Subscribe to Gizbot

'ಮೊಟೊ ಇ3 ಪವರ್' ಸ್ಮಾರ್ಟ್‌ಫೋನ್‌: 'ಆಂಡ್ರಾಯ್ಡ್ 7.0 ನ್ಯೂಗಾ' ಓಎಸ್‌ ಅಪ್‌ಡೇಟ್‌ ಯಾವಾಗ?

Written By:

2GB RAM, 4G ಸಪೋರ್ಟ್‌, ಉತ್ತಮ ಕ್ಯಾಮೆರಾ ಫೀಚರ್‌ ಮತ್ತು ಉತ್ತಮ ಬ್ಯಾಟರಿ ಫೀಚರ್‌ ಹೊಂದಿರಬೇಕು. ಈ ಎಲ್ಲಾ ಫೀಚರ್'ನಲ್ಲಿ ಬಜೆಟ್‌ ಬೆಲೆ 8,000 ರೂಗೆ ಯಾವ ಸ್ಮಾರ್ಟ್‌ಫೋನ್‌ ಖರೀದಿಸಬಹುದು? ಎಂದು ಕೇಳಿದರೆ 'ಮೊಟೊ ಇ3 ಪವರ್‌' ಎಂದು ಹೇಳಬಹುದು.

'ಮೊಟೊ ಇ3 ಪವರ್' ಸ್ಮಾರ್ಟ್‌ಫೋನ್‌: 'ಆಂಡ್ರಾಯ್ಡ್ 7.0 ನ್ಯೂಗಾ' ಓಎಸ್‌ ಅಪ್‌ಡೇಟ್‌

ಇತ್ತೀಚೆಗಷ್ಟೆ, ಲೆನೊವೋ ಕಂಪನಿ ಮಾಲೀಕತ್ವದ ಮೊಟೊರೊಲಾ ಮೊದಲ ಬಾರಿಗೆ 'ಆಂಡ್ರಾಯ್ಡ್ 7.0 ನ್ಯೂಗಾ' ಅಪ್‌ಡೇಟ್‌ ಸ್ವೀಕರಿಸುವ ಸ್ಮಾರ್ಟ್‌ಫೋನ್‌'ಗಳನ್ನು ಲಾಂಚ್‌ ಮಾಡುವ ಬಗ್ಗೆ ಹೇಳಿತ್ತು. ಮೊಟೊರೊಲಾ ಇದಕ್ಕೂ ಹಿಂದೆ ಮೊಟೊ ಜಡ್ ಡಿವೈಸ್ ಲಾಂಚ್‌ ಮಾಡಿತ್ತು. ಆದರೆ ಇದು ಮೊಟೊದ ಬಜೆಟ್ ಫೋನ್‌ ಲೀಸ್ಟ್‌ಗೆ ಖಂಡಿತ ಸೇರುವುದಿಲ್ಲ.

ದಿಪಾವಳಿ ಸೀಸನ್‌ನಲ್ಲಿ ವಂಚನೆ: 'ಮೊಟೊ ಇ3 ಪವರ್' ಫೋನ್‌ ಬೆಲೆ ರೂ.499 ಎಚ್ಚರ!

'ಮೊಟೊ ಇ3 ಪವರ್' ಸ್ಮಾರ್ಟ್‌ಫೋನ್‌: 'ಆಂಡ್ರಾಯ್ಡ್ 7.0 ನ್ಯೂಗಾ' ಓಎಸ್‌ ಅಪ್‌ಡೇಟ್‌

ಆದರೆ ಇತ್ತೀಚೆಗೆ ಲಾಂಚ್‌ ಆದ 'ಮೊಟೊ ಇ3 ಪವರ್' ತನ್ನ ಬಳಕೆದಾರರಿಗೆ ಬಹುದೊಡ್ಡ ನಿರೀಕ್ಷೆ ಹುಟ್ಟಿಸಿ, ನಿರಾಸೆ ಉಂಟುಮಾಡಿದೆ. ಡಿವೈಸ್‌ ಲಾಂಚ್‌ ಮಾಡಿದ ಒಂದು ತಿಂಗಳು ಕಳೆದರೂ ಸಹ 'ಮೊಟೊ ಇ3 ಪವರ್' ಬಳಕೆದಾರರಿಗೆ ನಿರಾಸೆ ಉಂಟುಮಾಡಿದೆ. ಕಾರಣ ತಿಂಗಳು ಆದರೂ ಸಹ ಡಿವೈಸ್‌ ಇನ್ನೂ ಅಪ್‌ಡೇಟ್‌ ಕೇಳಿಲ್ಲ. ಅಲ್ಲದೇ ಕಂಪನಿಯು ಸಹ 'ಮೊಟೊ ಇ3 ಪವರ್' ನ್ಯೂಗಾ ಓಎಸ್‌ ಅಪ್‌ಡೇಟ್‌ ತೆಗೆದುಕೊಳ್ಳವ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ಮೊಟೊರೊಲಾ ಬ್ರ್ಯಾಂಡ್ ಸಮಯಕ್ಕೆ ತಕ್ಕಂತೆ ಸಾಫ್ಟ್‌ವೇರ್‌ ಅಪ್‌ಡೇಟ್ ಪಡೆಯುವ ಮತ್ತು ಆಂಡ್ರಾಯ್ಡ್ ಸ್ಟಾಕ್‌ ಮಾರುಕಟ್ಟೆಗೆ ಪ್ರಖ್ಯಾತವಾಗಿದೆ. ಆದರೆ 'ಮೊಟೊ ಇ3 ಪವರ್' ಡಿವೈಸ್ ವಿಷಯದಲ್ಲಿ ಯಾವುದೇ ಮಾಹಿತಿ ಇಲ್ಲದಿರುವುದು ಬಳಕೆದಾರರ ನಿರಾಸೆಗೆ ಕಾರಣವಾಗಿದೆ.

'ಮೊಟೊ ಇ3 ಪವರ್' ಸ್ಮಾರ್ಟ್‌ಫೋನ್‌: 'ಆಂಡ್ರಾಯ್ಡ್ 7.0 ನ್ಯೂಗಾ' ಓಎಸ್‌ ಅಪ್‌ಡೇಟ್‌

ಮೊಟೊರೊಲಾದ ದುಬಾರಿ ಸ್ಮಾರ್ಟ್‌ಫೋನ್‌ಗಳಾದ ನೆಕ್ಸಸ್ 6, ಮೊಟೊ ಎಕ್ಸ್ ಪ್ಲೇ, ಮತ್ತು ಇತರೆ ಸಮ ಬೆಲೆಯ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ 7.0 ನ್ಯೂಗಾ ಅಪ್‌ಡೇಟ್‌ ಪಡೆಯುತ್ತಿವೆ. ಆದರೆ ಬಜೆಟ್‌ ಬೆಲೆಯ 'ಮೊಟೊ ಇ3 ಪವರ್' ಅಪ್‌ಡೇಟ್‌'ನಿಂದ ದೂರವಿದೆ.

'ಮೊಟೊ ಇ3 ಪವರ್' ಸ್ಮಾರ್ಟ್‌ಫೋನ್‌: 'ಆಂಡ್ರಾಯ್ಡ್ 7.0 ನ್ಯೂಗಾ' ಓಎಸ್‌ ಅಪ್‌ಡೇಟ್‌

ಪ್ರಸ್ತುತದಲ್ಲಿ 'ಮೊಟೊ ಇ3 ಪವರ್(Moto E3 Power)' ಆಂಡ್ರಾಯ್ಡ್ 7.0 ಮಾರ್ಷ್‌ಮಲ್ಲೊ ಚಾಲಿತವಾಗಿದ್ದು, ಶೀರ್ಘದಲ್ಲಿ ಸಾಫ್ಟ್‌ವೇರ್‌ ಅಪ್‌ಡೇಟ್‌ ಪಡೆಯುವ ನಿರೀಕ್ಷೆಯನ್ನು ಎಲ್ಲರೂ ಹೊಂದಿದ್ದಾರೆ. ಈ ಬಗ್ಗೆ ನಿರಂತರ ಅಪ್‌ಡೇಟ್‌ ಮಾಹಿತಿಗಾಗಿ ಗಿಜ್‌ಬಾಟ್‌ ಓದುತ್ತಿರಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Will Motorola Moto E3 Power Receive Android 7.0 Nougat Update Anytime Soon? To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot