ವಿಕ್ಡ್‌ಲೀಕ್‌ನಿಂದ ಫುಲ್ ಎಚ್‌ಡಿ ಫ್ಯಾಬ್ಲೆಟ್ ಬಿಡುಗಡೆ
ಭಾರತೀಯ ಮೂಲದ ವಿಕ್ಡ್‌ಲೀಕ್ ವಮ್ಮಿ ಟೈಟಾನ್3 ತನ್ನ ಹೊಸ ಫುಲ್ ಎಚ್‌ಡಿ ಫ್ಯಾಬ್ಲೆಟ್ ಬಿಡುಗಡೆ ಮಾಡಿದೆ.ವಿಕ್ಡ್‌ಲೀಕ್ ವಮ್ಮಿ ಟೈಟಾನ್3 ಹೆಸರಿನ ಫ್ಯಾಬ್ಲೆಟ್ 16,990 ಬೆಲೆಯಲ್ಲಿ ಬಿಡುಗಡೆ ಮಾಡಿದ್ದು wickedleak ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು ಗ್ರಾಹಕರು ಖರೀದಿಸಬಹುದು.
ಬಿಎಸ್‌ಐ ಸೆನ್ಸರ್ ಹೊಂದಿರುವ 13 ಎಂಪಿ ಹಿಂದುಗಡೆ ಕ್ಯಾಮೆರಾ,ವಿಡಿಯೋ ಕರೆಗಾಗಿ ಮುಂದುಗಡೆ 5 ಎಂಪಿ ಕ್ಯಾಮೆರಾವನ್ನು ಫ್ಯಾಬ್ಲೆಟ್ ಹೊಂದಿದೆ. ಗ್ರಾವಿಟಿ ಸೆನ್ಸರ್,ಪ್ರಾಕ್ಸಿಮಿಟಿ ಸೆನ್ಸರ್,ಲೈಟ್ ಸೆನ್ಸರ್,ಗೈರೋಸ್ಕೋಪ್,ಬಿಎಸ್‌ಐ ಸೆನ್ಸರ್‌ಗಳನ್ನು ಫ್ಯಾಬ್ಲೆಟ್ ಹೊಂದಿದೆ.
ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
5.7 ಇಂಚಿನ ಫುಲ್ ಎಚ್‌ಡಿ ಐಪಿಎಸ್ ಎಲ್‌ಸಿಡಿ ಸ್ಕ್ರೀನ್(1080x1920 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.5GHz ಕ್ವಾಡ್ ಕೋರ್ ಮೀಡಿಯಟೆಕ್ 6589 ಟರ್ಬೋ ಪ್ರೊಸೆಸರ್
1GB ರ್‍ಯಾಮ್
16GB ಆಂತರಿಕ ಮೆಮೊರಿ
64GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
13 ಎಂಪಿ ಹಿಂದುಗಡೆ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
ಬ್ಲೂಟೂತ್,ವೈಫೈ,ಮೈಕ್ರೋಯುಎಸ್‌ಬಿ,3ಜಿ
3200mAh ಬ್ಯಾಟರಿ
ಇದನ್ನೂ ಓದಿ: ಸೂಪರ್ ಕಂಪ್ಯೂಟರ್ ಪಟ್ಟಿ- ಅಗ್ರಸ್ಥಾನ ಉಳಿಸಿಕೊಂಡ ಚೀನಾ


Click it and Unblock the Notifications








