ಮಾರುಕಟ್ಟೆಗೆ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಸ್ಯಾಮ್‌ಸಂಗ್ ಪರಿಚಯ ಮಾಡಿತು ಎಂದರೆ ಸಾಕು ಅದರಲ್ಲಿ ಹೊಸದಾದ ಆಯ್ಕೆಯನ್ನು ನಾವು ನೋಡಬಹುದಾಗಿದೆ. ಇದೇ ಮಾದರಿಯಲ್ಲಿ ಸದ್ಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಸ್ಯಾಮ್‌ಸಂಗ್ ಗ್ಯಾಲೆಕ್ಸಿ S9 ಮತ್ತು S9 ಪ್ಲಸ್ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ ಟಾಪ್ ಎಂಡ್ ಫೋನ್‌ಗಳೆನ್ನುವ ಖ್ಯಾತಿಯನ್ನು ಪಡೆದುಕೊಂಡಿದೆ. ಇದೇ ಮಾದರಿಯಲ್ಲಿ ಈ ಸ್ಮಾರ್ಟ್‌ಫೋನಿನ ಕ್ಯಾಮೆರಾ ಗುಣಮಟ್ಟವು ಹೆಚ್ಚಿನ ಜನರನ್ನು ಸೆಳೆಯಲು ಕಾರಣವಾಗಿದೆ.

ಕ್ಯಾಮೆರಾ ವಿಭಾಗದಲ್ಲಿ ಸ್ಯಾಮ್‌ಸಂಗ್ ಗ್ಯಾಲೆಕ್ಸಿ S9 ಮತ್ತು S9 ಪ್ಲಸ್ ಸ್ಮಾರ್ಟ್‌ಫೋನ್ ಅದ್ಬುತವಾಗಿದ್ದು, ಲೋ ಲೈಟ್ ಕಂಡಿಷನ್, ಸ್ಲೋ ಮೋಷನ್ ವಿಡಿಯೋ ರೆಕಾರ್ಡಿಂಗ್ ಮತ್ತು AR ಎಮೋಜಿಗಳು ಬಳಕೆದಾರರಿಗೆ ಬಳಹ ಮೆಚ್ಚುಗೆಯಾಗಿದ್ದು, ಕ್ಯಾಮೆರಾ ವಿಭಾಗದಲ್ಲಿ ಹೊಸ ಸಾಧ್ಯತೆಯನ್ನು ತೋರಿಸಿಕೊಟ್ಟಿದೆ. ಟಾಪ್ ಸ್ಮಾರ್ಟ್‌ಫೋನಿನಲ್ಲಿ ಈ ವಿಭಾಗವೂ ಟಾಪ್ ಆಗಿಯೇ ಇದೆ.
ಡ್ಯುಯಲ್ ಅಪರ್ಚರ್:
ಸ್ಯಾಮ್‌ಸಂಗ್ ಗ್ಯಾಲೆಕ್ಸಿ S9 ಮತ್ತು S9 ಪ್ಲಸ್ ಸ್ಮಾರ್ಟ್‌ಫೋನ್ ನಲ್ಲಿ ಫೋಟೋ ಕ್ಲಿಕಿಸುವುದೇ ಅತ್ಯಂತ ಉತ್ತಮ ಸಂಗತಿಯಾಗಿದ್ದು, ಉತ್ತಮ ಚಿತ್ರಗಳನ್ನು ಸೆರೆಹಿಡಿಯುವ ಸಲುವಾಗಿಯೇ ಡ್ಯುಯಲ್ ಅಪರ್ಚರ್ ಅನ್ನು ನೀಡಲಾಗಿದೆ. ಇದು ವಿವಿಧ ಬೆಳಕಿನ ಮೂಲಗಳನ್ನು ಗುರುತಿಸಿ ಫೋಟೋಗಳನ್ನು ಸೆರೆಹಿಡಿಯಲಿದೆ. ಇದು ಕಡಿಮೆ ಬೆಳಕಿನಲ್ಲಿ ಉತ್ತಮ ಚಿತ್ರಗಳನ್ನು ಸೆರೆಹಿಡಿಯಲಿದೆ. F1.5 ಮತ್ತು F2.4 ಅಪರ್ಚರ್ ಫೋಟೋ ಗಳನ್ನು ರಿಚ್ ಆಗಿ ಕಾಣುವಂತೆ ಮಾಡಲಿದೆ.
ಸೂಪರ್ ಸ್ಲೋ ಮೋಷನ್:
ಸ್ಯಾಮ್‌ಸಂಗ್ ಗ್ಯಾಲೆಕ್ಸಿ S9 ಮತ್ತು S9 ಪ್ಲಸ್ ಸ್ಮಾರ್ಟ್‌ಫೋನ್ನಿನಲ್ಲಿ ನೆಕ್ಸ್ಟ್ ಲೆವೆಲ್ ಸ್ಲೋ ಮೋಷನ್ ವಿಡಿಯೋಗಳನ್ನು ಶೂಟ್ ಮಾಡಬಹುದಾಗಿದೆ. 960 ಪ್ರತಿ ಸೆಕೆಂಡ್ ನಂತೆ ರೆಕಾರ್ಡ್ ಮಾಡಲು ಶಕ್ತವಾಗಿದೆ. ಅಲ್ಲದೆ ಅದಕ್ಕೆ ಮ್ಯೂಸಿಕ್ ಆಡ್ ಮಾಡುವ ಸಾಧ್ಯತೆಯನ್ನು ನೀಡಿದೆ. ಅಲ್ಲದೇ ಮೋಷನ್ ಡಿಡೆಕ್ಷನ್ ಆಯ್ಕೆಯೂ ಇದರಲ್ಲಿದೆ. ಅಲ್ಲದೇ ಇದನ್ನು ಲಾಕ್ ಸ್ಕ್ರಿನ್‌ನಲ್ಲಿಯೂ ಇಟ್ಟುಕೊಳ್ಳಬಹುದಾಗಿದೆ.
ಆಪ್ಟಿಕಲ್ ಸ್ಟಬ್‌ಲೈಜೆಷನ್:
ಸ್ಯಾಮ್‌ಸಂಗ್ ಗ್ಯಾಲೆಕ್ಸಿ S9 ಮತ್ತು S9 ಪ್ಲಸ್ ಸ್ಮಾರ್ಟ್‌ಫೋನಿನ ಕ್ಯಾಮೆರಾದಲ್ಲಿ ಆಪ್ಟಿಕಲ್ ಸ್ಟಬ್‌ಲೈಜೆಷನ್ ಅನ್ನು ಕಾಣಬಹುದಾಗಿದ್ದು, ನೀವು ಫೋಟೋ ತೆಗೆಯುವ ಸಮಯದಲ್ಲಿ ಅಲ್ಲಡಿಸಿದರು ಸಹ ಉತ್ತಮವಾಗಿ ಫೋಟೋವನ್ನು ಸೆರೆಹಿಡಿಯಲು ಶಕ್ತವಾಗಿದೆ.
ಲೈವ್ ಫೋಕಸ್:
ಸ್ಯಾಮ್‌ಸಂಗ್ ಗ್ಯಾಲೆಕ್ಸಿ S9 ಮತ್ತು S9 ಪ್ಲಸ್ ಸ್ಮಾರ್ಟ್‌ಫೋನಿನ ಕ್ಯಾಮೆರಾದಲ್ಲಿ ಫರ್ಫೆಕ್ಟ್ ಪೋಟರೆಟ್ ಅನ್ನು ತೆಗೆಯಬಹುದಾಗಿದೆ. ಇದರಲ್ಲಿ ಡೆಪ್ತ್ ಆಪ್ ಫಿಲ್ಡ್ ಆಯ್ಕೆಯನ್ನು ಫೋಟೋ ತೆಗೆಯುವ ಸಮಯದಲ್ಲಿಯೇ, ಅಥವಾ ಫೋಟೋ ವನ್ನು ತೆಗೆದ ನಂತರದಲ್ಲಿ ನಿರ್ಧರಿಸುವ ಅವಕಾಶವನ್ನು ನೀಡಿದೆ. ಸ್ಮಾರ್ಟ್‌ಫೋನಿನಲ್ಲಿ ಉತ್ತಮ ಫೋಟೋ ತೆಗೆಯ ಬೇಕು ಎಂದವರಿಗೆ ಉತ್ತಮ ಆಯ್ಜೆಯೂ ಇದಾಗಿದೆ.

ಓದಿರಿ: ಕೇಬಲ್-ಇಂಟರ್ನೆಟ್ ಬೇಡ: ಬರಲಿದೆ ಜಿಯೋ ಹೋಮ್ TV..! ಉಚಿತ HD ಚಾನಲ್‌ಗಳು..!
Gizbot ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿ.Subscribe to Kannada Gizbot.