸ್ಪೆಷಲ್!
ಮೊದಲಿನಿಂದಲೂ ತನ್ನ ವರ್ಗದಲ್ಲಿಯೇ ಉತ್ತಮ ಕ್ಯಾಮರಾ ನೀಡುತ್ತ ಬಂದಿರುವ ವಿವೋ ಕಂಪನಿಯು ತನ್ನ ವೈ91 ಸ್ಮಾರ್ಟ್‌ಫೋನಿನಲ್ಲೂ ಕ್ಯಾಮರಾಕ್ಕೆ ಹೆಚ್ಚಿನ ಆದ್ಯತೆ ಕೊಟ್ಟಿದೆ. ಸ್ಮಾರ್ಟ್‌ಫೋನಿನ ಹಿಂಬದಿಯಲ್ಲಿ AI ಬೆಂಬಲದ ಡ್ಯುಯಲ್ ರಿಯರ್ ಕ್ಯಾಮರಾವನ್ನು ನೀಡಿದ್ದು, ಉತ್ತಮ ಛಾಯಚಿತ್ರ ಸೆರೆಹಿಡಿಯಲು ಉಪಯುಕ್ತವಾಗಿದೆ. ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ f 2.2 ಅಪಾರ್ಚರ್ ಇರುವ 13 ಮೆಗಾಪಿಕ್ಸಲ್ ಪ್ರಥಮ ಕ್ಯಾಮರಾ ಮತ್ತು 2 ಮೆಗಾಪಿಕ್ಸಲ್‌ನ ಎರಡನೇ ಕ್ಯಾಮರಾವನ್ನು ಹೊಂದಿದೆ. ಇದರೊಂದಿಗೆ 8ಮೆಗಾಪಿಕ್ಸಲ್ ಸೆಲ್ಫೀ ಕ್ಯಾಮರಾವನ್ನು ನೋಡಬಹುದಾಗಿದೆ.

ಡಿಸ್‌ಪ್ಲೇ ಹೇಗಿದೆ?
ವಿವೋದ ಈ ಸ್ಮಾರ್ಟ್‌ಫೋನ್ 6.2 ಇಂಚಿನ ಹಲೊ ಫುಲ್ ವಿವ್ಯೂ ಸ್ಕ್ರೀನ್ ಹೊಂದಿದ್ದು, 720x1520 ರೆಸಲ್ಯೂಶನ್ ಫುಲ್ ಹೆಚ್‌ಡಿ ಡಿಸ್‌ಪ್ಲೇ ಇದಾಗಿದೆ. ಸ್ಕ್ರೀನ್‌ನಿಂದ ಫೋನ್ ಬಾಡಿ ನಡುವೆ ಶೇ.88.6 ರಷ್ಟು ಅನುಪಾತ ಹೊಂದಿದೆ. ಇದರೊಂದಿಗೆ ಡ್ಯೂಡ್ರಾಪ್ ನೋಚ್ ಅನ್ನು ಸಹ ಇದೆ. ಈ ಫೋನಿನ ಎತ್ತರ, ಅಗಲ ಮತ್ತು ಗಾತ್ರ ಕ್ರಮವಾಗಿ 155.11 x 75.09 x 8.28 ಈ ರೀತಿ ಇದೆ

ಪ್ರೊಸೆಸರ್ ಯಾವುದು?
ಆಕ್ಟಾಕೋರ್ ಮೀಡಿಯಾಟೆಕ್ ಹಿಲಿಯೋ P22 SoC ಪ್ರೊಸೆಸರ್ ಅನ್ನು ಈ ವಿವೋ ವೈ91 ಸ್ಮಾರ್ಟ್‌ಫೋನ್ ಹೊಂದಿದೆ. ಪವರ್‌ವಿಆರ್ GE8320 GPU ಜತೆಗೆ 2GB RAM ಸಹ ನೀಡಲಾಗಿದೆ. ಇದರೊಂದಿಗೆ 32GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ನೀಡಿದ್ದು, ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಸಂಗ್ರಹದ ಸಾಮರ್ಥ್ಯವನ್ನು 256GB ವರೆಗೂ ವಿಸ್ತರಿಸಲು ಅವಕಾಶ ಇದೆ.

ಬ್ಯಾಟರಿ ಪವರ್ ಎಷ್ಟು?
ವಿವೋ ವೈ 91 ಸ್ಮಾರ್ಟ್‌ಫೋನ್ 4030mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ವಿವೋ ವರ್ಗದ ಸ್ಮಾರ್ಟ್‌ಫೋನ್‌ಗಳಲ್ಲಿಯೇ ಅತ್ಯುತ್ತಮ ಸಾಮರ್ಥ್ಯದ ಬ್ಯಾಟರಿ ಎನ್ನಬಹುದು. ಬ್ಯಾಟರಿ ಸಾಮರ್ಥ್ಯ ನಿರ್ವವಹಿಸಲು ಸ್ಮಾರ್ಟ್ ಪವರ್ ಮ್ಯಾನೆಜಮೆಂಟ್ ಸಿಸ್ಟಮ್ ಅನ್ನು ಒಳಗೊಂಡಿರುವುದು ಈ ಸ್ಮಾರ್ಟ್‌ಫೋನ್ ಬ್ಯಾಟರಿ ತಂತ್ರಜ್ಞಾನದ ವಿಶೇಷತೆಯಾಗಿದೆ.

ಇತರೆ ಫೀಚರ್ಸ್‌ಗಳು ಏನು?
4G ವೋಲ್ಟ್ ಕನೆಕ್ಟಿವಿಟಿಯೊಂದಿದೆ ಎರಡು ನ್ಯಾನೋ ಸಿಮ್ ಬಳಸಲು ಅವಕಾಶ ನೀಡಿಲಾಗಿದೆ. ಇದರೊಂದಿಗೆ ವೈ-ಫೈ, ಬ್ಲೂಟೂತ್ 5.0 GLONASS ಜಿಪಿಎಸ್ ಯುಎಸ್‌ಬಿ ಪೋರ್ಟ್ ಈ ಸ್ಮಾರ್ಟ್‌ಫೋನಿನಲ್ಲಿ ನೀಡಲಾಗಿದೆ. ಫೇಸ್‌ಅನ್‌ಲಾಕ್, ಆಂಬಿಯಂಟ್ ಲೈಟ್ ಸೆನ್ಸಾರ್, ಕಂಪಾಸ್ ಮತ್ತು ಫಿಂಗರ್ ಸೆನ್ಸಾರ ಸಹ ಈ ಸ್ಮಾರ್ಟ್‌ಫೋನ್ ಹೊಂದಿದೆ.

ಬೆಲೆ ಎಷ್ಟು ?
ಅತ್ಯುತ್ತಮ ಫೀಚರ್ಸ್‌ಗಳನ್ನು ಹೊಂದಿರುವ ವಿವೋ ಸಂಸ್ಥೆಯ ಈ ಹೊಸ ಸ್ಮಾರ್ಟ್‌ಫೋನ್ ಬೆಲೆಯು 10,990 ರೂಪಾಯಿಗಳು ಮಾತ್ರ. ಭಾರತದಲ್ಲಿ ಲಭ್ಯವಿರುವ ಈ ಫೋನ್, ಓಶಿಯನ್ ಬ್ಲೂ, ಸ್ಟಾರಿ ಬ್ಲಾಕ್ ಸೇಡ್ ಜತೆಗೆ ಗ್ರಾಡಿಯಂಟ್ ಟೆಕ್ಸಚರ್ ಬಣ್ಣಗಳಲ್ಲಿ ದೊರೆಯಲಿದೆ. ಈ ಸ್ಮಾರ್ಟ್‌ಫೋನ್ ರಿಯಲ್ ಮಿ, ರೆಡ್‌ಮಿ ಸ್ಮಾರ್ಟ್‌ಫೋನುಗಳಿಗೆ ಪೈಪೋಟಿ ನೀಡುವ ಸಾಧ್ಯತೆಗಳು ಹೆಚ್ಚಿದೆ.


Click it and Unblock the Notifications








