BSNL ಲೂಟ್ ಲೂ ಆಫರ್: ಈ ಮಾದರಿ ಆಫರ್ ಇಲ್ಲಿವರೆಗೆ ಯಾರು ನೀಡಿಲ್ಲ..!!
ವಿವಿಧ ಪ್ಲಾನ್‌ಗಳ ಮೇಲೆ ತನ್ನ ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ ಶೇ.70% ಕಡಿತವನ್ನು ಘೋಷಣೆ ಮಾಡಿದೆ. ಹೊಸ ಪೋಸ್ಟ್ ಪೇಯ್ಡ್ ಗ್ರಾಹಕರನ್ನು ಸೆಳೆಯುವ ಪ್ರಯತ್ನವು ಇದಾಗಿದೆ ಎನ್ನಲಾಗಿದೆ.
ಸರ್ಕಾರಿ ಸ್ವಾಮ್ಯದ BSNL ತನ್ನ ಗ್ರಾಹಕರಿಗೆ ನೂತನ ಯೋಜನೆಯೊಂದನ್ನು ಲಾಂಚ್ ಮಾಡಿದೆ. ಇದಕ್ಕೆ ಲೂಟ್ ಲೂ (ಕೊಳ್ಳೆ ಹೊಡೆಯಿರಿ) ಎಂದು ನಾಮಕರಣ ಮಾಡಿದೆ. ಇಷ್ಟು ದಿನ ಕೇವಲ ಪ್ರೀಪೇಯ್ಡ್ ಗ್ರಾಹಕರಿಗೆ ಮಾತ್ರವೇ ಆಫರ್ ನೀಡಿದ್ದ BSNL ಈ ಆಫರ್ ಮೂಲಕ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಗಾಳ ಹಾಕಿದೆ.

ಓದಿರಿ: ಸೆಲ್ಫಿಗಾಗಿಯೇ ಹೊಸ ತಂತ್ರಜ್ಞಾನ ಹೊಂದಿರುವ ವಿಶ್ವದ ಮೊದಲ ಫೋನ್..!
ವಿವಿಧ ಪ್ಲಾನ್‌ಗಳ ಮೇಲೆ ತನ್ನ ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ ಶೇ.70% ಕಡಿತವನ್ನು ಘೋಷಣೆ ಮಾಡಿದೆ. ಹೊಸ ಪೋಸ್ಟ್ ಪೇಯ್ಡ್ ಗ್ರಾಹಕರನ್ನು ಸೆಳೆಯುವ ಪ್ರಯತ್ನವು ಇದಾಗಿದೆ ಎನ್ನಲಾಗಿದೆ.

ಯಾವ ಯಾವ ಪ್ಲಾನ್ ಮೇಲೆ ಆಫರ್ ಲಭ್ಯ:
BSLN ಬಿಡುಗಡೆ ಮಾಡಿರುವ ಪ್ಲಾನ್ 1525, ಪ್ಲಾನ್ 1125, ಪ್ಲಾನ್ 799, ಪ್ಲಾನ್ 525, ಪ್ಲಾನ್ 325 ಮತ್ತು ಪ್ಲಾನ್ 225 ಪಡೆದವರಿಗೆ ಈ ಆಫರ್ ಲಭ್ಯವಾಗಲಿದೆ.

ಒಂದು ವರ್ಷದ ಆಡ್ವಾನ್ಸ್ ಪೇಮೆಂಟ್:
BSNL ಗ್ರಾಹಕರು 1 ವರ್ಷದ ಅಂದರೆ 12 ತಿಂಗಳ ಬಾಡಿಗೆಯನ್ನು ಮೊದಲೇ ಪಾವತಿ ಮಾಡಿದರೆ ಶೇ. 60% ರಿಯಾಯಿತಿಯನ್ನು ಪಡೆಯಬಹುದಾಗಿದೆ. ಕನಿಷ್ಟ ಶೇ.20%ರಷ್ಟು ಕಡಿತವನ್ನು ಪಡೆಯಬಹುದು.

ಆರು ತಿಂಗಳ ಆಡ್ವಾನ್ಸ್ ಪೇಮೆಂಟ್:
BSNL ಗ್ರಾಹಕರು 6 ತಿಂಗಳ ಬಾಡಿಗೆಯನ್ನು ಮೊದಲೇ ಪಾವತಿ ಮಾಡಿದರೆ ಶೇ. 45% ರಿಯಾಯಿತಿಯನ್ನು ಪಡೆಯಬಹುದಾಗಿದೆ. ಕನಿಷ್ಟ ಶೇ.8 %ರಷ್ಟು ಕಡಿತವನ್ನು ಪಡೆಯಬಹುದು.

ಮೂರು ತಿಂಗಳ ಆಡ್ವಾನ್ಸ್ ಪೇಮೆಂಟ್:
BSNL ಗ್ರಾಹಕರು 3 ತಿಂಗಳ ಬಾಡಿಗೆಯನ್ನು ಮೊದಲೇ ಪಾವತಿ ಮಾಡಿದರೆ ಶೇ. 30% ರಿಯಾಯಿತಿಯನ್ನು ಪಡೆಯಬಹುದಾಗಿದೆ. ಕನಿಷ್ಟ ಶೇ.4 %ರಷ್ಟು ಕಡಿತವನ್ನು ಪಡೆಯಬಹುದು.


Click it and Unblock the Notifications








