ದಿಪಾವಳಿ ಸೀಸನ್‌ನಲ್ಲಿ ವಂಚನೆ: 'ಮೊಟೊ ಇ3 ಪವರ್' ಫೋನ್‌ ಬೆಲೆ ರೂ.499 ಎಚ್ಚರ!

By Suneel
|

ಇಕಾಮರ್ಸ್‌ ರೀಟೇಲರ್‌ಗಳಿಗೆ ದಿಪಾವಳಿ ಸೀಸನ್‌ ಬಹುದೊಡ್ಡ ವೇದಿಕೆಯಾಗಿದ್ದು, ಹಲವು ಪ್ರಾಡಕ್ಟ್‌ ಕೆಟಗರಿಗಳಲ್ಲಿ ವಿವಿಧ ರೀತಿಯ ಡಿಸ್ಕೌಂಟ್ ನೀಡಲಾಗುತ್ತಿದೆ. ಈ ಟ್ರೆಂಡ್ ಮುಂದುವರೆಸುವುದರಲ್ಲಿ, ಫ್ಲಿಪ್‌ಕಾರ್ಟ್ ಇಕಾಮರ್ಸ್‌ ದೈತ್ಯ 'ಬಿಗ್‌ ದಿಪಾವಳಿ ಸೇಲ್‌' ಅನ್ನು ಆಯೋಜಿಸಿದ್ದು, ಹಬ್ಬದ ಸೀಸನ್‌ ಅನ್ನು ಇನ್ನಷ್ಟು ರಂಗುಗೊಳಿಸಿದೆ.

ಇಕಾಮರ್ಸ್ ಸೈಟ್‌ನಲ್ಲಿ ಬಿಗ್‌ ದಿಪಾವಳಿ ಸೇಲ್ ನಡೆಯುತ್ತಿದ್ದರೇ, ಇತ್ತ ಇಂಟರ್ನೆಟ್‌ನಲ್ಲಿ ಕ್ರೇಜಿಯಾಗಿ ವಂಚನೆಯೊಂದು ಹರಿದಾಡುತ್ತಿದೆ. ವಿಶೇಷವಾಗಿ ಇದು ವಾಟ್ಸಾಪ್‌ನಲ್ಲಿ ಹರಿದಾಡುತ್ತಿದೆ. ಈ ವಂಚನೆಯಲ್ಲಿ ಫ್ಲಿಪ್‌ಕಾರ್ಟ್ 'ಬಿಗ್‌ ದಿಪಾವಳಿ ಸೇಲ್‌'ನ ಹೊಸ ಆಫರ್‌ನಲ್ಲಿ ಗ್ರಾಹಕರು ಇತ್ತೀಚೆಗಷ್ಟೇ ಲಾಂಚ್‌ ಆದ 'ಮೊಟೊ ಇ3 ಪವರ್‌'(Moto E3 Power) ಸ್ಮಾರ್ಟ್‌ಫೋನ್ ಅನ್ನು ಕೇವಲ ರೂ.499 ಕ್ಕೆ ಖರೀದಿಸಬಹುದು ಎಂದು ಹೇಳಲಾಗಿದೆ.

ದಿಪಾವಳಿ ಸೇಲ್: ಟಾಪ್ 10 ಹಳೆಯ ಸ್ಮಾರ್ಟ್‌ಫೋನ್‌ಗಳ ಮೇಲೆ 20,000 ರೂವರೆಗೆ ಎಕ್ಸ್‌ಚೇಂಜ್‌ ಆಫರ್

ಅಂದಹಾಗೆ ಮೇಲೆ ಹೇಳಿದ ವಂಚನೆಯ ಮೆಸೇಜ್‌ ಒಂದು ಹಂತ ಮುಂದೆ ಹೋಗಿ, ವಾಟ್ಸಾಪ್‌ನಲ್ಲಿ ಹರಿದಾಡುತ್ತಿರುವ ಮೆಸೇಜ್‌ ಮೇಲೆ ಕ್ಲಿಕ್‌ ಮಾಡಿದರೆ, ಫ್ಲಿಪ್‌ಕಾರ್ಟ್ ಒರಿಜಿನಲ್ ವೆಬ್‌ಪೇಜ್‌ ರೀತಿಯಲ್ಲೇ ಹೊಸ ವೆಬ್‌ಪೇಜ್‌ ವಿಂಡೋ ತೆರೆದುಕೊಳ್ಳುತ್ತಿದೆ. ವೆಬ್‌ಪೇಜ್‌ನಲ್ಲಿ ಏನಿದೆ ಎಂದು ತಿಳಿಯಲು ಮುಂದೆ ಓದಿರಿ.

ರೂ.499 ಕ್ಕೆ ಮೊಟೊ ಇ3 ಪವರ್‌ ಸ್ಮಾರ್ಟ್‌ಫೋನ್‌

ರೂ.499 ಕ್ಕೆ ಮೊಟೊ ಇ3 ಪವರ್‌ ಸ್ಮಾರ್ಟ್‌ಫೋನ್‌

ವಾಟ್ಸಾಪ್‌ನಲ್ಲಿ ಹರಿದಾಡುತ್ತಿರುವ ಮೆಸೇಜ್‌ ಮೇಲೆ ಕ್ಲಿಕ್ ಮಾಡಿದ ತಕ್ಷಣ ಓಪನ್‌ ಆಗುವ ಪೇಜ್‌ನಲ್ಲಿ ಪ್ರಾಡಕ್ಟ್‌ ಅನ್ನು ಕೇವಲ ರೂ.499 ಕ್ಕೆ ಗ್ರ್ಯಾಬ್ ಮಾಡಿ ಎಂದು ಮೆಸೇಜ್‌ ಪ್ರದರ್ಶನವಾಗುವುದರ ಜೊತೆಗೆ, ಆಫರ್ ದೃಢೀಕರಣಕ್ಕಾಗಿ ಹಲವು ಫೇಕ್‌ ವಿಮರ್ಶೆಗಳನ್ನು ನೀಡಲಾಗಿದೆ.

ವೆಬ್‌ಪೇಜ್‌ ಫೇಕ್‌

ವೆಬ್‌ಪೇಜ್‌ ಫೇಕ್‌

ಓಪನ್‌ ಆಗುವ ವೆಬ್‌ಪೇಜ್‌ನಲ್ಲಿ, ವಂಚನೆಯ ದೃಷ್ಟಿಯಿಂದ 'Buy Now' ಆಪ್ಶನ್‌ ಅನ್ನು ನೀಡಲಾಗಿದೆ. ಅದರ ಮೇಲೆ ಕ್ಲಿಕ್‌ ಮಾಡಿದಲ್ಲಿ ನಿಮ್ಮ ಚಾಟ್‌ ಲೀಸ್ಟ್‌ನ ಇತರೆ 8 ನಿಮ್ಮ ಸ್ನೇಹಿತರಿಗೆ ಮೆಸೇಜ್‌ ಶೇರ್‌ ಮಾಡಿದಂತೆ ಆಗುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇನ್ನೊಂದು ವೆಬ್‌ಪೇಜ್‌ಗೆ ರೀಡೈರೆಕ್ಟ್

ಇನ್ನೊಂದು ವೆಬ್‌ಪೇಜ್‌ಗೆ ರೀಡೈರೆಕ್ಟ್

ಒಮ್ಮೆ ನೀವು ಕ್ಲಿಕ್‌ ಮಾಡಿದಲ್ಲಿ, ನೀವು ಇತರೆ ವೆಬ್‌ಪೇಜ್‌ಗೆ ರೀಡೈರೆಕ್ಟ್‌ ಆಗುತ್ತೀರಿ, ಅದರಲ್ಲಿ ಡಿವೈಸ್‌ ಬುಕ್‌ ಮಾಡಲು ಅವಕಾಶ ಇರುತ್ತದೆ. ಹ್ಯಾಂಡ್‌ಸೆಟ್‌ ಬುಕ್‌ ಮಾಡಲು ಪ್ರಯತ್ನಿಸಿದಾಗ ನಿಮ್ಮ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ ಮೂಲಕ ಹಣ ಪಾವತಿಸಬೇಕಾಗುತ್ತದೆ. ಅದು ನಿಜ ಎಂದೇ ನೀವು ತಿಳಿಯುತ್ತೀರಿ.

ಕ್ಯಾಶ್‌ಆನ್  ಡೆಲಿವರಿ ಇಲ್ಲ

ಕ್ಯಾಶ್‌ಆನ್ ಡೆಲಿವರಿ ಇಲ್ಲ

ಅಂದಹಾಗೆ ಈ ವೆಬ್‌ಪೇಜ್‌ನಲ್ಲಿ ಕ್ಯಾಶ್‌ಆನ್ ಡೆಲಿವರಿಗೆ ಅವಕಾಶ ಇಲ್ಲ. ಇದು ಸಂಪೂರ್ಣವಾಗಿ ಆನ್‌ಲೈನ್‌ ಖರೀದಿದಾರರನ್ನು ಫೂಲ್‌ ಮಾಡುವ ಪ್ರಯತ್ನವಾಗಿದ್ದು, ಗ್ರಾಹಕರಿಂದ ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್ ಮೂಲಕ ಹಣ ಪಡೆಯಲಾಗುತ್ತದೆ. ಇದೊಂದು ವಂಚನೆ ಆಗಿದೆ. ಆದ್ದರಿಂದ ಆನ್‌ಲೈನ್‌ ಖರೀದಿದಾರರು ಈ ದಿಪಾವಳಿ ಸೇಲ್‌ ಸೀಸನ್‌ನಲ್ಲಿ ಎಚ್ಚರದಿಂದ ಇರಲು ಗಿಜ್‌ಬಾಟ್‌ ಮನವಿ ಮಾಡುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Scam Alert: Moto E3 Power Is Available for Rs. 499 on Flipkart Big Diwali Sale? To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X