ನಿಮ್ಮ ಫೋನ್‌ನಲ್ಲಿ ಎಷ್ಟು ಸೆನ್ಸಾರ್‌ಗಳಿವೆ ಗೊತ್ತಾ?..ನಿಮಗೆ ಶಾಕ್ ಆಗಬಹುದು!!

ನಿಮಗೆ ಗೊತ್ತಾ? ನಾವು ಪ್ರತಿದಿನ ಬಳಸುವ ಸ್ಮಾರ್ಟ್​ಫೋನಿನಲ್ಲಿ 5 ಹಲವುಸೆನ್ಸಾರ್‌ಗಳು ಇವೆ.! ನಮಗೆ ಗೊತ್ತಿಲ್ಲದೆಯೇ ನಾವು ಅವುಗಳ ಪ್ರಯೋಜನ ಪಡೆಯುತ್ತಿದ್ದೇವೆ.!!

|

ನಿಮಗೆ ಗೊತ್ತಾ? ನಾವು ಪ್ರತಿದಿನ ಬಳಸುವ ಸ್ಮಾರ್ಟ್​ಫೋನಿನಲ್ಲಿ ಹಲವು ಸೆನ್ಸಾರ್‌ಗಳು ಇವೆ.! ನಮಗೆ ಗೊತ್ತಿಲ್ಲದೆಯೇ ನಾವು ಅವುಗಳ ಪ್ರಯೋಜನ ಪಡೆಯುತ್ತಿದ್ದೇವೆ.!! ಆದರೆ, ಆ ಸೆನ್ಸಾರ್‌ಗಳು ಎಲ್ಲಿವೆ ಮತ್ತು ಆ ಸೆನ್ಸಾರ್‌ಗಳಿಗೆ ಏನೆಂದು ಹೆಸರಿಡಲಾಗಿದೆ ಎಂಬುದು ಮಾತ್ರ ಯಾರಿಗೂ ಗೊತ್ತಿಲ್ಲ.!!

ಹೌದು, ಇತ್ತೀಚಿನ ಸ್ಮಾರ್ಟ್‌ಫೋನ್‌ಗಳ ಕಾರ್ಯನಿರ್ವಹಣೆ ಹೆಚ್ಚು ಕುತೋಹಲವಾಗಿ ಕಾಣುವುದಕ್ಕೆ ಮೊದಲ ಕಾರಣ ಸೆನ್ಸಾರ್‌ಗಳು ಎನ್ನಬಹುದು. ಆದರೆ, ಈ ಬಗ್ಗೆ ಜನರು ಮಾತ್ರ ಹೆಚ್ಚು ತಿಳಿದಿಲ್ಲ. ಹಾಗಾಗಿ, ಇಂದಿನ ಲೇಖನದಲ್ಲಿ ಸ್ಮಾರ್ಟ್‌ಫೋನ್‌ನಲ್ಲಿ ಎಷ್ಟು ಪ್ರಮುಖ ಸೆನ್ಸಾರ್‌ಗಳಿವೆ? ಮತ್ತು ಅವುಗಳ ಉಪಯೋಗವೇನು? ಎಂಬುದನ್ನು ತಿಳಿಯಿರಿ.!!

ಪ್ರಾಕ್ಸಿಮಿಟಿ ಸೆನ್ಸರ್!!

ಪ್ರಾಕ್ಸಿಮಿಟಿ ಸೆನ್ಸರ್!!

ಕರೆ ಮಾಡುವಾಗ ಫೋನ್ ಅನ್ನು ಕಿವಿಯ ಬಳಿ ಕೊಂಡೊಯ್ದ ತಕ್ಷಣವೇ ಡಿಸ್‌ಪ್ಲೇ ಬೆಳಕು ಆರಿಹೋಗುತ್ತದಲ್ಲ, ಆ ವಿದ್ಯಮಾನಕ್ಕೆ ಕಾರಣವಾಗುವ ಸೆನ್ಸಾರ್ ಅನ್ನು ಪ್ರಾಕ್ಸಿಮಿಟಿ ಸೆನ್ಸರ್ ಎಂದು ಕರೆಯುವವರು. ನಮ್ಮ ಕಿವಿಯೋ ಕೆನ್ನೆಯೋ ಟಚ್​ಸ್ಕ್ರೀನ್​ಗೆ ತಗುಲಿ ಪೋನ್ ಕಾರ್ಯನಿರ್ವಹಿಸುವುದನ್ನು ತಡೆಯಲು ಈ ಸೆನ್ಸಾರ್ ಬಳಸಲಾಗಿದೆ.!!

ಆಕ್ಸೆಲೆರೋಮೀಟರ್ ಸೆನ್ಸಾರ್!!

ಆಕ್ಸೆಲೆರೋಮೀಟರ್ ಸೆನ್ಸಾರ್!!

ಫೋನನ್ನು ನೇರವಾಗಿ ಹಿಡಿದಿದ್ದೇವೋ ಅಡ್ಡವಾಗಿ ಹಿಡಿದಿದ್ದೇವೋ ಎಂದು ಗುರುತಿಸಿ ಪರದೆಯ ಮೇಲೆ ಮೂಡುವ ಮಾಹಿತಿ ಬದಲಾಗುತ್ತದಲ್ಲ ಇದಕ್ಕೆ ಆಕ್ಸೆಲೆರೋಮೀಟರ್ ಸೆನ್ಸಾರ್ ನೆರವಾಗುತ್ತದೆ. ಯಾವುದಾದರೂ ವಿಡಿಯೋ ಅಥವಾ ಫೋಟೊ ನೋಡುವಾಗ ಮೊಬೈಲ್ ತಿರುಗಿಸಿದ ತಕ್ಷಣ ವಿಡಿಯೋ ಮತ್ತು ಚಿತ್ರಗಳೂ ತಿರುಗುತ್ತವೆ.!!

ಮ್ಯಾಗ್ನೆಟೋಮೀಟರ್ ಸೆನ್ಸಾರ್!!

ಮ್ಯಾಗ್ನೆಟೋಮೀಟರ್ ಸೆನ್ಸಾರ್!!

ಗೂಗಲ್ ಮ್ಯಾಪ್ ಬಳಸುವಾಗ ನಿರ್ದಿಷ್ಟ ದಿಕ್ಕುಗಳನ್ನು ಸೂಚಿಸುವ ಸಂದರ್ಭಗಳಲ್ಲಿ ಬಳಕೆಯಾಗುವ ಮ್ಯಾಗ್ನೆಟೋಮೀಟರ್ ಎಂಬ ಇನ್ನೊಂದು ಸೆನ್ಸರ್ ನಮ್ಮ ಮೊಬೈಲನ್ನು ದಿಕ್ಸೂಚಿಯಂತೆ ಬಳಸಲು ಸಹಾಯಕಕಾರಿ. ಇದರಿಂದ ಮೊಬೈಲ್ ದಿಕ್ಕುಗಳನ್ನು ಸರಿಯಾಗಿ ಗುರುತಿಸಲು ಸಹಾಯಕವಾಗುತ್ತದೆ.!!

ಬಾರೋಮೀಟರ್ ಸೆನ್ಸಾರ್!!

ಬಾರೋಮೀಟರ್ ಸೆನ್ಸಾರ್!!

ಸ್ಮಾರ್ಟ್‌ಫೋನ್ ಇರುವ ಪ್ರದೇಶ ಎಷ್ಟು ಎತ್ತರದಲ್ಲಿದೆ ಎನ್ನುವ ಮಾಹಿತಿಯನ್ನು ತಿಳಿಯಲು ಇರುವ ಸೆನ್ಸಾರ್ ಬಾರೋಮೀಟರ್!! ನಿಮ್ಮ ದೊಡ್ಡ ಕಟ್ಟಡವೊಂದರ ಯಾವ ಫ್ಲಾರ್‌ನಲ್ಲಿದ್ದೀರಾ ಅಥವಾ ಎಷ್ಟು ಎತ್ತರದಲ್ಲಿದ್ದೀರಾ ಎಂದು ಈ ಸೆನ್ಸಾರ್ ಮೂಲಕ ತಿಳಿಯಬಹುದು. ಹೃದಯ ಬಡಿತದ ಕುರಿತು ಮಾಹಿತಿ ನೀಡುವ ಕಾರ್ಯವನ್ನು ಸಹ ಈ ಸೆನ್ಸಾರ್ ಮಾಡುತ್ತದೆ.!!

ಜೈರೋಸ್ಕೋಪ್ ಸೆನ್ಸಾರ್!!

ಜೈರೋಸ್ಕೋಪ್ ಸೆನ್ಸಾರ್!!

ನೀವು ವರ್ಚುಯಲ್ ರಿಯಾಲಿಟಿ (ವಿಆರ್) ಸೌಲಭ್ಯ ಬಳಸುತ್ತಿರುವಾಗ ನಾವು ಅತ್ತಿತ್ತ ತಿರುಗಿದ್ದೆಲ್ಲ ಫೋನಿಗೆ ಮತ್ತು ಅದರಲ್ಲಿರುವ ತಂತ್ರಾಂಶಕ್ಕೆ ಗೊತ್ತಾಗಲು ಕಾರಣ ಇದೇ ಜೈರೋಸ್ಕೋಪ್ ಸೆನ್ಸಾರ್.!! 360 ಡಿಗ್ರಿ ವೀಡಿಯೋ ಹಾಗೂ ಫೋಟೋಗಳನ್ನು ನೋಡುವಾಗ ಫೋನನ್ನು ತಿರುಗಿಸಿದರೆ ಪರದೆಯಲ್ಲಿ ಕಾಣುವ ದೃಶ್ಯವೂ ಅದರಂತೆಯೇ ತಿರುಗುವ ತಂತ್ರಕ್ಕೆ ಕಾರಣ ಇದೆ.!!

ಓದಿರಿ:ವೊಡಾಫೋನ್, ಏರ್‌ಟೆಲ್ ಪೈಪೋಟಿಯಿಂದ 2G, 3G ಗ್ರಾಹಕರಿಗೆ ಹಬ್ಬ!..ಸೂಪರ್ ಆಫರ್ಸ್!!

Best Mobiles in India

English summary
All the Sensors in Your Smartphone, and How They Work.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X