ವಿಕ್ಡ್‌ಲೀಕ್‌ನಿಂದ ಅಕ್ಟಾ ಕೋರ್ ಪ್ರೊಸಸರ್ ಸ್ಮಾರ್ಟ್‌ಫೋನ್ ಬಿಡುಗಡೆ
ದೇಶೀಯ ಸ್ಮಾರ್ಟ್‌ಫೋನ್ ತಯಾರಕಾ ವಿಕ್ಡ್‌ಲೀಕ್ ಕಂಪೆನಿ ಅಕ್ಟಾ ಕೋರ್ ಪ್ರೊಸೆಸರ್ ಹೊಂದಿರುವ ಸ್ಮಾರ್ಟ್‌ಫೋನ್‌ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.ವಮ್ಮಿ ಪ್ಯಾಷನ್ ಎಕ್ಸ್ ಬಿಡುಗಡೆ ಮಾಡಿದ್ದು 22,499 ರೂಪಾಯಿ ಬೆಲೆಯನ್ನು ನಿಗದಿ ಮಾಡಿದೆ.
5 ಇಂಚಿನ ಫುಲ್ ಎಚ್‌ಡಿ ಸ್ಕ್ರೀನ್,ನೀರು ನಿರೋಧಕ ದೇಹ ಹೊಂದಿರುವ ಸ್ಮಾರ್ಟ್‌ಫೋನ್, ಹಿಂದುಗಡೆ ಎಲ್‌ಇಡಿ ಫ್ಲ್ಯಾಶ್ ಬಿಎಸ್‌ಐ ಸೆನ್ಸರ್ ಹೊಂದಿರುವ 13 ಎಂಪಿ ಕ್ಯಾಮೆರಾ, ಮುಂದುಗಡೆ 5 ಎಂಪಿ ಕ್ಯಾಮೆರಾವನ್ನು ಹೊಂದಿದೆ.8.95 ಮಿ.ಮೀ ದಪ್ಪ,150 ಗ್ರಾಂ ತೂಕದ ಸ್ಮಾರ್ಟ್‌ಫೋನ್ 2 ಜಿಬಿ ರ್‍ಯಾಮ್, 64 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ,16 ಜಿಬಿ ಆಂತರಿಕ ಮೆಮೊರಿಯನ್ನು ಒಳಗೊಂಡಿದೆ.
ವಿಕ್ಡ್‌ಲೀಕ್ ವಮ್ಮಿ ಪ್ಯಾಷನ್ ಎಕ್ಸ್
ವಿಶೇಷತೆ:
ಡ್ಯುಯಲ್ ಸಿಮ್
5 ಇಂಚಿನ ಫುಲ್ ಎಚ್‌ಡಿ ಸ್ಕ್ರೀನ್(1920 x 1080 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.7 GHz ಅಕ್ಟಾ ಕೋರ್ ಮೀಡಿಯಾಟೆಕ್ ಪ್ರೊಸೆಸರ್
13 ಎಂಪಿ ಹಿಂದುಗಡೆ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
2 ಜಿಬಿ ರ್‍ಯಾಮ್
16 ಜಿಬಿ ಆಂತರಿಕ ಮೆಮೊರಿ
64 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್,ಜಿಪಿಎಸ್
2500 mAh ಬ್ಯಾಟರಿ
ಇದನ್ನೂ ಓದಿ:ಅಕ್ಟಾ ಕೋರ್ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾದ ಟಾಪ್ ಸ್ಮಾರ್ಟ್‌ಫೋನ್‌ಗಳು
<center><iframe width="100%" height="360" src="//www.youtube.com/embed/CPMw1PBAsnw?feature=player_embedded" frameborder="0" allowfullscreen></iframe></center>


Click it and Unblock the Notifications








