ಭಾರತೀಯ ಬಳಕೆದಾರರಿಗೆ ಲೀಕೊದಿಂದ ಶಾಪಿಂಗ್ ಫೆಸ್ಟ್

Written By:

ಜಾಗತಿಕ ಇಕೋಸಿಸ್ಟಮ್ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಸರು ಗಳಿಸಿಕೊಂಡಿರುವ ಲೀಕೊ ಭಾರತದ ಮಾರುಕಟ್ಟೆಯಲ್ಲಿ ಹೆಸರು ಮಾಡುತ್ತಿದೆ, ತನ್ನ ಸೂಪರ್ ಫೋನ್‌ಗಳು, ಲಿಮಾಲ್ ಮತ್ತು ಸೂಪರ್ ಟಿವಿಗಳಿಂದ ಪ್ರಸಿದ್ಧತೆಯತ್ತ ಕಂಪೆನಿ ಮುನ್ನಡಿ ಇಡುತ್ತಿದೆ.

ಓದಿರಿ: ಲೀಕೊ ಲಿ ಮಿಲಿಯನ್ ಜಾಯ್ ಆಫರ್ಸ್ ವಿಶೇಷತೆ ಏನು?

ಇದೀಗ ಕಂಪೆನಿಯು ಒಂದು ಬಗೆಯ ಆನ್‌ಲೈನ್ ಶಾಪಿಂಗ್ ಫೆಸ್ಟಿವಲ್ ಅನ್ನು ತರುತ್ತಿದ್ದು ಭಾರತದಲ್ಲಿ ಆಸಕ್ತಿಕರ ವಿನಾಯಿತಿಗಳನ್ನು ಇದು ಹೊಂದಿದೆ ಇದೇ ತಿಂಗಳಲ್ಲಿ ಈ ವಿನಾಯಿತಿಗಳನ್ನು ಬಳಕೆದಾರರು ಪಡೆದುಕೊಳ್ಳಬಹುದಾಗಿದೆ. ಮಿನ್‌ಲ್ಯಾಂಡ್ ಚೀನಾ, ಹಾಂಕ್‌ಕಾಂಗ್ ಮತ್ತು ಯುಎಸ್ ಮಾರುಕಟ್ಟೆಯಲ್ಲಿ ಶಾಪಿಂಗ್ ಈವೆಂಟ್‌ಗಳನ್ನು ಕಂಪೆನಿ ಹೋಸ್ಟ್ ಮಾಡುತ್ತಿದೆ. ಇದೇ ರೀತಿಯಲ್ಲಿ ಲೀಕೊವು ಭಾರತದಲ್ಲಿ ಕೂಡ ಇಂತಹ ಈವೆಂಟ್‌ಗಳನ್ನು ನಿಯೋಜಿಸುವ ಸನ್ನಾಹದಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಉತ್ತಮ ಉತ್ಪನ್ನ

ಉತ್ತಮ ಉತ್ಪನ್ನ

ಬಳಕೆದಾರರಿಗೆ ಉತ್ತಮ ಉತ್ಪನ್ನಗಳನ್ನು ನೀಡುವ ಸದುದ್ದೇಶವನ್ನು ಕಂಪೆನಿ ಹೊಂದಿದ್ದು ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಲು ಲೀಕೊ ಮುನ್ನುಗ್ಗುತ್ತಿದೆ.

ಮಾರುಕಟ್ಟೆ ಷೇರು

ಮಾರುಕಟ್ಟೆ ಷೇರು

ಭಾರತದಲ್ಲಿ ಕಂಪೆನಿಯು ಯಶಸ್ವಿಯಾಗಿ ಮಾರುಕಟ್ಟೆ ಷೇರನ್ನು ಪಡೆದುಕೊಂಡಿದ್ದು ಇದು ಸಂಸ್ಥೆಗೆ ವರದಾನವಾಗಿ ಪರಿಣಮಿಸಲಿದೆ. ತನ್ನ ಆನ್‌ಲೈನ್ ವೇದಿಕೆಯಾದ್ಯಂತ ಗ್ರಾಹಕರ ಬೇಡಿಕೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕಂಪೆನಿ ತನ್ನ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಆದ ಲಿಮಾಲ್.ಕಾಮ್‌ನಲ್ಲಿ ತನ್ನ ಉತ್ಪನ್ನಗಳನ್ನು ಲಾಂಚ್ ಮಾಡುತ್ತಿದೆ ಅಂತೆಯೇ ಅತಿ ಕಡಿಮೆ ಸಮಯದಲ್ಲಿಯೇ ಬಳಕೆದಾರರ ಅದ್ಭುತ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದೆ.

ಅನನ್ಯ ಬಳಕೆದಾರರ ದಾಖಲೆ

ಅನನ್ಯ ಬಳಕೆದಾರರ ದಾಖಲೆ

ತನ್ನ ಲಾಂಚ್‌ನ ತಿಂಗಳಿನಲ್ಲಿಯೇ, ಲಿಮಾಲ್ ಇಂಡಿಯಾ 7.5 ಮಿಲಿಯನ್ ಅನನ್ಯ ಬಳಕೆದಾರರ ದಾಖಲೆಯನ್ನು ಪಡೆದುಕೊಂಡಿದ್ದು, ಇದು ಕಂಪೆನಿಗೆ ಹೆಚ್ಚಿನ ಲಾಭವನ್ನು ಒದಗಿಸುವ ನಿಟ್ಟಿನಲ್ಲಿ ಕಮಾಲಿನ ಯಶಸ್ಸಾಗಿದೆ. ಇದರಿಂದಾಗಿ ಲೀಕೊ ತನ್ನ ಬಳಕೆದಾರರಿಗೆ ಆಕರ್ಷಕ ವಿನಾಯಿತಿಗಳನ್ನು ಒದಗಿಸುತ್ತಿದ್ದು ಬೇರೆ ಬೇರೆ ವೇದಿಕೆಯ ಮೂಲಕ ಬಳಕೆದಾರರನ್ನು ಆಕರ್ಷಿಸುತ್ತಿದೆ.

ಶಾಪಿಂಗ್ ಅವಕಾಶ

ಶಾಪಿಂಗ್ ಅವಕಾಶ

ಕಂಪೆನಿಯು ತನ್ನ ಬಳಕೆದಾರರಿಗೆ ಸೂಪರ್ ಫೋನ್‌ಗಳು, ಸೂಪರ್ ಟಿವಿಗಳು, ಬೇರೆ ಬೇರೆ ಆಕ್ಸೆಸರೀಸ್‌ಗಳ ಮೂಲಕ ಭರ್ಜರಿ ಶಾಪಿಂಗ್ ಅವಕಾಶವನ್ನು ಒದಗಿಸುತ್ತಿದೆ. ಬೋನಸ್, ಇತರೆ ಉತ್ಪನ್ನಗಳ ಆಕರ್ಷಕ ವಿನಾಯಿತಿಗಳನ್ನು ಬಳಕೆದಾರರನ್ನು ಆಧರಿಸಿ ಕಂಪೆನಿ ನೀಡುತ್ತಿದೆ.

ಇನ್ನಷ್ಟು ಆಫರ್‌

ಇನ್ನಷ್ಟು ಆಫರ್‌

ಕಂಪೆನಿಯು ಬಳಕೆದಾರರಿಗೆ ಇನ್ನಷ್ಟು ಯಾವ ಮಾದರಿಯ ಆಫರ್‌ಗಳನ್ನು ನೀಡುತ್ತಿದೆ ಎಂಬುದನ್ನು ಗಮನಿಸಲು ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡುತ್ತಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Through industry trendsetter products and enticing offers on them, LeEco has successfully earned a strong mind share and market share in India.
Please Wait while comments are loading...
Opinion Poll

Social Counting

Gadget Finder

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot