ಕೇಬಲ್-ಇಂಟರ್ನೆಟ್ ಬೇಡ: ಬರಲಿದೆ ಜಿಯೋ ಹೋಮ್ TV..! ಉಚಿತ HD ಚಾನಲ್‌ಗಳು..!

|

ರಿಲಯನ್ಸ್ ಮಾಲೀಕತ್ವ ಜಿಯೋ ಮತ್ತೊಂದು ಹೊಸ ಪ್ರಯತ್ನವನ್ನು ಮಾರುಕಟ್ಟೆಯಲ್ಲಿ ಮಾಡುತ್ತಿದೆ. ಮಾರಿಕಟ್ಟೆಯಲ್ಲಿ ವಿಭಿನ್ನವಾಗಿ ಕಾರ್ಯನಿರ್ವಹಿಸುವ ಜಿಯೋ ಹೋಮ್ ಟಿವಿಯನ್ನು ಲಾಂಚ್ ಮಾಡಲು ಮುಂದಾಗಿದೆ. ಈಗಾಗಲೇ ಜಿಯೋ DTH ಬರುವುದಿಲ್ಲ, ಬರುತ್ತದೆ ಎನ್ನುವ ಎರಡು ಮಾತುಗಳು ಕೇಳಿ ಬರುತ್ತಿದ್ದು, ಇದರ ನಡುವೆಯೇ ಜಿಯೋ ಹೋಮ್ ಟಿವಿಯನ್ನು ಲಾಂಚ್ ಮಾಡಲು ಜಿಯೋ ತುದಿಗಾಲಿನಲ್ಲಿ ನಿಂತಿದೆ ಎನ್ನುವ ಮಾಹಿತಿಯೊಂದು ಮಾರುಕಟ್ಟೆಯಲ್ಲಿ ಸುಳಿದಾಡುತ್ತಿದೆ.

ಕೇಬಲ್-ಇಂಟರ್ನೆಟ್ ಬೇಡ: ಬರಲಿದೆ ಜಿಯೋ ಹೋಮ್ TV..! ಉಚಿತ HD ಚಾನಲ್‌ಗಳು..!

ಮೂಲಗಳ ಪ್ರಕಾರ ಜಿಯೋ DTH ಸೇವೆಯನ್ನು ಲಾಂಚ್ ಮಾಡಲು ಯಾವುದೇ ಯೋಜನೆಯನ್ನು ಹೊಂದಿಲ್ಲ. ಇದನ್ನು ಮೀರಿದಂತಹ ಸೇವೆಯನ್ನು ನೀಡಲು ಯೋಜನೆಯನ್ನು ರೂಪಿಸಿದೆ. ಇದೇ ಜಿಯೋ ಹೋಮ್ ಟಿವಿ ಎನ್ನಲಾಗಿದೆ. DTH ನಲ್ಲಿ ಹೆಚ್ಚಿನ ಬಂಡವಾಳವನ್ನು ಹೂಡಲು ಹಿಂದೆ ಮುಂದೆ ನೋಡುತ್ತಿರುವ ಜಿಯೋ, ಹೊಸ ಮಾದರಿಯನ್ನು ಬಳಕೆ ಮಾಡಿಕೊಳ್ಳಲು ತುದಿಗಾಲಿನಲ್ಲಿ ನಿಂತಿದೆ.

ಜಿಯೋ ಹೋಮ್ ಟಿವಿ:

ಜಿಯೋ ಹೋಮ್ ಟಿವಿ:

ರಿಲಯನ್ಸ್ ಜಿಯೋ ಎನಹಾನ್ಸ್ ಮಲ್ಟಿಮೀಡಿಯಾ ಬ್ರಾಡ್ ಕಾಸ್ಟ್ ಸರ್ವಿಸ್ ಮೂಲಕ ಜಿಯೋ ಹೋಮ್ ಟಿವಿಯನ್ನು ಲಾಂಚ್ ಮಾಡಲಿದೆ ಎನ್ನಲಾಗಿದೆ. ಇದು ಹೈಬ್ರಿಡ್ ಟೆಕ್ನಾಲಜಿಯಾಗಿದ್ದು, ಭಾರತದಲ್ಲಿ ಮೊದಲ ಬಾರಿಗೆ ಬಳಕೆ ಮಾಡಿಕೊಳ್ಳಲು ಜಿಯೋ ಯೋಜನೆಯನ್ನು ರೂಪಿಸಲು ಮುಂದಾಗಿದೆ.

ಹೊಸ ತಂತ್ರಜ್ಞಾನ:

ಹೊಸ ತಂತ್ರಜ್ಞಾನ:

ಎನಹಾನ್ಸ್ ಮಲ್ಟಿಮೀಡಿಯಾ ಬ್ರಾಡ್ ಕಾಸ್ಟ್ ಸರ್ವಿಸ್ ಹೊಸ ಮಾದರಿಯ ಸೇವೆಯಾಗಿದ್ದು, ಇಲ್ಲಿಯವರೆಗೂ ಟಿವಿ ಮತ್ತು ರೆಡಿಯೋಗಳು ಒನ್ ವೇ ಬ್ರಾಡ್ ಕಾಸ್ಟ್ ಮಾಡುತ್ತಿದ್ದವು, ಇದಕ್ಕೆ ಪ್ರತಿಯಾಗಿ ಮಲ್ಟಿಮೀಡಿಯಾ ಬ್ರಾಡ್ ಕಾಸ್ಟ್ ಹೊಸ ಸಾಧ್ಯತೆಯನ್ನು ತೋರಿಸಿಕೊಡಲಿದೆ ಎನ್ನಲಾಗಿದೆ.

ಇಂಟರ್ನೆಟ್ ಬೇಕಾಗಿಲ್ಲ-ಕೇಬಲ್ ಇಲ್ಲ:

ಇಂಟರ್ನೆಟ್ ಬೇಕಾಗಿಲ್ಲ-ಕೇಬಲ್ ಇಲ್ಲ:

ಮಲ್ಟಿಮೀಡಿಯಾ ಬ್ರಾಡ್ ಕಾಸ್ಟ್ ಸೇವೆಯನ್ನು ಟೆಲಿಕಾಂ ಸಿಗ್ನಲ್ ಗಳ ಮೂಲಕವೇ ಪಡೆಯಬಹುದಾಗಿದೆ. ಇದಕ್ಕಾಗಿ ಇಂಟರ್ನೆಟ್ ಸೇವೆಯೂ ಬೇಕಾಗಿಲ್ಲ ಮತ್ತು DTH ಕೇಬಲ್ ಅವಶ್ಯಕತೆಯೂ ಇಲ್ಲ. ಬದಲಾಗಿ ಟೆಲಿಕಾಂ ಸಿಗ್ನಲ್‌ಗಳಿಂದ ಕಾರ್ಯನಿರ್ವಹಿಸಲಿದೆ.

ದೇಶಾದ್ಯಂತ ಸೇವೆ:

ದೇಶಾದ್ಯಂತ ಸೇವೆ:

ಈಗಾಗಲೇ ಟೆಲಿಕಾಂ ಸೇವೆಯ ಮೂಲಕ ದೇಶದಲ್ಲಿ ಕಾಂತ್ರಿಯನ್ನು ಮಾಡಿರುವ ಜಿಯೋ, ಮಲ್ಟಿಮೀಡಿಯಾ ಬ್ರಾಡ್ ಕಾಸ್ಟ್ ಅನ್ನು ಆರಂಭಿಸುವ ಮೂಲಕ ಮತ್ತೊಂದು ಸುತ್ತಿನಲ್ಲಿ ಕಾಂತ್ರಿಕಾರಕ ಬದಲಾವಣೆಯನ್ನು ಮಾಡಲು ಮುಂದಾಗಲಿದೆ.

Jio Fi ಬಳಸಿ 2G ಮತ್ತು 3G ಗ್ರಾಹಕರು ಕಾಲ್ ಮಾಡುವುದು ಹೇಗೆ?
HD ಚಾನಲ್‌ಗಳು:

HD ಚಾನಲ್‌ಗಳು:

ಮಲ್ಟಿಮೀಡಿಯಾ ಬ್ರಾಡ್ ಕಾಸ್ಟ್ ಸೇವೆಯ ಮೂಲಕ ಜಿಯೋ ಬಳಕೆದಾರರಿಗೆ HD ಗುಣಮಟ್ಟದ ಚಾನಲ್‌ಗಳನ್ನು ಅತೀ ಕಡಿಮೆ ಬೆಲೆಗೆ ನೀಡಲಿದೆ ಎನ್ನಲಾಗಿದೆ. ಈಗಾಗಲೇ ತನ್ನ ಜಿಯೋ ಆಪ್ ಮೂಲಕ ಉಚಿತ ಟಿವಿ ಸೇವೆಯನ್ನು ಬಳಕೆದಾರರಿಗೆ ನೀಡುತ್ತಿದ್ದು, ಇದೇ ಮಾದರಿಯಲ್ಲಿ ಉಚಿತವಾಗಿ HD ಚಾನಲ್‌ಗಳನ್ನು ನೀಡಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Best Mobiles in India

English summary
Reliance Jio to Offer SD and HD Channels Under JioHomeTV. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X