ಶಿಯೋಮಿಯಿಂದ ಬರಲಿವೆ ಎರಡು ದೈತ್ಯ ಫೋನ್‌ಗಳು!..ಮಾರುಕಟ್ಟೆಯಲ್ಲಿ ಕುತೂಹಲ!
ಶಿಯೋಮಿ ಮೊಬೈಲ್ ಸಂಸ್ಥೆಯ ಶಿಯೋಮಿ ಸ್ಮಾರ್ಟ್‌ಫೋನ್‌ಗಳು ಫ್ಲ್ಯಾಗ್‌ಶಿಪ್ ಮಾದರಿಯಲ್ಲಿ ಕಾಣಿಸಿಕೊಂಡಿದ್ದು, ಆಕರ್ಷಕ ಡಿಸೈನ್ ಪಡೆದಿವೆ. ಸಂಸ್ಥೆಯ ಇತ್ತೀಚಿಗಿನ ಶಿಯೋಮಿ 13 ಸರಣಿಯ ಫೋನ್‌ಗಳು ಮಾರುಕಟ್ಟೆಯಲ್ಲಿ ಸದ್ದು ಮಾಡಿವೆ. ಅದರ ಮುಂದುವರಿದ ಭಾಗವಾಗಿ ಈಗ ಶಿಯೋಮಿ ಸಂಸ್ಥೆಯು ಈ ಸರಣಿಯಲ್ಲಿ ಎರಡು ನೂತನ ಫೋನ್‌ಗಳನ್ನು ಪರಿಚಯಿಸಿಲು ಸಜ್ಜಾಗಿದೆ.
ಹೌದು, ಶಿಯೋಮಿ ಸಂಸ್ಥೆಯ ಹೊಸದಾಗಿ ಶಿಯೋಮಿ 13T ಮತ್ತು ಶಿಯೋಮಿ 13T ಪ್ರೊ ಮಾದರಿಗಳನ್ನು ಅನಾವರಣ ಮಾಡಲಿದೆ. ಇನ್ನು ಈ ಫೋನ್‌ಗಳು ಮಾರುಕಟ್ಟೆಗೆ ಎಂಟ್ರಿ ಪಡೆಯುವ ಮೊದಲೇ ಲೀಕ್ ಫೀಚರ್ಸ್‌ಗಳಿಂದ ಸದ್ದು ಮಾಡುತ್ತಿವೆ. ಈ ಎರಡು ಫೋನ್‌ಗಳು ಅಮೊಲೆಡ್ ಡಿಸ್‌ಪ್ಲೇ ಹೊಂದಿದ್ದು, 144Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿರಲಿವೆ. ಜೊತೆಗೆ ನೂತನ MIUI 14 ಸಾಫ್ಟ್‌ವೇರ್ ಆವೃತ್ತಿ ಪಡೆದಿರಲಿವೆ.

ಹಾಗೆಯೇ ಈ ಸ್ಮಾರ್ಟ್‌ಫೋನ್‌ಗಳು 8 GB RAM + 256 GB ಸ್ಟೋರೇಜ್ ವೇರಿಯಂಟ್ ಆಯ್ಕೆ ಹೊಂದಿರಲಿದ್ದು, 5,000 mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿರಲಿದೆ. ಇದರೊಂದಿಗೆ ಕ್ಯಾಮೆರಾ ವಿಭಾಗದಲ್ಲಿ ಅಪ್‌ಗ್ರೇಡ್ ಅಂಶಗಳು ಇರಲಿದ್ದು, ಲೈಕಾ ಕ್ಯಾಮೆರಾ ಇರುವುದು ಬಹುತೇಕ ಖಚಿತ ಎನ್ನಲಾಗಿದೆ. ಇನ್ನು ಈ ಫೋನ್‌ಗಳು ಬ್ಲ್ಯಾಕ್ ಹಾಗೂ ಮೆಡೋ ಗ್ರೀನ್ ಕಲರ್ ಆಯ್ಕೆ ಪಡೆದಿರಲಿವೆ. ಇನ್ನುಳಿದಂತೆ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಡಿಸ್‌ಪ್ಲೇ ವಿನ್ಯಾಸ ಮಾಹಿತಿ : ಮಾರುಕಟ್ಟೆಗೆ ಲಗ್ಗೆ ಇಡಲಿರುವ ಶಿಯೋಮಿ 13T ಮತ್ತು ಶಿಯೋಮಿ 13T ಪ್ರೊ ಈ ಎರಡು ಮೊಬೈಲ್‌ಗಳು ಅಮೊಲೆಡ್ ಡಿಸ್‌ಪ್ಲೇ ಹೊಂದಿದ್ದು, ಹಾಗೆಯೇ 144Hz ರಿಫ್ರೆಶ್ ರೇಟ್ ಪಡೆದಿರಲಿವೆ. ಇನ್ನು ಈ ಫೋನ್‌ಗಳ ಡಿಸ್‌ಪ್ಲೇ ಅಧಿಕ ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಇರಲಿದೆ ಎನ್ನಲಾಗಿದೆ.
ಪ್ರೊಸೆಸರ್ ಹಾಗೂ ಮೆಮೊರಿ ಮಾಹಿತಿ : ಶಿಯೋಮಿ 13T ಮತ್ತು ಶಿಯೋಮಿ 13T ಪ್ರೊ ಫೋನ್‌ಗಳು ಫ್ಲ್ಯಾಗ್‌ಶಿಪ್ 4NM SOC ಮಾದರಿಯ ಹೈ ಎಂಡ್ ಪ್ರೊಸೆಸರ್ ಅನ್ನು ಪಡೆದಿರಲಿದೆ ಎಂದು ಲೀಕ್ ಮಾಹಿತಿಗಳಿಂದ ತಿಳಿದುಬಂದಿದೆ. ಇದರೊಂದಿಗೆ 8GB RAM + 256GB ಆಂತರೀಕ ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿರಲಿದೆ. ಜೊತೆಗೆ MIUI 14 ಸಾಫ್ಟ್‌ವೇರ್ ಆವೃತ್ತಿ ಖಚಿತ ಎನ್ನಲಾಗಿದೆ.
ಕ್ಯಾಮೆರಾ ಸೆನ್ಸಾರ್ ಮಾಹಿತಿ : ಶಿಯೋಮಿ 13T ಮತ್ತು ಶಿಯೋಮಿ 13T ಪ್ರೊ ಫ್ಲ್ಯಾಗ್‌ಶಿಪ್ ಮಾದರಿಯ ಮೊಬೈಲ್‌ಗಳಾಗಿ ಗುರುತಿಸಿಕೊಂಡಿವೆ. ಹೀಗಾಗಿ ಉನ್ನತ ಕ್ಯಾಮೆರಾ ಸೆನ್ಸಾರ್ ಫೀಚರ್ ಪ್ಲಸ್ ಪಾಯಿಂಟ್‌ಗಳಲ್ಲಿ ಒಂದಾಗಿರಲಿದೆ. ಮಾಹಿತಿ ಪ್ರಕಾರ ಈ ಎರಡು ಫೋನ್‌ಗಳು ಲೈಕಾ ಕ್ಯಾಮೆರಾ ರಚನೆಯನ್ನು ಪಡೆದಿರುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.
ಬ್ಯಾಟರಿ ಬ್ಯಾಕ್‌ಅಪ್ ಮಾಹಿತಿ ಇಲ್ಲಿದೆ : ಶಿಯೋಮಿ 13T ಮತ್ತು ಶಿಯೋಮಿ 13T ಪ್ರೊ ಫೋನ್‌ಗಳು 5,000mAh ಬ್ಯಾಟರಿ ಒಳಗೊಂಡಿರುವುದು ಖಚಿತವಾಗಿದೆ. ಆದರೆ ಈ ಎರಡು ಫೋನ್‌ಗಳ ಚಾರ್ಜಿಂಗ್ ಆಯ್ಕೆ ಭಿನ್ನವಾಗಿರಲಿದೆ. ಶಿಯೋಮಿ 13T ಫೋನ್ 67W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒಳಗೊಂಡಿರಲಿದ್ದು, ಹಾಗೆಯೇ ಶಿಯೋಮಿ 13T ಪ್ರೊ ಫೋನ್ 120W ಫಾಸ್ಟ್ ಚಾರ್ಜಿಂಗ್ ಸೌಲಭ್ಯದ ಆಯ್ಕೆ ಪಡೆದಿರಲಿದೆ.
ಕಲರ್ ಆಯ್ಕೆ ಹಾಗೂ ನಿರೀಕ್ಷಿತ ಬೆಲೆ : ಶಿಯೋಮಿ 13T ಫೋನ್ ಬ್ಲ್ಯಾಕ್ ಕಲರ್ ಆಯ್ಕೆಯಲ್ಲಿ ಬರಲಿದೆ. ಅದೇ ರೀತಿ ಶಿಯೋಮಿ 13T ಪ್ರೊ ಮೇಡೊ ಗ್ರೀನ್ (Meadow Green) ಕಲರ್ ಆಯ್ಕೆಯಲ್ಲಿ ಎಂಟ್ರಿ ಕೊಡಲಿದೆ. ಶಿಯೋಮಿ 13T ಫೋನಿನ ನಿರೀಕ್ಷಿತ ಬೆಲೆ ಸುಮಾರು 63,000ರೂ.ಗಳ ಆಸುಪಾಸು ಇರಲಿದೆ. ಅದೇ ರೀತಿ ಶಿಯೋಮಿ 13T ಪ್ರೊ ಫೋನಿನ ನಿರೀಕ್ಷಿತ ಬೆಲೆ 83,300ರೂ. ಗಳ ಆಸುಪಾಸು ಇರಲಿದೆ ಎಂದು ಅಂದಾಜಿಸಲಾಗಿದೆ.


Click it and Unblock the Notifications








