ದುಬಾರಿ ಬೆಲೆ ಕೊಟ್ಟು ಸ್ಮಾರ್ಟ್‌ಫೋನ್ ಖರೀದಿಸಬೇಡಿ: ಬಾಡಿಗೆಗೆ ದೊರೆಯಲಿದೆ ಐಫೋನ್..!

|

ಜಾಗತಿಕವಾಗಿ ಇಂದು ಸ್ಮಾರ್ಟ್‌ಫೋನ್‌ ಮಾರುಕಟ್ಟೆಯೂ ಸಾಕಷ್ಟು ವೇಗದಲ್ಲಿ ಬೆಳವಣಿಗೆಯನ್ನು ಸಾಧಿಸುತ್ತಿದ್ದು, ದಿನಕ್ಕೊಂದು ಸ್ಮಾರ್ಟ್‌ಫೋನ್‌ ಕಂಪನಿಗಳು ಉದಯವಾಗುತ್ತಿದೆ. ಹೊಸ ಹೊಸ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ, ಇದೇ ಮಾದರಿಯಲ್ಲಿ ಸ್ಮಾರ್ಟ್‌ಫೋನ್‌ ಬಳಕೆದಾರರು ಸಹ ಹೆಚ್ಚಿನ ಪ್ರಮಾಣದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಬದಲಾಯಿಸುವ ಹವ್ಯಾಸವನ್ನು ಸಹ ಬೆಳೆಸಿಕೊಂಡಿದ್ದಾರೆ.

ದುಬಾರಿ ಬೆಲೆ ಕೊಟ್ಟು ಸ್ಮಾರ್ಟ್‌ಫೋನ್ ಖರೀದಿಸಬೇಡಿ: ಬಾಡಿಗೆಗೆ ದೊರೆಯಲಿದೆ ಐಫೋನ್.

ಈ ಹಿನ್ನಲೆಯಲ್ಲಿ ವರ್ಷಕ್ಕೊಂದು ಸ್ಮಾರ್ಟ್‌ಫೋನ್‌ ಖರೀದಿಸಿ, ನಂತರ ಕಡಿಮೆ ಬೆಲೆಗೆ ಮಾರಾಟ ಮಾಡುವ ಮೂಲಕ ನಷ್ಟವನ್ನು ಅನುಭವಿಸಿ, ಮತ್ತೊಂದು ಹೊಸ ಸ್ಮಾರ್ಟ್‌ಫೋನ್‌ ಖರೀದಿಸುವವರನ್ನು ನಾವು ಕಾರಣಬಹುದಾಗಿದೆ. ಇದಲ್ಲದೇ ಒಮ್ಮೆ ಖರೀದಿಸಿದ ಸ್ಮಾರ್ಟ್‌ಫೋನ್ ಇಷ್ಟವಾದರೆ ಅಥವಾ ಯಾವುದಾರರು ಸಮಸ್ಯೆಯನ್ನು ಹೊಂದಿರುವ ಕಾರಣ ಬದಲಾಯಿಸುವವರು ಇಂದು ನಮ್ಮ ನಿಮ್ಮ ನಡುವೆ ಇದ್ದಾರೆ. ಇಂತವರಿಗಾಗಿಯೇ ಆಪಲ್ ಹೊಸದೊಂದು ಮಾದರಿಯನ್ನು ನಿರ್ಮಿಸಲು ಮುಂದಾಗಿದೆ.

ಓದಿರಿ: ಫೇಸ್‌ಬುಕ್‌ ನಂತರ ವಾಟ್ಸ್‌ಆಪ್‌ ಬಳಕೆದಾರರ ಪ್ರೈವಸಿ ಲೀಕ್‌ ಮಾಡುತ್ತಿದೆ ಈ ಆಪ್..!

ಭವಿಷ್ಯದ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು, ತನ್ನ ಮಾರಾಟವನ್ನು ವೃದ್ಧಿಸಿಕೊಳ್ಳುವ ಸಲುವಾಗಿ ಐಫೋನ್‌ಗಳನ್ನು ಬಾಡಿಗೆ ರೂಪದಲ್ಲಿ ಆರು ತಿಂಗಳು ಇಲ್ಲವೇ ವರ್ಷಕ್ಕೆ ಸಬ್‌ಸ್ಕ್ರಿಷನ್ ಮಾದರಿಯಲ್ಲಿ ನೀಡಲು ಮುಂದಾಗಿದೆ. ಅಮೆಜಾನ್ ಪ್ರೈಮ್, ನೆಟ್‌ಪ್ಲಿಕ್ಸ್‌ಗಳನ್ನು ನೀವು ವರ್ಷಕ್ಕೆ ಸಬ್‌ಸ್ಕ್ರಿಷನ್ ಪಡೆಯುವ ಮಾದರಿಯಲ್ಲಿಯೇ ಆಪಲ್ ಐಫೋನ್‌ಗಳನ್ನು ಬಾಡಿಗೆಗೆ ನೀಡುವ ಯೋಜನೆಯೊಂದನ್ನು ತಯಾರು ಮಾಡಲು ಮುಂದಾಗಿದೆ.

ಸದ್ಯ ಈ ಮಾದರಿಯ ಯೋಜನೆಯನ್ನು ಅಮೆರಿಕಾ ಮತ್ತು ಇಂಗ್ಲೆಂಡ್‌ನಲ್ಲಿ ಪರಿಚಯ ಮಾಡಲು ಆಪಲ್ ಮುಂದಾಗಿದ್ದು, ಶೀಘ್ರವೇ ಜಾರಿಗೆ ತರಲಿದೆ. ಹೆಚ್ಚಿನ ಜನರಿಗೆ ದುಬಾರಿ ಬೆಲೆಯ ಐಫೋನ್‌ ಅನ್ನು ತಲುಪಿಸುವುದು ಈ ಯೋಜನೆಯ ಗುರಿಯಾಗಿದ್ದು, ಭವಿಷ್ಯದಲ್ಲಿ ಬಳಕೆದಾರರಿಗೆ ಹೆಚ್ಚಿನ ಆಯ್ಕೆಯೂ ದೊರೆಯಲಿದ್ದು, ಇದರಿಂದಾಗಿ ಬಳಕೆದಾರನ್ನು ಕಳೆದುಕೊಳ್ಳಬಾರದು ಎನ್ನುವ ಕಾರಣಕ್ಕೆ ಈ ಯೋಜನೆಯನ್ನು ರೂಪಿಸಿದೆ.

ದುಬಾರಿ ಬೆಲೆ ಕೊಟ್ಟು ಸ್ಮಾರ್ಟ್‌ಫೋನ್ ಖರೀದಿಸಬೇಡಿ: ಬಾಡಿಗೆಗೆ ದೊರೆಯಲಿದೆ ಐಫೋನ್.

ಇದಲ್ಲದೇ ಐಫೋನ್ 8ಗೆ ತಿಂಗಳಿಗೆ $34.50, ಇದೇ ಮಾದರಿಯಲ್ಲಿ ಐಫೋನ್ Xಗೆ ಪ್ರತಿ ತಿಂಗಳು $49.91 ದರಗಳನ್ನು ವಿಧಿಸುವ ಸಾಧ್ಯತೆಯೂ ದಟ್ಟವಾಗಿದೆ ಎನ್ನಲಾಗಿದೆ. ಇದಕ್ಕಾಗಿ ಕೆಲವು ಬ್ಯಾಂಕ್‌ಗಳೊಂದಿಗೆ ಆಪಲ್ ಒಪ್ಪಂದವನ್ನು ಮಾಡಿಕೊಂಡಿದೆ ಎನ್ನಲಾಗಿದೆ. ಇದರಿಂದಾಗಿ ಬಳಕೆದಾರರಿಗೆ ಲಾಭವಾಗಲಿದೆ, ಆಪಲ್‌ಗೂ ಲಾಭವಾಗಲಿದೆ.

ಇದಲ್ಲದೇ ಈ ಯೋಜನೆಯಲ್ಲಿ ಬಳಕೆದಾರರು ಕಂಪನಿಗೆ ಮೋಸ ಮಾಡುವ ಸಾಧ್ಯತೆಯೂ ಹೆಚ್ಚಾಗಿರುವ ಕಾರಣದಿಂದಾಗಿದೆ. ಬ್ಯಾಂಕ್‌ನಲ್ಲಿ ಲೋನ್ ಮಾದರಿಯ ಸೇವೆಯನ್ನು ಅವಲಂಬಿರುವ ಆಪಲ್, ಒಮ್ಮೆ ನೀವು ಫೋನ್‌ ಪಡೆದು ತಿಂಗಳ ಬಾಡಿಗೆಯನ್ನು ಪಾವತಿ ಮಾಡದೆ ಹೋದರೆ ಫೋನ್‌ ನಿಮ್ಮದಾಗಲಿದ್ದು, ಬ್ಯಾಂಕಿನವರು ಬಡ್ಡಿ ಸಮೇತ ಸಾಲವನ್ನು ವಾಪಸ್ಸು ಪಡೆಯಲಿದ್ದಾರೆ.

Best Mobiles in India

English summary
Would you subscribe to a smartphone, rather than buy?. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X