Home
ಮೊಬೈಲ್

ಮಾರುಕಟ್ಟೆಗೆ ಬಂತು ಐಫೋನ್ X, ಒನ್‌ಪ್ಲಸ್ 6 ಮೀರಿಸುವ ಸ್ಮಾರ್ಟ್‌ಫೋನ್...!

By Srinidhi

ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿಸಿರುವ ಐಫೋನ್ X ಮಾದರಿಯ ಡಿಸ್‌ಪ್ಲೇ, ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿಯೂ ರಾರಾಜಿಸುತ್ತಿದೆ. ಮೊನ್ನೇ ತಾನೇ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಸಹ ಇದೇ ಮಾದರಿಯ ಡಿಸ್‌ಪ್ಲೇಯನ್ನು ಹೊಂದಿತ್ತು. ಈಗ ಅದನ್ನು ಮೀರಿಸುವಂತನ ವಿವೊ Z1 ಸ್ಮಾರ್ಟ್‌ಫೋನ್ ಲಾಂಚ್ ಆಗಿದ್ದು, ಮಾರುಕಟ್ಟೆಯಲ್ಲಿ ತನ್ನದೇ ಇತಿಹಾಸ ರಚಿಸುವುದರಲ್ಲಿ ಯಾವುದೇ ಅನುಮಾನಗಳಿಲ್ಲ.

ಮಾರುಕಟ್ಟೆಗೆ ಬಂತು ಐಫೋನ್ X, ಒನ್‌ಪ್ಲಸ್ 6 ಮೀರಿಸುವ ಸ್ಮಾರ್ಟ್‌ಫೋನ್...!

ಓದಿರಿ: ರೂ.10,500 ನೀಡಿ ಐಫೋನ್ 8 ತೆಗೆದುಕೊಂಡು ಹೋಗಿ: ಏರ್‌ಟೆಲ್ ಕೊಟ್ಟ ಹೊಸ ಆಫರ್..!

ವಿವೊ ಬಿಡುಗಡೆ ಮಾಡುತ್ತಿರುವ ಮೊದಲ Z ಸರಣಿಯ ಸ್ಮಾರ್ಟ್‌ಫೋನ್ ಇದಾಗಿದ್ದು, ವೇಗದ ಪ್ರೋಸೆಸರ್, ಬೆಸ್ಟ್ ಡಿಸ್‌ಪ್ಲೇ, ಡ್ಯುಯಲ್ ಕ್ಯಾಮೆರಾ ಸೇರಿದಂತೆ ಉತ್ತಮ ವಿಶೇಷತೆಗಳಿಂದ ಕೂಡಿರುವ ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಮಾದರಿಯ ಶಕೆಯನ್ನು ಆರಂಭಿಸಲಿದೆ. ವಿವೊ Z1 ಸ್ಮಾರ್ಟ್‌ಫೋನ್ ಕುರಿತ ಮಾಹಿತಿಯೂ ಮುಂದಿದೆ.

ವಿವೊ Z1 ಸ್ಮಾರ್ಟ್‌ಫೋನ್ ಡಿಸ್‌ಪ್ಲೇ:

ವಿವೊ Z1 ಸ್ಮಾರ್ಟ್‌ಫೋನ್ ಡಿಸ್‌ಪ್ಲೇ:

6.22 ಇಂಚಿನ 19:9 ಅನುಪಾತದ FHD+ ಗುಣಮಟ್ಟದ ಡಿಸ್‌ಪ್ಲೇಯನ್ನು ವಿವೊ Z1 ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದ್ದು, ಐಫೋನ್ X ಮಾದರಿಯ ಡಿಸ್‌ಪ್ಲೇ ನೋಚ್ ಅನ್ನು ನೀಡಲಾಗಿದೆ. ಇದರಲ್ಲಿ ಗೇಮ್ ಆಡುವ ಮತ್ತು ವಿಡಿಯೋ ನೋಡುವ ಅನುಭವನ್ನು ಅತ್ಯುತ್ತಮವಾಗಿದೆ ಎನ್ನಲಾಗಿದೆ.

ವಿವೊ Z1 ಸ್ಮಾರ್ಟ್‌ಫೋನ್ ಪ್ರೋಸೆಸರ್;

ವಿವೊ Z1 ಸ್ಮಾರ್ಟ್‌ಫೋನ್ ಪ್ರೋಸೆಸರ್;

ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 660 ನೊಂದಿಗೆ ಕಾಣಿಸಿಕೊಂಡಿರುವ ವಿವೊ Z1 ಸ್ಮಾರ್ಟ್‌ಫೋನ್, 2.2FGHz ವೇಗವನ್ನು ಹೊಂದಿದೆ. ಅಲ್ಲದೇ 4GB RAM ಸಹ ಇದರೊಂದಿಗೆ ಇದೆ. 64GB ಇಂಟರ್ನಲ್ ಮೆಮೊರಿ ಇದ್ದು, ಬೇಕಾದಲ್ಲಿ 256GB ವರಗೂ ವಿಸ್ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ.

ವಿವೊ Z1 ಸ್ಮಾರ್ಟ್‌ಫೋನ್ OS:

ವಿವೊ Z1 ಸ್ಮಾರ್ಟ್‌ಫೋನ್ OS:

ಆಂಡ್ರಾಯ್ಡ್ ಒರಿಯೋದಲ್ಲಿ ಕಾರ್ಯನಿರ್ವಹಿಸುವ ವಿವೊ Z1 ಸ್ಮಾರ್ಟ್‌ಫೋನ್, ಫನ್ ಟಚ್ OS ಅನ್ನು ಒಳಗೊಂಡಿದ್ದು, ಬಳಕೆದಾರರಿಗೆ ಹೊಸ ಅನುಭವನ್ನು ನೀಡಲಿದೆ.

ವಿವೊ Z1 ಸ್ಮಾರ್ಟ್‌ಫೋನ್ ಕ್ಯಾಮೆರಾ:

ವಿವೊ Z1 ಸ್ಮಾರ್ಟ್‌ಫೋನ್ ಕ್ಯಾಮೆರಾ:

ವಿವೊ Z1 ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಅಳವಡಿಲಾಗಿದ್ದು, 13MP + 2 MP ಇದರಲ್ಲಿದೆ. ಜೊತೆಗೆ LED ಫ್ಲಾಷ್ ಲೈಟ್ ಅನ್ನು ಸಹ ನೀಡಲಾಗಿದೆ. ಇದಲ್ಲದೇ ಮುಂಭಾಗದಲ್ಲಿ 12 MP ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. 3260mAh ಬ್ಯಾಟರಿಯೂ ಇದರಲ್ಲಿದೆ.

ವಿವೊ Z1 ಸ್ಮಾರ್ಟ್‌ಫೋನ್ ಬೆಲೆ:

ವಿವೊ Z1 ಸ್ಮಾರ್ಟ್‌ಫೋನ್ ಬೆಲೆ:

ವಿವೊ Z1 ಸ್ಮಾರ್ಟ್‌ಫೋನ್ ಸದ್ಯ ಚೀನಾ ಬೆಲೆಯೂ ಬಹಿರಂಗಗೊಂಡಿದ್ದು, ರೂ.19,200ಕ್ಕೆ ಮಾರಾಟವಾಗಲಿದೆ. ಮೇ. 29 ಎಂದು ಭಾರತೀಯ ಮಾರುಕಟ್ಟೆಯಲ್ಲಿಯೂ ಲಾಂಚ್ ಆಗಲಿದ್ದು, ಬೆಲೆಯಲ್ಲಿ ಕೊಂಚ ವ್ಯತ್ಯಾಸವನ್ನು ಕಾಣುವ ಸಾಧ್ಯತೆ ಇದೆ.

Best Mobiles in India

English summary
Vivo Z1 With 6.26-Inch 19:9 Display, Snapdragon 660 SoC Launched. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+