ಲೀಕೊ ಲಿ ಮಿಲಿಯನ್ ಜಾಯ್ ಆಫರ್ಸ್ ವಿಶೇಷತೆ ಏನು?

Written By:

ಲೀಕೊ ಜಾಗತಿಕ ಇಂಟರ್ನೆಟ್ ಮತ್ತು ಜಾಗತಿಕ ಕ್ಷೇತ್ರದಲ್ಲಿ ಹೆಸರು ಮಾಡಿರುವ ಸಂಸ್ಥೆಯಾಗಿದ್ದು "ಲಿ ಮಿಲಿಯನ್ ಜಾಯ್ ಆಫರ್" ನಲ್ಲಿ ಮಿಲಿಯಗಟ್ಟಲೆ ಬಳಕೆದಾರರ ಮುಖದಲ್ಲಿ ತೃಪ್ತಿಯ ನಗುವನ್ನು ತಂದಿದೆ. ಲೀಕೊ ಸೂಪರ್ ಫೋನ್‌ಗಳಾದ ಲೀ2, ಲೀ ಮ್ಯಾಕ್ಸ್2 ಮತ್ತು ಲೀ ಎಸ್ ಇಕೋಗಳಲ್ಲಿ ದರಕಡಿತ ಆಫರ್‌ಗಳನ್ನು ಬಳಕೆದಾರರು ಗಳಿಸಿಕೊಳ್ಳಬಹುದಾಗಿದೆ. ಲೀಮಾಲ್.ಕಾಮ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಈ ಡಿವೈಸ್‌ಗಳ ಮೇಲೆ ಆಫರ್‌ಗಳನ್ನು ಪಡೆದುಕೊಳ್ಳಬಹುದಾಗಿದೆ.

ಓದಿರಿ: ಮಿಸ್ ಮಾಡದಿರಿ: ಲೀಕೊ ಸೂಪರ್ ಫೋನ್‌ಗಳ ಮೇಲೆ ಮಿಲಿಯಗಟ್ಟಲೆ ಆಫರ್ಸ್

ಲೀಕೊ ಈಗಾಗಲೇ 1 ಮಿಲಿಯನ್ ಬಳಕೆದಾರರನ್ನು ತಲುಪಿದ್ದು ಭಾರತದಲ್ಲಿ ಇದೊಂದು ಮೈಲುಗಲ್ಲಾಗಿದೆ. ಲೀಕೊ ಸೂಪರ್‌ ಫೋನ್‌ಗಳಿಗೆ ದೊರೆಯುತ್ತಿರುವ ಆಫರ್‌ಗಳ ವಿವರಗಳನ್ನು ಇಂದಿಲ್ಲಿ ನೀಡುತ್ತಿದ್ದು ನಿಮ್ಮ ಮುಖದಲ್ಲಿ ಇದು ಮಂದಹಾಸವನ್ನು ಮೂಡಿಸುವುದು ಖಂಡಿತ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
10% ಕ್ಯಾಶ್ ಬ್ಯಾಕ್

10% ಕ್ಯಾಶ್ ಬ್ಯಾಕ್

ಲೀ 2 ಮತ್ತು ಲೀ ಮ್ಯಾಕ್ಸ್ 2 ವನ್ನು ಖರೀದಿಸಲು ನೀವು ಹೆಚ್ಚು ಸಂತಸಪಡಬೇಕಾದ ಸಮಯ ಇದೀಗ ಬಂದಿದೆ. ಎಚ್‌ಡಿಎಫ್‌ಸಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳಲ್ಲಿ 10% ಕ್ಯಾಶ್ ಬ್ಯಾಕ್ ಅನ್ನು ಬಳಕೆದಾರರು ಪಡೆದುಕೊಳ್ಳಬಹುದಾಗಿದೆ.

ಸಿಡಿಎಲ್‌ಎಲ್ಎ ಹೆಡ್‌ಫೋನ್‌

ಸಿಡಿಎಲ್‌ಎಲ್ಎ ಹೆಡ್‌ಫೋನ್‌

ಸಿಡಿಎಲ್‌ಎಲ್ಎ ಹೆಡ್‌ಫೋನ್‌ಗಳನ್ನು ಬಳಕೆದಾರರು ಇದರೊಂದಿಗೆ ಪಡೆದುಕೊಳ್ಳಬಹುದಾಗಿದ್ದು ಲೀ ಮ್ಯಾಕ್ಸ್ 2 ಉಚಿತ ಸಿಡಿಎಲ್‌ಎ ಹೆಡ್‌ಫೋನ್, ಸ್ಕ್ರೀನ್ ಪ್ರೊಟೆಕ್ಟರ್, ಕವರ್ ಮತ್ತು ರಿಂಗ್ ಬ್ರಾಕೆಟ್ ಅನ್ನು ಹೊಂದಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ಅದ್ಭುತ ಆಫರ್‌ಗಳು

ಫ್ಲಿಪ್‌ಕಾರ್ಟ್‌ನಲ್ಲಿ ಅದ್ಭುತ ಆಫರ್‌ಗಳು

ಲೀಕೊ ಸೂಪರ್ ಫೋನ್‌ಗಳನ್ನು ಬಳಕೆದಾರರು ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಿದಾಗ ಕೆಲವೊಂದು ಅದ್ಭುತ ಡೀಲ್‌ಗಳನ್ನು ಪಡೆದುಕೊಳ್ಳಲಿದ್ದಾರೆ. ಲೀ2, ಲೀ ಮ್ಯಾಕ್ಸ್ 2 ಮತ್ತು ಲೀ 1ಎಸ್ ಇಕೋ ಬಳಕೆದಾರರು 10% ಕ್ಯಾಶ್ ಬ್ಯಾಕ್ ಅನ್ನು ಪಡೆದುಕೊಳ್ಳಲಿದ್ದಾರೆ. ಅದೂ ಸಿಟಿ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳಲ್ಲಿ.

ರೂ 3000 ಆಫರ್

ರೂ 3000 ಆಫರ್

ಲೀ 2 ಮತ್ತು ಲೀ ಮ್ಯಾಕ್ಸ್2 ತಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ಹೆಚ್ಚುವರಿ ರೂ 3000 ಆಫರ್ ಅನ್ನು ಗಳಿಸಿಕೊಳ್ಳಬಹುದಾಗಿದ್ದು ತಮ್ಮ ಹಳೆಯ ಫೋನ್‌ಗೆ ವಿನಿಯಮ ಬೆಲೆಯನ್ನು ಪಡೆದುಕೊಳ್ಳಬಹುದಾಗಿದೆ.

ರೂ 500 ರ ವಿನಾಯಿತಿ

ರೂ 500 ರ ವಿನಾಯಿತಿ

ಲೀ 1ಎಸ್ ಇಕೋ ಅನ್ನು ಖರೀದಿಸುವ ಫೋನ್ ಪ್ರಿಯರು ರೂ 500 ರ ವಿನಾಯಿತಿಯನ್ನು ಗಳಿಸಿಕೊಳ್ಳಬಹುದಾಗಿದೆ. ಇದು ಬಳಕೆದಾರರಿಗೆ ಉತ್ತಮ ಅನುಭವವನ್ನು ನೀಡಲಿದೆ. ಬಳಕೆದಾರರ ಮೇಲೆ ಇದು ವಿಶೇಷ ಆಕರ್ಷಣೆಯನ್ನು ಬೀರಿದ್ದು, ಕಳೆದ ಮೂರು ದಿನಗಳಿಂದ ಈ ಸೂಪರ್ ಫೋನ್‌ಗಳು ಉತ್ತಮ ಮಾರಾಟಕ್ಕೆ ಹೊಸ ಭಾಷ್ಯವನ್ನು ಬರೆದಿದೆ.

ಇಂಡಸ್ಟ್ರಿಯಲ್ಲಿ ದಾಖಲೆ

ಇಂಡಸ್ಟ್ರಿಯಲ್ಲಿ ದಾಖಲೆ

ಲೀಕೋದ ಸೆಕೆಂಡ್ ಜನರೇಶನ್ ಸೂಪರ್ ಫೋನ್‌ಗಳಾದ ಲೀ 2 ಮತ್ತು ಲೀ ಮ್ಯಾಕ್ಸ್ 2 ಇಂಡಸ್ಟ್ರಿಯಲ್ಲಿ ದಾಖಲೆಯನ್ನೇ ಸೃಷ್ಟಿಸಿದೆ. 2 ತಿಂಗಳುಗಳಲ್ಲಿ ಲೀ 2 ಡಿವೈಸ್‌ಗಳು 200,000 ಕ್ಕಿಂತ ಹೆಚ್ಚಿನ ಮಾರಾಟವನ್ನು ಕಂಡುಕೊಂಡಿದೆ. ಈ ಮೂರು ಸ್ಮಾರ್ಟ್‌ಫೋನ್‌ಗಳು ಅದ್ಭುತ ವಿಶೇಷತೆ ಮತ್ತು ಲೀಕೊ ಸದಸ್ಯತ್ವದೊಂದಿಗೆ ಬಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
LeEco, the global internet and technology conglomerate has given users a million reasons to smile with its "Le Million Joy" offers. The never-before offers on LeEco Superphones, Le 2, Le Max2 and Le 1s Eco are currently underway on both LeMall.com and Flipkart.
Opinion Poll

Social Counting

Gadget Finder

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot