Home
ಮೊಬೈಲ್

1,09,999 ಬೆಲೆಯ ದುಬಾರಿ ಫೋನ್ ಲಾಂಚ್! 200MP ಕ್ಯಾಮೆರಾ, 512GB ಸ್ಟೋರೇಜ್; 15000 ರಿಯಾಯಿತಿ ಘೋಷಣೆ

ಬಹುನಿರೀಕ್ಷಿತ ಶಿಯೋಮಿ 15 ಅಲ್ಟ್ರಾ (Xiaomi 15 Ultra) ಭಾರತದಲ್ಲಿ ಬಿಡುಗಡೆಯಾಗಿದೆ. ಇದನ್ನು ಶಿಯೋಮಿ 15 ಸರಣಿಯಲ್ಲಿ ಪರಿಚಯಿಸಲಾಗಿದೆ. ಹೌದು, ಶಿಯೋಮಿ 15 (Xiaomi 15) ಮತ್ತು ಶಿಯೋಮಿ 15 ಅಲ್ಟ್ರಾ (Xiaomi 15 Ultra) ಫೋನ್‌ಗಳು ಇಂದು ಅಧಿಕೃತವಾಗಿ ದೇಶೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಎರಡೂ ಪ್ರಮುಖ ಸ್ಮಾರ್ಟ್‌ಫೋನ್‌ಗಳು ಇತ್ತೀಚಿನ ಲೈಕಾ ಕ್ಯಾಮೆರಾಗಳು, ಎಐ (AI) ವೈಶಿಷ್ಟ್ಯಗಳನ್ನು ಹೊಂದಿವೆ. ಆದರೆ, ಕಂಪನಿಯು ಶಿಯೋಮಿ ಅಲ್ಟ್ರಾ ಫೋನಿನ ಬ್ಯಾಟರಿಯಲ್ಲಿ ಕೊಂಚ ವ್ಯತ್ಯಾಸ ಮಾಡಲಾಗಿದೆ. ಶಿಯೋಮಿ 15 ಅಲ್ಟ್ರಾ ಫೋನಿನ ಬೆಲೆ, ಲಭ್ಯತೆ ಮತ್ತು ವಿಶೇಷತೆಗಳ ಬಗ್ಗೆ ಇಲ್ಲಿದೆ ಮಾಹಿತಿ.

ಶಿಯೋಮಿ 15 ಅಲ್ಟ್ರಾ ಹೊಸ 200MP ಪೆರಿಸ್ಕೋಪ್ ಲೆನ್ಸ್ ಹೊಂದಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಮೊಬೈಲ್ 6.73 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಈ ಫೋನಿನಲ್ಲಿ 50MP + 50MP + 50MP + 32MP ಕ್ಯಾಮೆರಾಗಳು ಲಭ್ಯವಿದೆ. ಜೊತೆಗೆ 16GB RAM + 512GB ಸ್ಟೋರೇಜ್, 5410mAh ಸಾಮರ್ಥ್ಯದ ಬ್ಯಾಟರಿ ಮತ್ತು 90W ವೈರ್ಡ್ ಚಾರ್ಜಿಂಗ್ ಸೇರಿದಂತೆ ಹಲವು ಅತ್ಯುತ್ತಮ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Xiaomi 15 Ultra ಲಾಂಚ್; 200MP ಕ್ಯಾಮೆರಾ, 512GB ಸ್ಟೋರೇಜ್.. ಬೆಲೆ ನೋಡಿ

ಶಿಯೋಮಿ 15 ಅಲ್ಟ್ರಾ ಬೆಲೆ ಮತ್ತು ಲಭ್ಯತೆ

ಶಿಯೋಮಿ 15 ಅಲ್ಟ್ರಾ ಮೊಬೈಲ್ ಒಂದೇ ಸ್ಟೊರೇಜ್ ಆಯ್ಕೆಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಫೋನಿನ 16GB + 512GB ಸ್ಟೊರೇಜ್ ರೂಪಾಂತರದ ಬೆಲೆ 1,09,999 ರೂ. ಆಗಿದೆ. ಇದಲ್ಲದೆ, ಶಿಯೋಮಿ 15 ಅಲ್ಟ್ರಾ ಫೋಟೋಗ್ರಫಿ ಕಿಟ್ ಲೆಜೆಂಡ್ ಆವೃತ್ತಿಯನ್ನು 11,999 ರೂ.ಗೆ ಬಿಡುಗಡೆ ಮಾಡಲಾಗಿದೆ. ಇದು ಸಿಲ್ವರ್ ಕ್ರೋಮ್ ಬಣ್ಣದಲ್ಲಿ ಖರೀದಿಗೆ ಲಭ್ಯವಿದೆ.

ನೂತನ ಶಿಯೋಮಿ 15 ಅಲ್ಟ್ರಾ ಮೊಬೈಲ್ ಇದೇ ಮಾರ್ಚ್ 19 ರಂದು ಸಂಜೆ 5 ಗಂಟೆಯಿಂದ ಏಪ್ರಿಲ್ 2 ರವರೆಗೆ Mi.com, ಅಮೇಜಾನ್ ಮತ್ತು ಶಿಯೋಮಿ ಚಿಲ್ಲರೆ ಅಂಗಡಿಗಳಲ್ಲಿ ಮುಂಗಡ ಬುಕಿಂಗ್‌ಗೆ ಲಭ್ಯವಿರುತ್ತದೆ. ಕಂಪನಿಯು ಐಸಿಐಸಿಐ ಬ್ಯಾಂಕ್ ಕಾರ್ಡ್‌ಗಳ ಪಾವತಿ ಮೇಲೆ 10,000 ರೂ.ಗಳ ತ್ವರಿತ ರಿಯಾಯಿತಿ ನೀಡಲಿದೆ. ಹಾಗೆಯೇ 5,000 ಕ್ಯಾಶ್‌ಬ್ಯಾಕ್ ಸಹ ಲಭ್ಯವಿದೆ.

ಶಿಯೋಮಿ 15 ಅಲ್ಟ್ರಾ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಶಿಯೋಮಿ 15 ಅಲ್ಟ್ರಾ ಸ್ಮಾರ್ಟ್‌ಫೋನ್ 6.73 ಇಂಚಿನ ಅಮೋಲೆಡ್ ಮೈಕ್ರೋ ಕರ್ವ್ಡ್ ಡಿಸ್ಪ್ಲೇ ಹೊಂದಿದೆ. ಇದು 3,100 x 1,440 ಪಿಕ್ಸೆಲ್‌ಗಳ ರೆಸಲ್ಯೂಶನ್ ಬೆಂಬಲದೊಂದಿಗೆ ಬರುತ್ತದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರ ಮತ್ತು 3,200 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ. ಇದು ಶಿಯೋಮಿ ಸೆರಾಮಿಕ್ ಗ್ಲಾಸ್ ರಕ್ಷಣೆಯನ್ನು ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಹೊಸ ಶಿಯೋಮಿ 15 ಅಲ್ಟ್ರಾ ಮೊಬೈಲ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ ಆಕ್ಟಾಕೋರ್ ಪ್ರೊಸೆಸರ್‌ ಹೊಂದಿದೆ. ಈ ಮೊಬೈಲ್ ಆಂಡ್ರಾಯ್ಡ್ 15 ಆಧಾರಿತ ಹೈಪರ್‌ಓಎಸ್ 2 ಜೊತೆಗೆ ಕೆಲಸ ಮಾಡುತ್ತದೆ. ಗ್ರಾಫಿಕ್ಸ್‌ಗಾಗಿ ಇದು, ಅಡ್ರಿನೊ 830 ಜಿಪಿಯು ಹೊಂದಿದೆ. ಈ ಫೋನ್ 12GB RAM, 512GB ಮತ್ತು 1TB ಸ್ಟೊರೇಜ್ ಆಯ್ಕೆ ಒಳಗೊಂಡಿದೆ.

Xiaomi 15 Ultra ಲಾಂಚ್; 200MP ಕ್ಯಾಮೆರಾ, 512GB ಸ್ಟೋರೇಜ್.. ಬೆಲೆ ನೋಡಿ

ಕ್ಯಾಮೆರಾ ಸೆಟಪ್

ಶಿಯೋಮಿ 15 ಅಲ್ಟ್ರಾ ಫೋನ್ 200 ಮೆಗಾಪಿಕ್ಸೆಲ್ ಲೈಕಾ ಪೆರಿಸ್ಕೋಪ್ ಲೆನ್ಸ್ ಹೊಂದಿದೆ. ಇದರೊಂದಿಗೆ 50 ಮೆಗಾಪಿಕ್ಸೆಲ್ ಲೈಕಾ ಪ್ರಾಥಮಿಕ ಕ್ಯಾಮೆರಾ, OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಲೈಕಾ ಟೆಲಿಫೋಟೋ ಲೆನ್ಸ್ ಮತ್ತು 50 ಮೆಗಾಪಿಕ್ಸೆಲ್ ಲೈಕಾ ಅಲ್ಟ್ರಾ ವೈಡ್ ಕ್ಯಾಮೆರಾ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ನೂತನ ಶಿಯೋಮಿ 15 ಅಲ್ಟ್ರಾ ಸ್ಮಾರ್ಟ್‌ಫೋನ್ 5,410mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 90W ವೈರ್ಡ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಜೊತೆಗೆ 80W ವೈರ್‌ಲೆಸ್ ಚಾರ್ಜಿಂಗ್ ತಂತ್ರಜ್ಞಾನ ಒಳಗೊಂಡಿದೆ.

ಇತರೆ ವೈಶಿಷ್ಟ್ಯಗಳು

ಶಿಯೋಮಿ 15 ಅಲ್ಟ್ರಾ ಸ್ಮಾರ್ಟ್‌ಫೋನ್ ಇನ್ ಡಿಸ್ಪ್ಲೇ ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸೆನ್ಸರ್ ಹೊಂದಿದೆ. ಇದು ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ IP68 ರೇಟಿಂಗ್ ಪಡೆದಿದೆ. ಇದರೊಂದಿಗೆ ಯುಎಸ್‌ಬಿ ಟೈಪ್ ಸಿ ಆಡಿಯೋ, ಸ್ಟೀರಿಯೊ ಸ್ಪೀಕರ್‌ಗಳು, ಡಾಲ್ಬಿ ಅಟ್ಮಾಸ್ ಲಭ್ಯವಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು 5G, ಡ್ಯುಯಲ್ 4G VoLTE, ವೈ-ಫೈ, ಬ್ಲೂಟೂತ್, ಎನ್‌ಎಫ್‌ಸಿ, ಯುಎಸ್‌ಬಿ ಟೈಪ್ ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

Best Mobiles in India

English summary
Xiaomi 15 Ultra with Snapdragon 8 Elite launched in India: check price, specifications and more details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+