2019ರ ಸ್ಮಾರ್ಟ್‌ಫೋನ್ ಪ್ರಪಂಚದಲ್ಲಿ ಏನೆಲ್ಲಾ ವೈಶಿಷ್ಟ್ಯಗಳನ್ನು ನಿರೀಕ್ಷಿಸಬಹುದು?!

|

ಹತ್ತು ವರ್ಷದ ಹಿಂದಿನ ಚಿಕ್ಕ ಮೊಬೈಲ್ ಫೋನ್‌ ಅನ್ನು ನೆನಪಿಸಿಕೊಂಡು ನಂತರ ನಿಮ್ಮ ಕೈಯಲ್ಲಿರುವ ಸ್ಮಾರ್ಟ್‌ಫೋನ್‌ ಒಮ್ಮೆ ನೋಡಿ, ಮೊಬೈಲ್ ತಂತ್ರಜ್ಞಾನದಲ್ಲಿ ಎಷ್ಟೆಲ್ಲಾ ಬದಲಾವಣೆಗಳು ಆಗಿವೆ ಅಂತಾ ಅನಿಸದೇ ಇರದು. ಏಕೆಂದರೆ ಕೇವಲ ಹತ್ತು ವರ್ಷಗಳಲ್ಲಿ ಮೊಬೈಲ್ ತಂತ್ರಜ್ಞಾನದಲ್ಲಿ ಆಗಿರುವ ಗಮನಾರ್ಹ ಬದಲಾವಣೆಗಳೇ ಇದಕ್ಕೆ ಸಾಕ್ಷಿ. 3 ಇಂಚಿನ ಡಿಸ್‌ಪ್ಲೇ, VGA ಕ್ಯಾಮೆರಾದಿಂದ, 6 ಇಂಚಿನ ಡಿಸ್‌ಪ್ಲೇ ಮತ್ತು ಡಿಎಸ್ಎಲ್ಆರ್ ಕ್ಯಾಮೆರಾಗಳಿಗೆ ಸೆಡ್ಡು ಹೊಡೆಯುವಂತಹ ಅತ್ಯುತ್ತಮ ಕ್ಯಾಮೆರಾಗಳನ್ನು ಇಂದಿನ ಸ್ಮಾರ್ಟ್‌ಫೋನ್‌ಗಳಲ್ಲಿ ಕಾಣಬಹುದು.

ನಮ್ಮ ಕೈಯಲ್ಲಿರುವ ಸ್ಮಾರ್ಟ್‌ಫೋನ್ ಸಂವಹನದ ಪ್ರಮುಖ ಸಾಧನವಾಗಿಯೂ ಬಳಕೆಯಾಗುತ್ತಿದೆ. ಸ್ಮಾರ್ಟ್‌ಫೋನ್‌ಗಳು ಫೋಟೊ, ವಿಡಿಯೊ ಮತ್ತು ಇಮೋಜಿಗಳ ಮೂಲಕ ನಮ್ಮನ್ನು ಪ್ರಪಂಚದೊಂದಿಗೆ ಬೆರೆಸುವ ಕೊಂಡಿಯಾಗಿ ಕೆಲಸಮಾಡುತ್ತಿವೆ. ಅಲ್ಲದೇ ಸ್ಮಾರ್ಟ್‌ಫೋನ್‌ಗಳು ನಮ್ಮ ಕಲೆ, ಸಾಹಿತ್ಯ ಮತ್ತು ಸಂಸ್ಕ್ರತಿಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ನೆರವಾಗುವುದರ ಜತೆಗೆ ಹೊಸ ಟ್ರೆಂಡ್ ಉಗಮಕ್ಕೂ ಸ್ಮಾರ್ಟ್‌ಫೋನ್‌ಗಳೆ ಪ್ರಮುಖ ಕಾರಣವಾಗುತ್ತಿವೆ.

2019ರ ಸ್ಮಾರ್ಟ್‌ಫೋನ್ ಪ್ರಪಂಚದಲ್ಲಿ ಏನೆಲ್ಲಾ ವೈಶಿಷ್ಟ್ಯಗಳನ್ನು ನಿರೀಕ್ಷಿಸಬಹುದು

ಇಷ್ಟೆಲ್ಲಾ ತಂತ್ರಜ್ಞಾನದಲ್ಲಿ ಮುಂದುವರೆದಿದ್ದರೂ ಸಹ ಗ್ರಾಹಕರ ಬೇಡಿಕೆಗಳನ್ನು ಈಡೇರಿಸಲು ಮೊಬೈಲ್ ಕಂಪನಿಗಳು ಇನ್ನೂ ಪ್ರಯತ್ನಿಸುತ್ತಲೆ ಇವೆ. ತನ್ನ ಗ್ರಾಹಕರಿಗೆ ಏನಾದರೂ ಹೊಸದೊಂದು ಫೀಚರ್ಸ್ ಪರಿಚಯಿಸಬೇಕು ಎನ್ನುವ ಹಂಬಲದೊಂದಿಗೆ ಮೊಬೈಲ್ ತಯಾರಿಕಾ ಕಂಪನಿಗಳು ಹೊಸ ಸ್ಮಾರ್ಟ್‌ಫೋನ್ ತಯಾರಿಕೆಗೆ ಮುಂದಾಗುತ್ತಿವೆ. ಆರಂಭದಿಂದಲೂ ಇಂಥ ಹೊಸ ಪರಿಣಾಮಕಾರಿ ತಂತ್ರಜ್ಞಾನದ ಪ್ರಯತ್ನದ ಹೆಜ್ಜೆಗಳನ್ನು ವೀವೊ ಕಂಪನಿ ಹಾಕುತ್ತಾ ಸಾಗಿದೆ.

ವಿಶ್ವದೆಲ್ಲೆಡೆ ಹೆಚ್ಚು ಯುವ ಗ್ರಾಹಕ ಸಮೂಹವನ್ನು ಹೊಂದಿರುವ ವೀವೊ ಕಂಪನಿಯು 2018 ರಲ್ಲಿ ತನ್ನ ಸ್ಮಾರ್ಟ್‌ಫೋನ್‌ಗಳ ಮೂಲಕ ಉನ್ನತ ಮಟ್ಟದ ಮತ್ತು ಹೊಸತನದ ತಂತ್ರಜ್ಞಾನಗಳನ್ನು ಗ್ರಾಹಕರಿಗೆ ಪರಿಚಯಿಸಿದೆ. ಸ್ಮಾರ್ಟ್‌ಫೋನ್‌ ಸ್ಕ್ರೀನ್ ಮತ್ತು ಬಾಹ್ಯ ರಚನೆಯ ನಡುವೆ ಕಡಿಮೆ ಅಂಚು ಪರಿಚಯಿಸಿದ ಹಾಗೂ ಸ್ಮಾರ್ಟ್‌ಫೋನ್‌ಗಳಲ್ಲಿಯೇ ಮೊದಲ ಬಾರಿಗೆ ಎಲೆವೇಟಿಂಗ್ ಫ್ರಂಟ್ ಕ್ಯಾಮೆರಾ ಪರಿಚಯಿಸಿದ ಕೀರ್ತಿ ವೀವೊಗೆ ಸಲ್ಲುತ್ತದೆ.

ಫ್ರಂಟ್ ಎಲೆವೇಟಿಂಗ್ ಕ್ಯಾಮೆರಾ ಪರಿಚಯಿಸಿ ಮೊಬೈಲ್ ಲೋಕದಲ್ಲಿ ಗುರುತಿಸಿಕೊಂಡಿತ್ತು. ಇದರೊಂದಿಗೆ 2018ರಲ್ಲಿ ಗ್ರಾಹಕರಿಗೆ ಹಲವು ಸರ್ಪ್ರೈಸ್ ಫೀಚರ್ಸ್‌ಗಳನ್ನು ಪರಿಚಯಿಸಿದ್ದ ವೀವೊ ಕಂಪನಿಯ ಈ ವರ್ಷ 2019ರಲ್ಲಿ ಇನ್ನೂ ಹೊಸತರಹದ ಫೀಚರ್ಸ್‌ಗಳನ್ನು ಪರಿಚಯಿಸಲಿದೆ ಎಂದು ಗ್ರಾಹಕರ ಭಾರೀ ನಿರೀಕ್ಷೆಗಳನ್ನು ಹೊಂದಿದ್ದಾರೆ. ಹಾಗಾದರೇ 2019 ರಲ್ಲಿ ವೀವೊ ಏನೆಲ್ಲಾ ವಿಶೇಷ ಫೀಚರ್ಸ್‌ಗಳನ್ನು ಗ್ರಾಹಕರಿಗೆ ಪರಿಚಯಿಸಲಿದೆ ಎಂದು ನೋಡೋಣ.

ಹಿಡೆನ್ ಸೆಲ್ಫೀ ಕ್ಯಾಮೆರಾ

ಹಿಡೆನ್ ಸೆಲ್ಫೀ ಕ್ಯಾಮೆರಾ

ಮಾರುಕಟ್ಟೆಯಲ್ಲಿಯ ಬಹುತೇಕ ಎಲ್ಲ ಸ್ಮಾರ್ಟ್‌ಫೋನ್‌ಗಳ ಫ್ರಂಟ್‌ ಕ್ಯಾಮೆರಾಗಳು ಸ್ಕ್ರೀನಿನ್ ಮೆಲ್ಬಾಗದ ಮಧ್ಯದಲ್ಲಿರುತ್ತವೆ. ಇದರಿಂದ ಗ್ರಾಹಕರಿಗೆ ಫುಲ್‌ ಸ್ಕ್ರೀನ್ ಡಿಸ್‌ಪ್ಲೇಯ ಅನುಭವ ಆಗುವುದಿಲ್ಲ ಇದನ್ನರಿತ ವೀವೊ ಇದೀಗ ಮುಂಬರುವ ತನ್ನ ಹೊಸ ಸ್ಮಾರ್ಟ್‌ಫೋನ್‌ ಒಂದರಲ್ಲಿ ಎಲೆವೇಟಿಂಗ್ ಸೆಲ್ಫೀ ಕ್ಯಾಮೆರಾವನ್ನು ಪರಿಚಯಿಸಲಿದ್ದು, ಸೆಲ್ಫೀ ಕ್ಯಾಮೆರಾ ಮರೆಯಾಗಿರುತ್ತದೆ ಫೋಟೋ ಸೆರೆಹಿಡಿಯುವ ವೇಳೆ ಮಾತ್ರ ಮೆಲ್ಬಾಗದಲ್ಲಿ ಕಾಣಿಸಿಕೊಳ್ಳಲಿದೆ. ಹೀಗಾಗಿ ವೀವೊ ಹೊಸ ಫೋನ್‌ಗಳಲ್ಲಿ ಗ್ರಾಹಕರು ಫುಲ್ಸ್ಕ್ರೀನ್ ಡಿಸ್‌ಪ್ಲೇ ಅನುಭವ ಪಡೆಯಬಹುದು.

ಅಂಚುರಹಿತ ಡಿಸ್‌ಪ್ಲೇ

ಅಂಚುರಹಿತ ಡಿಸ್‌ಪ್ಲೇ

2019 ರಲ್ಲಿ ಬಿಡುಗಡೆಯಾಗಲಿರುವ ವೀವೊ ಸ್ಮಾರ್ಟ್‌ಫೋನ್‌ ಸಂಪೂರ್ಣ ಅಂಚು ರಹಿತ ರಚನೆಯನ್ನು ಹೊಂದಿರಲಿದ್ದು, ಈ ಅಂಚು ರಹಿತ ಮತ್ತು ಪೂರ್ಣ ಡಿಸ್‌ಪ್ಲೇಯ(ನೊಚ್ ಮುಕ್ತ) ಕಲ್ಪನೆ ಮುಂಬರುವ ಮಿಡ್‌ ರೇಂಜ್ ಮತ್ತು ಫ್ಯಾಗ್ ಶಿಪ್ ಸ್ಮಾರ್ಟ್‌ಫೋನ್‌ಗಳಲ್ಲಿ ಕಾಣಬಹುದಾಗಿದೆ. ವೀವೊ ಕಂಪನಿ ಸ್ಮಾರ್ಟ್‌ಫೋನ್‌ಗಳಗೆ ಅಂಚು ಮುಕ್ತ ಮಾಡಲು ಹೊರಟಿದ್ದು, ಡಿಸೈನಿನಲ್ಲಿ ಹೊಸ ಟ್ರೆಂಡ್ ಮೂಡಿಸಲಿದೆ.

ದಿ ಪರ್ಸ್ಯೂಟ್ ಆಫ್ ಸೂಪರ್ ಹೈ-ಕ್ವಾಲಿಟಿ ಸೆಲೆಟೀಸ್

ದಿ ಪರ್ಸ್ಯೂಟ್ ಆಫ್ ಸೂಪರ್ ಹೈ-ಕ್ವಾಲಿಟಿ ಸೆಲೆಟೀಸ್

ಸ್ಮಾರ್ಟ್‌ಫೋನ್‌ಗಳಲ್ಲಿ ಕ್ಯಾಮೆರಾ ಒಂದು ಪ್ರಮುಖ ಅಂಗವಿದ್ದಂತೆ, ಹೀಗಾಗಿ ಉತ್ತಮ ಗುಣಮಟ್ಟದ ಕ್ಯಾಮೆರಾ ಇರುವ ಸ್ಮಾರ್ಟ್‌ಫೋನ್‌ ಅನ್ನು ಖರೀದಿಸಲು ಗ್ರಾಹಕರು ಆಸಕ್ತಿ ತೋರಿಸುತ್ತಾರೆ. ಪ್ರಸ್ತುತ ಸೆಲ್ಫೀ ಕ್ಯಾಮೆರಾ ಟ್ರೆಂಡ್ ಚಾಲ್ತಿಯಿದ್ದು, ಯುವ ಸಮೂಹ ಸೆಲ್ಫೀ ಸೆರೆಹಿಡಿಯಲು ಇಷ್ಟಪಡುತ್ತಾರೆ. ಹೀಗಾಗಿ ವೀವೊ ಕಂಪನಿ ಕಳೆದ ವರ್ಷ(2018) 8 ಮೆಗಾಪಿಕ್ಸಲ್ ನಿಂದ 24 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾಗಳನ್ನು ಪರಿಚಯಿಸಿತ್ತು. ಇನ್ನೂ 2019ರ ಈ ವರ್ಷದಲ್ಲಿ ವೀವೊ ಕಂಪನಿ ಸೆಲ್ಫೀ ಕ್ಯಾಮೆರಾದಲ್ಲಿ ಮತ್ತಷ್ಟು ವಿಶೇಷತೆಗಳನ್ನು ಪರಿಚಯಿಸಲಿದ್ದು, ಇದರೊಂದಿಗೆ ಕ್ವಾಲಿಟಿ ಮತ್ತು ಕ್ಲಿಯರಿಟಿಗಳ ಬಗ್ಗೆಯು ಹೆಚ್ಚಿನ ಗಮನ ನೀಡಲಿದೆ.

ಕೃತಕ ಬುದ್ಧಿಮತ್ತೆ ತಂತ್ರಜ್ಞಾನ

ಕೃತಕ ಬುದ್ಧಿಮತ್ತೆ ತಂತ್ರಜ್ಞಾನ

ಈ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಹೈ ಎಂಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರ ನೀಡಲಾಗುತ್ತಿತ್ತು. ಇದರ ಸಹಾಯದಿಂದ ಕ್ಯಾಮೆರಾ ಆಟೋ ಫೇಸ್‌ ರಿಕಗ್ನೈಸ್ ಮಾಡಿಕೊಳ್ಳುತ್ತದೆ ಮತ್ತು ಫೇಸ್ ಬ್ಯೂಟಿ ನಂತಹ ಆಯ್ಕೆಗಳು ಗ್ರಾಹಕರಿಗೆ ಲಭ್ಯವಾಗುತ್ತಿವೆ. ಈ ತಂತ್ರಜ್ಞಾನವನ್ನು ಮಿಡ್‌ ರೇಂಜ್ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಪರಿಚಯಿಸಿದರೆ ತಂತ್ರಜ್ಞಾನ ಹೆಚ್ಚಿನ ಗ್ರಾಹಕರನ್ನು ತಲುಪಲು ಸಾಧ್ಯ ಎನ್ನುತ್ತದೆ ವೀವೊ.

ಪ್ರೋಫೆಶನಲ್ ಕ್ವಾಲಿಟಿ

ಪ್ರೋಫೆಶನಲ್ ಕ್ವಾಲಿಟಿ

ಪ್ರಸ್ತುತ ಬಹುತೇಕ ಸ್ಮಾರ್ಟ್‌ಫೋನ್‌ಗಳಲ್ಲಿ ಫೋಟೋ ಸೆರೆಹಿಡಿದಾಗ ಬ್ಲರ್ನ್ ಆಗುವುದು, ಇಲ್ಲವೇ ಫೋಟೋ ಕ್ವಾಲಿಟಿ ಡಲ್ ಆಗಿರುವುದು, ಅಥವಾ ಕಡಿಮೆ ರೆಸಲ್ಯೂಶನ್ ನಿಂದ ಕೂಡಿರುವುದು ಆಗಿರುತ್ತದೆ. ಕೃತಕ ಬುದ್ಧಿಮತ್ತೆಯ IA ತಂತ್ರಜ್ಞಾನದ ಹೊಸ ಆಲೊಗ್ರಾಮ್ ಸಹಾಯದಿಂದ ಈ ಅಡೆತಡೆಗಳು ಕಂಡುಬರುವುದಿಲ್ಲ. ಮತ್ತು ಪೋಟೋಗಳು ಪ್ರೋಫೆಶನಲ್ ಫೋಟೋಗ್ರಫರ್ ಸೆರೆಹಿಡಿದಂತೆ ಅತ್ಯುತ್ತಮ ಮೂಡಿಬರಲಿದ್ದು, ಈ ತಂತ್ರಜ್ಞಾನವನ್ನು ವೀವೊ ಪರಿಚಯಿಸಲಿದೆ.

ಎಲೆವೇಟಿಂಗ್ ಕ್ಯಾಮೆರಾ ಎಂಟ್ರಿ

ಎಲೆವೇಟಿಂಗ್ ಕ್ಯಾಮೆರಾ ಎಂಟ್ರಿ

ಕಳೆದ ವರ್ಷ ಸ್ಮಾರ್ಟ್‌ಫೋನ್‌ ಕ್ಷೇತ್ರದಲ್ಲಿ ಹಲವು ಹೊಸ ಉತ್ಸಾಹದಾಯಕ ಫೀಚರ್ಸ್‌ಗಳು ಪರಿಚಯವಾಗಿದ್ದು, ಈ ವರ್ಷ2019 ಮತ್ತಷ್ಟು ಹೊಸ ಫೀಚರ್ಸ್‌ಗಳು ಗ್ರಾಹಕರನ್ನು ತಲುಪಲಿವೆ ಎನ್ನುವ ಭರವಸೆ ಇದೆ. ಸಂಪೂರ್ಣ ಅಂಚು ರಹಿತ ಪರದೆ ಮತ್ತು ಎಲೆವೇಟಿಂಗ್ ಫ್ರಂಟ್ ಸೆಲ್ಫೀ ಕ್ಯಾಮೆರಾಗಳು ಮುಂಬರುವ ಸ್ಮಾರ್ಟ್‌ಫೋನ್‌ಗಳಲ್ಲಿ ಕಾಣಿಸಿಕೊಳ್ಳಲಿವೆ. ಈ ನಿಟ್ಟಿನಲ್ಲಿ ವೀವೊ ಕಂಪನಿ ಹೊಸ ಹೆಜ್ಜೆ ಇಡಲು ಸಿದ್ಧವಾಗಿದೆ,

Most Read Articles
Best Mobiles in India

English summary
The year 2019 will be full of ‘Elevating cameras, Full-screen displays, and Triple-lens camera setups. Let’s find out what’s in store for smartphone enthusiasts. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more