Home
ಮೊಬೈಲ್

ಜಿಯೋ-ಏರ್‌ಟೆಲ್‌ಗೆ ಸೆಡ್ಡು: ವೊಡಾಫೋನ್‌ನಿಂದ ರೂ.999ಕ್ಕೆ 4G ಸ್ಮಾರ್ಟ್‌ಫೋನ್‌

ಜಿಯೋ ಮೊದಲಿಗೆ ಹೊಸ ಗ್ರಾಹಕರನ್ನು ದೊಡ್ಡ ಮಟ್ಟದಲ್ಲಿ ಅದರಲ್ಲೂ 2G/3G ಗ್ರಾಹಕರಿಗಾಗಿಯೇ ಜಿಯೋ ಫೋನ್ ಬಿಡುಗಡೆ ಮಾಡಿತ್ತು. ಇದೇ ಮಾದರಿಯಲ್ಲಿ ಏರ್‌ಟೆಲ್ ಕಾರ್ಬನ್ ಜೊತೆ ಸೇರಿಕೊಂಡು ಇಂಡಿಯನ್ ಸ್ಮಾರ್ಟ್‌ಫೋನ್ ಲಾಂಚ್ ಮಾಡಿತ್ತು.

By Srinidhi

ದೇಶಿಯ ಟೆಲಿಕಾಂ ಕಂಪನಿಗಳ ನಡುವೆ ಭಾರೀ ಸ್ಪರ್ಧೆಯೂ ಏರ್ಪಟ್ಟಿದ್ದು, ದರ ಸಮರಕ್ಕೂ ಮೀರಿದಂತೆ ಹೊಸ ಗ್ರಾಹಕರನ್ನು ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಇದೇ ಮಾದರಿಯಲ್ಲಿ ಕಡಿಮೆ ಬೆಲೆಗೆ ತಮ್ಮದೇ ಕಂಪನಿಯ ಫೋನ್‌ಗಳನ್ನು ಲಾಂಚ್ ಮಾಡಿ ಗ್ರಾಹಕರನ್ನು ಆಕರ್ಷಿಸುವ ಕಾರ್ಯಕ್ಕೆ ಮುಂದಾಗಿವೆ.

ಜಿಯೋ-ಏರ್‌ಟೆಲ್‌ಗೆ ಸೆಡ್ಡು: ವೊಡಾಫೋನ್‌ನಿಂದ ರೂ.999ಕ್ಕೆ 4G ಸ್ಮಾರ್ಟ್‌ಫೋನ್‌

ಓದಿರಿ: BSNL ಲೂಟ್ ಲೂ ಆಫರ್: ಈ ಮಾದರಿ ಆಫರ್ ಇಲ್ಲಿವರೆಗೆ ಯಾರು ನೀಡಿಲ್ಲ..!!

ಜಿಯೋ ಮೊದಲಿಗೆ ಹೊಸ ಗ್ರಾಹಕರನ್ನು ದೊಡ್ಡ ಮಟ್ಟದಲ್ಲಿ ಸೆಳೆಯಲು ಅದರಲ್ಲೂ 2G/3G ಗ್ರಾಹಕರಿಗಾಗಿಯೇ ಜಿಯೋ ಫೋನ್ ಬಿಡುಗಡೆ ಮಾಡಿತ್ತು. ಇದೇ ಮಾದರಿಯಲ್ಲಿ ಏರ್‌ಟೆಲ್ ಕಾರ್ಬನ್ ಜೊತೆ ಸೇರಿಕೊಂಡು ಇಂಡಿಯನ್ ಸ್ಮಾರ್ಟ್‌ಫೋನ್ ಲಾಂಚ್ ಮಾಡಿತ್ತು. ಹಾಗೆಯೇ ಸರ್ಕಾರಿ ಸ್ವಾಮ್ಯದ BSNL ಸಹ ಇದೇ ಹಾದಿಯಲ್ಲಿ ಮೈಕ್ರೊಮಾಕ್ಸ್ ಜೊತೆಯಾಗಿ ಭಾರತ್ 1 ಫೋನ್ ಬಿಡುಗಡೆ ಮಾಡಿದೆ. ಈಗ ಸರದಿ ವೊಡಾಫೋನ್‌ನದ್ದು.

ಮೈಕ್ರೊಮಾಕ್ಸ್ - ವೊಡಾಫೋನ್ ಒಪ್ಪಂದ:

ಮೈಕ್ರೊಮಾಕ್ಸ್ - ವೊಡಾಫೋನ್ ಒಪ್ಪಂದ:

ಟೆಲಿಕಾಂ ವಲಯದಲ್ಲಿ ವೊಡಾಫೋನ್‌ ಸಹ ಉತ್ತಮ ಸಂಖ್ಯಾಬಲವನ್ನು ಹೊಂದಿದ್ದು, ಇದನ್ನು ವೃದ್ಧಿಸಿಕೊಳ್ಳುವ ಸಲುವಾಗಿ ಹೊಸ ಗ್ರಾಹಕರನ್ನು ತನ್ನ ಕುಟುಂಬಕ್ಕೆ ಸೇರಿಸಿಕೊಳ್ಳುವ ಕಾರ್ಯಕ್ಕೆ ಮೈಕ್ರೋಮಾಕ್ಸ್ ನೊಂದಿಗೆ ಸೋರಿಕೊಂಡು ಭಾರತ್ ೨ ಆಟ್ರಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ.

ರೂ. 999ಕ್ಕೆ ಈ ಸ್ಮಾರ್ಟ್‌ಫೋನ್ ಲಭ್ಯ:

ರೂ. 999ಕ್ಕೆ ಈ ಸ್ಮಾರ್ಟ್‌ಫೋನ್ ಲಭ್ಯ:

ಈಗಾಗಲೇ ಮೊಬೈಲ್ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿರುವ ಮೈಕ್ರೊಮಾಕ್ಸ್, ವೊಡಾಫೋನ್‌ನೊಂದಿಗೆ ಸೇರಿಕೊಂಡು ಭಾರತ್ 2 ಆಲ್ಟ್ರಾ 4G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಇದರ ಬೆಲೆಯೂ ರೂ. 999 ಆಗಲಿದ್ದು, ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಅತೀ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಇದಾಗಿದೆ.

ಭಾರತ್ 2 ಆಲ್ಟ್ರಾ 4G ಸ್ಮಾರ್ಟ್‌ಫೋನ್ ವಿಶೇಷತೆಗಳು:

ಭಾರತ್ 2 ಆಲ್ಟ್ರಾ 4G ಸ್ಮಾರ್ಟ್‌ಫೋನ್ ವಿಶೇಷತೆಗಳು:

ಭಾರತ್ 2 ಆಲ್ಟ್ರಾ 4G ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 6.0ದಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿದ್ದು, ಈ ಫೋನಿನಲ್ಲಿ 512 MB RAM ಅನ್ನು ಕಾಣಬಹುದಾಗಿದೆ. ಇದಲ್ಲದೇ ಕ್ವಾಡ್ ಕೋರ್ ಸೆರೆಡ್ರಮ್ ಪ್ರೋಸೆಸರ್ ಸಹ ಅಳವಡಿಸಲಾಗಿದೆ. ಇದರಲ್ಲಿ 1300mAh ಬ್ಯಾಟರಿಯನ್ನು ಸಹ ನೀಡಲಾಗಿದೆ.

ಭಾರತ್ 2 ಆಲ್ಟ್ರಾ 4G ಸ್ಮಾರ್ಟ್‌ಫೋನ್ ಕ್ಯಾಮೆರಾ:

ಭಾರತ್ 2 ಆಲ್ಟ್ರಾ 4G ಸ್ಮಾರ್ಟ್‌ಫೋನ್ ಕ್ಯಾಮೆರಾ:

ಭಾರತ್ 2 ಆಲ್ಟ್ರಾ 4G ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ 2MP ಕ್ಯಾಮೆರಾವನ್ನು ನೀಡಲಾಗಿದ್ದು, ಮುಂಭಾಗದಲ್ಲಿ 0.3 MP ಕ್ಯಾಮೆರಾವನ್ನು ಕಾಣಬಹುದಾಗಿದೆ. ಇದು ಜಿಯೋ ಫೋನ್‌ನಲ್ಲಿರುವ ಮಾದರಿಯ ಕ್ಯಾಮೆರಾಗಳೇ ಆಗಿದೆ.

ಫೋನ್ ಅಸಲಿ ಬೆಲೆ: ರೂ.2,899

ಫೋನ್ ಅಸಲಿ ಬೆಲೆ: ರೂ.2,899

ಭಾರತ್ 2 ಆಲ್ಟ್ರಾ 4G ಸ್ಮಾರ್ಟ್‌ಫೋನ್ ಅಸಲಿ ಬೆಲೆ ರೂ.2,899 ಆಗಿದೆ. ಆದರೆ ವೊಡಾಫೋನ್ ರೂ. 1900 ಗಳನ್ನು ರಿಫಂಡ್ ಮಾಡಲಿದೆ. ಅದಕ್ಕಾಗಿ ನೀವು 36 ತಿಂಗಳು ರೂ.150ಕ್ಕೆ ರೀಚಾರ್ಜ್ ಮಾಡಿಸಬೇಕಾಗಿದೆ. ಇದರಲ್ಲಿ ಮೊದಲ 18 ತಿಂಗಳಲ್ಲಿ ರೂ.900 ವಾಪಸ್ಸು ಬರಲಿದ್ದು, ನಂತರ ಮಿಕ್ಕ ಹಣವೂ 36 ತಿಂಗಳ ಒಳಗೆ ನಿಮಗೆ ವಾಪಸ್ಸು ಸೇರಲಿದೆ ಎನ್ನಲಾಗಿದೆ.

ಎಂ-ಪೈಸಾ ಆಕೌಂಟ್‌ಗೆ ಹಣ:

ಎಂ-ಪೈಸಾ ಆಕೌಂಟ್‌ಗೆ ಹಣ:

ವೊಡಾಫೋನ್ ರೂ.1900ಗಳನ್ನು ನೇರವಾಗಿ ಹಣದ ರೂಪದಲ್ಲಿ ನೀಡುವುದಿಲ್ಲ ಬದಲಾಗಿದೆ. ತನ್ನದೇ ಆದ ಎಂ-ಪೈಸಾ ಆಕೌಂಟ್ ಗೆ ವರ್ಗಾವಣೆಯನ್ನು ಮಾಡಲಿದೆ ಎನ್ನಲಾಗಿದೆ.

Best Mobiles in India

English summary
Vodafone and Micromax launch Bharat 2. to know more visit kannada.gizot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+